Breaking News

ಕರ್ನಾಟಕ

ಗುಜರಿ ವಸ್ತುಗಳ ಹರಾಜಿನಿಂದ ನೈಋತ್ಯ ರೈಲ್ವೆಗೆ ದಾಖಲೆಯ ಮಾರಾಟ: 100 ಕೋಟಿ ಲಾಭ

ಹುಬ್ಬಳ್ಳಿ: ನೈರುತ್ಯ ರೈಲ್ವೆ ದಾಖಲೆ ನಿರ್ಮಿಸಿದೆಗುಜರಿ ವಸ್ತುಗಳ ಮಾರಾಟದಲ್ಲಿ . ಏಪ್ರಿಲ್ ನಿಂದ ಡಿಸೆಂಬರ್ 2021 ವರೆಗೆ ಗುಜರಿ ಮಾರಾಟದಿಂದ ನೈಋತ್ಯ ರೈಲ್ವೆಗೆ 100 ಕೋಟಿ ರೂಪಾಯಿ ಲಾಭವಾಗಿದೆ. ರೂ 6.68 ಕೋಟಿ ಮೌಲ್ಯದ ಗುಜರಿ ಹರಾಜಿನ ಮಾರಾಟದಿಂದ (ಕೇವಲ ಒಂದೇ ದಿನದಲ್ಲಿ) ಹುಬ್ಬಳ್ಳಿ ವಿಭಾಗವು ಹೊಸ ದಾಖಲೆಯನ್ನು ನಿರ್ಮಿಸಿದೆ. ಪ್ರಧಾನ ವ್ಯಸ್ಥಾಪಕ ಸಂಜೀವ್ ಕಿಶೋರ್ ರವರು ಮಾರ್ಚ್ 2022ರ ವೇಳೆಗೆ ನೈಋತ್ಯ ರೈಲ್ವೆ ರೂ 150 ಕೋಟಿಗೂ ಹೆಚ್ಚಿನ …

Read More »

ಹು-ಧಾ ಮೇಯರ್‌ ಆಯ್ಕೆ ಬಗ್ಗೆ ತಿರ್ಮಾನ ತೆಗೆದುಕೊಳ್ತೀವಿ-ಶಂಕರ ಪಾಟೀಲ್‌ ಮುನೇನಕೊಪ್ಪ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಬಗ್ಗೆ ಶೀಘ್ರದಲ್ಲಿಯೇ ಸರಕಾರದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದ ಸಚಿವರು, ಅವಳಿನಗರದ ಅಭಿವೃದ್ಧಿಗೆ ತಾವು ಸದಾಕಾಲ ಮುಂದು. ಚುನಾವಣೆಗಳು ಇದ್ದಿದ್ದರಿಂದ ತಡವಾಗಿದೆಯಷ್ಟೇ ಎಂದು ಹೇಳಿದರು. ಅವಳಿನಗರದ ಅಭಿವೃದ್ಧಿಗೆ ಪೂರಕವಾದ ಎಲ್ಲವನ್ನೂ ಮಾಡಲು ಸಿದ್ಧವಾಗಿದ್ದು, ಸ್ಮಾರ್ಟ್ ಸಿಟಿ ಕೆಲಸಕ್ಕೂ ತೀವ್ರತೆ ಕೊಡಲಾಗುವುದೆಂದು ಮುನೇನಕೊಪ್ಪ ಹೇಳಿದರು. ಕಸದ …

Read More »

ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಬಿದ್ದ ಎಂಬಿಬಿಎಸ್‌ ವಿದ್ಯಾರ್ಥಿ

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಹಾಸ್ಟೆಲ್​​ನ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಿಮ್ಸ್ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಪುನೀತ್​​​ ಎಂಬ ವಿದ್ಯಾರ್ಥಿ ಕುಡಿದ ಮತ್ತಿನಲ್ಲಿ ಕಿಮ್ಸ್ ಆವರಣದಲ್ಲಿನ ಆನಂದ ಹಾಸ್ಟೆಲ್​​​ನ ಎರಡನೆಯ ಮಹಡಿಯಿಂದ ಬಿದ್ದಿದ್ದಾನೆ.ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸುವ ಸಲುವಾಗಿ ವೈದ್ಯರು ಸಮಾಲೋಚನೆ ನಡೆಸುತ್ತಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಕರ್ನಾಟಕ ಬಂದ್ ಇಲ್ಲವೇ ಇಲ್ಲ: ಗೃಹಮಂತ್ರಿ ಆರಗ ಜ್ಞಾನೇಂದ್ರ

ಹುಬ್ಬಳ್ಳಿ: ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆಕೊಟ್ಟಿದ್ದಾರೆ. ಇದಕ್ಕೆ ಸರ್ಕಾರ ಯಾವುದೇ ರೀತಿಯ ಅವಕಾಶ ಕೊಡುವುದಿಲ್ಲ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡಾಟಿಕೆಯನ್ನು ಸಹಿಸಲು ಆಗುವುದಿಲ್ಲ. ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಎರಡು ವರ್ಷ ಯಾವುದೇ ರೀತಿಯ ವ್ಯವಹಾರ ಆಗಿಲ್ಲ. ಮತ್ತೆ ಬಂದ್ ಮಾಡಿದರೆ ಜನರಿಗೆ ತುಂಬ ತೊಂದರೆ ಆಗುತ್ತದೆ ಎಂದರು.

Read More »

ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್‌ಗೆ ಕೋವಿಡ್ ದೃಢ

ಕೋಲ್ಕತ್ತ: ‘ನನಗೆ ಕೋವಿಡ್‌-19 ಇರುವುದು ದೃಢಪಟ್ಟಿದ್ದು. ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದೇನೆ’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ನಾಯಕ, ಸಂಸದ ಡೆರೆಕ್ ಓಬ್ರಿಯಾನ್ ಮಂಗಳವಾರ ಹೇಳಿದ್ದಾರೆ. ‘ಕಳೆದ ಮೂರು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಮತ್ತು ರೋಗಲಕ್ಷಣಗಳನ್ನು ಹೊಂದಿರುವವರು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ’ ಎಂದೂ ಡೆರೆಕ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Read More »

ಮದುವೆ ಆಗೋಕೆ ನಿರಾಕರಿಸಿದ್ದಕ್ಕೆ ಈ ರೀತಿ ಮಾಡೋದಾ ? ಆಟೋ,ಮನೆಗೆ ಬೆಂಕಿ ಇಟ್ಟ ಮಹಿಳೆ

ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ. ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ …

Read More »

‘ಸ್ವಾವಲಂಬಿ ಭಾರತ’ ಪರಿಕಲ್ಪನೆಯ ಸಾಕಾರಕ್ಕಾಗಿ ಎನ್‌ಇಪಿ ಜಾರಿ: ಯೋಗಿ ಆದಿತ್ಯನಾಥ್

ಕಾನ್ಪುರ: ‘ಸ್ವಾವಲಂಬಿ ಭಾರತ’ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ. ಕಾನ್ಪುರ ಐಐಟಿಯ 54ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಯೋಗಿ, ‘ಸ್ವಾವಲಂಬಿ ಭಾರತ ಪರಿಕಲ್ಪನೆಯ ಸಾಕಾರಕ್ಕಾಗಿ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಅನುಷ್ಠಾನಗೊಳಿಸಲಾಗಿದೆ. ದೂರದೃಷ್ಟಿ ಮತ್ತು ರಾಜ್ಯದ ಯುವಕರಿಗೆ ಹೊಸ ದಾರಿ ತೋರುವ ಕಾನ್ಪುರ ಐಐಟಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ -ಐಐಟಿ, ಲಖನೌ ಐಐಟಿಯನ್ನು …

Read More »

ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಪ್ರಸ್ತುತ ರಾಜಕೀಯ ವಿದ್ಯಮಾನ, ರಾಜ್ಯದ ಮಹತ್ವದ ವಿಷಯಗಳು ಎರಡು ದಿನ ಇಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಬರಲಿವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿ‌ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಸಲಹೆ, ಸೂಚನೆ ನೀಡಲು ಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. 11 ಸ್ಥಾನಗಳಲ್ಲಿ ಗೆದ್ದರೂ ಉತ್ತಮ ಸಾಧನೆ ತೋರಿದೆ. ಸೋಲಾದ ಕ್ಷೇತ್ರಗಳನ್ನು …

Read More »

ನೈಟ್ ಕರ್ಪ್ಯೂಗೆ ಬೆಂಗಳೂರು ಪೊಲೀಸ್ ಹಾಗೂ ಪಾಲಿಕೆ ಸಿದ್ಧತೆ

ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ನಗರ ಪೊಲೀಸ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರು ಆಯಕ್ಟೀವ್ ಆಗಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಎಲ್ಲಾ ಡಿಸಿಪಿಗಳ ಜೊತೆ ಸಭೆ ನಡೆಸಿ ಕರ್ಪ್ಯೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು. ಯಾವೆಲ್ಲ ಬಂದೋಬಸ್ತ್ ಮಾಡಿಕೊಳ್ಳಬೇಕು, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕ್ಬೇಕು, ನೈಟ್ ಕರ್ಪ್ಯೂ ಉಲ್ಲಂಘನೆ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಅನ್ನೋ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ‌. ಬಾರ್, …

Read More »

ಕಲಾವಿದರ ಕುಂಚದಿಂದ ಅರಳಿದ ಬಿಜೆಪಿ ನಾಯಕರ ಸಾಧನೆಯ ಚಿತ್ರ ಪ್ರದರ್ಶನ

ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ದೀನದಯಾಳಜಿ ಅವರ ಚಿಂತನೆ, ಮೋದಿಯವರ ಸಾಧನೆ ಹಾಗೂ ಬಿಜೆಪಿ ಸಾಧನೆಯ ಕುರಿತು ಕಲಾವಿದರ ಕುಂಚದಿಂದ ಅರಳಿದ ಚಿತ್ರ ಪ್ರದರ್ಶಿನಿ ಏರ್ಪಡಿಸಲಾಗಿತ್ತು.. ಬಿಜೆಪಿ ಸಾಧನೆ ಹಾಗೂ ನಾಯಕರ ಚಿತ್ರ ಪ್ರದರ್ಶನಕ್ಕೆ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ನಳೀನ್ ಕುಮಾರ್ ಕಟೀಲು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೋವಿಂದ್ ಕಾರಜೋಳ, ಜಗದೀಶ್ ಶೆಟ್ಟರ್, ಡಿ.ಕೆ.ಅರುಣಾ, ಮಹೇಶ …

Read More »