Breaking News

ಕರ್ನಾಟಕ

ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಯುನಿಯನ್ ಬ್ಯಾಂಕ್ ಸಿಬ್ಬಂದಿಗಳ ಪ್ರತಿಭಟನೆ

ಹುಬ್ಬಳ್ಳಿ: ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಯುನಿಯನ್ ಬ್ಯಾಂಕ್ ಸೇರಿದಂತೆ, ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಸ್ಟೇಷನ್ ರಸ್ತೆಯಲ್ಲಿರುವ ಯುನಿಯನ್ ಬ್ಯಾಂಕ್ ನ ಸಿಬ್ಬಂದಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.ಖಾಸಗೀಕರಣವನ್ನು ಹಿಂಪಡೆಯಬೇಕೆಂದು ಎರಡು ದಿನಗಳ ಕಾಲ ಬ್ಯಾಂಕ್ ಬಂದ್ ಮಾಡಿ ಮುಷ್ಕರಕ್ಕೆ ಮುಂದಾಗಿದ್ದು, ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು …

Read More »

ಹುಬ್ಬಳ್ಳಿ: ಶ್ರೀ ಸಿದ್ಧಾರೂಢಮಠಕ್ಕೆ 16.18 ಲಕ್ಷ ಕಾಣಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸುಮಾರು 16.18 ಲಕ್ಷ ರೂ. ಹಾಗೂ 14 ಸಾವಿರ ಮೌಲ್ಯದ ಬೆಳ್ಳಿ – ಬಂಗಾರದ ಕಾಣಿಕೆ ಸಂಗ್ರಹವಾಗಿದೆ. ನವೆಂಬರ್ 24 ರಿಂದ ಡಿಸೆಂಬರ್ 15 ರವರೆಗೆ ಸಂಗ್ರಹದ ಕಾಣಿಕೆ ಪೆಟ್ಟಿಗೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಎಣಿಕೆ ಮಾಡಲಾಗಿದೆ. ಒಟ್ಟು 16,18,605 ರೂ ಮತ್ತು 14,408 ರೂ ಮೌಲ್ಯದ ಬಂಗಾರ ಮತ್ತು …

Read More »

ಪ್ರತಿ ಶುಕ್ರವಾರ ಆರ್ಯನ್ ಖಾನ್​ ಎನ್​​ಸಿಬಿಗೆ ಹೋಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್​

ಹೈದರಾಬಾದ್ : ಕ್ರೂಸ್ ಡ್ರಗ್ಸ್ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರ್ಯನ್ ಖಾನ್ ಇನ್ಮುಂದೆ ಪ್ರತಿ ಶುಕ್ರವಾರ ಎನ್​ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆರ್ಯನ್​ ಖಾನ್​ಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಕೋರ್ಟ್​​​ ಜಾಮೀನು ನೀಡಿತ್ತು. ಅದರಂತೆ ಎನ್​ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ಆರ್ಯನ್​​ ತೆರಳಿ ಸಹಿ ಹಾಕುವುದು ಷರತ್ತಿನಲ್ಲಿತ್ತು. ಜಾಮೀನು ಪಡೆದ ಆರೋಪಿ ಊರು …

Read More »

ಸಿಲಿಕಾನ್‌ ಸಿಟಿಯಲ್ಲಿ ಸಿದ್ಧವಾಗುತ್ತಿದೆ 150 ಕೆಜಿ ಹೊರಬಲ್ಲ ಡ್ರೋನ್

ಬೆಂಗಳೂರು: ಇನ್ನು ಮುಂದೆ ಡ್ರೋನ್ ಮೂಲಕ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಹುದು. ಹೌದು. 10, 15 ಕೆಜಿ ಸಾಮರ್ಥ್ಯ ವಸ್ತುಗಳನ್ನು ಈಗ ಸುಲಭವಾಗಿ ಸಾಗಿಸಬಹುದು. ಆದರೆ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಲ್ಲ ಡ್ರೋನ್ ತಯಾರಾಗುತ್ತಿದೆ. ಈ ಡ್ರೋನ್ ಬೆಂಗಳೂರಿನಲ್ಲೇ ತಯಾರಾಗುತ್ತಿರುವುದು ವಿಶೇಷ. ಹೆಚ್‌ಎಲ್-15 ಎಂದು ಕರೆಯಲಾಗುತ್ತಿರುವ ಡ್ರೋನ್ ಸುಮಾರು 150 ಕೆಜಿ ತೂಕವನ್ನು ಹೊರಬಲ್ಲದು ಮಾತ್ರವಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಕ್ರಮಿಸಬಲ್ಲದು. ಅಷ್ಟೇ ಅಲ್ಲದೇ …

Read More »

ಒಕ್ಕಲಿಗ ಸಂಘದ ಚುನಾವಣೆ; ಚಿಕ್ಕಮಗಳೂರಲ್ಲಿ ಎ.ಪೂರ್ಣೇಶ್ ಗೆಲುವು

ಚಿಕ್ಕಮಗಳೂರು ; ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಿಂದ ಎ. ಪೂರ್ಣೇಶ್ 1,158 ಮತಗಳ‌ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎ. ಪೂರ್ಣೇಶ್ 4,428 ಮತಗಳನ್ನು ಪಡೆದರು. ಪೂರ್ಣೇಶ್ 1,158 ಮತಗಳ‌ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎ. ಪೂರ್ಣೇಶ್ 4,428 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಬಿ. ಎಲ್. ಸಂದೀಪ್ 3,270 ಮತಗಳನ್ನು ಪಡೆದಿದ್ದಾರೆ. ಬ್ಯಾರವಳ್ಳಿ ನಾಗರಾಜು …

Read More »

ಶಿಕ್ಷಣ ಸಂಸ್ಥೆ ಗುರುತಿನ ಪತ್ರ ನೀಡಿದ ತಕ್ಷಣವೇ ಬಸ್‍ಪಾಸ್ -ಶ್ರೀರಾಮುಲು

ಬೆಳಗಾವಿ,: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಯಾವುದಾದರೂ ಗುರುತಿನ ಪತ್ರ ನೀಡಿದರೆ ಅವರಿಗೆ ತಕ್ಷಣವೇ ಪಾಸ್ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿಗಳಿಗಾಗಿ ಬಸ್‍ಪಾಸ್ ವಿತರಿಸಲು ಸೇವಾಸಿಂಧು ಪೋರ್ಟಲ್(ಆನ್‍ಲೈನ್) ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಯಾವುದಾದರೊಂದು ಗುರುತಿನ ಚೀಟಿ ನೀಡಿದರೂ …

Read More »

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ಮೂವರ ಸ್ಥಿತಿ ಗಂಭೀರ- ಈಗಷ್ಟೇ ನೆಡೆದದ್ದು

ಹುಬ್ಬಳ್ಳಿ : ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಬವಿಸಿದ ಪರಿಣಾಮ ಎರಡು ವಾಹನಗಳು ನುಜ್ಜುಗುಜ್ಜಾಗಿ ಮೂರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಈಗಷ್ಟೇ ನಡೆದಿದೆ. ಹುಬ್ಬಳ್ಳಿ ಗದಗ ರಸ್ತೆಯ ಬಂಡಿವಾಡ ಬಳಿಯಲ್ಲಿ ಕಾರು ಹಾಗೂ ಟಾಟಾ ಏಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ,ಮೂವರ ಸ್ಥಿತಿ ಚಿಂತಾಜನಕವಾಗಿದ್ದು. ಸ್ಥಳಕ್ಕೆ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಕೀಮ್ಸ್ ಆಸ್ಪತ್ರೆಗೆ ರವಾನಿಸಿದ್ದು, …

Read More »

ಹಣಬಲ ಮತ್ತು ಜನಬಲದ ನಡುವೇ ಜನಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ-ಕುಮಾರಸ್ವಾಮಿ

ಬೆಂಗಳೂರು: ‘ದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ …

Read More »

ವರದಕ್ಷಿಣೆ ಕಿರುಕುಳದಿಂದ ಚಾಮರಾಜನಗರದ ಮಹಿಳೆ ಸಾವು-ಮಹಿಳೆ ಸಾವಿನ ಸುತ್ತ ಅನುಮಾನದ ಹುತ್ತ

ಚಾಮರಾಜನಗರ : ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಡಿಗಾಲದಲ್ಲಿ ಸೋಮವಾರ ನಡೆದಿದೆ. ಉಡಿಗಾಲದ ಜಯಶಂಕರ್‌ ಎಂಬುವವರ ಪತ್ನಿ 24 ವರ್ಷದ ದಿವ್ಯಾ ಅವರು ಮೃತಪಟ್ಟವರು. ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ದಿವ್ಯ ಅವರ ತಂದೆ ದೇವಪ್ಪ ಅವರು ಚಾಮರಾಜನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ದಿವ್ಯ ಅವರ ಪತಿ ಜಯಶಂಕರ್‌, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್‌ ಹಾಗೂ ಅವರ …

Read More »

ಪ್ರಿಯಕರನಿಗಾಗಿ ಸಾಮೂಹಿಕ ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೆಸ್ತುಬಿದ್ದ 1000 ಪೊಲೀಸರು!!

ನಾಗ್ಪುರ : ಪ್ರಿಯಕರನನ್ನು ಮದುವೆ ಆಗಲು 19 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರ ಆಗಿದೆ ಎಂದು ಸುಳ್ಳು ದೂರು ನೀಡಿದ್ದರಿಂದ ಹಿರಿಯ ಅಧಿಕಾರಿಗಳು ಸೇರಿದಂತೆ 1000 ಪೊಲೀಸರು ದಿನವೀಡಿ ತನಿಖೆ ನಡೆಸಿ ಬೆಸ್ತು ಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 11 ಗಂಟೆಗೆ ಯುವತಿ ಕಲ್ಮನಾ ಪೊಲೀಸ್ ಠಾಣೆಗೆ ಬಂದು ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದೂರು ನೀಡಿದಳು. ದೂರು ಸ್ವೀಕರಿಸುತ್ತಿದ್ದಂತೆ ನಾಗ್ಪುರ ಪೊಲೀಸ್ …

Read More »