ಹುಬ್ಬಳ್ಳಿಯ ಪ್ರತಿಷ್ಠಿತ ವೈಷ್ಟೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ಪೂಜಾರಿಯನ್ನ ದುಷ್ಕರ್ಮಿಗಳು ಚಾಕುವಿಂದ ಬರ್ಬರವಾಗಿ ಹತ್ಯೆಗೈದ ಎಸ್ಕೆಪ್ ಆದಘಟನೆ ನಗರದ ಎಪಿಎಂಸಿ ಬಳಿಯ ಈಶ್ವರನಗರದಲ್ಲಿ ನಡೆದಿದೆ.ವೈಷ್ಟೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ದೇವೇಂದ್ರಪ್ಪ ಹೊನ್ನಳಿ ಎಂಬವರು ಹತ್ಯೆಯಾಗಿದ್ದು, ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ದುಷ್ಕರ್ಮಿಗಳು ಹತ್ಯೆಗೈದ್ದು ಪರಾರಿಯಾಗಿದ್ದು ಎನ್ನಲಾಗಿದ್ದು,ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಇನ್ನೂ ಘಟನಾ ಸ್ಥಳಕ್ಕೆ ಡಿಸಿಪಿ ಮಹಾಲಿಂಗಪ್ಪ ನಂದಗವಿ, ನವನಗರ ಎಪಿಎಂಸಿ ಠಾಣೆಯ ಇನ್ಸೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಕೋಡಿ ಹರಿಯುತ್ತಿದೆ ನೋಡ ಉಣಕಲ್ ಕೆರೆ: ವರುಣನ ಅಬ್ಬರಕ್ಕೆ ಮೈತುಂಬಿದ ಪ್ರತಿಷ್ಠಿತ ತಾಣ..!
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಎಲ್ಲೆಡೆಯೂ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ್ ಕೆರೆಯು ಕೋಡಿ ಹರಿಯುತ್ತಿದೆ.ಹೌದು.. ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಣಕಲ್ ಕೆರೆ ಶುಕ್ರವಾರದಿಂದಲೇ ಕೋಡಿ ಹರಿಯುತ್ತಿದೆ. ಕೆರೆ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡಿಗೆ ಪಥ ನಿರ್ಮಿಸಲಾಗಿದ್ದು, ಕೋಡಿ ಹರಿಯುವುದನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗಿದೆ.ಉಣಕಲ್ ಕೆರೆ ಮೈದುಂಬಿದೆ. ಪ್ರತಿವರ್ಷ ಕೋಡಿ ಹರಿದಾಗಲೂ ಜನರು …
Read More »ಸೈಬರ್ ವಂಚನೆ ಪ್ರಕರಣ ಬೇಧಿಸಿದ ಖಾಕಿ: ಉತ್ತರ ಭಾರತದ ಮೂವರ ಬಂಧನ…!
ಹುಬ್ಬಳ್ಳಿ: ಸೈಬರ್ ವಂಚಕರ ಬಹುದೊಡ್ಡ ಜಾಲವೊಂದನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬೇಧಿಸಿದ್ದಾರೆ. ದೇಶದಾದ್ಯಂತ ಸೈಬರ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಕೆಲವು ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ವಿವಿಧ ಬ್ಯಾಂಕ್ ಖಾತೆಗಳಿಂದ 60 ಲಕ್ಷವನ್ನು ಫ್ರೀಜ್ ಮಾಡಿದ್ದಾರೆ. ಬಂಧಿತ ಆರೋಪಿಗಳಲ್ಲಿ ನಿಖಿಲಕುಮಾರ ರೌನಿ ಮತ್ತು ಸಚಿನ ಬೋಲಾ ದೆಹಲಿಯವರಾಗಿದ್ದು, ಮತ್ತೊಬ್ಬ ಆರೋಪಿ ನಿಗಮ್ ಮುಂಬೈ ಮೂಲದವನಾಗಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ …
Read More »IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ…
ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಐಎಎಸ್ ಅಧಿಕಾರಿಗಳಾದ ಶಿವಕುಮಾರ್ ಕೆ.ಬಿ, ಡಾ.ರಾಜೇಂದ್ರ ಕೆ.ವಿ, ವೈಶಾಲಿ ಎಮ್.ಎಲ್ ಇವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Read More »ಇನ್ನು ರಾಜ್ಯದ ಎಲ್ಲಾ ಎಸ್ಪಿ, ಡಿಸಿಪಿಗಳಿಗೆ ಪ್ರತಿದಿನ ಪೊಲೀಸ್ ಠಾಣೆ ಭೇಟಿ ಕಡ್ಡಾಯ..
ರಾಜ್ಯದ ಎಲ್ಲಾ ಎಸ್.ಪಿ., ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಆಗಾಗ ಜನಸ್ಪಂದನ ಸಭೆ ನಡೆಸಬೇಕು ಎಂಬುದು ಸೇರಿ ಅನೇಕ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ನೀಡಿದ …
Read More »ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ ಅಧಿಕಾರಿಗಳು; ಕಂಠಪೂರ್ತಿ ಕುಡಿದು ತೂರಾಡಿದ…? video viral…
ಲಖನೌ ಆಘಾತಕಾರಿ ಘಟನೆಯೊಂದರಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಠಾಣೆಯೊಳಗೇ ಎಣ್ಣೆ ಪಾರ್ಟಿ ಮಾಡುತ್ತ ಸಂಭ್ರಮಿಸುತ್ತಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮೊಹ್ಲಾ ರೈಲ್ಪಾರ್ ಕಂಟ್ರೋಲ್ ರೂಮ್ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಮೂವರು ಅಧಿಕಾರಿಗಳು ಠಾಣೆಯೊಳಗೆ ಮದ್ಯ ಸೇವಿಸುತ್ತಾ ಆರಾಮಾಗಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಅಧಿಕಾರಿಯೋರ್ವ ತನ್ನ ಸಹೋದ್ಯೋಗಿಗಳನ್ನು ಕಿಚ್ಚಾಯಿಸುತ್ತಿರುವುದನ್ನು ವೈರಲ್ ಆಗಿರುವ …
Read More »ಬೆಂಗಳೂರು ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಮಾರ್ಗಸೂಚಿ..
ಪೊಲೀಸ್ ಇಲಾಖೆ ಸಿಬ್ಬಂದಿಯನ್ನು (ಪೊಲೀಸ್ ಕಾನ್‌ಸ್ಟೆಬಲ್) ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಕೋರಿಕೆ ಆಧಾರದ ಮೇಲೆ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ ಅಂತರ ಜಿಲ್ಲಾ/ಘಟಕಗಳ ವರ್ಗಾವಣೆಗೆ ಇಲಾಖೆಯಿಂದ ರೂಪಿಸಿಲಾಗಿರುವ ಅಧಿಕೃತ ಆನ್‌ಲೈನ್ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರವೇ ಪರಿಗಣಿಸಬೇಕು. ಪ್ರತಿ ಘಟಕದಿಂದ ವರ್ಗಾವಣೆ ಆಗಿ ಹೋಗುವ ಸಿಬ್ಬಂದಿ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿರಬಾರದು. ಸೇವಾ ಜ್ಯೇಷ್ಠತೆ ಆಧಾರದ ಮೇಲೆಯೇ ವರ್ಗಾವಣೆ ನಡೆಸಬೇಕು. ಎಲ್ಲ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ …
Read More »ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕಳ್ಳತನ: ಲಕ್ಷಾಂತರ ಮೌಲ್ಯದ ಆಭರಣ ದೋಚಿ ಪರಾರಿ..!
ಹುಬ್ಬಳ್ಳಿ: ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕೀ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಕೇಶ್ವಾಪುರದ ರಮೇಶ ಭವನದ ಬಳಿ ನಡೆದಿದೆ.ಹುಬ್ಬಳ್ಳಿಯ ಕೇಶ್ವಾಪುರದ ರಮೇಶ್ ಭವನದ ಬಳಿಯ ಭುವನೇಶ್ವರಿ ಜ್ಯುವೆಲರಿ ಶಾಪ್ ನ ಕೀಲಿಯನ್ನು ಗ್ಯಾಸ್ ಕಟ್ಟರ್ ನಿಂದ ತುಂಡು ಮಾಡಿದ ಖದೀಮರು, ನಂತರ ಗ್ಲಾಸ್ ಒಡೆದು ಒಳನುಗ್ಗಿ 800 ಗ್ರಾಮ್ ಚಿನ್ನ ಮತ್ತು 50 ಕೆ.ಜಿ ಬೆಳ್ಳಿ ಕಳ್ಳತನ …
Read More »ಅಕ್ರಮ ಗಾಂಜಾ ಮಾರಾಟ: ಹದಿಮೂರು ಜನರ ಹೆಡೆಮುರಿ ಕಟ್ಟಿದ ಖಾಕಿ…
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಜೋರಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ ಠಾಣೆಯ ಪೊಲೀಸರು ನಗರದ ಗುಡ್ ಶೆಡ್ ರೋಡ್ ಬುದ್ಧ ವಿಹಾರ ಹತ್ತಿರ ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನವಾಜ್, ಹಜರತ್, ಅಹ್ಮದ್ ಖಾನ್, ಪಾಂಡು, ಶಂಕರನಾಗ್, ಆಕಾಶ, ಅಜುರುದ್ದೀನ್, ವೆಂಕಟೇಶ್, ಮಹಮ್ಮದ್ ಗೌಸ್, ಸರ್ಪರಾಜ್, ನೂರ ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಎಂಬಾತರೇ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಸುಮಾರು ಎರೆಡು …
Read More »ನೂರಾರು ಕೋಟಿ ಅವ್ಯವಹಾರದ ತನಿಖೆಗೆ ಆಗ್ರಹ: ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ..!
ಹುಬ್ಬಳ್ಳಿ: ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆಳುವ ಸರ್ಕಾರಗಳಿಂದ ಕೈಮಗ್ಗ ನೇಕಾರರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕೆ.ಎಚ್.ಡಿ.ಸಿ ನಿಗಮದ ಮೂಲಕ ನೇಕಾರರಿಗೆ ನಿವೇಶನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





