admin
September 12, 2019
ಕರ್ನಾಟಕ, ಸುದ್ದಿ
ಕೊಪ್ಪಳ: ರಸ್ತೆ ದಾಟುವಾಗ ಕರಡಿ ಲಾರಿ ಬಾಯಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊಸಪೇಟೆಯಿಂದ ಬಿಜಾಪುರ ಮಾರ್ಗವಾಗಿ ಚಲಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಬೆಳಿಗ್ಗೆ ಆರೂವರೆ ಏಳು ಗಂಟೆ ಸುಮಾರಿಗೆ ಕರಡಿ ಸಾವನ್ನಪ್ಪಿದೆ.ಸೂಳಿಕೇರಿ ಹಾಸಗಲ್ ಚಳ್ಳಾರಿ ಗ್ರಾಮಗಳು ಸೇರಿದಂತೆ ಹಗಲು ಹೊತ್ತಲ್ಲೆ ಕರಡಿ ಓಡಾಟ ಕಾಣಸಿಗೋದು ಇಲ್ಲಿ ಮಾಮೂಲಿಯಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಮಂಡ್ಯ ಪಟ್ಟಣದ ಕಸಬಾ ಹೋಬಳಿ ಒಂದನೇ ವೃತ್ತದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಪ್ರಾರಂಭವಾಗಿದ್ದು, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ನಡೆಸಲಾಗುತ್ತಿದ್ದು, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಂದ ಧ್ವಜವಂದನೆ ಸ್ವೀಕರಿಸಿದರು.ತಾಲ್ಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪಿ.ಜೆ.ವೆಂಕಟರಾಮು ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾಮನೋಭಾವನೆಯನ್ನು ಮೈಗೂಡಿಸಿಕೊಂಡು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ರಚನೆ ಹಿನ್ನಲೆಯಲ್ಲಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ. ಈ ಸಂಬಂಧವಾಗಿ ಎಂ.ಚಂದ್ರಪ್ಪ ಭಾವಿ ಸಚಿವರು ಎಂಬ ಪೋಸ್ಟ್ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿರುವದು ಕುತೂಹಲಕ್ಕೆ ಕಾರಣವಾಗಿದೆ.ರಾಜಕೀಯ ವಲಯದಲ್ಲಿ ಸಿಎಂ ಯಡಯೂರಪ್ಪರ ಕಟ್ಟಾಳು ಎನಿಸಿಕೊಂಡಿರುವ ಎಂ ಚಂದ್ರಪ್ಪ ಅವರು ಈ ಹಿಂದೆ ಬಿಎಸ್ ವೈ ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಎಂ. ಚಂದ್ರಪ್ಪ ಶಾಸಕ ಸ್ಥಾನಕ್ಕೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ನೇತೃತ್ವದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾವನ್ನು ನಡೆಸಲಾಯಿತು.ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ ಹಸಿರು ನಿಶಾನೆಯ ಬಾವುಟವನ್ನು ತೋರಿಸುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರುನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜೊತೆಗೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕುಡೆಂಗ್ಯೂ, ಚಿಕೂನ್ ಗುನ್ಯಾ ಸೇರಿದಂತೆ ಸೊಳ್ಳೆಗಳು ಕಚ್ಚಿ, …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಬೆಸ್ಕಾಂ ನೌಕರನ ಮೇಲೆ ಕಿಡಿಗೇಡಿ ಗ್ರಾಹಕನೋರ್ವ ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಾಕಿಯಿದ್ದ ಕರೆಂಟ್ ಬಿಲ್ಪಾವತಿಸುವಂತೆ ಕೇಳಿದ್ದು ಹಲ್ಲೆಗೆ ಕಾರಣವಾಗಿದೆ. ಹಲ್ಲೆಗೊಳಗಾದ ನೌಕರ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಾನೆ.ಕೋಲಾರ ತಾಲೂಕಿನ ನಾಗಲಾಪುರ ಗ್ರಾಮದ ನಾಗರಾಜು ಅವ್ರ ಕೋಳಿಫಾರಂ ಇದೆ. ಈ ಕೋಳಿ ಫಾರಂಗೆ ವಿದ್ಯುತ್ ಸಂಪರ್ಕದ ಬಿಲ್ 5 ಸಾವಿರ ರುಪಾಯಿಗಳಿಗೂ ಹೆಚ್ಚು ಬಾಕಿಯಿದೆ. ಬಾಕಿ ಹಣವನ್ನು ಪಾವತಿಸುವಂತೆ ಬೆಸ್ಕಾಂ ನೌಕರ ನವೀನ್ ಮಾಲೀಕರನ್ನು ಇಂದು ಕೇಳಿದ್ದಾರೆ. …
Read More »
admin
September 12, 2019
ಕರ್ನಾಟಕ, ಸುದ್ದಿ
ದಾವಣಗೆರೆ: ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮೈಕ್ರೋ ಪೋನ್ ಬಳಸಿ ನಕಲು ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಹುಬ್ಬಳ್ಳಿ ರೇಲ್ವೆ ಪೊಲೀಸ್ ಠಾಣೆಯ ಪೇದೆ ಮಂಜುನಾಥ, ದಾವಣಗೆರೆ ನಗರದ ನಿಟ್ಟುವಳ್ಳಿ ನಿವಾಸಿ ರಾಜಪ್ಪ ಬಂಧಿತ ಆರೋಪಿಗಳು.೨೦೧೭ ಅಕ್ಟೋಬರ್ ೧೬ ರಂದು ದಾವಣಗೆರೆ ನಗರದ ನೂತನ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಪತ್ತೆ ಆಗಿದ್ದ ಪ್ರಕರಣದಲ್ಲಿ ಮೊನ್ನೆಯಷ್ಟೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಈಗ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್ : ತಡರಾತ್ರಿ ವೇಳೆ ಖದೀಮರು ಅಂಗಡಿಗಳ ಕಳ್ಳತನ ಮಾಡಿ ಒಂದು ಮೊಬೈಲ್ ಹಾಗು ಹಣ ದೋಚಿ ಪರಾರಿಯಾಗಿರುವ ಘಟನೆ ಆನೇಕಲ್ ನ ಚಂದಾಪುರ ರಸ್ತೆಯ ವಿಬಿಎಚ್ಸಿ ಬಳಿ ನಡೆದಿದೆ. ವಿಬಿಎಚ್ಸಿ ಬಳಿಯ ಅಯ್ಯಪ್ಪ ಮೆಡಿಕಲ್ಸ್ ಹಾಗು ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನ ನಡೆದಿದೆ. ಅಂಗಡಿಗಳ ಶೆಟ್ಟರ್ ಅನ್ನು ಬೆಂಡ್ ಮಾಡಿ ಒಳನುಸುಳಿ ಕಳ್ಳತನ ಮಾಡಲಾಗಿದೆ. ಈ ಕುರಿತು ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಚಲಿಸುತ್ತಿದ್ದ ಬೈಕ್ ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಎದುರು ನಡೆದಿದೆ.ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಸುವರ್ಣಾವತಿ ಜಲಾಶಯದ ಕಾಲುವೆಗಳಲ್ಲಿ ಮರಳು ತೆಗೆಯುವಾಗಮರಳು ದಿಬ್ಬ ಕುಸಿದು ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ಜರುಗಿದೆ. ವರದನಾಯಕ(55) ಮೃತ ವ್ಯಕ್ತಿ.ಕಳೆದ ರಾತ್ರಿ ಮರಳು ತೆಗೆಯಲು ಹೋದ ವೇಳೆ ಅವಘಡ ಸಂಭವಿಸಿದೆ. ರಾಮಸಮುದ್ರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಫಲ್ಟಿಯಾದ ಪರಿಣಾಮ ಸಾವಿರಾರು ಲೀಟರ್ ಹಾಲು ಪೋಲಾದ ಘಟನೆ ನಡೆದಿದೆ.ಬೆಳಗಾವಿಯಿಂದ ಮುಂಬೈಗೆ ತೆರಳುತ್ತಿದ್ದ ಹಾಲು ತುಂಬಿದ್ದ ಲಾರಿ ತವದಿ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಕ್ಷಾಂತರ ಮೌಲ್ಯದ ಹಾಲು ಪೋಲಾಗಿದೆ.ಲಾರಿಯಲ್ಲಿ ತಾಂತ್ರಿಕ ತೊಂದರೆ ಇಂದಾಗಿ ಚಾಲಕ ಲಾರಿಯ ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗುತ್ತಿದ್ದು ಪೂನಾ ಬೆಂಗಳೂರು ಹೆದ್ದಾರಿಯಲ್ಲಿ ಹಾಲು ಚೆಲ್ಲಿದ್ದು ಬೇರೆ ವಾಹನ ಸವಾರರು ಕೂಡ ಕೆಲಹೊತ್ತು ಪರದಾಡುವ …
Read More »