Breaking News

ಕರ್ನಾಟಕ

ಗ್ರಾಮಲೆಕ್ಕಾಧಿಕಾರಿಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ: ಬೇರೆ ಇಲಾಖೆ ನೌಕರರನ್ನು ರೆವೆನ್ಯೂ ಇಲಾಖೆಗೆ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಮತ್ತು ವಾರಕ್ಕೊಂದು ರಜೆ ಖಡ್ಡಾಯವಾಗಿ ನೀಡ ಬೇಕೆಂದು ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿ ಸಂಘದಿಂದ ಗ್ರಾಮಲೆಕ್ಕಾಧಿಕಾರಿಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಜಿಲ್ಲೆಯ ಆರೂತಾಲೂಕಿನ ಸಿಬ್ಬಂದಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.‌

Read More »

ಯಡಿಯೂರಪ್ಪ ಸಿಎಂ ಪಟ್ಟ ಅಲಂಕರಿಸಲು ಪ್ರಾರ್ಥಿಸಿ ಪೂಜೆ

ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಲಿ ಎಂದು ಹಾರೈಸಿ ಯಾದಗಿರಿಯಲ್ಲಿ‌ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ನಡೆಸಿದ್ದಾರೆ.ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಮಂದಿರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ ನೇತೃತ್ವದಲ್ಲಿ ಬಿ.ಎಸ್.ವೈ ಸಿಎಂ ಆಗಲು ಪೂಜೆ ನಡೆಸಲಾಯಿತು. ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿ ಬಿ.ಎಸ್.ವೈ ಸಿಎಂ ಅಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Read More »

ಬಸವ ಜಯಂತಿ ವಿರೋಧ ವ್ಯಕ್ತಪಡಿಸಿದ ಅಖಿಲಭಾರತ ವೀರಶೈವ ಮಹಾಸಭಾ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಘಟಕದ ವತಿಯಿಂದ ಆಗಸ್ಟ್ 3ರಂದು ಹಮ್ಮಿಕೊಂಡಿರುವ ಬಸವ ಜಯಂತಿ, ಪ್ರತಿಭಾ ಪುರಸ್ಕಾರ, ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಮ್ಮ ವಿರೋಧವಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ವೀರಶೈವ ಮಹಾಸಭಾ ಮುಖಂಡ ಮಾಧವಪ್ರಸಾದ್ ಹಾಗೂ ತಾಲ್ಲೂಕು ವೀರಶೈವ ಮಹಾಸಭಾದ 13ಮಂದಿ ನಿರ್ದೇಶಕರು ತಿಳಿಸಿದ್ದಾರೆ.ಪಟ್ಟಣದ ಕೆಂಗೇಗೌಡ ವಾಣಿಜ್ಯ ಕಟ್ಟಡದಲ್ಲಿರುವ. ಹಳೆ ವೀರಶೈವ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ 3ರಂದು ನಡೆಯುವ ಸಮಾರಂಭವನ್ನು …

Read More »

ನೆರವೇರದ ಚಾಮರಾಜೇಶ್ವರಿ ರಥೋತ್ಸವ ನವದಂಪತಿಗಳಿಗೆ ವಿರಹ ವೇದನೆ

ಚಾಮರಾಜನಗರ: ಪ್ರತಿವರ್ಷ ಆಷಾಢ ಬಂತೆಂದರೆ ಅದು ನವದಂಪತಿಗಳ ಪಾಲಿಗೆ ವಿರಹವೇದನೆ ಅನುಭವಿಸುವ ಕಾಲ. ಹೀಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಒಂದುಗೂಡಿಸುತ್ತಿದ್ದುದೇ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ. ದುರಾದೃಷ್ಟವಶಾತ್ ಕಳೆದ ವರ್ಷದಂತೆ ಇಂದೂ ಸಹ ತೇರು ಜರುಗದೇ, ನವದಂಪತಿಗಳು ನಿರಾಸೆ ಅನುಭವಿಸಿದರು. ಹಾಗಾದ್ರೆ ಆಷಾಢ ರಥೋತ್ಸವ ಯಾಕೆ ನಡೆಯಲಿಲ್ಲ ಅಂತೀರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್…. ಚಾಮರಾಜೇಶ್ವರ ದೇವಸ್ಥಾನದ ಇತಿಹಾಸವೇ ಅಂತಾದ್ದು. 1836 ರಲ್ಲಿ ತಮ್ಮ ತಂದೆ ಚಾಮರಾಜ ಒಡೆಯರ್ ನೆನಪಿನಾರ್ಥ ಮುಮ್ಮಡಿ …

Read More »

ಭಕ್ತರ ಭಕ್ತಿಗೆ ಮೆಚ್ಚಿ ಮಾತಾ ಮಾಣಿಕೇಶ್ವರಿ ದಿವ್ಯ ದರ್ಶನ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಯಾನಾಗುಂದಿ ಕೋಟ್ಯಾಂತರ ಭಕ್ತರ ನಿರಂತರ ಪ್ರಾರ್ಥನೆಯ ಫಲವಾಗಿ ಗುರುಪೂರ್ಣಿಮೆಯ ದಿನ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಹಾಸಿಗೆಯಿಂದ ಹೊರಬಂದು ವ್ಹೀಲ್ ಚೇರ್ ಮೇಲೆ ಅಮ್ಮ ಭಕ್ತರಿಗೆ ದರ್ಶನ ನೀಡಿದ್ದಾರೆ.ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಹಿಂಬದಿಯಲ್ಲಿರುವ, ಗುಹೆಯ ಹೊರಭಾಗದ ಆಸನದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ …

Read More »

ಬಸ್ ಓವರ್ ಟೇಕ್ ಮಾಡಲು ಹೋಗಿ ವ್ಯಕ್ತಿ ಸಾವು

ಆನೇಕಲ್ ;ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆಬೆಂಗಳೂರು ಹೊರವಲಯ ವೀರಸಂದ್ರದ ಡಿ ಮಾರ್ಟ್ ಬಳಿ ನಡೆದಿದೆ.ಮೃತ ವ್ಯಕ್ತಿ ವಿವರ ತಿಳಿದುಬಂದಿಲ್ಲ.ಬಸ್ ಅನ್ನು ಓವರ್ ಟೇಕ್ ಮಾಡುವ ಬರದಲ್ಲಿ ಬಸ್ ನ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಸಾವನ್ನಪ್ಪಿದ್ದಾನೆ.ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »

ಆರೋಗ್ಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್

ಕೋಲಾರ: ಬಡವರಿಗೆ ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಧೋರಣೆ ತೋರುವ ಆರೋಗ್ಯ ಅಧಿಕಾರಿಗಳನ್ನು ಸ್ಪೀಕರ್ ರಮೇಶ ಕುಮಾರ ತರಾಟೆಗೆ ತೆಗೆದುಕೊಂಡರು.ಇಂದು ರಮೇಶ ಕುಮಾರ ಇಲ್ಲಿನ ಶ್ರೀನಿವಾಸಪುರ ಆಸ್ಪತ್ರೆಗೆ ಧೀಡೀರನೆ ಭೇಟಿ ನೀಡಿದ ವೇಳೆ ಚುಚ್ಚುಮದ್ದುಗಳ ಕೊರತೆ ಇರುವದು ಕಂಡು ಬಂದಿತು. ಇದರಿಂದ ಕುಪಿತಗೊಂಡು ನೀವೆಲ್ಲಾ ಸೇರಿ ಖಾಸಗಿ ಆಸ್ಪತ್ರೆಗೆ ಲಾಭ ಮಾಡುತ್ತೀದ್ದೀರಿ.ದೇವರು ಅಂತ ಇದ್ರೆ ನಿಮಗೆ ಈಗಲೇ ಏನಾದ್ರೂ ಆಗ್ಬೇಕು.- ಬಡವರು ಅಂದ್ರೆ ಲೆಕ್ಕಕ್ಕೆ ಇಲ್ಲ ನಿಮಗೆ ಸೌಂಡ್ರಲ್ಸ್ ಎಂದು …

Read More »

ಜೋಡಿ ಕೊಲೆಯಲ್ಲಿ ಅಂತ್ಯಗೊಂಡ ಗಲಾಟೆ

ಆನೇಕಲ್: ಜಮೀನು ವಿವಾದದ‌ ಹಿನ್ನಲೆಯಲ್ಲಿ ನಡುವೆ ಗಲಾಟೆ ನಡೆದದ್ದು, ಗಲಾಟೆ ತಸರಕಕ್ಕೇರಿ ಜೋಡಿ ಕೊಲೆಯಲ್ಲಿ ಭೀಕರ ಅಂತ್ಯ ಕಂಡಿದೆ. ಬೆಂಗಳೂರಿನ ದೇವರ ಚಿಕ್ಕನಹಳ್ಳಿಯಲ್ಲಿ‌ ಡಬಲ್ ಮರ್ಡರ್ ನಡೆದಿದ್ದು, ಮೃತರನ್ನು ಆನಂದ್ ರೆಡ್ಡಿ ಹಾಗು ಪ್ರಕಾಶ್ ರೆಡ್ಡಿ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಮೃತ ದೇಹಗಳನ್ನು ಕಳುಹಿಸಲಾಗಿದೆ‌. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇವರ ಚಿಕ್ಕನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದ ಅತ್ತಿಬೆಲೆ ಪೊಲೀಸರು.

ಆನೇಕಲ್: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮಧುರೈ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು ಆರೋಪಿ ಜೊತೆ ಮತ್ತೊರ್ವನಿದ್ದು ಆತ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ ಇನ್ನು ಆರೋಪಿ ತನ್ನ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ಅತ್ತಿಬೆಲೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ ಇನ್ನು ಆರೋಪಿಯಿಂದ 125 ಪ್ಯಾಕೆಟ್ ನಲ್ಲಿದ್ದ …

Read More »

ಐವರು ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರು ಸೆರೆ

ಕೋಲಾರ: ಕೋಲಾರದ ಕೆಜಿಎಫ್ ಪೊಲೀಸರು ಜಿಲ್ಲೆಯ ಕಾಮಸಮುದ್ರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಐವರು ತಮಿಳುನಾಡು ಮೂಲದವರಾಗಿದ್ದು, ನದೀಂ, ಮುನೀರ್, ಶ್ರೀಧರ್, ನದೀಂ ಹಾಗೂ ಜೈಪ್ರಕಾಶ್ ಎಂದು ಗುರುತಿಸಲಾಗಿದೆ.ಐವರು ಅಂತರರಾಜ್ಯ ದ್ವಿಚಕ್ರ ವಾಹನ ಚೋರರನ್ನು ಬಂಧಿಸಲಾಗಿದ್ದು, ಬಂಧಿತರಿಂದ 20 ಲಕ್ಷ ರುಪಾಯಿ ಮೌಲ್ಯದ 15 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ.- ಕರ್ನಾಟಕದ ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಬೈಕ್ ಗಳನ್ನ …

Read More »