Breaking News

ಕರ್ನಾಟಕ

ಹಿರಿಯ ನಟ ಅಂಬರೀಶ್ ಇನ್ನಿಲ್ಲ.

ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಇಂದು ರಾತ್ರಿ 10.20ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಸಿರಾಟ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಇಂದು ಸಂಜೆ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿತ್ತು. ಕೂಡಲೇ ಅವರನ್ನ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಅಂಬರೀಶ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ.ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತದ ಮೇರು ನಟ ರೆಬೆಲ್​ ಸ್ಟಾರ್​ …

Read More »

ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಬೆಂಗಳೂರಿಗೆ ಎಂಟ್ರಿ..!?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿಗೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಎಂಟ್ರಿ ಕೊಟ್ಟಿರುವ ಬಗ್ಗೆ ಇಂಟಲಿಜೆನ್ಸ್ ಬ್ಯೂರೋ ಮಾಹಿತಿ ನೀಡಿದೆ. ಆರು ಉಗ್ರರನ್ನೊಳಗೊಂಡ ತಂಡ ದೆಹಲಿಗೆ ಎಂಟ್ರಿ ಕೊಟ್ಟಿದ್ದು, ಅದರಲ್ಲಿ ಇಬ್ಬರು ಬೆಂಗಳುರಿಗೆ ಆಗಮಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಎಟಿಎಸ್ ಹಾಗೂ ದೆಹಲಿ‌ ಪೊಲೀಸರು ಬೆಂಗಳೂರಿಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಪೊಲೀಸರ ಸಹಕಾರ ಪಡೆದು ಉಗ್ರರ ಪತ್ತೆ ಕಾರ್ಯ‌ ನಡೆಸುತ್ತಿದ್ದಾರೆ. …

Read More »

ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸಂಪುಟ ವಿಸ್ತರಣೆ ಅರ್ಧ ಗಂಟೆಯ ಕೆಲಸ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್​ಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಅರ್ಧ ಗಂಟೆಯಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಅಂತಾ ಡಿಸಿಎಂ ಡಾ,ಜಿ.ಪರಮೇಶ್ವರ್​ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿವೇಶನಕ್ಕೆ ಮುಂಚೆಯೇ ಸಂಪುಟ ವಿಸ್ತರಣೆ ಮಾಡಲು ಅವಕಾಶ ಕೇಳಿದ್ದೇವೆ. ಅನುಮತಿ ಸಿಕ್ಕರೆ ಮಾಡುತ್ತೇವೆ ಎಂದರು. ಇನ್ನು ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿರೋದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತೇನೆ. ವೈಯಕ್ತಿಕ ಇಲ್ಲವೇ, ಕ್ಷೇತ್ರದ ಕೆಲಸವಿದ್ದರೆ ಅವರ ಜೊತೆ ಮಾತನಾಡುತ್ತೇನೆ. …

Read More »

ರಾಜ್ಯದ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್..

ಬೆಂಗಳೂರು: ಇನ್ಮುಂದೆ ಕಾಲೇಜು ಅವಧಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಮೊಬೈಲ್ ಮತ್ತು ಲ್ಯಾಪ್​ಟಾಪ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ.ಈ ಹೊಸ ನಿಯಮ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ಮಾತ್ರವಲ್ಲದೆ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಈ ಆದೇಶ ಹೋರಾಡಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಪಿಯು ಕಾಲೇಜುಗಳಲ್ಲಿ ಇನ್ಮುಂದೆ ಮೊಬೈಲ್ ಮತ್ತು ಲ್ಯಾಪ್​ಟಾಪ್ ನಿಷೇಧಿಸುವಂತೆ ಪಿಯು ಬೋರ್ಡ್ …

Read More »

ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರವಾದ ಮಾಹಿತಿ ನೀಡಿದರು. ದೇಶದಲ್ಲಿ ಪ್ರಸ್ತುತ 230 ಲಕ್ಷ ಟನ್ ಸಕ್ಕರೆ ದಾಸ್ತಾನು ಇದೆ. ಹೆಚ್ಚುವರಿ ಉತ್ಪಾದನೆ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕಬ್ಬಿನಿಂದ ಇಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ …

Read More »

ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳು: ಪ್ರೇಮಿ ಸಾವು, ಪ್ರೇಯಸಿ ಸ್ಥಿತಿ ಗಂಭೀರ

ಶಿವಮೊಗ್ಗ: ಕಿಡಿಗೇಡಿಗಳ ನ್ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳ ಪೈಕಿ ಪ್ರಿಯತಮ ಸಾವನ್ನಪ್ಪಿದ್ದು ಪ್ರೇಯಸಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಸಂಜಯ್ (22) ಮೃತ ಪ್ರೇಮಿ ಎನ್ನಲಾಗಿದ್ದು ಪ್ರೇಯಸಿಗೆ ಶಿವಮೊಗ್ಗದ ಮೆಗ್ಗಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದ್ದು ಚೇತರಿಕೆ ಕಾಣುತ್ತಿದ್ದಾಳೆ.ಘಟನೆ ವಿವರಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ.ಪ್ರೇಮಿಗಳು ಏಕಾಂತದಲ್ಲಿದ್ದ ವೇಳೆ ಆಯನೂರು ಗ್ರಾಮದ ಕೆಲ ಯುವಕರು ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾರೆ.ಸಂಜಯ್ ಗೆ ಪದೇ …

Read More »

ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಇಂದು ಸಿಎಂ ಸಭೆ..

ಬೆಂಗಳೂರು: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮೊನ್ನೆಯಷ್ಟೇ ಸಭೆ ನಡೆಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಿದ್ದಾರೆ.ರೈತರಿಗೆ ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವ ಮಾಲೀಕರೊಂದಿಗೆ ಸಿಎಂ ಸಭೆ ಕರೆದಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12:30ಕ್ಕೆ ಸಭೆ ನಡೆಯಲಿದೆ. ಇಂದಿನ ಸಭೆಗೆ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಹಾಜರಾಗಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿರುವ ಕುಮಾರಸ್ವಾಮಿ ಸಭೆಗೆ ಬರದವರ ವಿರುದ್ಧ …

Read More »

ತಣ್ಣಗಾಗದ ಕಬ್ಬಿನ ಕಿಚ್ಚು, ರೈತರಿಂದ ಅಹೋರಾತ್ರಿ ಧರಣಿ.

ಬೆಳಗಾವಿ :ಕಬ್ಬು ಬೆಳೆ ಬಾಕಿ ಸಂಬಂಧ ಹಾಗೂ ಬೆಂಬಲ ಬೆಲೆ ಸೂಚಿಸಲು ಸಿಎಂ ಕುಮಾರಸ್ವಾಮಿ ನಡೆಸಿದ ಸಭೆ ತೃಪ್ತಿದಾಯಕವಾಗಿಲ್ಲ ಅಂತಾ ಅಸಮಾಧಾನಗೊಂಡಿರೋ ಬೆಳಗಾವಿ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸಿದ್ರು. ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದ ರೈತರು ಅಲ್ಲೇ ಊಟ ಮಾಡಿ ಹೋರಾಟ ಮಾಡಿದ್ರು. ರೈತರ ಹೋರಾಟಕ್ಕೆ ಕರವೇ ಸಾಥ್​ ನೀಡಿದ್ದು, ನಗರದ ಚೆನ್ನಮ್ಮ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಾಂತೇಶ ರಣ ಗಟ್ಟಿಮಠ , ವಾಜೀದ್ …

Read More »

ಬೆಂಗಳೂರಿನಲ್ಲಿ ‘ರಾಮ್​ಲೀಲಾ’ ರಿಸೆಪ್ಷನ್​

ಬೆಂಗಳೂರು : ಪರದೆ ಮೇಲೆ ಫಳ ಫಳ ಅಂತಾ ಹೊಳೀತಿದ್ದ ಬಾಲಿವುಡ್​ನ ಜೋಡಿ ದೀಪ್​ವೀರ್ ಮೊನ್ನೆಯಷ್ಟೇ ವಿದೇಶದಲ್ಲಿ ಹಸಮಣೆ ಏರಿತ್ತು. ಅವರಿಬ್ಬರ ಆರತಕ್ಷತೆ ಇಂದು ಕನ್ನಡದ ನೆಲದಲ್ಲೇ ನಡೀತಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್​ನ ದೀಪಿಕಾ-ರಣ್​ವೀರ್​ ರಿಸೆಪ್ಷನ್​ ನಡೆಯಲಿದ್ದು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಇನ್ನು, ಲೀಲಾ ಪ್ಯಾಲೇಸ್​ನಲ್ಲೇ ರಿಸೆಪ್ಷನ್​ ಯಾಕೆ ಅನ್ನೋದನ್ನ ಹುಡುಕುತ್ತಾ ಹೋದರೆ ಇಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್. ಅಲ್ಲದೇ ದೀಪಿಕಾಗೆ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚಂತೆ. ಜೊತೆಗೆ ಲೀಲಾ …

Read More »

ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ರಾ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ…?

ಬೆಂಗಳೂರು: ಖಡಕ್ ಅಧಿಕಾರಿ, ಸದ್ಯ ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನ ತನಿಖೆ ಮಾಡುತ್ತಿರುವ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧವೇ ದೂರು ದಾಖಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವವರು ಬ್ಲ್ಯಾಕ್ ಮೇಲೆ ಮಾಡಿರುವ ಆರೋಪ ಹೊರಿಸಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.ವಿಜಯ್ ಟಾಟಾ ದೂರಿನಲ್ಲೇನಿದೆ?ಆ್ಯಂಬಿಡೆಂಟ್ ಕಂಪೆನಿ ಜೊತೆಗೆ ನಮ್ಮ ರಿಯಲ್ ಎಸ್ಟೇಟ್ ಕಂಪನಿಯ ವ್ಯವಹಾರ ಇಟ್ಟುಕೊಂಡಿದ್ದೆವು. …

Read More »