Breaking News

ಕರ್ನಾಟಕ

ಸಿಎಂ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲು..

ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜಿಲ್ಲಾ ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಆ ಭಾಗದ ಜನರಿಗೆ ನೀರಾವರಿ ಯೋಜನೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾ‌ ಬಿಜೆಪಿ ಘಟಕದಿಂದ ಸಿಎಂ ಕುಮಾರಸ್ವಾಮಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಮಧು‌ ಬಂಗಾರಪ್ಪನಿಗೆ ಮತ ಹಾಕಿ, ಈ ಭಾಗದ ನೀರಾವರಿ …

Read More »

ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಕೇಸ್ ದಾಖಲು: ವಕೀಲ ಶ್ಯಾಮ್​ ಸುಂದರ್​..

ಬೆಂಗಳೂರು: ಭಜನ್ ಲಾಲ್ ಕೇಸ್ ಅನ್ನು ಸರ್ವೊಚ್ಛ ನ್ಯಾಯಾಲಯದ ಆದೇಶದಂತೆ ರದ್ದುಗೊಳಿಸಲಾಗಿತ್ತು. ಈ ಕೇಸ್​ ಕೂಡಾ ಅಂತಹದ್ದೇ. ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಈ ಕೇಸ್ ದಾಖಲಿಸಲಾಗಿದೆ ಅಂತಾ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.ಹೈಕೋರ್ಟ್‌ನಲ್ಲಿ ಎಫ್ಐಆರ್‌ ರದ್ದು ಕೋರಿ ಸಲ್ಲಿಸಿರುವ ವಿಚಾರಣೆ ಮುಗಿದ ಬಳಿಕ ಮಾತನಾಡಿದ ಅವರು, ಶೃತಿ‌ಹರಿಹರನ್ ‌ಸಲ್ಲಿಸಿರುವ ದೂರು ಕಾನೂನು ವಿರುದ್ಧವಾಗಿದೆ. ಹಗೆತನದದ್ದಾಗಿದೆ ಅನ್ನೋದನ್ನು ಎಳೆಎಳೆಯಾಗಿ ವಕೀಲ ಬಿ.ವಿ ಆಚಾರ್ಯ‌ ಅವರು …

Read More »

#Metoo ನಮ್ ಕಾಲದಲ್ಲೇ ಆಗಿ ಹೋಗಿತ್ತು: ನರ್ಸ್ ಜಯಲಕ್ಷ್ಮೀ

ಬೆಂಗಳೂರು: ಜಯಲಕ್ಷ್ಮೀ… ಈ ಹೆಸರು ಕೇಳಿದ ಕೂಡಲೇ ಥಟ್ ಅಂತ ಇವ್ರು ಯಾರು ಅನ್ನೋದು ಗೊತ್ತಾಗುತ್ತೋ ಇಲ್ವೋ. ಆದ್ರೆ ನರ್ಸ್ ಜಯಲಕ್ಷ್ಮೀ, ಬಿಗ್ ಬಾಸ್ ಜಯಲಕ್ಷ್ಮೀ ಅಂದ್ರೆ ಹಂಗೆ ಕಣ್ಮುಂದೆ ಸುಳಿದು ಹೋಗ್ತಾರೆ. ಅರೇ ಆ ಜಯಲಕ್ಷ್ಮೀನಾ, ಇಷ್ಟ್ ದಿನ ಎಲ್ ಇದ್ರು, ಏನ್ ಮಾಡ್ತಾ ಇದ್ರು ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಅದೆಲ್ಲಕ್ಕೂ ಉತ್ತರ ಇಲ್ಲಿದೆ.ಜಯಲಕ್ಷ್ಮೀ ರಾಜಕಾರಣಿಯೊಬ್ಬರ ಜೊತೆಗಿದ್ದ ಫೋಟೋದಿಂದ ಸುದ್ದಿಯಾದವರು. ನಂತರ ಅದೆಲ್ಲಾ ಏನಾಯ್ತು ಅನ್ನೋದು ಇಡೀ …

Read More »

ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ.

ಮಂಗಳೂರು: ದುಬೈನಲ್ಲಿ ನವೆಂಬರ್ 4 ರಿಂದ 6ರವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ ‘ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ’ ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.ದುಬೈ ಕಲ್ಚರಲ್ ಅಂಡ್ ಸೈಂಟಿಫಿಕ್ ಅಸೋಸಿಯೇಶನ್ ಆಯೋಜಿಸಿರುವ ಈ ಸ್ಪರ್ಧೆಯು ದುಬೈನ ಅಲ್ ಮಮ್ಜಾರ್ನಲ್ಲಿ ನಡೆಯಲಿದೆ. ಸುಮಾರು 6 ತಿಂಗಳ ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ನಡೆಸಿದ ಆಯ್ಕೆ …

Read More »

ಖೆಡ್ಡಾಗೆ ಬಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳಿಯರು..

ಮೈಸೂರು : ತಮಿಳುನಾಡು ಮೂಲದ ಇಬ್ಬರು ಅಂತರ್‌ರಾಜ್ಯ ಕಳ್ಳಿಯರನ್ನ ಮೈಸೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ 40 ವರ್ಷದ ಉಷಾರಾಣಿ ಹಾಗೂ 24 ವರ್ಷದ ರೂಪಾ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನು ಬಂಧಿತರಿಂದ ₹7.30 ಲಕ್ಷ ಮೌಲ್ಯದ 244 ಗ್ರಾಂ. ಚಿನ್ನಾಭರಣ ಹಾಗೂ ₹45 ಸಾವಿರ ರೂಪಾಯಿ ನಗದನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ದಸರಾ ಸಂದರ್ಭದಲ್ಲಿ …

Read More »

ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಬಂಧನ..

ಮಂಗಳೂರು: ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 44 ವರ್ಷದ ಆರೋಪಿ ಅಜ್ಮಲ್ ಮೂಲತಃ ಕಾಸರಗೋಡಿನ ಕುಂಜತ್ತೂರು ನಿವಾಸಿಯಾಗಿದ್ದಾನೆ. ಈತ ಗೋವಾದಿಂದ ಮಂಗಳೂರಿಗೆ ಕೊಕೇನ್ ಪೂರೈಸುತ್ತಿದ್ದ. ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಐವರು ಕೊಕೇನ್ ಮಾರಾಟಗಾರರು ಬಂಧಿತರಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ. ಬಂಧಿತ ಐವರ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧಾರಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಜ್ಮಲ್ ಪುಲಿಕ್ಕಲ್ …

Read More »

ಕಮಲದಲ್ಲಿ ಮುಳುಗಿದ್ದ ಚಂದ್ರಶೇಖರ್‌ ‘ಕೈ’ ಹಿಡಿದಿದ್ಯಾಕೆ..?

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್‌ ನೀಡಿದ್ದಾರೆ. ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇರೋವಾಗ ಚಂದ್ರಶೇಖರ್‌ ಬಿಜೆಪಿಗೆ ಕೈ ಕೊಟ್ಟಿರೋದು ನಿರೀಕ್ಷೆಗೂ ಮೀರಿದ ಬೆಳವಣಿಗೆ. ಇಷ್ಟಕ್ಕೂ ಚಂದ್ರಶೇಖರ್‌ ಬಿಜೆಪಿಗೆ ಕೈಕೊಟ್ಟಿದ್ದೇಕೆ..? ಅದಕ್ಕವರು ಕೊಡ್ತಿರೋ ಕಾರಣ ಏನು..?ಬಿಜೆಪಿ ನಾಯಕರು ಪ್ರಚಾರಕ್ಕೆ ಬರಲಿಲ್ಲನನ್ನ ಪರವಾಗಿ ಬಿಜೆಪಿ ನಾಯಕರು ಪ್ರಚಾರ ಮಾಡುವುದಾಗಿ ಹೇಳಿದ್ರು. ಆದ್ರೆ ಪ್ರಚಾರಕ್ಕೆ ಯಾರೊಬ್ಬರು ಬರಲಿಲ್ಲ.ಚುನಾವಣಾಗಾಗಿ …

Read More »

ರಾಜ್ಯ ಸರ್ಕಾರಕ್ಕೆ ₹1 ಸಾವಿರ ದಂಡ ವಿಧಿಸಿದ ಹೈಕೋರ್ಟ್..

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ₹ ಒಂದು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಣೆಯನ್ನ ಪ್ರಶ್ನಿಸಿ ಮಡಿಕೇರಿ ಮೂಲದ ಮಂಜುನಾಥ್ ಅನ್ನೋರು ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆಯನ್ನ ಇಂದು ಹೈಕೋರ್ಟ್​ನ ವಿಭಾಗೀಯ ಪೀಠ ನಡೆಸಿತು. ಪಿಐಎಲ್​ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಕ್ಷೇಪಣಾ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿತ್ತು. ಆದರೆ ಸರ್ಕಾರ ಇದುವರೆಗೂ ಆಕ್ಷೇಪಣಾ ಅರ್ಜಿ ಸಲ್ಲಿಸಿರಲಿಲ್ಲ. ಈ ಸಂಬಂಧ ಗರಂ …

Read More »

ಹೈಕೋರ್ಟ್​ನಲ್ಲಿಂದು ಅರ್ಜುನ್​ ಸರ್ಜಾ ಅರ್ಜಿ ವಿಚಾರಣೆ ಸಾಧ್ಯತೆ..

ಬೆಂಗಳೂರು: ನಟ ನಿರ್ದೇಶಕ ಅರ್ಜುನ್ ಸರ್ಜಾ, ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಸಂಬಂಧ ಇಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಸರ್ಜಾ ಮೇಲೆ ಐಪಿಸಿ ಸೆಕ್ಷನ್​ 356 ಹಾಗೂ 354 (A) ಅಡಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜುನ್​ ಸರ್ಜಾ, ಇದು ದುರುದ್ದೇಶಪೂರಿತ ದೂರು, ಇದನ್ನು ರದ್ದು ಮಾಡಬೇಕೆಂದು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್‌ನ ಏಕಸದಸ್ಯಪೀಠ ಅರ್ಜಿ …

Read More »

ನಾಗರತ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲ್ವಾ..?ಕಾರಣವೇನು?

ಬೆಂಗಳೂರು: ನಟ ದುನಿಯಾ ವಿಜಿ 2ನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಪತ್ನಿ ನಾಗರತ್ನ ಇಂದು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋದು ಅನುಮಾನ ಎನ್ನಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಗರತ್ನ ಮೇಲೆ ಐಪಿಸಿ ಸೆಕ್ಷನ್ 326 (ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ) ಸೇರಿಸಿ ಕೋರ್ಟ್​ಗೆ ಮೆಮೋ ಕಳಿಸಿದ್ದಾರೆ. ಆದ್ರೆ ಹಳೇ ಎಫ್ಐಆರ್​ ನಲ್ಲಿ ಇನ್ನೂ ಐಪಿಸಿ ಸೆಕ್ಷನ್ 326 ಸೇರ್ಪಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಗರತ್ನ ಇಂದು …

Read More »