Shaikh BIG TV NEWS, Hubballi
August 26, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕೇವಲ ಹತ್ಯೆ ಮಾಡುವುದಕ್ಕಷ್ಟೇ ಅಲ್ಲದೆ, ಹತ್ಯೆಯಾದ ಬಳಿಕ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೂ ವಿಚಾರಣೆಯನ್ನು ಹೇಗೆ ಎದುರಿಸಬೇಕೆಂಬ ಸೂಕ್ಷ್ಮ ತರಬೇತಿಗಳನ್ನು ಆರೋಪಿಗಳು ಪಡೆದುಕೊಂಡಿರುವುದು ಇದೀಗ ತಿಳಿದುಬಂದಿದೆ. ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆರೋಪಿಗಳು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾಗೂ ತಮ್ಮ …
Read More »
Shaikh BIG TV NEWS, Hubballi
August 25, 2018
ಕರ್ನಾಟಕ, ಸುದ್ದಿ
ಹುಬ್ಬಳ್ಳಿ- ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ ಅವರನ್ಮು ತಕ್ಷಣ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ರೆ, ಕೊಪ್ಪಳ ಎಸ್ಪಿ ಡಾ.ಅನೂಪ ಶೆಟ್ಟಿಯನ್ನ ಹುಬ್ಬಳ್ಳಿ- ಧಾರವಾಡದ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ನಿಯೋಜನೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Read More »
Shaikh BIG TV NEWS, Hubballi
August 25, 2018
ಕರ್ನಾಟಕ, ಸುದ್ದಿ
ಕೊಪ್ಪಳ: ನಿರುದ್ಯೋಗದ ಸಮಸ್ಯೆ ಕುರಿತಂತೆ ರಾಹುಲ್ ಗಾಂಧಿ ಭಾರತದಲ್ಲಿ ಮಾತನಾಡಬೇಕೇ ಹೊರತು ಇರಾನ್, ಇರಾಕ್ನಲ್ಲಿ ಅಲ್ಲ. ಬಿಜೆಪಿ ಹುಚ್ಚಾಸ್ಪತ್ರೆ ಎಂದು ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆ ರಾಹುಲ್ ಗಾಂಧಿಗೆ ಅನ್ವಯಿಸುತ್ತದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಕೊಪ್ಪಳ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಬುದ್ಧಿಜೀವಿ ಎಂದುಕೊಂಡಿದ್ದೆವು. ಆದರೆ, ಪ್ರಾಕ್ಟಿಕಲ್ ನಾಲೇಜ್ ಇಲ್ಲ. ಅವರಿಗೇನು ಗೊತ್ತು? ನಮ್ಮ ಹಾಗೆ ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. …
Read More »
Shaikh BIG TV NEWS, Hubballi
August 24, 2018
ಕರ್ನಾಟಕ, ಸುದ್ದಿ
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ. ಧಾರವಾಡ ತಾಲೂಕಿನ ದಾಸನಕೊಪ್ಪ ಗ್ರಾಮದ ಬಳಿ ಘಟನೆ. ಬೈಕನಲ್ಲಿದ್ದ ಮೂವರ ಸ್ಥಿತಿ ಗಂಬೀರ, ಕಾರ ಚಾಲಕನಿಗೂ ಸಣ್ಣಪುಟ್ಟ ಗಾಯ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ಪರಿಶಿಲನೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ. ಧಾರವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »
Shaikh BIG TV NEWS, Hubballi
August 24, 2018
ಕರ್ನಾಟಕ, ಸುದ್ದಿ
ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ- ಸಿದ್ದರಾಮಯ್ಯ ಹಾಸನ: ನಾನು ಮತ್ತೆ ಸಿಎಂ ಆಗ್ತೀನಿ. ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಮತ್ತೆ ಮುಖ್ಯಮಂತ್ರಿಯಾದಾಗ ಗುತ್ತಿಗೆ ನೀಡುವಲ್ಲೂ ಮೀಸಲಾತಿ ತರುತ್ತೇನೆ. ಎಲ್ಲವನ್ನೂ ಈಗಲೇ ಹೇಳಿದರೆ ಕೆಲವರ ಕಣ್ಣು ಕೆಂಪಗಾಗುತ್ತೆ …
Read More »
Shaikh BIG TV NEWS, Hubballi
August 24, 2018
ಕರ್ನಾಟಕ, ಸುದ್ದಿ
ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು ಎಂದರು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ. ಬೆಂಗಳೂರು: ಎಲ್ಲಾ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ …
Read More »
Shaikh BIG TV NEWS, Hubballi
August 23, 2018
ಕರ್ನಾಟಕ, ಸುದ್ದಿ
ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಗರದ ಗ್ಲಾಸ್ ಹೌಸ್ ಬಳಿ ನಡೆದಿದೆ. ವಾಶೀಮ್ ಎಂಬ ಯುವಕನೇ ಚಾಕುವಿನಿಂದ ಹಲ್ಲೆಗೊಳಗಾದ ಯುವಕನಾಗಿದ್ದು, ಗಾಯಾಳು ಯುವಕನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ದಾವೂದ್ ಸೇರಿದಂತೆ ಐದು ಜನರ ಗುಂಪು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಘಟನೆ …
Read More »
Shaikh BIG TV NEWS, Hubballi
August 23, 2018
ಕರ್ನಾಟಕ, ಸುದ್ದಿ
ಇದೇ ತಿಂಗಳ 25 ಮತ್ತು 26 ರಂದು ನಡೆಯಬೇಕಿದ್ದ, ಕೆಎಸ್‌ಆರ್‌ಟಿಸಿ ಇಲಾಖೆಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಬೆಂಗಳೂರು: ಕರಾವಳಿ ಪ್ರದೇಶ ಮತ್ತು ಕೊಡಗು ಜಿಲ್ಲೆಯ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ, ಜನರ ಪ್ರತಿನಿಧಿಗಳು ಮತ್ತು ಅಭ್ಯರ್ಥಿಗಳು ಮೇಲ್ವಿಚಾರಣೆ ಮತ್ತು ತಾಂತ್ರಿಕ ಪೋಸ್ಟ್ಗಳ ನೇಮಕಾತಿಗಾಗಿ ಆಗಸ್ಟ್ 25 ಮತ್ತು 26 ರಂದು ನಿಗದಿಪಡಿಸಿದ ಪರೀಕ್ಷೆಗಳನ್ನು ಮುಂದೂಡಲು ವಿನಂತಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ವಿನಂತಿಯನ್ನು ಪರಿಶೀಲಿಸಿದ ಸಾರಿಗೆ ಸಚಿವರು …
Read More »
Shaikh BIG TV NEWS, Hubballi
August 22, 2018
ಕರ್ನಾಟಕ, ಸುದ್ದಿ
ಬಿಜೆಪಿಗೆ ಯಾವುದೇ ಧರ್ಮ, ನೀತಿ ಹಾಗೂ ನೈತಿಕತೆಯೇ ಇಲ್ಲ. ಬೇರೆ ಪಕ್ಷಗಳ ಶಾಸಕರಿಗೆ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೆಳೆಯೋದೆ ಕೆಲಸವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯವೇ ಹೊರತು, ಅಭಿವೃದ್ಧಿಯಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ವಾಗ್ದಾಳಿ ನಡೆಸಿದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರ 25ನೇ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾತನಾಡಿದ ಅವ್ರು, ಈ ಹಿಂದೆ ಬಹುಮತವಿಲ್ಲದಿದ್ದರು ಸರ್ಕಾರ ರಚನೆ ಮಾಡಲು ಹೋಗಿ ಬಿಜೆಪಿ …
Read More »
Shaikh BIG TV NEWS, Hubballi
August 22, 2018
ಕರ್ನಾಟಕ, ಸುದ್ದಿ
ಕೂಡಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಜಮಾ ಮಾಡುವಂತೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ ಪಾಟೀಲ್ ದೇವಸ್ಥಾನದ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಂದ ಸಂತ್ರಸ್ತರ ನೆರವಿಗೆ ಒಟ್ಟು 120.30 ಕೋಟಿ ರೂ. ದೇಣಿಗೆ ನೀಡಲು ಮುಜರಾಯಿ …
Read More »