Breaking News

ಕರ್ನಾಟಕ

ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ

ಹುಬ್ಬಳ್ಳಿ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ‌ ನಿರ್ಧಾರ ತೆಗೆದುಕೊಳ್ಳಲಾಯಿತು.ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜದ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಯಿತು. ಸಮಾಜದ ಸಮಾಜ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಿದ್ದು, ನ್ಯಾಯ ಸಿಗುವರೆಗೂ ಹೋರಾಟ, ಗಂಟಿಚೋರ್‌ ಸಮುದಾಯಕ್ಕೆ ತಮ್ಮ ಜಾತಿಯ ಬಗ್ಗೆ ಬೇರೆ ಬೇರೆ …

Read More »

ಬೂದನಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿ ವತಿಯಿಂದ ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಶ್ರೀ ಕ್ಷೇತ್ರ ಬೂದನಗುಡ್ಡವು ಪುರಾತನವಾದ ರಮಣೀಯವಾದ ಉನ್ನತ ಗಿರಿ ಶಿಖರ ವನಸಿರಿಗಳಿಂದ ಕೂಡಿದ ಪ್ರವಾಸಿ ತಾಣವಾಗಿದ್ದು, ಶ್ರೀ ಕ್ಷೇತ್ರ ಉಳಿವಿಯ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿದೆ. ಈ ನಿಟ್ಟಿನಲ್ಲಿ ಪ್ರತಿ ಶ್ರಾವಣ …

Read More »

ಮುಂಚಿತವಾಗಿ ಟೆಂಡರ್ ಕರೆದು ದುಡ್ಡಿಲ್ಲದೇ ಹಿಂದಿನ ಸರಕಾರ ಬಿಟ್ಟು ಹೋಗಿದೆ ಸಂತೋಷ್ ಲಾಡ್

ಧಾರವಾಡ: ಗುತ್ತಿಗೆದಾರರಿಂದ ಕಾಂಗ್ರೆಸ್ ಸರ್ಕಾರ ಕಮಿಷನ್ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ನಾವಿನ್ನೂ ಯಾವುದೇ ಹೊಸ ಟೆಂಡರ್ ಕರೆದೇ ಇಲ್ಲ. ಹೊಸ ಕಾಮಗಾರಿ ಆರಂಭಿಸಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿತ್ತು. ಇದರಲ್ಲಿ ಸತ್ಯ ಇದೆ ಎನ್ನಬಹುದಿತ್ತು. ಆದರೆ, ಬಿಜೆಪಿ ಮುಂಚಿತವಾಗಿ ಟೆಂಡರ್ ಕರೆದು ದುಡ್ಡಿಲ್ಲದೇ ಬಿಟ್ಟು ಹೋಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಯಾರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು …

Read More »

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ kss ಕಾಲೇಜ್ ನ ಬೀಳ್ಕೊಡುಗೆ ಕಾರ್ಯಕ್ರಮ……

ಹುಬ್ಬಳ್ಳಿ:ಕನಕದಾಸ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ NSS ಮತ್ತು NCC, ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ KSS ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವಿದ್ಯಾ ನಗರ ಹುಬ್ಬಳ್ಳಿ ಅಲ್ಲಿ ಅತ್ಯಂತ ಸುಂದರವಾಗಿ ನಡೆಯಿತು. ಕಾರ್ಯಕರ್ಮವನ್ನು FEAST OF FESTIVAL ಎಂಬ ಬ್ಯಾನರ, ಪುಷ್ಪ, ಹಾಗೂ ಪಟಾಕಿ ಹಚ್ಚುವ್ವ ಮೂಲಕ ಅದ್ದೂರಿಯಾಗಿ ಉದ್ಘಾಟಿಸಲಾಯಿತು. ನಂತರ ದೀಪ ಬೆಳಗಿಸಲಾಯಿತು,ಸ್ವಾಗತಗೀತೆಯನ್ನು ಸಂದೀಪ …

Read More »

ಹರ್ ಘರ್ ತಿರಂಗಾ ಹಾಗೂ ರಾಷ್ಟ್ರಾಭಿಮಾನದ ಜಾಗೃತಿಯ ಪಥಸಂಚಲನವು ಚೆನ್ನಮ್ಮ ವೃತ್ತದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು.

ಹುಬ್ಬಳ್ಳಿ: ಅಮೃತಮಹೋತ್ಸವದ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಹರ್ ಘರ್ ತಿರಂಗಾ ಹಾಗೂ ರಾಷ್ಟ್ರಾಭಿಮಾನದ ಜಾಗೃತಿಯ ಪಥಸಂಚಲನವು ನಗರದ ಚೆನ್ನಮ್ಮ ವೃತ್ತದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು. ಪ್ರತಿ ಮನೆಯ ಅಂಗಳದಲ್ಲಿ ಅರಳಿದ ತ್ರಿವರ್ಣದ ರಂಗೋಲಿ, ಪ್ರತಿ ಮನೆಯ ಮೇಲೆ ರಾರಾಜಿಸಲಿ ತ್ರಿವರ್ಣ ಭಾರತದ ಧ್ವಜ ಎಂಬ ಪರಿಕಲ್ಪನೆಯನ್ನುಟ್ಟುಕೊಂಡು ಚಿನ್ಮಯ ಪಿಯು ಆ್ಯಂಡ್ ಡಿಗ್ರಿ ಕಾಲೇಜು ಮತ್ತು ಹಮ್ ಭಾರತಿ ಫೌಂಡೇಶನ್ ವತಿಯಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಇದಕ್ಕೂ ಮುಂಚೆ ಶಾಸಕರಾದ ಮಹೇಶ್ …

Read More »

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಬ್ಬಳ್ಳಿಯಲ್ಲಿ ನೆಟ್ಟಿದ್ದ ಮರ ಇನ್ನು ನೆನಪು ಮಾತ್ರ.

ಹುಬ್ಬಳ್ಳಿ: ಅಂದು ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕ ದಿನ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಅಮೋಘ ಘಳಿಗೆ.ಬಿಡನಾಳ ಗ್ರಾಮದಲ್ಲಿ ಅಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಆ ಅಮೃತ ಘಳಿಗೆಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ಬಿಡನಾಳದಲ್ಲಿ ಅಂದು ನಾಲ್ವರು ಯುವಕರು ನೆಟ್ಟಿದ್ದ ಮರವನ್ನು ಇದೀಗ ಅರಣ್ಯ ಇಲಾಖೆ ತೆರವುಗೊಳಿಸಿದೆ. ಬೃಹತ ಮರ ಧರೆಗೆ ಉರುಳುತ್ತದೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿದೆ. ಕಳೆದ ವರ್ಷವಷ್ಟೇ ಆಜಾಧಿಕಾ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಈ ಮರಕ್ಕೆ ಹೂವಿನಿಂದ ಅಲಂಕರಿಸಲಾಗಿತ್ತು. ಮರಕ್ಕೆ …

Read More »

ಕೆಲಸದ ಒತ್ತಡದಿಂದ ಇನ್ನೊಬ್ಬ ಪೊಲೀಸ್ ಪೇದೆ ಸಾವು..

ರಾಯಚೂರು:ಪೊಲೀಸ್ ಕಾನ್​ಸ್ಟೇಬಲ್​​ವೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಗುರುವಾರ ರಾತ್ರಿ ಘಟನೆ ಜರುಗಿದೆ. ಬಸವನಗೌಡ ಆಗೋಲಿ (34) ಮೃತರು. ಇವರು ಮಸ್ಕಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

Read More »

ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ: ಡಾ.ಯಶವಂತ ಗುರೂಜಿ..

ತುಮಕೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರೆಂದು ಇನ್ನೂ ಅಂತಿಮವಾಗಿಲ್ಲ. ಇದರ ನಡುವೆಯೇ ನೊಣವಿನಕೆರೆಯ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಅವರು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಎಂದು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾತನಾಡಿರುವ ಗುರೂಜಿ, ಗ್ರಹ-ಗತಿಗಳ ಬಲಾಬಲಗಳನ್ನ ತಾಳೆ ಹಾಕಿ ನೋಡಿದ್ರೆ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ. ಯತ್ನಾಳ್‌ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ‌ವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ …

Read More »

ಬಾಂಗ್ಲಾ ಮೂಲದ ವ್ಯಕ್ತಿಗಳನ್ನೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವು…

ಬೆಂಗಳೂರು: ಪ್ರಕರಣವೊಂದರ ಭಾಗವಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸಿದಾಗ ಸೆರೆಸಿಕ್ಕ ಬಾಂಗ್ಲಾದೇಶದ ಆರೋಪಿಯೊಬ್ಬ 42 ಜನ ಇತರೆ ಬಾಂಗ್ಲಾ ಮೂಲದ ವ್ಯಕ್ತಿಗಳನ್ನೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವು ನೀಡಿರುವುದು ತಿಳಿದು ಬಂದಿದೆ. ಬೆಳ್ಳಂದೂರು ಪೊಲೀಸರ ವಶದಲ್ಲಿರುವ ಅಬ್ದುಲ್ ಖಾದಿರ್ ತಾಲೂಕ್ದಾರ್ ಎಂಬಾತನ ನೆರವಿನಿಂದ ಮೊಹಮ್ಮದ್ ಜಾಹೀದ್, ಖಲೀಲ್ ಚಪ್ರಾಸಿ ಸೇರಿ ಕನಿಷ್ಠ 40 ಜನ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸೆಕ್ಯೂರಿಟಿ, …

Read More »

ಟೊಮೆಟೋ ಬೆಲೆ ದಿಢೀರ್ 40 ರೂ.ಗೆ ಕುಸಿತ – ಗ್ರಾಹಕರು ಫುಲ್ ಖುಷ್

ಬೆಂಗಳೂರು, ಕೆಲವು ದಿನಗಳಿಂದ ಭಾರೀ ದುಭಾರಿಯಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಅಗಿ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ.ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದ್ದು, 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಇನ್ನು ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ಬೆಲೆ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ …

Read More »