Breaking News

ಕರ್ನಾಟಕ

ಶಿಶುಪಾಲನಾ ಕೇಂದ್ರ ಆಗಸ್ಟ್ 15ಕ್ಕೆ ಆರಂಭ-ಸಿದ್ದತೆ ಗಮನಿಸಿದ ಸಿಇಓ ಸ್ವರೂಪ

ಕುಂದಗೋಳ: ಕಳೆದ ಐದು ದಿನಗಳಿಂದ ಕುಂದಗೋಳ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆಯುತ್ತಿರುವ ಶಿಶುಪಾಲನಾ ಆರೈಕೆ ತರಬೇತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ.ಕೆಯವರು ಭೇಟಿ ನೀಡಿದರು. ಹಾಗೂ ಶಿಶುಪಾಲನಾ ಆರೈಕೆದಾರರಿಗೆ ಉದ್ದೇಶ ಮತ್ತು ಸದುಪಯೋಗದ ಕುರಿತು ತಿಳಿಸಿದರು. ಬಳಿಕ ಕುಂದಗೋಳ ತಾಲೂಕಿನಲ್ಲಿ ಶೀಘ್ರವೇ ಆರಂಭಗೊಳ್ಳಲಿರುವ 17 ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಸಿಇಓ ಅವರು ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಕಟ್ಟಡದ ಸ್ಥಿತಿಗತಿ ಅವಲೋಕಿಸಿದರು. …

Read More »

ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸಿದ ಎಂ.ಆರ್.ಪಾಟೀಲ್

ಕುಂದಗೋಳ: ಮನುಷ್ಯ ನಿತ್ಯದ ಕೆಲಸ, ಒತ್ತಡ, ಕುಟುಂಬ ನಿರ್ವಹಣೆ, ಸವಾಲುಗಳ ಬೆನ್ನುಬಿದ್ದು ತಮ್ಮ ಅಮೂಲ್ಯ ಜೀವನದ ಆರೋಗ್ಯಕರ ಚಟುವಟಿಕೆ ಮರೆತಿದ್ದಾರೆ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು. ಅವರು ರೋಟರಿ ಕ್ಲಬ್ ವತಿಯಿಂದ ಕುಂದಗೋಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯದ ಮಹತ್ವ ಹಾಗೂ ಕಾಳಜಿ ಕುರಿತು ಮಾತನಾಡಿ, ರೈತಾಪಿ ಜನ ಹಿಂದೆ ಈಗಲೂ ಅತಿ ಅಚ್ಚುಕಟ್ಟಾದ ಜೀವನಕ್ಕೆ ಹೊಂದಿಕೊಂಡು ನಿಶ್ಚಿಂತೆಯಿಂದ ಇದ್ದಾರೆ, …

Read More »

ಅಭಿವೃದ್ಧಿಯ ಪಥದಂತ. ಸಾಗಲು ಎಮ್.ಎನ್ ಮೋರೆ ಬಣ ಬೆಂಬಲಿಸಿ

ಧಾರವಾಡ:– ಮರಾಠಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳದ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಮ್.ಎನ್.ಮೋರೆ ತಂಡವನ್ನು ಬೆಂಬಲಿಸಿ ಅಮುಲ್ಯವಾದ ಮತವನ್ನು ಉದಯಿಸುತ್ತಿರುವ ಸೂರ್ಯನ ಗುರುತಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಸಿ, ಆಶೀರ್ವದಿಸಬೇಕೆಂದು ಮರಾಠಾ ಸಮಾಜದ ಮುಖಂಡರಾದ ಸುಭಾಸ ಶಿಂದೆ ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮರಾಠಾ ಸಮಾಜ ಬಾಂಧವರು ಅಭಿವೃದ್ಧಿಗೆ ಒತ್ತು ಕೊಟ್ಟು ನಮ್ಮನ್ನು ಜಯಶಾಲಗೊಳಿಸಿದ್ದೀರಿ, ಅದರಂತೆ ಮರಾಠಾ ಮಂಡಳದ ಅನೇಕ ಅಭಿವೃದ್ಧಿ ಹಗಲರುಳು ನಮ್ಮ ತಂಡದೊಂದಿಗೆ …

Read More »

ಅಮೃತ ಗ್ರಾಪಂ ಯೋಜನೆ ಉದ್ಘಾಟಿಸಿದ ಶಾಸಕ ಎಂ.ಆರ್.ಪಾಟೀಲ್

ಕುಂದಗೋಳ : ಮತಕ್ಷೇತ್ರದ ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇವನೂರ ಹಾಗೂ ಬಿಳೇಬಾಳ ಗ್ರಾಮಗಳಲ್ಲಿ ಅಮೃತ ಗ್ರಾಮ ಪಂಚಾಯತ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಎಂ.ಆರ್.ಪಾಟೀಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಪ್ರೀತಿ ಅಭಿಮಾನಕ್ಕೆ ನನ್ನಿಂದ ಅಭಿವೃದ್ಧಿ ಕೊಡುಗೆ ನೀಡುವೆ ಎಂದರು, ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವದು ಖುಷಿ ತಂದಿದೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಕಾರಣಿಭೂತರಾದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಅಭಿನಂದಿಸಿದರು

Read More »

ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ

ಧಾರವಾಡ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿಮಿಟೆಡ್ ಕಂಪೆನಿರವರ ಸಹಯೋಗದಲ್ಲಿ ಧಾರವಾಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಾಂತಯ್ಯ ಹಿರೇಮಠರವರ ಹೊಲದಲ್ಲಿ ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ-ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಶಿವಲೀಲಾ ವಿನಯ ಕುಲಕರ್ಣಿ ರವರು ಆಗಮಿಸಿದ್ದರು. ಮರೇವಾಡ ಗ್ರಾಮ ಪಂಚಾಯತ್ …

Read More »

ಕರ್ನಾಟಕ ಕಾರ್ಮಿಕ ಪತ್ರಿಕೆ ಬಿಡುಗಡೆಗೊಳಿಸಿದ ಸಚಿವ ಸಂತೋಷ್ ಲಾಡ್..

ಬೆಂಗಳೂರು: ಇಂದು ವಿಧಾನಸೌಧದ ಅಧಿಕೃತ ಕೊಠಡಿಯಲ್ಲಿ ಕರ್ನಾಟಕ ಕಾರ್ಮಿಕ ಪತ್ರಿಕೆ (ಕನಿಷ್ಠ ವೇತನ ಅಧಿಸೂಚನೆಗಳ ವಿಶೇಷ ಸಂಚಿಕೆ 2023-24) ಅನ್ನು ಬಿಡುಗಡೆಗೊಳಿಸಿದರು.ಪ್ರತಿ ವರ್ಷವೂ ಕಾರ್ಮಿಕ ಇಲಾಖೆಯ ವತಿಯಿಂದ ಈ ವಿಶೇಷ ಪತ್ರಿಕೆ ಹೊರಬರುತ್ತಿದ್ದು, ಕಾರ್ಮಿಕರ ಪ್ರಸ್ತುತ ವೇತನ ಹಾಗೂ ಅದರ ಕುರಿತ ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಹೊಂದಿರುತ್ತದೆ. ಈ ಸಂದರ್ಭದಲ್ಲಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮಹಮ್ಮದ್‌ ಮೊಹಸೀನ್‌, ಕಾರ್ಮಿಕ ಆಯುಕ್ತರಾದ ಡಾ. ಎಚ್.ಎನ್.ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ …

Read More »

ಪ್ರಹ್ಲಾದ ಜೋಶಿ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಕಿವಿಮಾತು…

ಧಾರವಾಡ: ಲೋಕಸಭಾ ಚುನಾವಣೆಗೂ ಮುನ್ನ ಮಹದಾಯಿ ಯೋಜನೆಗೆ ಜಾರಿಗೊಳಿಸಿ ಅದರ ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಕಿವಿಮಾತು ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಮಹದಾಯಿ ಹೋರಾಟಗಾರರು ನಮ್ಮ ವಿರುದ್ಧ ಹೋರಾಟ ಮಾಡಲು ನಾವು ಬೇಡ ಎಂದಿಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಬೇಕಿದೆ. ಆ ಅನುಮತಿ ಸಿಕ್ಕರೆ ನಾಳೆಯೇ ಕಾಮಗಾರಿ ಆರಂಭವಾಗಲಿದೆ. ಹೋರಾಟಗಾರರು ನಮ್ಮ …

Read More »

ಕೆಲಸಕ್ಕೂ, ಜನರಿಗೂ ನ್ಯಾಯ ಸಿಗಬೇಕು: ಡಿಕೆಶಿ

ಬೆಂಗಳೂರು: ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಡಿಸಿಎಂ ಡಿ‌.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಇಂದು ಸದಾಶಿವನಗರದಲ್ಲಿರುವ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೂ ನ್ಯಾಯ ಸಿಗಬೇಕು ಎಂದು …

Read More »

ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್…

ಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್​ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಬೇರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮತ್ತಷ್ಟು ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಶೇಷ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. …

Read More »

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು…

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ, ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಬುಧವಾರ ಜಂಟಿ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಮಂಗಳವಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಐಡಿ, ಐಜಿ ಪ್ರವೀಣ್‌ ಮಧುಕರ್‌ ಪವಾರ್‌ ನೇತೃತ್ವದ ತಂಡ ಜಿಲ್ಲಾಧಿಕಾರಿ ಕಚೇರಿ …

Read More »