Shaikh BIG TV NEWS, Hubballi
October 20, 2018
ದೇಶ-ವಿದೇಶ, ಸುದ್ದಿ
ನಿನ್ನೆ ಅಮೃತಸರದಲ್ಲಿ ನಡೆದ ರೈಲು ದುರಂತದ ಬಗ್ಗೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದು, ಯಾರೂ ಬೇಕಂತ ಇದನ್ನ ಮಾಡಿಲ್ಲ. ಇದೊಂದು ದುರಾದೃಷ್ಟಕರ ಘಟನೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.ನಿನ್ನೆ ಅಮೃತಸರದಲ್ಲಿ ವಿಜಯದಶಮಿ ಆಚರಣೆ ವೇಳೆ ರೈಲು ದುರಂತ ಸಂಭವಿಸಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಈ ಘಟನೆಯಿಂದ ಸಾಕಷ್ಟು ಒತ್ತಡ ಬಿದ್ದಿದೆ. ರೈಲು …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಚಂದನವನದಲ್ಲಿ ಈಗ ಮೀಟೂ ಸದ್ದು ಭಾರಿ ಸಂಚಲವನ್ನೇ ಸೃಷ್ಟಿಸಿದೆ.ಬಾಲಿವುಡ್ ನ ತನುಶ್ರೀ ದತ್ತರಿಂದ ಪ್ರಾರಂಭವಾದ ಈ ಅಭಿಯಾನ ಈಗ ಕನ್ನಡದಲ್ಲಿಯೂ ಕೂಡ ಕಾಲಿಟ್ಟಿದೆ. ಅದರ ಭಾಗವಾಗಿ ಶ್ರುತಿ ಹರಿಹರನ್ ಈಗ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ದ ಈಗ ಮೀಟೂ ಆರೋಪ ಮಾಡಿದ್ದಾರೆ.ಖಾಸಗಿ ನಿಯತಕಾಲಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಪ್ರಮುಖವಾಗಿ ಈಗ ಅರ್ಜುನ್ ಸರ್ಜಾ ವಿರುದ್ದ ಮಾಡಿರುವ …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ವಿಲನ್’ ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಹಲ್ಚಲ್ ಕ್ರಿಯೇಟ್ ಮಾಡಿತ್ತು. ಧಾಮ್, ಧೂಮ್ ಅಂತಾ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಫಿಲಂ ಅಕ್ಟೋಬರ್ 18 ರಂದು ಗ್ರ್ಯಾಂಡ್ ಎಂಟ್ರಿಯಾಗಿ, ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಪುಗಾಲನ್ನಿಡ್ತಿದೆ. ಸಂತೋಷದ ವಿಚಾರ. ಸಿನಿಮಾ ಯಶಸ್ಸಿಗೆ ಎಲ್ಲರೂ ಜೈ ಅನ್ನೋಣ. ಹಾರೈಸೋಣ.ವಿಷಯ ಅದಲ್ಲ. ಸ್ಟಾರ್ ನಟರ ಅಭಿಮಾನದ ಹೆಸರಿನಲ್ಲಿ ಫ್ಯಾನ್ಸ್ ಅಂತಾ ತಮಗೆ ತಾವೇ ಹಣೆಪಟ್ಟಿ ಕಟ್ಕೊಂಡು …
Read More »
Shaikh BIG TV NEWS, Hubballi
October 20, 2018
ದೇಶ-ವಿದೇಶ, ಸುದ್ದಿ
ಅಮೃತಸರದಲ್ಲಿ ರೈಲು ಹಳಿಗಳ ಸಮೀಪದಲ್ಲೇ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ವೇಳೆ ಹಳಿಗಳ ಪಕ್ಕದಲ್ಲಿ ಜಮಾಯಿಸಿದ್ದ ನೂರಾರು ಜನರ ಮೇಲೆ ಟ್ರೈನ್ ಹರಿದಿದ್ದು, 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎನ್ನಲಾಗಿದೆ. ಅಲ್ಲದೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾವಣ ದಹನ ಕಾರ್ಯಕ್ರಮ ದೇಶಕ್ಕೆ ದೊಡ್ಡ ಶಾಕ್ ಅನ್ನ ಕೊಟ್ಟಿದೆ.ರಾವಣ ದಹನ ಕಾರ್ಯಕ್ರಮ ವೇಳೆ ಪಟಾಕಿ, ಬಾಣ ಬಿರುಸುಗಳು ಸಿಡಿದು, ಭಾರಿ ಸದ್ದು ಉಂಟಾಗಿತ್ತು. …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ರಾಜ್ಯದ 3 ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರ ರಣತಂತ್ರಗಳನ್ನು ರೂಪಿಸಿದ್ದಾಗಿದೆ. ನಾಯಕರ ಕ್ಯಾಂಪೇನ್ ಕೂಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ವಿಜಯದ ಮಾಲೆ ತೊಡಿಸಲೇಬೇಕೆಂದು ಪಣತೊಟ್ಟಿರೋ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲೇ ಬಿಡುಬಿಟ್ಟು, ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಆದ್ರೆ, ಕೈ ಪಾಳಯದಲ್ಲಿ ಏಕೋ ಪ್ರಚಾರದ ಭರಾಟೆಯೇ ಕಾಣಿಸುತ್ತಿಲ್ಲ.ಒಂದು ಕಡೆ ಬಳ್ಳಾರಿ ಲೋಕಸಭಾ ಕ್ಷೇತ್ರ, ಮತ್ತೊಂದೆಡೆ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮುತ್ತಪ್ಪ ರೈಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೈ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.ಆಯುಧ ಪೂಜೆ ದಿನ ಮುತ್ತಪ್ಪ ರೈ ಕತ್ತಿ, ಡ್ರಾಗರ್, ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುತ್ತಪ್ಪ ರೈ ರಿವಾಲ್ವರ್ …
Read More »
Shaikh BIG TV NEWS, Hubballi
October 19, 2018
ದೇಶ-ವಿದೇಶ, ಸುದ್ದಿ
ಶಬರಿಮಲೆ: ಆ ಜನ್ಮ ಬ್ರಹ್ಮಚಾರಿಯಾಗಿರೋ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಅದರದ್ದೇ ಆದ ಕಟ್ಟು ಪಾಡುಗಳನ್ನು ಕಳೆದ 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದ್ರಲ್ಲೂ, ಪುರುಷರೇ ಅಯ್ಯಪ್ಪನ ದರ್ಶನ ಮಾಡಬೇಕು ಅಂದ್ರೂ ಮಾಲೆ ಧರಿಸಿ, 45 ದಿನಗಳ ಕಠಿಣ ವೃತ ಪಾಲಿಸಿ ಹೋಗ್ತಾರೆ. ಆದ್ರೆ, ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಅಯ್ಯಪ್ಪನ ದರ್ಶನ ಮಾಡಬೇಕು ಅಂತಾ ತೆರಳಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರೇ ಮರಳಿ ಕಳಿಸಿದ್ದಾರೆ. ಆಂಧ್ರದ ಮೋಜೋ ಟಿವಿ ಪತ್ರಕರ್ತೆ …
Read More »
Shaikh BIG TV NEWS, Hubballi
October 19, 2018
ಕರ್ನಾಟಕ, ಸುದ್ದಿ
ಕಲಬುರ್ಗಿ: ಸಚಿವ ಡಿ.ಕೆ.ಶಿವಕುಮಾರ್‌ಗೆ ಅವನತಿ ಕಾಲ ಬಂದಿದೆ. ಡಿ.ಕೆ ಶಿವಕುಮಾರ್‌ಗೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿಕೆ ಶಿವಕುಮಾರ್ ನಿನ್ನೆ ಕ್ಷಮೆಯಾಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಮಾತನಾಡಿರುವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದಲ್ಲಿ ಎಷ್ಟು ಕಾಂಗ್ರೆಸ್‌ಗೆ ವೋಟ್ ತಂದಿದ್ದಾರೆ ಎಂಬುದನ್ನ ತಿಳಿದುಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ 60 …
Read More »
Shaikh BIG TV NEWS, Hubballi
October 19, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ದೇಶದಲ್ಲಿ ಅರ್ಥಿಕ ಅಸಮಾನತೆ ಇದೆ ಅನ್ನೋ ಕೂಗಿನ ಮಧ್ಯೆಯೂ ಒಂದೇ ವರ್ಷದಲ್ಲಿ ಬರೋಬ್ಬರಿ 7300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ ಅಂತಾ ಇನ್ವೆಸ್ಟ್ಮೆಂಟ್ ಬ್ಯಾಕಿಂಗ್ ಕಂಪೆನಿ Credit Suisse ವರದಿ ಮಾಡಿದೆ. ವರದಿ ಪ್ರಕಾರ, 12 ತಿಂಗಳ ಅವಧಿಯಲ್ಲಿ ಒಟ್ಟು 7,300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂಲಕ ದೇಶದಲ್ಲಿ 3.43 ಲಕ್ಷ ಮಂದಿ ಕೋಟ್ಯಾಧಿಪತಿಗಳು ಇದ್ದು, ಅವರ ಒಟ್ಟ ಮೌಲ್ಯ 6 ಟ್ರಿಲಿಯನ್ ಅಮೆರಿಕನ್ ಡಾಲರ್ (₹ 44,18,70,00,00,00,000.06) …
Read More »
Shaikh BIG TV NEWS, Hubballi
October 19, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅಲ್ಲಿರುವ ಭಾರತೀಯ ನಿವಾಸಿಗಳಿಗೆ ಢವಢವ ಶುರುವಾಗಿದೆ. ಇದಕ್ಕೆ ಕಾರಣ ಟ್ರಂಪ್ ಸರ್ಕಾರ, ಹೆಚ್1ಬಿ ವೀಸಾ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿರೋದು. ಇಷ್ಟು ದಿನಗಳ ಕಾಲ ವೀಸಾ ನಿಯಮದಲ್ಲಿ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ರೂ, ಹೆಚ್ಚಿನ ಬದಲಾವಣೆ ಆಗಿರಲಿಲ್ಲ.ಆದ್ರೀಗ ಹೆಚ್1ಬಿ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೆಲಸ ಶುರು ಮಾಡಿದೆ. ಹೀಗಾಗಿ ನಾವು ಕೂಡ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ …
Read More »