Breaking News

ರಾಜಕೀಯ ಸುದ್ದಿ

73.ಸೆಂಟ್ರಲ್ ಅಖಾಡಕ್ಕೆ ಫಾರೂಕ್ ಅಬೂನವರ್ ಆಗ್ತಾರಾ ಅಧಿಪತಿ..?

ಹುಬ್ಬಳ್ಳಿಯ ಅತೀ ಪ್ರತಿಷ್ಟಿತ ಕ್ಷೇತ್ರವಾಗಿ ಮಾರ್ಪಟ್ಟಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ಆಕಾಂಕ್ಷಿಗಳ ಆರ್ಭಟ ಜೊರಾಗಿದೆ..ಇದಿಗ ಅಲ್ಪಸಂಖ್ಯಾತ ನಾಯಕ ಫಾರೂಕ್ ಅಬೂನವರ್ ಈ ಸಲ ಟಿಕೆಟ್ ಗಿಟ್ಟಿಸಿಕೊಂಡು ಅಖಾಡಕ್ಕೆ ಧುಮುಕುವ ಸಿದ್ದತೆಯನ್ನು ಸಹ ನಡೆಸುತ್ತಿದ್ದಾರೆ. ಕಳೆದ 22 ವರ್ಷಗಳ ಕಾಲ ಕಾಂಗ್ರೇಸ್ ನ ಕಟ್ಟಾಳು ಆಗಿ ತಳ ಹಂತದಿಂದ ಪಕ್ಷ ಸಂಘಟನೆ ಮತ್ತು ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿದ್ದು …

Read More »

ಬಿಜೆಪಿ ಗೋಡ್ಸೆ ಸಂಸ್ಕೃತಿ; ಸುರ್ಜೆವಾಲಾ ಕಿಡಿ…

ಹುಬ್ಬಳ್ಳಿ:ಕಳಸಾ ಬಂಡೂರಿಗೆ ಬಜೆಟ್ ನಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಒಂದು ತಿಂಗಳಿರುವಾಗ ಹೇಗೆ ಬಿಡುಗಡೆ ಮಾಡ್ತೀರಿ..? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದು ಬೊಮ್ಮಾಯಿ ಅವರ ಮತ್ತೊಂದು ಸುಳ್ಳು. ಮುಂದೆ ನಾವೇ ಮತ್ತೆ ಬಜೆಟ್ಮಂ ಡಿಸುತ್ತೇವೆ. ಮಹಾದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ. ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನ ಕಾಪಿ ಮಾಡಲಾಗಿದೆ. ನಮ್ಮನ್ನು …

Read More »

ಧಾರವಾಡಕ್ಕೆ ಮತ್ತೇ ಪ್ರಧಾನಿ ಮೋದಿ ಫೆಬ್ರವರಿ 6ರಂದು ಆಗಮನ

ಬೆಂಗಳೂರು: ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರು ಸಂಪೂರ್ಣವಾಗಿ ಕರ್ನಾಟಕಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿರುವಂತೆ ಕಾಣುತ್ತಿದೆ. ಈಗಾಗಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ  ರಾಜ್ಯಕ್ಕೆ ಬಂದಿದ್ದು, ಬರುವ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೌದು ಈ ವರ್ಷ ಆರಂಭವಾಗುತ್ತಿದ್ದಂತೆ ಎರಡು ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ಮೋದಿ ಫೆಬ್ರವರಿ 6ರಂದು ರಾಜ್ಯಕ್ಕೆ ಬರಲಿದ್ದಾರೆ. ವಿಶೇಷವೆಂದರೆ …

Read More »

 ಕಾಮಗಾರಿ, ನೇಮಕಾತಿಯಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ-ಡಿ.ಕೆ.ಶಿವಕುಮಾರ್ ಆರೋಪ

ಹುಬ್ಬಳ್ಳಿ: ಪಿ.ಎಸ್.ಐ ನೇಮಕಾತಿ, ಲೋಕೋಪಯೋಗಿ ಇಲಾಖೆ ಹೀಗೆ ಪ್ರತಿಯೊಂದು ಇಲಾಖೆಯ ಕಾಮಗಾರಿ, ನೇಮಕಾತಿಯಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳಿಗೆ ಸಂಬಂಧಿಸಿದಂತೆ ಇನ್ನೂ ಬಿಜೆಪಿ ಸರ್ಕಾರ ಉತ್ತರ ನೀಡಿಲ್ಲ. ಈ ಪ್ರಶ್ನೆ ಮಾಡಿದ ಕೆಂಪಣ್ಣ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದ ಅವರು, ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ …

Read More »

ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು  ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳು ಕರ್ನಾಟಕದತ್ತ ಅತೀ ಹೆಚ್ಚಿನ ಪ್ರವಾಸ ಕೈಗೊಂಡಿದ್ದಾರೆ. ಬಿಎಸ್ ಯಡಿಯೂರಪ್ಪರವರನ್ನು ಮೂಲೆ ಗುಂಪು ಮಾಡಿರುವ ಬಿಜೆಪಿ ಪಾಲಿಗೆ ಕರ್ನಾಟಕ ಪ್ರತಿಷ್ಠೆಯ ಕಣ. ಗುಜರಾತ್‌ ಗೆದ್ದುಕೊಂಡ ಕಮಲ ಇದೀಗ ದಕ್ಷಿಣದ ಹೆಬ್ಬಾಗಿಲು ಕರ್ನಾಟಕ ಮೇಲೆ ಕಣ್ಣಿಟ್ಟಿದೆ. ಆದ್ರೆ ಕರ್ನಾಟಕ ಈ  ಬಾರಿ ಬಿಜೆಪಿಗೆ ಸುಲಭದ ತುತ್ತಲ್ಲ. ಆಡಳಿತ ವಿರೋಧಿ ಅಲೆ, ಸಾಲು ಸಾಲು ಭ್ರಷ್ಟಾಚಾರದ ಆರೋಪ ಬಿಜೆಪಿ ವರ್ಚಸ್ಸನ್ನು ಕುಗ್ಗಿಸಿದೆ. ನಾಯಕರ …

Read More »

ಯುವಜನೋತ್ಸವದಲ್ಲಿ ದೇಶದ ಸುಮಾರು 40 ಸಾವಿರಕ್ಕೂ ಅಧಿಕ ಯುವಕರು ಭಾಗಿ ಸಾಧ್ಯತೆ..

ಹುಬ್ಬಳ್ಳಿ: ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ಯುವಜನೋತ್ಸವ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ದವಾಗಿದ್ದು, ಅದರಲ್ಲೂ ಜರ್ಮನ್ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದಾರೆ. 28 ರಾಜ್ಯಗಳು,6 ಕೇಂದ್ರಾಡಳಿತ ಪ್ರದೇಶದಿಂದ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ರೇಲ್ವೆ ಮೈದಾನದಲ್ಲಿ 30 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಯುವಜನೋತ್ಸವಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿದೆ. ಮೋದಿ ಆಗಮನದ ಹಿನ್ನಲೆ ಕೇಸರಿ ಮಯವಾದ ಹುಬ್ಬಳ್ಳಿ, ಪ್ರಮುಖ ವೃತ್ತಗಳಲ್ಲಿ ಮೋದಿ ಬಂಟಿಂಗ್ಸ್,ಬ್ಯಾನರ್ ರಾರಾಜಸ್ತಿವೆ. ಇನ್ನೂ ಯುವಜನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ …

Read More »

ವಿಧಾನಸಭೆ ಚುನಾವಣೆ ಪೂರ್ವತಯಾರಿ ಪರಿವೀಕ್ಷಣೆ…

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ – 2023 ರ ಹಿನ್ನಲೆಯಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ಹಮ್ಮಿಕೊಳ್ಳಲಾಗಿರುವ ಪೂರ್ವತಯಾರಿ ಕಾರ್ಯಗಳನ್ನು ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಪರಿವೀಕ್ಷಣೆ ನಡೆಸಿದರು. 2023 ರ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಪೂರ್ವತಯಾರಿ ಕಾರ್ಯಗಳನ್ನು ಪರಿವೀಕ್ಷಿಸಲು ಎರಡು ದಿನಗಳ ಬೇಟಿಗಾಗಿ ಜನವರಿ 2 ರಂದು ರಾಜ್ಯಕ್ಕೆ ಆಗಮಿಸಿರುವ ಅವರು …

Read More »

ಹೆಣದ ಮೇಲೆ ವಿಜಯೋತ್ಸವ ಮಾಡುವ ಬಿಜೆಪಿಗರು: ಬಿ ಕೆ ಹರಿಪ್ರಸಾದ ವ್ಯಂಗ್ಯ…

ಹುಬ್ಬಳ್ಳಿ: ಹೆಣದ ಮೇಲೆ ವಿಜಯೋತ್ಸವ ಮಾಡುವ ಜನರು ಏನೂ ಬೇಕಾದರೂ ಮಾಡತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಮಹದಾಯಿ ವಿಚಾರವಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ಡಂಡೆ ಯೋಜನೆ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಅನುಷ್ಠಾನ ಆಗಬೇಕೆಂಬ ಕಾಂಗ್ರೆಸ್ ಪಕ್ಷದಿಂದ ವಿಜಾಪುರದಲ್ಲಿ ಸಮಾವೇಶ ಮಾಡಿದ್ದೇವು. ಮಹದಾಯಿ ವಿಷಯದಲ್ಲಿ ಬಿಜೆಪಿ ಡಿಪಿಆರ್ ಮಾಡಿಕೊಂಡು ಬಂದಿದ್ದೇವೆ ಅಂತಾ ಹೇಳತ್ತಾ ಇದ್ದಾರೆ. …

Read More »

ಸುಳ್ಳಿನ ಯೂನಿವರ್ಸಿಟಿ ಬಿಜಿಪಿ: ಡಿ ಕೆ ಶಿವಕುಮಾರ್..

ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಡಿಕೆಶಿವಕುಮಾರ್ ಹೇಳಿಕೆ‌ ನೀಡಿದ್ದುಎಲ್ಲ ಪಕ್ಷದರಿಗೂ,ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು.ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ,ಅಧಿಕಾರ ಮಾತ್ರ ನಮಗೆ ಸಿಗಲಿ ಎಂದ ಡಿಕೆಶಿವಕುಮಾರ್.ಮತ್ತೆ ಅಧಿಕಾರದ ಆಸೆ ಬಿಚ್ಚಿಟ್ಟ ಡಿ ಕೆ ಶಿವಕುಮಾರ್..ಸಿಎಂ‌ ನಾನಗೋದಲ್ಲ ಅದು ಹೈಕಮಾಂಡ್ ತೀರ್ಮಾನ, ಖರ್ಗೆ ,ರಾಹುಲ್ ಗಾಂಧಿ ತೀರ್ಮಾನ ಎಂದ ಡಿಕೆಶಿವಕುಮಾರ್.. ಅವರ ಏನ್ ಹೇಳ್ತಾರೆ ಅದು ನಮಗೆ ಪ್ರಸಾದ ಎಂದ ಡಿಕೆಶಿವಕುಮಾರ್.ಬಿಜೆಪಿ ಸುಳ್ಳಿನ ಯುನಿವರ್ಸಿಟಿ ಎಂದ ಡಿಕೆಶಿವಕುಮಾರ್ಮಹದಾಯಿ ವಿಚಾರದಲ್ಲಿ ಡಿಕೆ ಶಿವಕುಮಾರ್ ವ್ಯಂಗ್ಯ.ಮೂರುವರೆ …

Read More »

ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ʼRPN ಸಿಂಗ್ʼ ಬಿಜೆಪಿಗೆ ಸೇರ್ಪಡೆ

ಜಾರ್ಖಂಡ್ : ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್ ಪಿಎನ್ ಸಿಂಗ್ ಮಂಗಳವಾರ ಬಿಜೆಪಿ ಸೇರಿದ್ದಾರೆ. ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಕಾಂಗ್ರೆಸ್ ಉಸ್ತುವಾರಿ ಸಿಂಗ್ ಅವ್ರು ತಮ್ಮ ರಾಜೀನಾಮೆ ಪತ್ರವನ್ನ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದು, ದೇಶ, ಜನರು ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ ಜಿತಿನ್ ಪ್ರಸಾದ ಅವರ ನಂತರ ಬಿಜೆಪಿ …

Read More »