Breaking News

ಹುಬ್ಬಳ್ಳಿ

ರೈಲು ನಿಲ್ದಾಣದಲ್ಲಿ ನಿನ್ನೇ ತಡರಾತ್ರಿ ದುರಂತವೊಂದು ತಪ್ಪಿದೆ…

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿನ್ನೇ ತಡರಾತ್ರಿ ದುರಂತವೊಂದು ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಹಳಿ ಮೇಲೆ ಬಿದ್ದ ಬಾಲಕನ ರಕ್ಷಣೆ ಮಾಡಿದ ಘಟನೆ ನಡೆದಿದೆ. ತಕ್ಷಣವೇ ಅಲ್ಲಿದ್ದ ಮಹಿಳಾ ಪೇದೆ ಸುಲೋಚನಾ ಜೀವದ ಹಂಗು ತೊರೆದು ಬಾಲಕನನ್ನು ರಕ್ಷಿಸಿದ್ದಾರೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಸ್ವಲ್ಪ ತೆರೆದ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮನೆಗೆ ಕಳಿಸಲಾಗಿದೆ

Read More »

ಚಾಲಕನ ನಿಯಂತ್ರಣ ತಪ್ಪಿ ಸ್ವೀಪರ್ ಕೋಚ್ ಬಸ್‌ ಪಲ್ಟಿ..

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸ್ವೀಪರ್ ಕೋಚ್ ಬಸ್‌ ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಪಾಳಾ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಬೆಂಗಳೂರು ನಿಂದ ಬೆಳಗಾವಿಯತ್ತ ಹೋಗುತ್ತಿದ್ದ ಶಿಬರ್ಡ್ ಸ್ಟೀಪ‌ರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನೊಳಗೆ ಇದ್ದ ಪ್ರಯಾಣಿಕರಿಗೆ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂಳಿದ ಪ್ರಯಾಣಿಕರು ಆಂಬುಲೆನ್ಸಗಾಗಿ ಕಾಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಡ್ರೈವ‌ರ್ ನಿರ್ಲಕ್ಷ್ಯ ಕ್ಲೀಪರ್ ಕೋಚ್ ಬಸ್ …

Read More »

ಮಾನವೀಯತೆಗೆ ಸಾಕ್ಷರತೆಯಾದ ಆಟೋ ಚಾಲಕ…

ಹುಬ್ಬಳ್ಳಿ: ಈಗಿನ ಕಾಲದಲ್ಲಿ ಒಂದು ವಸ್ತು ಸಿಕ್ರೆ ಸಾಕು, ಕದ್ದು ಮುಚ್ಚಿ ಇಟ್ಕರೆ ಹೆಚ್ಚು. ಅಂತದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರು ಬಿಟ್ಟು ಹೋದ ಮೊಬೈಲ್ ನ್ನು ಪೊಲೀಸ್‌ ಠಾಣೆಗೆ ಹೋಗಿ ಒಪ್ಪಿಸಿ ಗ್ರಾಹಕರಿಗೆ ಮರಳಿಸಿ ಮಾನವೀಯತೆ ಸಾಕ್ಷಿಯಾಗಿದ್ದಾರೆ.ಗಂಗಾಧರ ಇಂಡಿ ಎಂಬ ಆಟೋ ಚಾಲಕ ಹೊಸ ಬಸ್ ನಿಲ್ದಾಣದಿಂದ ಮಹಿಳಾ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಶಕ್ತಿ ನಗರಕ್ಕೆ ತಲುಪಿಸಿದ್ದಾರೆ. ಆ ಪ್ರಯಾಣಿಕರು ಆಟೋದಲ್ಲೆ ತಮ್ಮ ಮೊಬೈಲ್‌ನ್ನು ಬಿಟ್ಟು ಹೋಗಿದ್ದಾರೆ. ಆಟೋ ಚಾಲಕ …

Read More »

ಕ್ರಿಕೆಟ್ ಬುಕ್ಕಿಗಳಿಗೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು…

ಹುಬ್ಬಳ್ಳಿ: ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಪೊಲೀಸರು ಕೂಡ ಪೂಲ್ ಅಲರ್ಟ್ ಆಗಿದ್ದು, ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ವಿರುದ್ದ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರ ಬಂಧಿಸಿದ್ದು,ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.‌ ನಗರದ ಡಾಕಪ್ಪ ಸರ್ಕಲ್ ನಲ್ಲಿ …

Read More »

ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ….

ಕುಂದಗೋಳ : ಮತಕ್ಷೇತ್ರದ ಕೊಂಕಣಕುರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 10 ಲಕ್ಷ ರೂಪಾಯಿ ಅನುದಾನದ ಅಡಿ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಎಂ.ಇ‌.ಪಾಟೀಲ್ ನೆರವೇರಿಸಿದರು. ನಂತರ ಚಾಕಲಬ್ಬಿ ಗ್ರಾಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆಯ ಮೇರೆಗೆ ಖಾಸಗಿ ಕಂಪನಿಯ ಸಿ.ಎಸ್.ಆರ್ ಅನುದಾನದ 40 ಲಕ್ಷ ರೂಪಾಯಿ ವೆಚ್ಚದಲ್ಲಿ 3 ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಜನರನ್ನು …

Read More »

ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ…

ಕುಂದಗೋಳ : ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಶಿ ಕೆಎಲ್ಇ ಕಾಲೇಜು ವಿದ್ಯಾರ್ಥಿಗಳ ಎನ್ಎಸ್‌ಎಸ್‌ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿ ಮಹಾತ್ಮ ಗಾಂಧಿ ಅವರ ಕನಸಿನ ಕೂಸಾದ ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನ ಸಿಗಲಿದ್ದು, ಸೇವಾ ಮನೋಭಾವ ಬೆಳೆಸುವ ಸುಗಮ ದಾರಿಯಾಗಿದೆ ಎಂದು …

Read More »

ಲಿಂಗಾಯತ ಸಮಾಜದ ಅನ್ಯಾಯ ಸರಿಪಡಿಸಬೇಕು….

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.ಲಿಂಗಾಯತ ಅನ್ಯಾಯದ ಬಗ್ಗೆ ಶಾಮನೂರು ಅವರು ಮಾತನಾಡಿದ್ದು ಸತ್ಯಕ್ಕೆ ಹತ್ತಿರವಾಗಿದೆ.ಶಾಮನೂರು ಅವರು ನಮ್ಮೆಲ್ಲರ ಧ್ವನಿಯಾಗಿ ಮಾತನಾಡಿದ್ದಾರೆ.ನಾನು ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಿಸಿದ್ದೆನೇ,ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಅಂತ ಸುಮ್ಮನಿದ್ದೆ.ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ ಯಾವುದೇ ಸಮಾಜಕ್ಕೆ ಅನ್ಯಾಯವಾಗ ಬಾರದರು ಇದನ್ನು ಸಿಎಂ ಸರಿಪಡಿಸಬೇಕು ಎಂದು ಹೇಳಿದರು. ಪಂಚಮಸಾಲಿ ಸಮಾಜಕ್ಕೆ ಆದಷ್ಟು ಬೇಗ 2A ಮೀಸಲಾತಿ ಕೊಡಬೇಕು,ರಾಜ್ಯ ಸರ್ಕಾರ ನಮ್ಮ …

Read More »

ಮತ್ತೆ ಹೋರಾಟ ಆರಂಭಿಸಿದ ಪಚಮಸಾಲಿ ಸಮಾಜ..

ಹುಬ್ಬಳ್ಳಿ: 2A ಮೀಸಲಾತಿಗಾಗಿ ಮತ್ತೆ ಹೋರಾಟ ಆರಂಭಿಸಿದ ಪಂಚಮಸಾಲಿ ಸಮಾಜದವರು.ಹುಬ್ಬಳ್ಳಿಯಲ್ಲಿಂದು ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಮಾಡಲಾಯಿತು.ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮೂಲಕ ಹೋರಾಟ ಆರಂಭ ಮಾಡಲಾಯಿತು.ಚೆನ್ನಮ್ಮ ವೃತ್ತದಿಂದ ಬಂಕಾಪುರ ಚೌಕದವರಿಗೆ ಬೈಕ್ ರ‌್ಯಾಲಿ ಬಳಿಕ ಅಲ್ಲಿಂದ ಗಬ್ಬೂರು ಬೈಪಾಸ್ ವರಿಗೆ ಪಾದಯಾತ್ರೆ ಮಾಡಿದರು.ಗಬ್ಬೂರು ಬೈಪಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸಲಾಯಿತು.ವಿವಿಧ ಜಿಲ್ಲೆಗಳಿಂದ ಗಬ್ಬೂರು ಬೈಪಾಸ್ ಬಳಿ ಆಗಮಿಸುತ್ತಿರುವ ಪಂಚಮಸಾಲಿಗರು.

Read More »

ಅಕ್ಟೋಬರ್‌ 1‌3 ರಿಂದ ಹುಬ್ಬಳ್ಳಿಯಲ್ಲಿ ಉದ್ಭವ್ ಇವೆಂಟ್ ಕಾರ್ಯಕ್ರಮ!

ಹುಬ್ಬಳ್ಳಿ: ಮೀಠಾ ಭಾರತ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಉದ್ಭವ್ -2023 ನ್ನು ಅಕ್ಟೋಬರ್ 13 ರಿಂದ ಮೂರು ದಿನಗಳವರೆಗೆ ಇಲ್ಲಿನ ಕೇಶ್ವಾಪುರದ ಶ್ರೀನಿವಾಸ್ ಗಾರ್ಡನ್’ನಲ್ಲಿ ಆಯೋಜಿಸಲಾಗಿದೆ ಎಂದು ಮೀಠಾ ಭಾರತ ಚೇರ್ಮನ್ ಪ್ರಕಾಶ ಕೋಠಾರಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಭವ -2023 ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಕಲಿಕೆ ಮತ್ತು ಗಳಿಸುವ ಸುವರ್ಣಕಾಶವನ್ನು ಯುವ ಉದ್ಯಮದಾರರಿಗೆ ನೀಡುತ್ತಿದೆ. ಜಿತೋ ಹುಬ್ಬಳ್ಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವಿಧ ವಲಯಗಳಲ್ಲಿ ವ್ಯಾಪಿಸಿರುವ …

Read More »

ಮಂಗಲ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ ವರ್ಗ ರೊಟ್ಟಿಗವಾಡ ಗ್ರಾಮ ಪಂಚಾಯತಿ ಬೇಟಿ ನೀಡಿದ್ದರು….

ಹುಬ್ಬಳ್ಳಿ: ಮಂಗಲ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ ವರ್ಗ ರೊಟ್ಟಿಗವಾಡ ಗ್ರಾಮ ಪಂಚಾಯತಿ ಬೇಟಿ ನೀಡಿದ್ದರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತಿಯವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೂಟ್ಟಿಗವಾಡ ಗ್ರಾಮ ಪಂಚಾಯಿತಿಗೆ ಮಂಗಲ ಗ್ರಾಮ ಪಂಚಾಯತಿ ಅವರನ್ನುಹುಗುಚ್ಛ ನೀಡುವುದರ ಮೂಲಕ ಸ್ವಾಗತ ಬರಮಾಡಿಕೊಂಡರು ಮಂಗಲ ಗ್ರಾಮ ಪಂಚಾಯತಿಯವರು ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ನೀವು …

Read More »