admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:ಮೈತ್ರಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಾರೆ, ಎಲ್ಲರನ್ನೂ ಬೈಯುತ್ತಾರೆಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದರು. ಪ್ರಮುಖವಾಗಿ ಜಮೀರ್ ಅಹಮದ್ ಖಾನ್, ಡಿಕೆಶಿ ತಕ್ಷಣ ರಾಜೀನಾಮೆ ನೀಡಬೇಕು. ಐಎಮ್ಎ ಪ್ರಕರಣದಲ್ಲಿ ಜಮೀರ್ ಗೆ ED ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇನ್ನೂ ಮನ್ಸೂರ್ ಖಾನ್ ಬನ್ನಿ ರಕ್ಷಣೆ ನೀಡುತ್ತೇವೆ ಮನ್ಸೂರ್ ಎಲ್ಲೇ ಇದ್ದರು ಹುಡುಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಹೇಳುತ್ತಾರೆ. …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:ನಿನ್ನೆ ಲೈಸೆನ್ಸ್ ಇಲ್ಲದೆ ಆಂಬುಲೆನ್ಸ್ ಒಡಿಸಿದ ಶ್ರೀರಾಮುಲು ರವರ ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗಜಿಲ್ಲಾಡಳಿತ ಹಿಂದೇಟು ಹಾಕಿದೆ . ನೆನ್ನೆ ಆಂಬುಲೆನ್ಸ ಸೇವೆಗೆ ಅರ್ಪಣೆ ಮಾಡಲು ಬಾಗವಹಿಸಿದ ಶ್ರೀರಾಮುಲು ಆಂಬುಲೆನ್ಸ್ ಚಾಲನೆ ಮಾಡಿದ್ರು. ನಿಯಮದ ಪ್ರಕಾರ ಆಂಬುಲೆನ್ಸ ಓಡಿಸಲು ಲಘು ಮೋಟರ್ ಓಡಿಸುವ ಪರವಾನಿಗೆ ಮತ್ತು ಯೋನಿಫಾರಂ ಹೊಂದಿರಬೇಕು ಮತ್ತು ನಿಯೋಜಿತ ವ್ಯಕ್ತಿಯಾಗಿರಬೇಕು. ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಯಾರ ಅನುಮತಿ ಇಲ್ಲದೆ ಆಂಬುಲೆನ್ಸ್ ಓಡಿಸಿದ್ದಾರೆ. ಇದು ಟ್ರಾಫಿಕ್ ಕಾಯ್ದೆ ಉಲ್ಲಘನೆ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿ;ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ವಿಚಾರಣೆಗೆ ಒಳಪಡಿಸದಂತೆ ಮೀಸಲಾತಿ ಮತ್ತು ವಾರ್ಡ್ ಪುನರ್ನಿರ್ಮಾಣ ಅರ್ಜಿಯ ವಿಚಾರಣೆ ಆಗಸ್ಟ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಮುಖ್ಯ ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ ಮತ್ತು ಮುಂದಿನ ವಿಚಾರಣೆಯನ್ನು ಈಗ ಜುಲೈ 12 ರಂದು ನಡೆಸಲಾಗುವುದು. ಜಿಲ್ಲಾಡಳಿತ ಮೀಸಲಾತಿ ಮತ್ತು ವಾರ್ಡ್ ಪುನರ್ರಚನೆ ಕೆಲವು ಸಾಮಾಜಿಕ ಕಾರ್ಯಕರ್ತರು ನಿತಿನ್ ಜಾಧವ್, …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಚಿಕ್ಕೋಡಿ: ಟೈರ್ ಬ್ಲಾಸ್ಟ್ ಆಗಿ ಚಲಿಸುತ್ತಿದ್ದ ಬಸ್ ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ಹೊರವಲಯದ ಹುಬ್ಬಳ್ಳಿ ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಸಂಭವಿಸಿದೆ. ಗೋಕಾಕನಿಂದ ಸಂಕೇಶ್ವರ ಪಟ್ಟಣದತ್ತ ತೆರಳುತ್ತಿದ್ದ ಕೆಸ್ ಎಸ್ ಆರ್ ಟಿ ಸಿ ಬಸ್ನ ಮುಂಭಾಗದ ಟೈರ್ ಸಿಡಿದು ಸ್ಥಳದಲ್ಲೇ ಬಸ್ ಪಲ್ಟಿಯಾಘಿದೆ. ಬಸ್ ನಲ್ಲಿದ್ದ ೧೫ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಘಟಪ್ರಭಾ ಖಾಸಗಿ ಆಸ್ಪತ್ರಗೆ ದಾಖಲು …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ: ನೂತನ ಅಂಬ್ಯೂಲೆನ್ಸ್ ಗೆ ಚಾಲನೆ ನೀಡಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲುರವರು ಸ್ವತಃ ತಾವೇ ಡಿಎಚ್ಓ ಜೊತೆ ಅಂಬ್ಯೂಲೆನ್ಸ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ಬೇಡರೆಡ್ಡಿಹಳ್ಳಿಯಲ್ಲಿ ಕಾರ್ಯಕ್ರಮ ವೇಳೆ ಡ್ರೈವಿಂಗ್ ಮಾಡಿದ ಶ್ರೀರಾಮುಲು ಕಿಲೋಮೀಟರ್ ದೂರ ಸ್ವತಃ ಡ್ರೈವರ್ ಆಗಿದ್ದರು. ಆಂಬೂಲೆನ್ಸ್ ಎಷ್ಟರ ಮಟ್ಟಿಗೆ ಅಗತ್ಯವಿದೆ ಎಂಬುದುರ ಬಗ್ಗೆ ಜಾಗೃತಿಗಾಗಿ ಶ್ರೀರಾಮುಲು ಅಂಬೂಲೆನ್ಸ್ ಚಾಲನೆ ಮಾಡಿದ್ದಾರೆ.
Read More »
admin
September 12, 2019
ಜಿಲ್ಲೆ, ಧಾರವಾಡ
ಹುಬ್ಬಳ್ಳಿ: ಶಾಲಾ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದ ಯುವತಿಯರನ್ನು ಚುಡಾಯಿಸುವುದೇ ತಮ್ಮ ನಿತ್ಯ ಕಾಯಕ ಮಾಡಿಕೊಂಡಿದ್ದ ರೋಡ್ ರೋಮಿಯೋ ಗಳಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ವಾಣಿಜ್ಯ ನಗರೀ ಹುಬ್ಬಳ್ಳಿಯ ಕೆಲವು ಕಡೆ ದಿನನಿತ್ಯ ಯುವತಿಯರಿಗೆ ಕಾಟ ಕೊಡುತ್ತಿದ್ದ ಎಂಟು ಮಂದಿ ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಟೂರು ರಸ್ತೆ, ಘಂಟಿಕೇರಿ ಓಣಿ, ನೆಹರೂ ಕಾಲೇಜು, ವೀರಾಪುರ ಓಣಿ ಸೆಟ್ಲ್ಮೆಂಟ್ ಹತ್ತಿರ ಹುಡುಗಿಯರನ್ನು ಚುಡಾಯಿಸುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ …
Read More »
admin
September 12, 2019
ಕೋಲಾರ, ಜಿಲ್ಲೆ
ಕೋಲಾರ:- ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವ ವೇಳೆ ಆಯಾತಪ್ಪಿ ಬಿದ್ದ ಯುವಕ ಮೃತ ಪಟ್ಟಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ರಸ್ತೆಯಲ್ಲಿ ನಡೆದಿದೆ. ಬೈಕ್ ವೀಲಿಂಗ್ ಮಾಡುವ ವೇಳೆ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪಿದ್ದಾನೆ. ಪಟ್ಟಣದ ರಹೀಮ್ ಕಾಂಪೌಂಡ್ ನಿವಾಸಿ ತಾಹೀದ್ (23) ಮೃತ ಯುವಕನಾಗಿದ್ದಾನೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಚಿಕ್ಕಬಳ್ಳಾಪುರ, ಜಿಲ್ಲೆ
ಚಿಂತಾಮಣಿ :ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗಲಾಟೆ ನಡೆದಿದ್ದು ಮಹಿಳೆಯರು ಪುರುಷರು ಮಕ್ಕಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಮುರುಗಮಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕರ್ ಮತ್ತು ಅವರ ಕುಟುಂಬದವರು ಇಂದು ಸಂಜೆ ತಮ್ಮ ಕುಟುಂಬದ ಮೂರು ಮನೆಗಳಿಗಾಗಿ ಮಾತ್ರ ಹೊಸ ನಲ್ಲಿಯನ್ನು ಹಾಕಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ಶಂಕರ್ ಮತ್ತು ಅವರ …
Read More »
admin
September 12, 2019
ಚಿಕ್ಕಬಳ್ಳಾಪುರ, ಜಿಲ್ಲೆ
ಚಿಕ್ಕಬಳ್ಳಾಪುರ:ರೈಲಿಗೆ ತಲೆ ಕೊಟ್ಟು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಡೆದಿದೆ. ಸರಿ ಸುಮಾರು 65 ವರ್ಷದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಚಿಕ್ಕಬಳ್ಳಾಫುರ ದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ತಲೆ ಮತ್ತು ದೇಹ ಎರಡು ತುಂಡಾಗಿವೆ. ಈ ಕುರಿತು ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
Read More »
admin
September 12, 2019
ಜಿಲ್ಲೆ, ತುಮಕೂರು
ತುಮಕೂರು: ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ ಹೊಂದಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಡಿವೈಡರ್ ದಾಟಿ ಪಲ್ಟಿಯಾದ ಇನೋವಾ ಕಾರಿನಲ್ಲಿದ್ದ ಎಂಟು ಮಂದಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಯಡಿಯೂರು ಕಡೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿದೆ. ಈ ಕುರಿತು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ಎರಡು ಕಿಮೀ ಕ್ಕೂ ಹೆಚ್ಚು …
Read More »