BigTv News
December 17, 2024
Breaking News, ಬೆಂಗಳೂರು
ಬೆಂಗಳೂರು : ಒಂದೆಡೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸದನದ ಹೊರಗೆ ಉಗ್ರ ಪ್ರತಿಭಟನೆ ನಡೆಯುತ್ತಿದೆ. ಸುವರ್ಣಾ ಸೌಧಕ್ಕೆ ಹೋರಾಟಗಾರರು ಮುತ್ತಿಗೆಗೆ ಯತ್ನಿಸಿದಾಗ ನಡೆದ ಲಾಠಿಚಾರ್ಜ್ ಘಟನೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸಿಎಂ ಅವರು ಇದೇ ಡಿ.21ರಂದು ಸಾಯಂಕಾಲ ಪಂಚಮಸಾಲಿ ಶಾಸಕರ ಸಭೆ …
Read More »
BigTv News
December 16, 2024
Breaking News, ಬೆಂಗಳೂರು
ಬೆಂಗಳೂರು: ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕವಾಗಲಿದೆ. ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡದಿದ್ದರೆ ದೇಶ ಆರ್ಥಿಕವಾಗಿ ಸದೃಢವಾಗದು. ಸರ್ಕಾರವು ಬಡವರ ಏಳಿಗೆಗಾಗಿ ಸದುದ್ದೇಶದಿಂದ ಸಹಾಯ ಧನದ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಅವುಗಳ ದುರ್ಬಳಕೆ ಪ್ರಮಾಣ ಹೆಚ್ಚಾಗಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ವಿತರಿಸಬೇಕಿದ್ದ ನೀಲಿ ಸೀಮೆ ಎಣ್ಣೆಯನ್ನು ಅಕ್ರಮ ವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಲಾಗಿತ್ತು. ತಮ್ಮನ್ನು ದೋಷಿ ಎಂದು ಘೋಷಿಸಿ 5ತಿಂಗಳ …
Read More »
BigTv News
December 16, 2024
Breaking News, ಬೆಂಗಳೂರು
ಬೆಂಗಳೂರು : ರಾಜ್ಯ ಸರ್ಕಾರವು ವಿಕಲಚೇತನ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, 7 ನೇ ವೇತನ ಆಯೋಗದ ವರದಿಯಂತೆ `ಸಂಚಾರಿ ಭತ್ಯ’ ಮಂಜೂರು ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೊದಲು ಚಾಲ್ತಿಯಲ್ಲಿದ್ದ ರಾಜ್ಯ ಸರ್ಕಾರದ ನೀತಿಯಂತೆ, ಮೇಲೆ (1) ಮತ್ತು (2)ರಲ್ಲಿ ಓದಲಾದ ದಿನಾಂಕ: 14.02.1979 ಮತ್ತು ದಿನಾಂಕ: 17.07.1979ರ ಸರ್ಕಾರಿ ಆದೇಶಗಳಲ್ಲಿ ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ಆದೇಶದ ನಿಬಂಧನೆಗಳ ಪೂರೈಕೆಗೊಳಪಟ್ಟು …
Read More »
BigTv News
December 16, 2024
Breaking News, ಬೆಂಗಳೂರು
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಸಮಸ್ಯೆ ಹಾಗೂ ಅಭಿವೃದ್ಧಿಯ ಕುರಿತು ಸೋಮವಾರದಿಂದ 3 ದಿನಗಳ ಕಾಲ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಲಿದ್ದು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಚಿತ್ತ ವಿಧಾನಸಭೆಯ ಚರ್ಚೆಯತ್ತ ನೆಟ್ಟಿದೆ. ಗಡಿನಾಡು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಆದಾಗಿನಿಂದಲೂ ಚಳಿಗಾಲದ ಅಧಿವೇಶನವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ನೂರಾರು ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ಎಲ್ಲಿ ಅಧಿವೇಶನ ನಡೆದರೂ ಉತ್ತರ ಕರ್ನಾಟಕ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿಯುವುದು ತಪ್ಪಿಲ್ಲ ಎನ್ನುವ ಭಾವನೆ ಈಗಲೂ …
Read More »
BigTv News
December 15, 2024
Breaking News, ಬೆಂಗಳೂರು
ಬೆಂಗಳೂರು : ರಾಜ್ಯದ 26 ಸಂಸದರಿಗೆ ಹೊಸ ಕಾರನ್ನ ಸರ್ಕಾರ ಗಿಫ್ಟ್ ನೀಡಿದೆ. ಕಳೆದ ವರ್ಷವಷ್ಟೇ ಸಂಪುಟ ಸಚಿವರುಗಳಿಗೆ 33 ಹೊಸ ಕಾರುಗಳನ್ನು ಖರೀದಿಸಿದ್ದ ರಾಜ್ಯ ಸರ್ಕಾರ, ಇದೀಗ ರಾಜ್ಯದ 26 ಸಂಸದರಿಗೂ ಹೊಸ ಹೈ ಎಂಡ್ ಕಾರುಗಳನ್ನು ಖರೀದಿ ಮಾಡಿದೆ. ಟೊಯೋಟಾ ಕಂಪನಿಯ ಹೊಸ ಇನ್ನೊವಾ ಕ್ರಿಸ್ಟಾ ಹೈಬ್ರಿಡ್ ಕಾರುಗಳನ್ನು ರಾಜ್ಯದ ಸಂಸದರಿಗೆ ಖರೀದಿಸಲಾಗಿದೆ. ಒಂದು ಇನ್ನೋವಾ ಹೈಬ್ರಿಡ್ ಎಸ್ಯುವಿ ಕಾರಿಗೆ ಸುಮಾರು 29 ಲಕ್ಷ ರೂ. ಖರ್ಚಾಗಿದೆ …
Read More »
BigTv News
December 15, 2024
Breaking News, ಬೆಂಗಳೂರು
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಭೇಟಿಯ ವೇಳೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು ಗದಗ ತಾಲೂಕು ಹರ್ಲಾಪುರ ಗ್ರಾಮದಲ್ಲಿ ಶ್ರೀಮತಿ ಕಮಲಾಬಾಯಿ ನಾರಾಯಣರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆ ಆವರಣದ ಹೆಲಿಪ್ಯಾಡ್‌ಗೆ ಆಗಮಿಸುವರು. ನಂತರ ಹರ್ಲಾಪುರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಯಿಂದ ಆಯೋಜಿಸಲಾದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗರಾಯ ಮೂರ್ತಿ …
Read More »
BigTv News
December 15, 2024
Breaking News, ಬೆಂಗಳೂರು
ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುವ 9 ವಿವಿಧ ಪ್ರತಿಷ್ಠಾನ ಮತ್ತು ಟ್ರಸ್ಟ್‌ಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಸರಕಾರ ಆದೇಶಿಸಿದೆ. ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಡಾ| ಬಿ.ಎಲ್. ಶಂಕರ್ ಅಧ್ಯಕ್ಷತೆ, ಸೂಳೇಬಾವಿಯ ಪಿ.ಬಿ.ದುತ್ತರಗಿ ಟ್ರಸ್ಟ್‌ಗೆ ಸಂಗಪ್ಪ ಕಲ್ಲಪ್ಪ ಕೊನೆಸಾಗರ ಅಧ್ಯಕ್ಷತೆ, ಉಡುಪಿಯ ಡಾ| ಶಿವರಾಮ ಕಾರಂತ ಟ್ರಸ್ಟ್‌ಗೆ ಗಣನಾಥ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಲಾಗಿದೆ. ಮಂಡ್ಯದ ಪು.ತಿ.ನ. ಟ್ರಸ್ಟ್‌ಗೆ ಮೈಸೂರಿನ ಎಂ. ಕೃಷ್ಣಗೌಡ ಅಧ್ಯಕ್ಷರಾಗಿದ್ದಾರೆ. …
Read More »
BigTv News
December 14, 2024
Breaking News, ಬೆಂಗಳೂರು
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿಹೆಚ್ಚು ಮಳೆಯಿಂದ ಪ್ರವಾಹ ರೀತಿಯಲ್ಲಿ ಉಂಟಾಗುವ ಅತಿವೃಷ್ಟಿಯ ಹಾನಿಯನ್ನು ತಡೆಗಟ್ಟಲು ಒಟ್ಟು 5000 ಕೋಟಿ ರೂ. ಗಳ ಶಾಶ್ವತ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಿಧಾನಸಭೆ ಕಲಾಪದಕಲ್ಲಿ ಅವರು ಈ ವಿಷಯ ತಿಳಿಸಿದರು. ಬೆಂಗಳೂರು …
Read More »
BigTv News
December 14, 2024
Breaking News, ಬೆಂಗಳೂರು
ಬೆಂಗಳೂರು: ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 16ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯ ರೈತ ಸಂಘಗಳ ಏಕೀಕರಣ ಹೋರಾಟ ಸಮಿತಿ ಮುಖ್ಯಸ್ಥರಾದ ಪಚ್ಚೆ ನಂಜುಂಡಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ರೈತರ ಸಾಲ ಸಂಪೂರ್ಣ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸರಿಯಾದ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ …
Read More »
BigTv News
December 13, 2024
Breaking News, ಬೆಂಗಳೂರು
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಸುತ್ತಿರುವ ಬೆನ್ನಲ್ಲೇ ಕೆಎಚ್ ಮುನಿಯಪ್ಪ ಅನರ್ಹರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಲು ಸರ್ಕಾರ ಕೆಲವೊಂದು ಮಾನದಂಡಗಳನ್ನು ವಿಧಿಸಿದೆ. ಅದರಂತೆ ಆದಾಯ ತೆರಿಗೆ ಪಾವತಿಸುವವರು, ಸರ್ಕಾರೀ ನೌಕರರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಅಂತಹ ಕಾರ್ಡ್ ಗಳನ್ನು ರದ್ದು ಮಾಡಿ ಎಪಿಎಲ್ ಗೆ ವರ್ಗಾಯಿಸಲಾಗುವುದು ಎಂದು ಈಗಾಗಲೇ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಅದರಂತೆ ಈಗ ಎಲ್ಲಾ ಗ್ರಾಮ, ವಾರ್ಡ್ ಮಟ್ಟದಲ್ಲಿ ಅನರ್ಹ …
Read More »