Breaking News

ಬೆಂಗಳೂರು

ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಎಂಟು ಜನ ಆರೋಪಿಗಳ ಬಂಧನ….

ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂಟು ಜನ ಆರೋಪಿಗಳನ್ನು ಹನುಮಂತನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಎಂಬಾತನನ್ನು ಅಪಹರಿಸಿ ಹದಿನೈದು ಲಕ್ಷ ರೂ. ಸುಲಿಗೆ ಮಾಡಿದ್ದ ಕಾರ್ತಿಕ್, ರಾಹುಲ್ ಎಂಬಾತ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್, ಗೋವಾಕ್ಕೆ ತೆರಳಿ …

Read More »

ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಮ್ಮ ರೈತರ ಹಿತವನ್ನು ಕಾಯಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕು” ಎಂದರು. …

Read More »

ಸ್ಪಂದನಾ ಅವರನ್ನು ನೆನೆದು ಭಾವನಾತ್ಮಕ ​ಪೋಸ್ಟ್​ವೊಂದನ್ನು ​ ಸೋಷಿಯಲ್​ಮೀಡಿಯಾದಲ್ಲಿ ಹಂಚಿಕೊಂಡ ವಿಜಯ್…​

ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾರದ್ದು ಸುಂದರ ದಾಂಪತ್ಯ. ಸ್ಯಾಂಡಲ್​ವುಡ್​ನ ಮಾದರಿ ದಂಪತಿಯೆಂದೇ ಗುರುತಿಸಿಕೊಂಡಿದ್ದರು. ಆದರೆ, ವಿಧಿಯಾಟ ಇವರ ಬಾಳಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿತು. ಯಾವುದೇ ಸುಳಿವಿಲ್ಲದೇ ‘ಚಿನ್ನಾರಿಮುತ್ತನ ಚಿನ್ನ’ ಬಾರದ ಲೋಕಕ್ಕೆ ಪಯಣಿಸಿ ಬಿಟ್ಟರು. ಸ್ಪಂದನಾ ಅವರು ಇಹಲೋಕ ತ್ಯಜಿಸಿ ಇಂದಿಗೆ 13 ದಿನಗಳಾಗಿವೆ. ಪತ್ನಿಯ ನಿಧನ ವಿಜಯ್​ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ. ನೋವಲ್ಲೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಇದೀಗ ಸ್ಪಂದನಾ ನಿಧನದ ನಂತರ ಅವರನ್ನು ನೆನೆದು …

Read More »

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳ ಜೊತೆ ಸಭೆ: ಸಂತೋಷ್‌ ಲಾಡ್‌

ಬೆಂಗಳೂರು: ವಿಕಾಸಸೌಧದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಚಿವರು ವಿಸ್ತೃತ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಶ್ರೀ ಡಾ.ಎಚ್.ಎನ್.ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಒ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ. …

Read More »

ನಟ ಉಪೇಂದ್ರ ಅವರಿಗೆ ಬಿಗ್ ರಿಲೀಫ್…..

ಬೆಂಗಳೂರು: ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ಮಾಪಕ ಉಪೇಂದ್ರ ಅವರ ವಿರುದ್ಧ ಎರಡು ಪ್ರತ್ಯೇಕ ಠಾಣೆಗಳಲ್ಲಿ FIR ದಾಖಲಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರುಗೇಟ್ ಪೊಲೀಸ್ ಠಾಣೆಗಳಲ್ಲಿ ನಟ ಉಪೇಂದ್ರ ಅವರ ವಿರುದ್ಧ ಎರಡು ಪ್ರತ್ಯೇಕ FIR ದಾಖಲಾಗಿದ್ದವು.ಇತ್ತೀಚೆಗೆ ಮೊದಲನೇ FIR ನಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಎರಡನೇ FIR ನಲ್ಲೂ ಕೂಡ ಕೋರ್ಟ್ ತಡೆ ನೀಡಿದ್ದು, ನಟ …

Read More »

ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದ ರಂಗಿನಾಟ ಆಡುತ್ತಿದ್ದ ಮುಂಬೈ ಮಾಡೆಲ್ ಲಾಕ್…

ಬೆಂಗಳೂರು: ಪುಟ್ಟೇನಹಳ್ಳಿಯಲ್ಲಿ ವ್ಯಕ್ತಿಗೆ ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗಿನಾಟ ಆಡುತ್ತಿದ್ದ ಮುಂಬೈ ಮಾಡೆಲ್ ಲಾಕ್ ಆಗಿದ್ದಾಳೆ. ನೇಹಾ ಅಲಿಯಾಸ್ ಮೆಹರ್ ನನ್ನು ಪುಟ್ಟೇನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುಂಬೈನಲ್ಲಿ ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಈ ಮೊದಲು ಕೇಸ್ ನಲ್ಲಿ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಬಂಧಿಸಲಾಗಿತ್ತು. ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಬಾಂಬೆ ಮಾಡೆಲ್ ಇಟ್ಟುಕೊಂಡು ಆರೋಪಿಗಳು ಬಲೆ ಬೀಸುತ್ತಿದ್ದರು. ಓರ್ವ …

Read More »

ಜಾತಿ ನಿಂದನೆ ಕೇಸ್ : ಪೊಲೀಸ್‌ ಎದುರು ವಿಚಾರಣೆಗೆ ಹಾಜರಾದ ಉಪೇಂದ್ರ

ಬೆಂಗಳೂರು : ದಲಿತ ಸಮುದಾಯದ ಬಗ್ಗೆಆಕ್ಷೇಪಾರ್ಹ ಪದ ಬಳಕೆ ಮಾಡಿರುವ ನಟ ಹಾಗೂ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಅವರಿಗೆ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಉಪೇಂದ್ರ ಚೆನ್ನಮ್ಮನ ಅಚ್ಚುಕಟ್ಟೆ ಪೋಲಿಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಭಾನುವಾರವಷ್ಟೇ ಕತ್ರಿಗುಪ್ಪೆಯಲ್ಲಿರುವ ಅವರ ಮನೆಯಲ್ಲಿ ಮಹಜರು ಪ್ರಕ್ರಿಯೆ ಮುಗಿಸಿರುವ ಪೊಲೀಸರು, ಬಳಿಕ ವಿಚಾರಣೆಗೆ ಹಾಜರಾಗುವಂತೆ ವಾಟ್ಸಾಪ್ …

Read More »

ಬಾಂಗ್ಲಾ ಮೂಲದ ವ್ಯಕ್ತಿಗಳನ್ನೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವು…

ಬೆಂಗಳೂರು: ಪ್ರಕರಣವೊಂದರ ಭಾಗವಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸಿದಾಗ ಸೆರೆಸಿಕ್ಕ ಬಾಂಗ್ಲಾದೇಶದ ಆರೋಪಿಯೊಬ್ಬ 42 ಜನ ಇತರೆ ಬಾಂಗ್ಲಾ ಮೂಲದ ವ್ಯಕ್ತಿಗಳನ್ನೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವು ನೀಡಿರುವುದು ತಿಳಿದು ಬಂದಿದೆ. ಬೆಳ್ಳಂದೂರು ಪೊಲೀಸರ ವಶದಲ್ಲಿರುವ ಅಬ್ದುಲ್ ಖಾದಿರ್ ತಾಲೂಕ್ದಾರ್ ಎಂಬಾತನ ನೆರವಿನಿಂದ ಮೊಹಮ್ಮದ್ ಜಾಹೀದ್, ಖಲೀಲ್ ಚಪ್ರಾಸಿ ಸೇರಿ ಕನಿಷ್ಠ 40 ಜನ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸೆಕ್ಯೂರಿಟಿ, …

Read More »

ಪೋಲಿಸ್‌ ಇಲಾಖೆಯ ಹೊಸ ನಿಯಮ….

ಪೊಲೀಸ್ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಎರವಲು ಸೇವೆಯ ಅವಧಿಗೆ ಮಿತಿ ಹೇರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.ಇನ್ನು ಮುಂದೆ ಈ ಅವಧಿ ಮೂರು ವರ್ಷ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದ್ದು ಸರ್ಕಾರದ ಸೂಚನೆಯಂತೆ ಹೊಸ ಮಾರ್ಗ ಸೂಚಿ ಜಾರಿ ಬಂದಿದೆ. ಎರವಲು ಸೇವೆಯ ಸಾಮಾನ್ಯ ಅವಧಿ ಮೂರು ವರ್ಷ ಪೂರ್ಣಗೊಂಡ ಬಳಿಕ ವಿಶೇಷ ಸಂದರ್ಭ ಅಥವಾ ವಿಶೇಷ ಕಾರಣ ಇದ್ದರೆ ಮಾತ್ರ ಸೀಮಿತ ಸಾಮಾನ್ಯ ಅವಧೀಯನ್ನು …

Read More »

ಕರ್ನಾಟಕ ಕಾರ್ಮಿಕ ಪತ್ರಿಕೆ ಬಿಡುಗಡೆಗೊಳಿಸಿದ ಸಚಿವ ಸಂತೋಷ್ ಲಾಡ್..

ಬೆಂಗಳೂರು: ಇಂದು ವಿಧಾನಸೌಧದ ಅಧಿಕೃತ ಕೊಠಡಿಯಲ್ಲಿ ಕರ್ನಾಟಕ ಕಾರ್ಮಿಕ ಪತ್ರಿಕೆ (ಕನಿಷ್ಠ ವೇತನ ಅಧಿಸೂಚನೆಗಳ ವಿಶೇಷ ಸಂಚಿಕೆ 2023-24) ಅನ್ನು ಬಿಡುಗಡೆಗೊಳಿಸಿದರು.ಪ್ರತಿ ವರ್ಷವೂ ಕಾರ್ಮಿಕ ಇಲಾಖೆಯ ವತಿಯಿಂದ ಈ ವಿಶೇಷ ಪತ್ರಿಕೆ ಹೊರಬರುತ್ತಿದ್ದು, ಕಾರ್ಮಿಕರ ಪ್ರಸ್ತುತ ವೇತನ ಹಾಗೂ ಅದರ ಕುರಿತ ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಹೊಂದಿರುತ್ತದೆ. ಈ ಸಂದರ್ಭದಲ್ಲಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮಹಮ್ಮದ್‌ ಮೊಹಸೀನ್‌, ಕಾರ್ಮಿಕ ಆಯುಕ್ತರಾದ ಡಾ. ಎಚ್.ಎನ್.ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ …

Read More »