Breaking News

ಧಾರವಾಡ

ಕುಡಿಯುವ ನೀರಿನ ಸಮಸ್ಯೆ ಹಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕ ಕೋನರೆಡ್ಡಿ

ಇಂದು ಮುಂಜಾನೆ ಶಾಸಕಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ನವಲಗುಂದ ನಗರದ ನೀಲಮ್ಮನ ಕೇರೆ ಹಾಗೂ ಚೆನ್ನಮ್ಮನ ಕೇರೆಗೆ ಬೇಟಿ ನೀಡಿ ನಗರದ ಜನತೆಗೆ ನೀರಿನ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ನಂತರ ಈಜುಕೊಳ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ನವಲಗುಂದ ಪಟ್ಟಣದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. …

Read More »

ಶೋ ಒಳಗಡೆ ಅವಿತುಕೊಂಡ ಕುಳಿತ ಮಿಡಿನಾಗರ ಹಾವು

ಧಾರವಾಡ: ಮನೆಯ ಹೊರಗಡೆ ಇಟ್ಟಿದ್ದ ಬೂಟಿನೊಳಗೆ ಮಿಡಿ ನಾಗರವೊಂದು ಅವಿತು ಕುಳಿತು ಕೆಲಕಾಲ ಆತಂಕ ಸೃಷ್ಟಿಸಿತ್ತು. ಈ ಘಟನೆ ಧಾರವಾಡ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ. ನಂದಿತಾ ಶಿವನಗೌಡರ ಎಂಬುವವರ ಮನೆಯ ಮುಂದೆ ಇಟ್ಟಿದ್ದ ಬೂಟಿನಲ್ಲಿ ಮಿಡಿನಾಗರ ಅವಿತು ಕುಳಿತಿತ್ತು. ಕಸ ಗೂಡಿಸುವ ಸಂದರ್ಭದಲ್ಲಿ ಅದನ್ನು ನೋಡಿದ ಮನೆಯವರು ಕೂಡಲೇ ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಅವರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಯಲ್ಲಪ್ಪ ಮಿಡಿ ನಾಗರ ಹಾವನ್ನು ರಕ್ಷಿಸಿ …

Read More »

ಸೆರ್ವರ್‌ ದೋಷದಿಂದ ರೊಚ್ಚಿಗೆದ್ದ ಜನರು; ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳ ಜೊತೆಗೆ ಮಾತಿನ ಚಕಮಕಿ

ಧಾರವಾಡ: ಸರ್ವರ್ ದೋಷದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಬರುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರನ್ನು ನಿಯಂತ್ರಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಹೌದು! ಧಾರವಾಡ ಜಿಲ್ಲಾ ಆಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಸರ್ವರ್ ದೋಷ ಉಂಟಾಗಿದ್ದು, ನೋಂದಣಿ ಕಾರ್ಯ ವಿಳಂಬವಾಗುತ್ತಿದೆ. ಜನರು ಸಾಲುಗಟ್ಟಿ ನಿಂತು ಬೇಸತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಜೋತೆ ವಾಗ್ವಾದಕ್ಕಿಳಿದ ಘಟನೆ ಇಂದು ನಡೆದಿದೆ. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ, ಸರ್ವರ್ ದೋಷದಿಂದ ಸಮಸ್ಯೆ ಆಗುತ್ತಿದೆ ಎಂದು …

Read More »

ಬಾಲಕಿ ಮೇಲೆ ಮಂಗವೊಂದರ ದಾಳಿ ಬಾಲಕಿಗೆ ಗಂಭೀರ ಗಾಯ

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ …

Read More »

ಧಾರವಾಡ ಜಿಲ್ಲೆ ಸಮಗ್ರ ಅಭಿವೃದ್ಧಿ ಕನಸು ಸಚಿವ ಲಾಡ್ 

ಪೂರ್ವ ಬೈಪಾಸ್ ನಿರ್ಮಾಣ : 5 ಸಾವಿರ ಮನೆ–ಹಾಸ್ಟೆಲ್‌ ನಿರ್ಮಿಸುವ ಗುರಿ : ಧಾರವಾಡದ ಸಾಂಸ್ಕೃತಿಕ ಬ್ರಾಂಡ್ ಗೆ ಚಿಂತನೆ  ಧಾರವಾಡ: ಜಿಲ್ಲೆಯ ಬಹು ನಿರೀಕ್ಷಿತ ಪೂರ್ವ ಬೈಪಾಸ್ ನಿರ್ಮಾಣ ಹಾಗೂ ಧಾರವಾಡವನ್ನು ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಮಾಡುವ ಕನಸು ಕಂಡಿದ್ದು, ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.  ಇಲ್ಲಿನ ಧಾರವಾಡ ಜರ್ಮಲಿಸ್ಟ್ ಗಿಲ್ಡ್ ವತಿಯಿಂದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು …

Read More »

ಸರ್ಕಾರಿ ಹಾಸ್ಟೆಲ್ ವೀಕ್ಷಿಸಿದ ಉಸ್ತುವಾರಿ ಸಚಿವ ಲಾಡ್

ಧಾರವಾಡ ಇಂದು ಬೆಳಗ್ಗೆ ಧಾರವಾಡದ ದಾಸನಕೊಪ್ಪದ ಸರ್ಕಾರಿ ಮೆಟ್ರಿಕ್ ನಂತರದ ಹೆಚ್ಚುವರಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿದ ಕಾರ್ಮಿಕ ಹಾಗೂ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಅಷ್ಟೇ ಅಲ್ಲದೆ ಚೆನ್ನಾಗಿ ಓದಿ, ಜಿಲ್ಲೆಗೆ ಹಾಗೂ ಕುಟುಂಬಕ್ಕೆ ಹೆಸರು ತೆಗೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಸಲಹೆ ಕೂಡ ನೀಡಿದರು. ಮೊದಲಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರಾಗಿರುವ ಸಂತೋಷ್ ಲಾಡ್ ತಮ್ಮ ಜಿಲ್ಲೆಯ …

Read More »

ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಚಾಲನೆ

ಧಾರವಾಡ: ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಒಟ್ಟು ಐದು ರೈಲುಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ಅದರಲ್ಲಿ ಧಾರವಾಡ ಬೆಂಗಳೂರು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಕೂಡ ಒಂದು. ಧಾರವಾಡದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ನಂತರ ಧಾರವಾಡ ಬೆಂಗಳೂರು ವಂದೇ ಭಾರತ ರೈಲಿಗೆ ರಾಜ್ಯಪಾಲರಾದ ಥಾವರ್ …

Read More »

ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯಗಳ ಧಾರವಾಡಕ್ಕೆ ಬೇಟಿ

ಧಾರವಾಡ ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇಂದು (ಜೂ.24) ಬೆಳಿಗ್ಗೆ ಕೇದಾರ ಪೀಠದ 1008 ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರನ್ನು ಹರಿಹರ ತಾಲೂಕಿನ ಶಿವನಹಳ್ಳಿಯಲ್ಲಿರುವ ವೈರಾಗ್ಯಧಾಮದಲ್ಲಿ ಭೇಟಿ ಮಾಡಿ, ದರ್ಶನ ಪಡೆದು ನಂತರ ಆಶಿರ್ವಾದ ಪಡೆದರು ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಕಣ್ವಕುಪ್ಪೆ ಗವಿಮಠದ ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಧಾರವಾಡ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮುಗನೂರಮಠ, ಹಿರಿಯ …

Read More »

ಪೋಲೀಸರಿಂದ ಮಹಿಳೆಯರಿಗೆ ಜಾಗ್ರತಿ ಕಾರ್ಯಕ್ರಮ

ಧಾರವಾಡ ನಗರದ ನಾರಾಯಣಪುರ ಉದ್ಯಾನವನ ದಲ್ಲಿ ಸಬರಬನ್ ಪೋಲೀಸರಿಂದ ಮಹಿಳೆಯರಿಗೆ ಜಾಗ್ರತಿ ಕಾರ್ಯಕ್ರಮ ಜರಗಿತು, ಎಲ್ ಕೆ ಕೋಡಬಾಳ ಸಬರಬನ್ ಪಿ ಎಸ್ ಐ ಮಾತನಾಡಿ ಅಗುಂತಕರಿಗೆ ಬಾಗಿಲು ತೆರೆಯಬೇಡಿ, ಚಿನ್ನ ಶುದ್ದಿಕರಣ ನೆಪಮಾಡಿ ನಿಮ್ಮ ಗಮನ ಬೇರೆಡೆ ಸೆಳೆದು ಚಿನ್ನವನ್ನು ದೋಚುತ್ತಾರೆ , ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಬ್ಲಾಗ ಮುಂದೆ ಇರಲಿ, ಅಕ್ಕ ಪಕ್ಕ ಹೆಗಲಿಗೆ ಹಾಕಿದಲ್ಲಿ ನಿಮಗೆ ತಿಳಿಯದ ಹಾಗೆ ವೆನಟಿ ಬ್ಯಾಗಿನ ಜೀಪ ತೆಗೆದು …

Read More »

29ರಂದು ಮದ್ಯಪಾನ, ಮಾರಾಟ ಸಾಗಾಣಿಕೆ ನಿಷೇಧ

ಧಾರವಾಡ: ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಮಯದಲ್ಲಿ ಜೂನ್ 29ರಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ ಗ್ರಾಮೀಣ ಜಿಲ್ಲೆಯಾದ್ಯಂತ ಜೂನ್ 28ರ ರಾತ್ರಿ 11:59 ಗಂಟೆಯಿಂದ ಜೂನ್ 30ರ ಬೆಳಿಗಿನ 6 ಗಂಟೆಯವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಮದ್ಯಾಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶ …

Read More »