Breaking News

ಧಾರವಾಡ

ನಿರಂತರ ಮಳೆ ಹಿನ್ನೆಲೆಯಲ್ಲಿ 8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ..

ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸದ್ಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಲವೆಡೆ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿ, ಸಾವು-ನೋವು ಸಂಭವಿಸಿದೆ. ಧಾರವಾಡ ಜಿಲ್ಲೆಯಲ್ಲಿ ಜುಲೈ 26ರ ಬೆಳಿಗ್ಗೆ 8 ಗಂಟೆಯಿಂದ 27ರ ಬೆಳಿಗ್ಗೆ 8 ಗಂಟೆಯವರೆಗೆ ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. 8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ 87 ಮನೆಗಳು, …

Read More »

ಶೇರೆವಾಡ ಗ್ರಾಮದಲ್ಲಿ ಶಾಲಾ‌ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ‌ ಸಚಿವ ಲಾಡ್

ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದಲ್ಲಿ ಸರಿಯಾಗಿ ಬಸ್ ಬರದೇ ಇರುವುದು ಸೇರಿದಂತೆ ಶಾಲಾ ಮಕ್ಕಳ ಸಮಸ್ಯೆಗಳನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಆಲಿಸಿದರು. ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ ಬಂದರೂ ಬಸ್ ತುಂಬಾ ತುಂಬಿರುತ್ತೇವೆ ಆದ್ದರಿಂದ ಶಾಲೆಗೆ ‌ಹೋಗಲು ತೊಂದರೆ ಆಗುತ್ತದೆ‌ ಇದರ ಜೊತೆಗೆ ಸರಿಯಾಗಿ ರಸ್ತೆ ಇಲ್ಲಾ ದುರಸ್ತಿ ಮಾಡಿಸಲು ಸಚಿವ ಸಂತೋಷ ಲಾಡ್ ಬಳಿ ಮನವಿ ಮಾಡಿದರು. ಮನವಿ …

Read More »

ಕಾಂಗ್ರೆಸ್ ನಿಂದ ಓಲೈಕೆ ರಾಜಕಾರಣ: ಅರವಿಂದ ಬೆಲ್ಲದ

ಧಾರವಾಡ: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜ್ ನ ಶೌಚಾಲಯದಲ್ಲಿ ನಡೆದ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹರಿಹಾಯ್ದರು.ಧಾರವಾಡ ನಗರದಲ್ಲಿ ಪಬ್ಲಿಕ್ ನೆಕ್ಸ್ ಜೊತೆ ಮಾತನಾಡಿದ ಅವರು, ಉಡುಪಿಯಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವೀಡಿಯೊ ಮಾಡಿದ ಪ್ರಕರಣದಲ್ಲಿ ಈಗಾಗಲೇ ಸತ್ಯ ಬಯಲಾಗಿದೆ. ಮುಸ್ಲಿಂ ಯುವತಿಯರು, ಹಿಂದೂ ಯುವತಿಯರ ವೀಡಿಯೊ ಮಾಡಿದ್ದಾರೆ ಎಂದು ಸಚಿವರಿಗೆ ಗೊತ್ತಿದೆ. ಆದರೂ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. …

Read More »

ಬಿಜೆಪಿ ಸರ್ಕಾರ ಇದ್ದಾಗ ತನ್ವಿರ್ ಸೇರ್ ಪತ್ರ ಬರೆಯಲಿಲ್ಲ ಯಾಕೆ? ಪ್ರಮೋದ್ ಮುತಾಲಿಕ್..

ಧಾರವಾಡ: ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಯುವಕರು ಅಮಾಯಕರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ತನ್ವಿರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡದಲ್ಲಿ ಮಾತನಾಡಿರುವ ಅವರು, ಈಗ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ತನ್ನೀರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರವನ್ನು ಬಿಜೆಪಿ ಸರ್ಕಾರ ಇದ್ದಾಗ ಅವರು …

Read More »

ಕೃಷಿ ಇಲಾಖೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು: ಸಂತೋಷ ಲಾಡ್

ಧಾರವಾಡ : ಜಿಲ್ಲೆಯಲ್ಲಿ ಹಲವು ಕಡೆ ಅತಿಯಾದ ಮಳೆ, ಮುಂಗಾರು ಬಿತ್ತನೆ ಇಲ್ಲದೆ ಜನ ತೊಂದರೆಯಲ್ಲಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ಹಳ್ಳಿಗಳಿಗೆ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಬೇಕು. ಮತ್ತು ಅವರಿಗೆ ಅಗತ್ಯವಿರುವ ಸರಕಾರದ ನೆರವು, ಸಹಾಯ ಮಾಡಬೇಕೇಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪಕ್ಕೆ ಸಂಭಂದಿಸಿದ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಹಾಗೂ ಕಂದಾಯ ಇಲಾಖೆ …

Read More »

ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ: ಸಚಿವ ಸಂತೋಷ ಲಾಡ್

ಧಾರವಾಡ: ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ ಇದರಿಂದ ಬಹಳ ರೈತರಿಗೆ ಅನಾನುಕೂಲ ಆಗಿದೆ ಎಂದು ಧಾರವಾಡ ಜಿಲ್ಲೆ ನವಲಗುಂದದಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ. ನವಲಗುಂದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಳ್ನಾವರ ಭಾಗಕ್ಕೆ ಈಗಾಗಲೇ ಭೇಟಿ ನೀಡಿದ್ದೇನೆ. ಇವತ್ತು ನವಲಗುಂದ ಕ್ಷೇತ್ರದಲ್ಲಿ ಪರಿಶೀಲನೆ ಮಾಡುತ್ತೇನೆ. ಮುಂದೆ ಕುಂದಗೋಳ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಈಗಗಾಲೇ ಮನೆ ಬಿದ್ದ ಸ್ಥಳಕ್ಕೆ …

Read More »

ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ಬಿದಿಗೆ ಇಳಿದು ರೈತರ ಪ್ರತಿಭಟನೆ

ಧಾರವಾಡ: ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀಯಾದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಬೆಳೆ ಹಾನಿಯಾಗುತ್ತಿದ್ದರು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿಲ್ಲ ಆದ್ದರಿಂದಲೇ ನಿರಂತರ ಮಳೆಯಿಂದಾಗಿ ರೈತರು ಬಿದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. …

Read More »

ಸಿಬಿಟಿ ಬಳಿ ಅಪರಿಚಿತ ಹೆಣ ಪತ್ತೆ, ಯಾರು ಇವರು? ಗುರುತಿಗಾಗಿ ಪೋಲಿಸರ ಹುಡುಕಾಟ

ಧಾರವಾಡ: ನಗರದ ಸಿಬಿಟಿ ಬಳಿಯ ಅಂಜುಮನ್ ಕಾಂಪ್ಲೆಕ್ಸ್ ಎದುರಿನ ಆಕಳವಾಡಿ ಅಂಗಡಿ ಮುಂದಿನ ಫುಟ್‌ಪಾತ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಧಾರವಾಡ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಅಪರಿಚಿತ ವ್ಯಕ್ತಿಯ ಮಾಹಿತಿ ಪತ್ತೆ ಹಚ್ಚಲು ಪ್ರಕಟಣೆಯನ್ನ ಹೊರಡಿಸಿದ್ದಾರೆ. ಸಾರ್ವಜನಿಕರು ಸಾವಿಗೀಡಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೇ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.

Read More »

ರಸ್ತೆ ಕುಸಿದು ಸಿಲುಕಿಕೊಂಡ ಕಟ್ಟಿಗೆ ತುಂಬಿದ್ದ ಲಾರಿ

ಕಲಘಟಗಿ: ಬೇಡ್ತಿ ನಾಲಾ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದ್ದು ಸ್ಥಳದಲ್ಲಿ ರಸ್ತೆ ಕುಸಿದು ಲಾರಿ ಸಿಲುಕಿಕೊಂಡ ಘಟನೆ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿ ನಡು ರಸ್ತೆಯಲ್ಲಿ ನಡೆದಿದೆ. ಲಾರಿಯೊಂದು ಕಟ್ಟಿಗೆ ತುಂಬಿಕೊಂಡು ತಡಸ ಕಡೆಯಿಂದ ಹಳಿಯಾಳಕ್ಕೆ ಹೋಗುವಾಗ ಕಲಘಟಗಿ ತಡಸ ರಸ್ತೆ ಮಾರ್ಗ ಮಧ್ಯೆ ಕುಸಿದು ಅಲ್ಲೇ ಸಿಲುಕಿಕೊಂಡಿದೆ. ಲಾರಿ ಟೈಯರ್‌ಗಳು ಕುಸಿದು ಪಲ್ಟಿಯಾಗುವ ಸಂಭವ ಕೂಡ ಇದ್ದು, ಈ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಬಿಟ್ಟರೆ ಬಸ್ …

Read More »

ನಾಳೆ ಜು.24 ರಂದು ಜಿಲ್ಲೆಯ ಎಲ್ಲ ಶಾಲ್ ಗಳು ಒಂದು ದಿನ ರಜೆ ನೀಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ

ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ನಾಳೆ ಜುಲೈ 24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ …

Read More »