Breaking News

ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ : ರೇಲ್ವೆ ಅಲ್ಲಿ ಬ್ಯಾಗ ಕಳುವು.!

ಕೊಲ್ಲಾಪುರದಿಂದ ಗುಂಡು ಕಲ್ಲಿಗೆ ಹೋಗಲು ಹರಿಪ್ರಿಯಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಗ್ ನಲ್ಲಿದ್ದ ಎರಡು ಲಕ್ಷದ ಚಿನ್ನಾಭರಣ ಕಳ್ಳತನ ಘಟನೆ ನಡೆದಿದೆ.ರಾಮದೇವಿ ಯೋಗೇಶ್ ಬ್ಯಾಗ ಕಳೆದುಕೊಂಡವರು.ಹುಬ್ಬಳ್ಳಿಗೆ ಬಂದು ನೋಡಿದಾಗ 20ಗ್ರಾಂ ನೆಕ್ಲೆಸ್, 24 ಸಾವಿರ ನಗದು 8 ಸಾವಿರ ಮೌಲ್ಯದ ಮೊಬೈಲ್ ಫೋನ್ ಇದ್ದ ಬ್ಯಾಗ ಕಳ್ಳತನವಾಗಿದೆ. ಹುಬ್ಬಳ್ಳಿ ರೇಲ್ವೆ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.

Read More »

ಧಾರವಾಡ: ಇಂದುಮತಿ ಕಾಂಬಳೆ ಇನ್ನಿಲ್ಲ! ಬಸ್‌ನಲ್ಲಿ ಪ್ರಯಾಣಿಸುವಾಗ ಹಾರ್ಟ್ ಅಟ್ಯಾಕ್.!

ಕರ್ನಾಟಕ ಸರ್ಕಾರದ ನೀರಾವರಿ ನಿಗಮದಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ಇಂದುಮತಿ ಕಾಂಬಳೆ ಅವರು ಬಸ್‌ನಲ್ಲಿ ಪ್ರಯಾಣ ಮಾಡುವಾಗಲೇ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ. ಸುಮಾರು ಹೊತ್ತು ನಾಡಿಮಿಡಿತವನ್ನು ಹಿಡಿದು ನೋಡಿದ್ದಾರೆ. ಆಗ ಮಹಿಳೆಯ ಜೀವ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದಾದ ನಂತರ ಧಾರವಾಡ ನಗರದ ಜಿಲ್ಲಾ ಆಸ್ಪತ್ರೆಗೆ ಬಸ್‌ ಅನ್ನು ತಿರುಗಿಸಿದ್ದಾರೆ.ಜಿಲ್ಲಾಸ್ಪತ್ರೆಗೆ ಬರುವ ವೇಳೆಗೆ ಆಕೆ ಸತ್ತಿದ್ದು ದೃಢಪಟ್ಟಿದ್ದು, ವೈದ್ಯರು ಮತ್ತೊಮ್ಮೆ ಪರಿಶೀಲನೆ ಮಾಡಿ ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಇನ್ನು ಮೃತ …

Read More »

ಹುಬ್ಬಳ್ಳಿ: ಬ್ಲಾಕ್ ಮೇಲ್ ಪ್ರಕರಣದ ಹಿನ್ನೆಲೆ ರಾಮ್ ಸೇನಾ ಅಧ್ಯಕ್ಷರ ಪ್ರಚೋದನಕಾರಿ ಹೇಳಿಕೆ.

ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ರಿಂದ ಪ್ರಚೋದನಕಾರಿ ಹೇಳಿಕೆ: ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ ಕಾಂಗ್ರೆಸ್ ಇರೋದು ಮುಸ್ಲಿಂರ ರಕ್ಷಣೆಗಾಗಿ ಮಾತ್ರ,ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್18 ಕ್ಕೆ ಒಂದು ವರ್ಷ ಆಗುತ್ತೆ. ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ “ತ್ರಿಶೂಲ ದಿಕ್ಷೆ” ನೀಡಲಿದೆ.ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ.ಅತ್ಯಾಚಾರಿಗಳು, ಕೊಲೆಗಡಿಗರಿ, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ನೇಹಾ ಹಿರೇಮಠ ಹತ್ಯೆ ಆಗಿ ಇನ್ನೂ ಒಂದು ವರ್ಷ ಆಗಿಲ್ಲ ಈಗ …

Read More »

ಹುಬ್ಬಳ್ಳಿ: ಖಾಸಗಿ ಫೋಟೋ ಇಟ್ಟುಕೊಂಡು ಅನ್ಯಕೋಮಿಯ ಯುವಕನ ಬ್ಲಾಕ್ ಮೇಲ್.!

ಕಳೆದ ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಿರಾಜ್ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನು. ಯುವಕನ ಟಾರ್ಚರ್ ನಿಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿದ್ಯಾ ಎಂಬ ಯುವತಿಯು ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ಆಗಿರುತ್ತಾಳೆ.ಹುಬ್ಬಳ್ಳಿಯಲ್ಲಿ ಟ್ಯಾಬ್ಲೆಟ್ ತಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾಳನ್ನು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಯುವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ …

Read More »

ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರಿ ಮಳೆ.!

ಭಾನುವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮೇಕೆ ಮೆಯಿಸಲು ಹೋಗಿದ್ದ ವೃದ್ಧರೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ರಸೂಲ್ ಸಾಬ್ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೇಕೆ ಮೇಯಿಸಿಕೊಂಡು ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಧಾರವಾಡ : ಆಟೋದಲ್ಲಿ ದನದ ಮಾಂಸ ಸಾಗಾಟ, ರೆಡ್‌ಹ್ಯಾಂಡಾಗಿ ಹಿಡಿದ ಬಜರಂಗದಳ ಕಾರ್ಯಕರ್ತರು!

ಚಾಲಕ ದನದ ಮಾಂಸವನ್ನು ಧಾರವಾಡದ ಟೋಲನಾಕಾದಿಂದ ಆಟೋದಲ್ಲಿ ಜನ್ನತನಗರಕ್ಕೆ ಸಾಗಿಸುತ್ತಿದ್ದ.ಟೋಲನಾಕಾದಲ್ಲಿ ಹೆಸರಿಗೆ ಮಾತ್ರ ಚಿಕನ್ ಸೆಂಟರ್ ಎಂದು ಬೋರ್ಡ್ ಹಾಕಿಕೊಂಡು ಒಳಗಡೆ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ. ಆ ಚಿಕನ್ ಸೆಂಟರ್ ಮೂಲಕವೇ ದನದ ಮಾಂಸ ಸಾಗಿಸಲಾಗುತ್ತಿತ್ತು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ ಪಾಲಿಕೆ ಆಯುಕ್ತರು ನಿರ್ಲಕ್ಷ್ಯಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.ಸದ್ಯ ವಿದ್ಯಾಗಿರಿ ಠಾಣೆ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ

Read More »

ಧಾರವಾಡ ಜಿಲ್ಲೆಯ ಸೂಪರ್ ಸ್ಟಾರ್ ರೈತರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಾದ ನವಲಗುಂದ ತಾಲೂಕಿನ ನಾಗನೂರು ಡಾ. ಶೌಕತ್ತಲಿ ಹಜಾರೆ ಸಾಬ್ ಲಂಬನೂರ್ರವರ ಹುಬ್ಬಳ್ಳಿ ತಾಲೂಕದ ಕುಸುಗಲ್, ಪ್ರಶಾಂತ್ ಬಸವಂತಪ್ಪ ಬಿಜಾಪುರ್, ನವಲಗುಂದ ತಾಲೂಕು ನೂರು ನಂದೀಶ್ ಕುಲಕರ್ಣಿ, ಧಾರವಾಡ ಡಾ.ದ್ರಾಕ್ಷಾಯಿಣಿ ಚಿದಾನಂದ ರಾಮನಗೌಡರ್, ಕಲಘಟ್ಟಿ ತಾಲೂಕಿನ ಜಮ್ಮಿನ್ ಹಾಳಾದ ನಾಗಪ್ಪ ಉದ್ಧಣ್ಣನವರ್ಡಾ, ಅಣ್ಣಾವರ ಡಾ.ಜ್ಯೋತಿ ಚಂದ್ರಗಿರಿ ಮಠ, ಅವರಿಗೆಲ್ಲ ಜಿಲ್ಲಾಮಟ್ಟದ ವಿಕ ಸೂಪರ್ ಸ್ಟಾರ್ ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. …

Read More »

ಧಾರವಾಡ: ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ

ಹುಬ್ಬಳ್ಳಿ ಗೋಕುಲ್ ರಸ್ತೆ ಕೆ ಎಸ್ ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾಸಂಸ್ಥೆಯಲ್ಲಿ ನಾಳೆ ಮಾರ್ಚ್ 23ರಂದು 12 ಗಂಟೆಗೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ. ಪ್ರಕೃತಿ ಚಿಕಿತ್ಸೆ ಮಹತ್ವ ಕುರಿತು ಉಪನ್ಯಾಸರಿಂದ ವಿಶೇಷ ಉಪನ್ಯಾಸ ನಡೆಯುವುದು. ನಂತರ ಆರೋಗ್ಯದ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು. ಯಾವುದೇ ಕಾಯಿಲೆ ಇರುವ ವ್ಯಕ್ತಿಯು ಬಂದು ಉಚಿತ ಚಿಕಿಸ್ತ ಸಲಹಾ ಪಡೆಯಬಹುದೆಂದು ಡಾಕ್ಟರ್ ಶರ್ಮಾ ತಿಳಿಸಿದ್ದಾರೆ.

Read More »

ಧಾರವಾಡ: ಬೇಸಿಗೆ ರಂಗ ತರಬೇತಿ ಶಿಬಿರ

ಧಾರವಾಡ ರಂಗಾಯಣವು ಚಿನ್ನರ ಮೇಳ 2025ರ ಅಂಗವಾಗಿ ಬೇಸಿಗೆ ಮಕ್ಕಳ ರಂಗ ತರಬೇತಿ ಶಿಬಿರ ಏಪ್ರಿಲ್ 10 ರಿಂದ ಮೇ 4ರವರೆಗೆ ಆಯೋಜಿಸಿದೆ. ಏಪ್ರಿಲ್ 9ಕ್ಕೆ 7 ವರ್ಷ ಪೂರ್ಣಗೊಂಡ 15 ವರ್ಷ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಏಪ್ರಿಲ್ 9ರ ಒಳಗೆ ಪಾಲಕರೆ ಖುದ್ದಾಗಿ ಮಕ್ಕಳೊಡನೆ ಬಂದು ಶಿಬಿರದಲ್ಲಿ ಹೆಸರನ್ನು ನೋಂದಾಯಿಸಬೇಕು. ಮಾಹಿತಿಯನ್ನು ರಂಗಾಯಣ ಕಚೇರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More »

ಧಾರ ನಗರಿಯಲ್ಲಿ ಪಂಜಿನ ಮೆರವಣಿಗೆ!

ಬಲಿದಾನ ದಿವಸ ನಿಮಿತ್ತ ವೀರ ಸಾವರ್ಕರ್ ಬಳಗದ ವತಿಯಿಂದ ನಾಳೆ ಮಾರ್ಚ್ 23ರಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆಯನ್ನು ಏರ್ಪಡಿಸಲಾಗಿದೆ . ಸಮಾಜ ಚಿಂತಕಿ ಭವನ ಗೌಡ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಮೂಲಕ ತಿಳಿಸುತ್ತಿದ್ದಾರೆ.

Read More »