Breaking News

ಕರ್ನಾಟಕ

ಗಾಂಜಾ ಮಾರಾಟಕ್ಕೆ ಯತ್ನ ಧಾರವಾಡ ಮೂವರ ಬಂಧನ

ಧಾರವಾಡ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ತಡಸಿನಕೊಪ್ಪ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ದರ್ಶನ ದುಗ್ಗಾಣಿ, ಗುರುರಾಜ ಯರೇಸೀಮಿ ಹಾಗೂ ಮಂಜುನಾಥ ಮಾನೆ ಎಂಬುವವರೇ ಬಂಧಿತರು. ಬಂಧಿತರಿಂದ 510 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ತಡಸಿನಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ವಿದ್ಯಾಗಿರಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪರಾರಿಯಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »

ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಎಸ್​ಪಿ ಜೊತೆ ಮಾತನಾಡಿ ವರದಿ ತರಿಸಿ ಕೊಡುತ್ತೇನೆ ಡಾ.ಜಿ.ಪರಮೇಶ್ವರ್​

ಬೆಂಗಳೂರು: ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಎಸ್​ಪಿ ಜೊತೆ ಮಾತನಾಡಿ ವರದಿ ತರಿಸಿ ಕೊಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಚೆಲುವರಾಯಸ್ವಾಮಿ ವಿರುದ್ಧವಾಗಿ ಯಾರೋ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬರೆದಿರುವ ಪತ್ರ ನಕಲಿ ಇದೆ. ಅಧಿಕಾರಿಗಳು ನಾವು ಯಾರು ಪತ್ರ ಬರೆದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಮಂಡ್ಯ ಎಸ್​ಪಿ ಜೊತೆ ಮಾತನಾಡಿ ನಾನು ವರದಿ ತರಿಸಿ ಕೊಡುತ್ತೇನೆ. ಅಧಿಕಾರಿಗಳು …

Read More »

ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: “ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ. ಸಚಿವರ ಸುಲಿಗೆಯನ್ನೇ ಸಮರ್ಥನೆ ಮಾಡಿಕೊಳ್ಳುವ ಸಿದ್ದಕಲೆ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ (!?) ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ …

Read More »

ಮಣಿಪುರ ರಾಜ್ಯದಲ್ಲಿನ ಹಿಂಸಾಚಾರ ಹಾಗೂ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ….

ಧಾರವಾಡ: ಮಣಿಪುರ ರಾಜ್ಯದಲ್ಲಿನ ಹಿಂಸಾಚಾರ ಹಾಗೂ ಅತ್ಯಾಚಾರ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಣಿಪುರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದ್ದು, ಗಲಭೆ, ಹಿಂಸಾಚಾರ ಹಾಗೂ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದು ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಮಣಿಪುರ …

Read More »

ಪೌರ ನೌಕರ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ಶಿವಾನಂದ ಕದಂ ಆಯ್ಕೆ…

ನವಲಗುಂದ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ಪಟ್ಟಣದ ಪುರಸಭೆ ಪೌರ ನೌಕರ ಶಿವಾನಂದ ಕದಂ ಆಯ್ಕೆಯಾಗಿದ್ದಾರೆ. ಈ ಮೊದಲು ನವಲಗುಂದದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೂತನ ಆಯ್ಕೆಯಾದ ಕದಂ ನೌಕರರ ಹಿತಾಸಕ್ತಿಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಹಾಗೂ ಯಾವುದೇ ಕುಂದು ಕೊರತೆಗಳ ಬಗ್ಗೆ ಜೊತೆಗೂಡಿ ಗಮನ ಸೆಳೆಯಲು ಸಹಕಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಉಪಾಧ್ಯಕ್ಷ ಆಯ್ಕೆಯಾದ ಶಿವಾನಂದ ಕದಂ ಅವರನ್ನು ಮುಖ್ಯಾಧಿಕಾರಿ ವೆಂಕಟೇಶ …

Read More »

ಕುಬ್ಜರ ಕ್ರೀಡಾಕೂಟದಲ್ಲಿ ಭಾರತ ತಂಡ 20 ಚಿನ್ನದ ಪದಕಗಳೊಂದಿಗೆ ಅಭೂತಪೂರ್ವ ಸಾಧನೆ….

ಹುಬ್ಬಳ್ಳಿ: ಜರ್ಮನಿಯ ಬರ್ಲಿನ್‌ನಲ್ಲಿ ಜುಲೈ 28ರಿಂದ ಆಗಸ್ಟ್ 5ರವರೆಗೆ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತ ತಂಡ 20 ಚಿನ್ನದ ಪದಕಗಳೊಂದಿಗೆ ಅಭೂತಪೂರ್ವ ಸಾಧನೆ ಮಾಡಿ ಸ್ವದೇಶಕ್ಕೆ ಮರಳಿದೆ. ಅಲ್ಲದೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪದ ದೇವಪ್ಪ ಮೋರೆ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದು ಸ್ವಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು ಹೆಗಲ ಮೆಲೆ ಹೊತ್ತೊಯ್ದು ಸ್ವಾಗತಿಸಿದರಲ್ಲದೇ ಭಾರತದ ತ್ರಿವರ್ಣ ಧ್ವಜವನ್ನು ಜರ್ಮನಿಯ ನೆಲದಲ್ಲಿ ಹಾರಿಸಿದ …

Read More »

ಅಂತರರಾಜ್ಯ ಡ್ರಗ್ಸ್ ಪೆಕ್ಟರ್‌ಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಯುವಕ ಅರೆಸ್ಟ್…

ಹುಬ್ಬಳ್ಳಿ: ಅಂತರರಾಜ್ಯ ಡ್ರಗ್ಸ್ ಪೆಕ್ಟರ್‌ಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಯುವಕನನ್ನು ತಮಿಳುನಾಡಿನ ಪೊಲೀಸರು ಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಕಾನಗೌಡರ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ನಗರದ ಜನತಾ ಬಜಾರ್‌ನಲ್ಲಿರುವ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಈತ ಕಳೆದ ಹಲವು ತಿಂಗಳಿಂದ ಅಂತರರಾಜ್ಯ ಡ್ರಗ್ ಪೆಡಲರ್‌ಗಳೊಂದಿಗೆ ನಂಟು ಹೊಂದಿದ್ದು, ಈ ಹಿನ್ನೆಲೆಯಲ್ಲಿ ತಮಿಳನಾಡಿನ …

Read More »

ಜಮೀನು ವಿವಾದದ ಹಿನ್ನೆಲೆ ರೈತ ಆತ್ಮಹತ್ಯೆ….

ಮೈಸೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದರಿಂದ ಅವಮಾನಿತರಾಗಿ, ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕುಡಿನೀರು ಮುದ್ದನಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನಂತೆ ಮೂವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ತಾಲೂಕಿನ ಕುಡಿನೀರು ಮುದ್ದನಹಳ್ಳಿ ಗ್ರಾಮದ ಗುರುರಾವ್ ಭಾಂಗೆ (60) ಆತ್ಮಹತ್ಯೆಗೆ ಶರಣಾದವರು. ಇವರಿಗೆ ಪತ್ನಿ, ಮಕ್ಕಳಿದ್ದಾರೆ. ಪತಿಯ ಆತ್ಮಹತ್ಯೆಗೆ ಗ್ರಾಮದ ಮಹೇಶ್ ಮತ್ತವರ ಪತ್ನಿ ಸಾಕಮ್ಮ …

Read More »

ಸ್ಥಳೀಯ ರಾಜಕಾರಣಿಗಳ ದುರಾಸೆಗೆ ಬಲಿಯಾಗತ್ತಿದೆಯಾ..?. ಖಡಕ್ ಪೊಲೀಸ್ ಆಯುಕ್ತ ಸಂತೋಷ ಬಾಬು ಖಾಯಂ ಭಾಗ್ಯ..?

ರಾಜಕಾರಣಿಗಳ ಪ್ರಭಾವದಿಂದ ಖಾಯಂ ಆಗ್ತಾರಾ, ಇಲ್ವಾ ಆಯುಕ್ತರು..? ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮಿಷನರ್ ಹಂಗಾಮಿ ಆಗಿ ಬಂದ ಖಡಕ್ ಆಫಿಸರ್ ಸಂತೋಷ ಬಾಬು ರಾಜಕಾಣಿಗಳಿಗೆ ಹೊಂದಾಣಿಕೆ ಆಗದ ಕಾರಣ ಖಾಯಂ ಆಗಿ ಮಾಡದ ರಾಜಕಾರಣಿಗಳು.ಹು -ಧಾ ಪೊಲೀಸ್ ಆಯುಕ್ತರು ಮಾಮೂಲಿ ಮನಸಿನಲ್ಲದ ಕಾರಣ ಅವರನ್ನು ಇನ್ನು ಖಾಯಂ ಮಾಡಿಲ್ಲ. ಇದೆ ಆಯುಕ್ತರು ಸ್ಥಳೀಯ ರಾಜಕಾರಣಿಗಳ ದುರಾಸೆಗೆ ಬಲಿಯಾಗತ್ತಿದೆಯಾ…?. ಖಡಕ್ ಪೊಲೀಸ್ ಆಯುಕ್ತ ಸಂತೋಷ ಬಾಬು ಖಾಯಂ ಭಾಗ್ಯ..?@CMofKarnataka @112Hubdwd @alokkumar6994 …

Read More »

ಗೃಹ ಜ್ಯೋತಿಗೆ ಉತ್ತಮ ಪ್ರತಿಕ್ರಿಯೆ- ಹೆಸ್ಕಾಂ ಇಲಾಖೆಯಲ್ಲಿ ದಾಖಲೆಯ ನೋಂದಣಿ

.ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಗೆ ಅರ್ಹವಾದ 35.90 ಲಕ್ಷ ಕುಟುಂಬಗಳ ಪೈಕಿ 29.09 ಲಕ್ಷ ಕುಟುಂಬಗಳು (ಶೇ 81.03) ನೋಂದಣಿ ಮಾಡಿಕೊಂಡಿವೆ. ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸರ್ಕಾರವು ಜೂನ್‌ನಲ್ಲಿ ಆರಂಭಿಸಿತ್ತು. ಜುಲೈ ತಿಂಗಳಿನಿಂದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಹೆಸ್ಕಾಂ …

Read More »