Breaking News

ಮಂಡ್ಯ

ನೂತನವಾಗಿ ಆಯ್ಕೆಯಾದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕನ್ನು ಗೌರವಿಸಿದ ಶಾಸಕ ನಾರಾಯಣಗೌಡ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅವರನ್ನು ಶಾಸಕ ನಾರಾಯಣಗೌಡ ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪಂಚಾಯತ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ಮಾಜಿಅಧ್ಯಕ್ಷ ಕೆ.ಜೆ.ತಮ್ಮಣ್ಣ, ಪುರಸಭೆಯ ಮಾಜಿಸದಸ್ಯ ವಿನೋದ್ ಕುಮಾರ್ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.

Read More »

ಆಕಸ್ಮಿಕ ಬೆಂಕಿಗೆ ಕೃಷಿ ಕೂಲಿ ಕಾರ್ಮಿಕ ಸಾವು

ಮಂಡ್ಯ ಜಿಲ್ಲೆ ಕಿಕ್ಕೇರಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ರಾಮ ಬಿನ್ ಲೇಟ್.ಪುಟ್ಟೇಗೌಡ(48) ರೈತಾಪಿ ಕೆಲಸ ಮಾಡಿಕೊಂಡಿದ್ದು ಮಂಗಳೂರು ಹೆಂಚಿನ ಮನೆಯ ಸ್ನಾನದ ಕೊಠಡಿಯಲ್ಲಿ ಒಣ ಹುಲ್ಲನ್ನು ಶೇಖರಣೆ ಮಾಡಿದ್ದು, ಇದನ್ನು ಜಾನುವಾರುಗಳಿಗೆ ಹಾಕಲು ಹೋದಾಗ ಮನೆಗೆ ಕರೆಂಟ್ ಡಿಸ್ ಕನೆಕ್ಟ್ ಮಾಡಿದ್ದರಿಂದ ದೀಪ ಹಚ್ಚಲು ಹೋದಾಗ ಆಕಸ್ಮಿಕವಾಗಿ ಬೆಂಕಿ ಒಣ ಹುಲ್ಲಿಗೆ ತಗುಲಿ ತಕ್ಷಣ ಬೆಂಕಿ ಆವರಿಸಿಕೊಂಡಿದೆ. ಈತ ಇದೇ ಕೊಠಡಿ ಯಿಂದ ಹೊರಬರಲು ದಿಕ್ಕು …

Read More »

ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು

ವಿಶ್ವ ಯೋಗ ದಿನದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಸಲಾಗಿದ್ದು,.ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದು ವಿಶ್ವಯೋಗ ದಿನದ ಅಂಗವಾಗಿ ವೇದಬ್ರಹ್ಮ ಯೋಗಪಟು ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಯಿತು.ಜೂನ್ 21ರಂದು ವಿಶ್ವ ಯೋಗದಿನದ ಅಂಗವಾಗಿ 5 …

Read More »

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ

ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ ನೀಡಿದರು. ಕಳೆದ ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಿಕ್ಕೇರಿ ಬಸ್ ನಿಲ್ದಾಣದ ಆವರಣದ ಕಾಂಕ್ರೀಟ್ ನೆಲಹಾಸಿನ ಅಭಿವೃದ್ಧಿಯನ್ನು ಒಂದು ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ನಾರಾಯಣಗೌಡ ತಿಳಿಸಿದರು. ಕಿಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಜಯರಾಮಣ್ಣ, ಸದಸ್ಯ ಏಜಾಜ್ ಪಾಶ, ಜಿ.ಪಂ …

Read More »

ಕುಡಿಯುವ ನೀರಿನ ವಿದ್ಯುತ್ ಸರಬರಾಜಿಗಾಗಿ ಇರುವ ಎಕ್ಸ್ ಪ್ರೆಸ್ ವಿದ್ಯುತ್ ಲೈನಿನಿಂದ ಪಡೆದಿರುವ ಎಲ್ಲಾ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿ

ಮಂಡ್ಯದ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿಯ ಹೇಮಾವತಿ ನದಿ ದಡದಲ್ಲಿ ಪಂಪ್ ಹೌಸ್ ಗೆ ಎಕ್ಸ್ ಪ್ರೆಸ್ ಲೈನಿನ ಮೂಲಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆಯಾದರೂ ಇದೇ ವಿದ್ಯುತ್ ಲೈನಿಗೆ ಎಂಟತ್ತು ಗ್ರಾಮಗಳ ವಿದ್ಯುತ್ ಸರಬರಾಜು ಲೈನುಗಳನ್ನೂ ಅಕ್ರಮವಾಗಿ ಸಂಪರ್ಕ ನೀಡಿರುವುದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.180 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಸಮರ್ಪಕವಾಗಿ ನದಿಯಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಎಕ್ಸ್ ಪ್ರೆಸ್ ವಿದ್ಯುತ್ ಲೈನಿಗೆ ಅಳವಡಿಸಿರುವ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿದ …

Read More »

ವಿವಾಹ ವಿಚ್ಚೇದನ ಕುರಿತ ಪ್ರಕರಣದಲ್ಲಿ ವಕೀಲರ ಮೇಲೆ ಹಲ್ಲೆ

ವಿವಾಹ ವಿಚ್ಚೇದನ ಕುರಿತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಎದುರಾಳಿ ಕಡೆಯವರು ವಕೀಲರ‌ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಪುರುಷೋತ್ತಮ ಹಾಗೂ ಬಿಂದುಶ್ರೀ ಎಂಬುವವರ ಪತಿ ಪತ್ನಿ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಿ ಆಚೆ ಬಂದ ಸಂದರ್ಭದಲ್ಲಿ, ಪುರುಷೋತ್ತಮ್ ಎಂಬುವವರ ಮೇಲೆ ಪತ್ನಿ ಬಿಂದುಶ್ರೀ ಸಂಬಂಧಿಕರು ಪುರುಷೋತ್ತಮ್ ರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಅದನ್ನು ತಡೆಯಲು ಹೋದ ಪುರುಷೋತ್ತಮ್ ಪರ ವಕೀಲರಾದ ಪ್ರಸಾದ್ ಮೇಲೂ …

Read More »

ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದ 3 ವರ್ಷದ ಗಂಡು ಚಿರತೆ

ರೈತರ ಮನೆಗಳು ಹಾಗೂ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ ಆಡು ಕುರಿಗಳು ಸೇರಿದಂತೆ ದನಕರುಗಳನ್ನು ತಿಂದು ಪರಾರಿಯಾಗಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾಗಿದೆ. ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಪುಣ್ಯಕ್ಷೇತ್ರ ಶ್ರೀ ಭೂವರಹಾನಾಥ ದೇವಸ್ಥಾನಕ್ಕೆ ಕೇವಲ ಎರಡು ಕಿ.ಮೀ ದೂರದಲ್ಲಿ ಈ ಘಟನೆಯು ನಡೆದಿದೆ. ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆಯನ್ನು ಮಲೈ ಮಹದೇಶ್ವರ ವನ್ಯಜೀವಿ …

Read More »

ರಾಷ್ಟ್ರೀಯ ಪಕ್ಷಿ ನವಿಲನ್ನು ಭೇಟೆಯಾಡುತ್ತಿದ್ದವರ ಬಂಧನ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಜಾಗಿನಕೆರೆ ಬಳಿ ಕ್ತಾಟರ್ ಬಿಲ್ಲನ್ನು ಬಳಸಿ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಭೇಟೆಯಾಡುತ್ತಿದ್ದ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದ ನಾಲ್ವರು ಯುವಕರ ಪೈಕಿ ಇಬ್ಬರನ್ನು ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂಧಿಗಳು ಮೃತ ನವಿಲು, ಟಿವಿಎಸ್ ಸ್ಕೂಟರ್ ಸಮೇತವಾಗಿ ಬಂಧಿಸಿದ್ದಾರೆ. ಶಿಕಾರಿಪುರದ ಎಲ್ಲೇಶ್(19) ಮತ್ತು ಪ್ರಭು(20) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಬಲೆ ಬೀಸಿದ್ದಾರೆ.

Read More »

ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ

ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್. ಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ 32ನಿರ್ದೇಶಕರ ನೂತನ ಕಾರ್ಯಕಾರಿ ಮಂಡಳಿಗೆ ಪಶುಸಂಗೋಪನೆ ಮತ್ತು ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ 25 ಸದಸ್ಯರು ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಡಾ.ನಾರಾಯಣಗೌಡ ಅವರು ನೂತನ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಿದರು. ಜೂನ್ 13ರಂದು ನಡೆಯುವ ಚುನಾವಣೆಯಲ್ಲಿ ಉಳಿದ ಏಳು ಸ್ಥಾನಗಳಿಗೆ ಆಯ್ಕೆಯು ನಡೆಯಲಿದೆ.ಕೃಷ್ಣರಾಜಪೇಟೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಸಂಘದ ಅಧ್ಯಕ್ಷ ಎನ್.ಜಯರಾಮು ಅವರ …

Read More »

ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಬಿಡಲ್ಲ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪುರಸಭೆಯ ಆಡಳಿತ ಜೆಡಿಎಸ್ ಪಕ್ಷ ಹಿಡಿಯೋದು ಖಚಿತ, ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಬಿಡಲ್ಲ ಎಂದು ಜೆಡಿಎಸ್ ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕೃಷ್ಣರಾಜಪೇಟೆ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸುವ ಕನಸು ಹೊತ್ತಿದ್ದೇವೆ. ಶಾಸಕರಾದ ನಾರಾಯಣಗೌಡರ ನೇತೃತ್ವದಲ್ಲಿ ಪಟ್ಟಣದ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ದುರಾಡಳಿತ ಅಂತ್ಯಗೊಳಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ನಾವು ಕೆ.ಆರ್.ಪೇಟೆ ಪಟ್ಟಣವನ್ನು ಸಿಂಗಾಪುರ್ ಮಾಡಲು ಸಾಧ್ಯವಿಲ್ಲದಿದ್ದರೂ …

Read More »