BigTv News
December 12, 2024
Breaking News, ಬೆಳಗಾವಿ
ಬೆಳಗಾವಿ: ಪಂಚಮಸಾಲಿ ಹೋರಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿರುವ ಕ್ರಮ ಖಂಡಿಸಿ ರಾಜ್ಯಾದ್ಯಂತ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅದರಲ್ಲಿಯೂ ಬೆಳಗಾವಿಯಲ್ಲಿ ಪ್ರತಿಭಟನೆ ಮತ್ತೆ ತೀವ್ರ ಸ್ವರೂಪ ಪಡೆಯುತ್ತಿದೆ. ಬೆಳಗಾವಿಯ ಹಿರೆಬಾಗೇವಾಡಿ, ಅಥಣಿ ಸೇರಿದಂತೆ ಹಲವೆಡೆ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪೊಲಿಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು, ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ …
Read More »
BigTv News
December 12, 2024
Breaking News, ಬೆಳಗಾವಿ
ಬೆಳಗಾವಿ: ಈಗಾಗಲೇ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದರ ಕುರಿತು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳ ಜೊತೆ ಎರಡು ಬಾರಿ ಸಭೆ ಮಾಡಿದ್ದೇನೆ. ಅವರಿಗೆ ಪ್ರತಿಭಟನೆ ಮಾಡಲು ಅವಕಾಶ ಇದೆ. ಆದರೆ, 2ಎ ಮೀಸಲಾತಿ ಒತ್ತಾಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಪಾಲ್ಗೊಂಡು ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಜಯಮೃತ್ಯುಂಜಯ ಸ್ವಾಮಿಗಳ ಜೊತೆ 2 …
Read More »
BigTv News
December 12, 2024
Breaking News, ಬೆಳಗಾವಿ
ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕ ಪಿ.ಜಿ. ವೇಣುಗೋಪಾಲ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಪಂ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ಹೊಸ ಕೆರೆ, ಭೇಟಿ ನೀಡಿ ಕೆಲಸ ಮಾಡುತ್ತಿದ್ದ 264 ಕೂಲಿಕಾರರೊಂದಿಗೆ ಮಾತನಾಡುತ್ತಾ ಮೇಟ್ ಗಳಿಂದ ಕೂಲಿಕಾರರ ಕೆಲಸದ ಪ್ರಮಾಣ ಮತ್ತು ಎನ್.ಎಮ್.ಎಮ್.ಎಸ್ ಮಾಹಿತಿ ಪಡೆದುಕೊಂಡು …
Read More »
BigTv News
December 12, 2024
Breaking News, ಬೆಳಗಾವಿ
ಮೂಡಲಗಿ: ‘ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2018-19ನೇ ಸಾಲಿನಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2019-20 ರಿಂದ 2023-24ರ ವರೆಗೆ 1708 ಕೃಷಿ ಸ್ಟಾರ್ಟ್ ಅಪ್‌ಗಳಿಗೆ ₹122.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ …
Read More »
BigTv News
December 12, 2024
Breaking News, ಬೆಳಗಾವಿ
ಹಿರೇಬಾಗೇವಾಡಿ: ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ ಸರ್ಕಾರದ ಕ್ರಮ ಖಂಡಿಸಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಕೂಡ ಅರ್ಧ ತಾಸು ರಸ್ತೆ ತಡೆ ನಡೆಸಲಾಯಿತು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ, ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಧರಣಿ ಕುಳಿತರು. ಸ್ವಾಮೀಜಿ ಮೇಲೆ ಲಾಠಿ ಬೀಸಿದ ಸರ್ಕಾರಕ್ಕೆ ಧಿಕ್ಕಾರ, ಲಿಂಗಾಯತ ವಿರೋಧಿ ಸಿದ್ದರಾಮಯ್ಯಗೆ ಧಿಕ್ಕಾರ, ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ, ಲಾಠಿ ಬೀಸಿದ ಪೊಲೀಸರಿಗೆ …
Read More »
BigTv News
December 12, 2024
Breaking News, ಬೆಳಗಾವಿ
ಬೆಳಗಾವಿ : ಬೆಳಗಾವಿಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಘಟನೆಯ ಸಂಪೂರ್ಣ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು. ಬೆಳಗಾವಿಯ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಕರಣದ ಕುರಿತು ಮಾಹಿತಿ ನೀಡಿದರು. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿರುವ ಕುರಿತಂತೆ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಮಾಹಿತಿ ನೀಡಿದ್ದು, ಅವರಿಂದ ವಿಡಿಯೋ …
Read More »
Shaikh BigTv
November 30, 2024
Breaking News, Crime, ಕರ್ನಾಟಕ, ಬೆಳಗಾವಿ
ಹೆಸರು ಮಾಡಲು ಧರ್ಮ ದಂಗಲ್ ಗೆ ನಾಂದಿ ಹಾಡಿದ್ರಾ ಆರಕ್ಷಕರು!!! ಮನುಜಮತ ಒಂದೇ ಪಥ ತತ್ವ ಸಿದ್ದಾಂತ ಮರೆತ… ಜನಸ್ನೇಹಿ ಠಾಣೆ ಮಾಡಿ ಅಂದ್ರೆ ಹೋಮ ಹವನ ಮಾಡಿದ ಖಾಕಿಪಡೆ!! ಸರ್ಕಾರಿ ಕಚೇರಿಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸರ್ವಜನಾಂಗದ, ಸರ್ವಜನರಿಗೆ ಪೂರಕವಾಗಿರಬೇಕು. ಆದರೆ ಪೊಲೀಸ್ ಅಧಿಕಾರಿಗಳ ನಡೆಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿರುವುದಕ್ಕೆ ದೈವದ ಮೊರೆ ಹೋಗಿ, ನವಗ್ರಹ ಶಾಂತಿ ಹಾಗೂ …
Read More »
BigTv News
November 16, 2024
Breaking News, ಬೆಳಗಾವಿ
ಬೆಳಗಾವಿ: 50 ಕೋಟಿ ಅಲ್ಲ, 100 ಕೋಟಿ ರೂ. ಕೊಟ್ಟರೂ ಯಾರೂ ಬಿಜೆಪಿ ಆಮಿಷಕ್ಕೆ ಒಳಗಾಗುವುದಿಲ್ಲ. ಕಾಂಗ್ರೆಸ್ ಶಾಸಕರು ಸ್ವಾಭಿಮಾನಿಗಳು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡನಲ್ಲಿ ಮಾದ್ಯಮಗಳ ಜೊತೆ ಮಾತನಾಡಿರುವ ಅವರು, ಮುಖ್ಯಮಂತ್ರಿಯವರು ಹೀಗೆ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷ್ಯ ಇರಬಹುದು. ಅದಕ್ಕೆ ಅವರು ಹೇಳಿರಬಹುದು, ಏನೇ ಮಾಡಿದರೂ ಬಿಜೆಪಿಯವರ ಕನಸು ನನಸಾಗದು ಎಂದು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ತಲಾ ರೂ.50 ಕೋಟಿ …
Read More »
BigTv News
November 15, 2024
Breaking News, ಬೆಳಗಾವಿ
ಬೆಳಗಾವಿ: ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಅವರು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 600 ಎಕರೆ, ಧಾರವಾಡ ಜಿಲ್ಲೆಯಲ್ಲಿ 288 ಎಕರೆ ಭೂಮಿ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬೆಳಗಾವಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದೆ, ಅಗತ್ಯವಿರುವ 80% ಭೂಮಿಯನ್ನು ಡಿಸೆಂಬರ್ 2024 ರೊಳಗೆ ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆಯಿದೆ …
Read More »
BigTv News
November 11, 2024
Breaking News, ಬೆಳಗಾವಿ
ಖಾನಾಪುರ: ಖಾನಾಪುರ ತಾಲ್ಲೂಕಿನ ಐತಿಹಾಸಿಕ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಇಂದು ನಸುಕಿನಲ್ಲಿ ಅಪರಿಚಿತರು ಗುಂಡು ಹಾರಿಸಿದ್ದು ಯುವಕ ಮೃತಪಟ್ಟಿದ್ದಾನೆ. ಹಲಸಿ ನಿವಾಸಿ ಅಲ್ತಾಫ್ ಮಕಾನದಾರ (30) ಸಾವಿಗೀಡಾದವರು. ಕಾಡಂಚಿಗೆ ಇರುವ ರಸ್ತೆ ಪಕ್ಕದ ಮರಳು ತೆಗೆಯುವ ಸ್ಥಳದಲ್ಲಿ ಘಟನೆ ನಡೆದಿದೆ. ಗುಂಡು ನೇರವಾಗಿ ಯುವಕನ ಎದೆಭಾಗದ ಕೆಳಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಬೆಳಿಗ್ಗೆ ಯುವಕನ ಶವ ನೋಡಿದ ಮೇಲೆಯೇ …
Read More »