Breaking News

ವಾರದ ರಜೆ ಆದೇಶ ಉಲ್ಲಂಘನೆ! ಪೊಲೀಸ್ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿದಾಗಲೇ ಕಾನೂನು ಜೀವಂತ.!

ಆದೇಶ ಉಲ್ಲಂಘನೆಗೆ ಸಸ್ಪೆಂಡ್ ಬೇಕು: ಇಲ್ಲದಿದ್ದರೆ ಸರ್ಕಾರದ ಮಾತಿಗೆ ಕಿಮ್ಮತ್ತೇ ಇಲ್ಲ!

2026ನೇ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಭತ್ಯೆ ಮಂಜೂರು ಮಾಡುವ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಮಹತ್ವದ ತಿರುಗೇಟು ದೊರೆತಿದೆ. ಮೇಲಾಧಿಕಾರಿಗಳ ಸ್ಪಷ್ಟ ಆದೇಶಗಳ ಪ್ರಕಾರ, “ಭತ್ಯೆ ಅಲ್ಲ – ರಜೆ ಕೊಡಬೇಕು” ಎಂಬ ನಿಲುವನ್ನು ಮತ್ತೆ ಒತ್ತಿ ಹೇಳಲಾಗಿದೆ..

ಪೊಲೀಸ್ ಪ್ರಧಾನ ಕಚೇರಿ ಮತ್ತು ಆಯುಕ್ತರ ಕಚೇರಿ ಈಗಾಗಲೇ ವಾರದ ರಜೆಯನ್ನು ಕಡ್ಡಾಯಗೊಳಿಸಿ ಹಲವು ಬಾರಿ ಸೂಚನೆ ನೀಡಿದ್ದರೂ, ನೆಲಮಟ್ಟದಲ್ಲಿ ಅದನ್ನು ಅನುಷ್ಠಾನಗೊಳಿಸುವಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬರುತ್ತಿದೆ..

ಇದರ ನಡುವೆ, ಭತ್ಯೆ ಮಂಜೂರು ಮಾಡುವ ಪ್ರಸ್ತಾವನೆ ಸಲ್ಲಿಸಿರುವುದು ನಿಯಮ ಉಲ್ಲಂಘನೆಯಷ್ಟೇ ಅಲ್ಲ, ಮುಂದಿನ ಲೆಕ್ಕಪರಿಶೋಧನೆ ವೇಳೆ ಆಕ್ಷೇಪಣೆಗೂ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ..

ಸರ್ಕಾರ ಆದೇಶ ಕೊಡುತ್ತದೆ… ಆದರೆ ಜಾರಿಗೆ ತರುವವರು ಯಾರು..? ಈ ಪ್ರಶ್ನೆ ಈಗ ಪೊಲೀಸ್ ಇಲಾಖೆಯೊಳಗೆ ಗಂಭೀರ ಚರ್ಚೆಗೆ ಕಾರಣವಾಗಿದೆ..

ಹುಬ್ಬಳ್ಳಿ-ಧಾರವಾಡ ಮಹಾನಗರ ಕಮಿಷನರೇಟ್ ಸೇರಿದಂತೆ ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಮುಂದುವರಿದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ..

ಸರ್ಕಾರ ವಾರದ ರಜೆಯನ್ನು ಕಡ್ಡಾಯಗೊಳಿಸಿದರೂ, ಕೆಲ ಠಾಣಾ ಮಟ್ಟದ ಅಧಿಕಾರಿಗಳು ಅದನ್ನು ಜಾರಿಗೆ ತರುವ ಮನಸ್ಥಿತಿಯಲ್ಲಿಲ್ಲ ಎಂಬ ಮಾತುಗಳು ಸಿಬ್ಬಂದಿಗಳಲ್ಲಿ ಅಸಮಾಧಾನ ಮೂಡಿಸಿವೆ…

ನ್ಯಾಯಸಮ್ಮತ ಹಕ್ಕು – ವಾರದ ರಜೆಪೊಲೀಸ್ ಸಿಬ್ಬಂದಿ ದಿನರಾತ್ರಿ ಕರ್ತವ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ, ವಾರದ ರಜೆ ಅವರ ಮೂಲಭೂತ ಹಕ್ಕಾಗಿದೆ..

ಅದನ್ನು ನಿರಾಕರಿಸಿ ಭತ್ಯೆ ನೀಡುವ ಕ್ರಮವು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗಬಹುದು ಎಂಬ ಒತ್ತಾಯ ಹೆಚ್ಚುತ್ತಿದೆ. ಇಲ್ಲವಾದರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡದಂತೆ” ಎಂಬ ಸ್ಥಿತಿ ಮುಂದುವರಿಯಲಿದೆ.

ಸರ್ಕಾರದ ಆದೇಶ ಕಾಗದದಲ್ಲೇ ಉಳಿಯಬೇಕಾ..? ಅಥವಾ ನೆಲಮಟ್ಟದಲ್ಲಿ ಜಾರಿಯಾಗಬೇಕಾ..? ಇದೀಗ ಈ ಪ್ರಶ್ನೆಗೆ ಉತ್ತರ ಕೊಡಬೇಕಿರುವುದು ಸಂಬಂಧಪಟ್ಟ ಮೇಲಾಧಿಕಾರಿಗಳೇ.

Share News

About Shaikh BigTv

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *