ಹುಬ್ಬಳ್ಳಿ : ಹಣ ಪಡೆಯಲು ಪೇಟಿಎಂ ಕಸ್ಟಮರ್ ಕೇರಗೆ ಕರೆಮಾಡಿದ ವ್ಯಕ್ತಿ ವಂಚನೆ ಒಳಗಾಗಿದ್ದಾನೆ.
ಶಾಂತಿನಗರದ ಎಲ್.ಎಸ್.ಗೋನಸಾಲ್ವಿಸ್ ಎಂಬುವವರಿಗೆ ಅಪರಿಚಿತ ವ್ಯಕ್ತಿ 2 ಲಕ್ಷ ರೂ ವಂಚಿಸಿರುವ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ .
ಗೋನಾಸಾಲ್ವಿನ್ ಎಂಬವರು ಪೇಟಿಎಂ ನಿಂದ ಯಾರಿಗೆ ಹಣ ಸಂದಾಯ ಮಾಡಲು ಹೋಗಿ ತಮ್ಮಖಾತೆಯಿಂದ 1661 ರೂ ಕಳೆದುಕೊಂಡುದ್ದರು . ಇದನ್ನು ಪಡೆಯಲು ಬ್ಯಾಂಕ್ ಸಿಬ್ಬಂದಿ ಸಲಹೆ ಪಡೆದು ಕಸ್ಟಮರ್ ಕೇರೆಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಇವರಿಗೆ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದಾನೆ . ಅದರಲ್ಲಿ ಬ್ಯಾಂಕ್ ಖಾತೆಯ ವಿವರ ಹಾಕಲು ತಿಳಿಸಿದ್ದಾನೆ . ನಂತರ ಇವರ ಖಾತೆಯಿಂದ ಮೊದಲಿಗೆ 25 ಸಾವಿರದಂತೆ ಎಂಟು ಬಾರಿ ತೆಗೆದುಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

