ಧಾರವಾಡ ಇಂದು ಅಮೆರಿಕಾದ ಅನಿವಾಸಿ ಭಾರತೀಯರಾದ . ಶ್ರೀ ರವಿ ಭೋಪಳಾಪುರ ರವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರ ನೇತೃತ್ವದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿ, ಸುಸಜ್ಜಿತ ವ್ಯವಸ್ಥೆಯುಳ್ಳ 2 ಶವ ವಾಹನಗಳನ್ನು (ಹುಬ್ಬಳ್ಳಿ -01, ಧಾರವಾಡ-01) ಪಾಲಿಕೆಗೆ ಇಂದು ಹಸ್ತಾಂತರಗೊಳಿಸಿದರು.
ಅವಳಿನಗರದಲ್ಲಿ ಈ ಹಿಂದೆ ಪಾಲಿಕೆಯ ವತಿಯಿಂದ ಯಾವುದೇ ತರಹದ ಶವ ವಾಹನಗಳು ಲಭ್ಯವಿರದೆ ಇರುವ ಕಾರಣದಿಂದಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರ ಸತತ ಪ್ರಯತ್ನ, ಹಾಗೂ ಕೋರಿಕೆಯ ಮೇರೆಗೆ ಶ್ರೀ ರವಿ ಭೋಪಳಾಪುರ ರವರು, ಅವಳಿನಗರದ ನಾಗರಿಕರಿಗೆ ಅನುಕೂಲವಾಗುವ ಎಂಬ ದೃಷ್ಟಿಯಲ್ಲಿ, ಅತ್ಯಂತ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಅವಳಿನಗರದಲ್ಲಿ ನೂತನ ವ್ಯವಸ್ಥಿತ ಶವವಾಹನಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸಲು ಸಜ್ಜಾಗಿವೆ.
ಈ ಸಂದರ್ಭದಲ್ಲಿ ಶ್ರೀ ರವಿ ಭೋಪಳಾಪುರ ರವರ ಸ್ನೇಹಿತರಾದ ಶ್ರೀ ಸಂತೋಷ ಶೆಟ್ಟಿ ರವರು, ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ರವರು, ಹಾಗೂ ಶ್ರೀ ಜಗದೀಶ ಹಿರೇಮಠ ರವರು, ಪಾಲಿಕೆಯ ಉಪಮಹಾಪೌರರಾದ ಶ್ರೀಮತಿ ಉಮಾ ಮುಕುಂದ ರವರು, ಪಾಲಿಕೆಯ ಸರ್ವ ಸದಸ್ಯರು, ಪಾಲಿಕೆಯ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




