Breaking News

ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು……..

ಬೆಂಗಳೂರು: ಕರ್ನಾಟಕದ ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಸರ್ಕಾರ ಈ ಕುರಿತು ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸೋಮವಾರ ಹಾವೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು” ಎಂದು ಹೇಳಿದ್ದಾರೆ. 2024-25ನೇ ಸಾಲಿನ ಬಜೆಟ್‌ನಲ್ಲಿಯೇ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸುವ ಕುರಿತು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆ ಇದೆ. ಬಜೆಟ್ ಪೂರ್ವ ಸಭೆಯಲ್ಲಿಯೂ ಈ ಕುರಿತು ಒತ್ತಾಯಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಮಾನಿಸಿದೆ.

Share News

About BigTv News

Check Also

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..! ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ …

Leave a Reply

Your email address will not be published. Required fields are marked *