ಬೆಂಗಳೂರು ಗ್ರಾಮಾಂತರ: ಬೆಳ್ಳಂ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಕಟ್ಟಡ ಹೊತ್ತಿ ಉರಿದಿದೆ.ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಶಂಕೆ ವ್ಯಕ್ತವಾಗಿದ್ದು, ಮಂಜುಶ್ರೀ ಗ್ಯಾಸ್ ಬುಕ್ಕಿಂಗ್ ಮತ್ತು ಕೇಬಲ್ ಬುಕ್ಕಿಂಗ್ ಕಛೇರಿ ಹೊತ್ತಿ ಉರಿದಿವೆ. ಬೆಂಕಿಯ ರುದ್ರ ನರ್ತನಕ್ಕೆ ಸಂಪೂರ್ಣ ಕಟ್ಟಡ ಹೊತ್ತಿ ಊರಿದಿದ್ದು, ಕಛೇರಿಯಲ್ಲಿದ್ದ ಪೀಠೋಪಕರಣಗಳೆಲ್ಲ ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡದಿಂದ ಕೆಲ ಕಾಲ ಸುತ್ತಮುತ್ತಲಿನ ಜನರಲ್ಲಿ ಆತಂಕ …
Read More »ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ
ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡು ಆದೇಶ ಹೊರಡಿಸಿದೆ. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದೆ.
Read More »ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದ ಇಬ್ರಾಹಿಂ
ಕಲಬುರಗಿ: ಶಿವಮೊಗ್ಗದಲ್ಲಿ ಸತ್ತ ಹರ್ಷನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಕೊಟ್ಟಿದೆ. ಆದರೆ, ಉಕ್ರೇನ್ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನ್ ಕೊಟ್ಟಿಯೋ ಬೊಮ್ಮಾ? ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಂಎಲ್ಎ ಹೇಳ್ತಾನೆ, ಮೃತದೇಹ ತರಲು ವಿಮಾನದಲ್ಲಿ ಇಲ್ಲ ಅಂತ. ಏನ್ ಬೇಜವಾಬ್ದಾರಿ ಮಾತನಾಡ್ತಾರೆ ಇವರು? ನರಗುಂದದಲ್ಲಿ ಒಬ್ಬ ಮುಸ್ಲಿಂ ಹುಡುಗನನ್ನು ಭಜರಂಗದಳದವರು ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರಕಾರ …
Read More »ಯಡಿಯೂರಪ್ಪ ಅವರ ದೊಡ್ಡ ಮನಸ್ಸಿನ ನಾಯಕ ಹುಡುಕಿದರೂ ಸಿಗುವುದಿಲ್ಲ : ಬೊಮ್ಮಾಯಿ
ಶಿಕಾರಿಪುರ : ನಾನು ರಾಜಕಾರಣದಲ್ಲಿ ಇಷ್ಟರಮಟ್ಟಿಗೆ ಬೆಳೆದಿದ್ದರೆ ಅದಕ್ಕೆ ಆಶೀರ್ವಾದ ಮಾಡಿದ್ದು ಯಡಿಯೂರಪ್ಪ ಅವರು, ಇಂಥ ದೊಡ್ಡ ಮನಸ್ಸಿನ ನಾಯಕ ಹುಡುಕಿದರೂ ಸಿಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಅವರನ್ನು ಹಾಡಿ ಹೊಗಳಿದ್ದಾರೆ. ಶಿಕಾರಿಪುರದಲ್ಲಿ ನಡೆದ ರೈತಾಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರು ಬಡವರು ಬಗ್ಗೆ ದೀನದಲಿತರ ಬಗ್ಗೆ ಕಾಳಜಿ ಇರುವವರಾಗಿದ್ದಾರೆ. ನನ್ನನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅಧಿಕಾರವನ್ನು ನೀಡಿದ್ದಾರೆ. ನನ್ನನ್ನು ಜಲಸಂಪನ್ಮೂಲ …
Read More »ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ಕಿಡಿಕಾರಿದೆ. ಸಿದ್ದರಾಮಯ್ಯ ಅಡ್ಡಕಸುಬಿ ಬಜೆಟ್ ಎಂದು ಟ್ವೀಟ್ ಮೂಲಕ ಬಜೆಟ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ಟೀಕೆಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ. ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಆಯವ್ಯಯವನ್ನೇ ಅಡ್ಡಕಸುಬಿ ಬಜೆಟ್ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ. ಇದು ರಾಜ್ಯದ ಜನತೆಗೆ ಮಾಡಿದ …
Read More »ಶ್ರೀಮದ್ ರಂಭಾಪುರಿ ಸ್ವಾಮೀಜಿ ಅವರಿಂದ ಗ್ರೋಯಿಂಗ್ ಬಡ್ಸ್ ಕಿರಿಯ ಶಾಲೆಯ ಕಟ್ಟಡ ಭೂಮಿ ಪೂಜೆ
ಹುಬ್ಬಳ್ಳಿ: ಮುತ್ತಮ್ಮ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಗ್ರೋಯಿಂಗ್ ಬಡ್ಸ್ ಕಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಭೂಮಿಪೂಜಾ ಕಾರ್ಯಕ್ರಮವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಸ್ವಾಮೀಜಿ ಅವರು ನೆರೆವೇರಿಸಿದರು. ಹುಬ್ಬಳ್ಳಿ ನಗರದ ಕುಸುಗಲ್ ಗ್ರಾಮ ಬಳಿಯ ಮಹಾದುರ್ಗಾ ಕಾಲೋನಿಯಲ್ಲಿ ಜರುಗಿತು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಭಗವತ್ಪಾದರು, ಸಾನಿಧ್ಯ ಸುಳ್ಳ ಗ್ರಾಮದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಾಜಿ …
Read More »ಕದನ ವಿರಾಮ ಘೋಷಿಸಿದ ರಷ್ಯಾ
ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ದ ಆರಂಭಿಸಿರುವ ರಷ್ಯಾ ಇಂದು ಕದನ ವಿರಾಮ ಘೋಷಿಸಿದೆ.ಸಂಪೂರ್ಣ ಉಕ್ರೇನ್ ನಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, 6 ಗಂಟೆಯಿಂದ ಇದು ಜಾರಿಗೆ ಬಂದಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುವಾಗುವಂತೆ ಈ ಕದನ ವಿರಾಮ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.ರಷ್ಯಾದ ಈ ನಡೆ ವಿಶ್ವವನ್ನು ಅಚ್ಚರಿಗೊಳಿಸಿದ್ದು, ಏಕಾಏಕಿ ಕದನ ವಿರಾಮ ಘೋಷಿಸಿರುವುದರಿಂದ ಈಗಾಗಲೇ ಉಕ್ರೇನ್ ನ್ನು ರಷ್ಯಾ ತನ್ನ ಕೈ ವಶ …
Read More »ನಕಲಿ ವೇತನ ಪ್ರಮಾಣ ಸೃಷ್ಟಿ ಆರೋಪ
ಹುಬ್ಬಳ್ಳಿ: ಬ್ಯಾಂಕ್ ವ್ಯವಸ್ಥಾಪಕರೊಬ್ಬರು ನಕಲಿ ವೇತನ ಪ್ರಮಾಣ ಪತ್ರ ಸೃಷ್ಟಿಸಿ ಸಾಲ ಮಂಜೂರು ಮಾಡಲು ಸಹಕರಿಸಿದ ಆರೋಪ ಕೇಳಿ ಬಂದಿದ್ದು, ಒಟ್ಟು 32 ಲಕ್ಷ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. 20019 ರಲ್ಲಿ ಮಧುರಾ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವ್ಯವಸ್ಥಾಪಕಾರಿಗಿದ್ದ ಸಂಧ್ಯಾ ಎಂಬುವರು ನಕಲಿ ವೇತನ ಪ್ರಮಾಣ ಪತ್ರ ಸೃಷ್ಟಿಸಿ ತಲಾ 5 ಲಕ್ಷ ರೂ. ನಂತೆ ಒಟ್ಟು 7 ಜನರಿಗೆ 35 ಲಕ್ಷ ರೂ. ಸಾಲ …
Read More »ಬ್ಯಾಂಕ್ ಹೆಸರಿನಲ್ಲಿ ಸುಳ್ಳು ಸಂದೇಶ : 73 ಸಾವಿರ ರೂ.ವಂಚನೆ
ಹುಬ್ಬಳ್ಳಿ: ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಅಪರಿಚಿತನೊಬ್ಬ ಸಂದೇಶ ಕಳಿಸಿ, ಗಫಾರಶೇಖ ಖಾದರವಲಿ ಎಂಬುವರ ಖಾತೆಯ ವಿವರ ಪಡೆದು, ಸುಮಾರು 73 ಸಾವಿರ ರೂ. ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಇವರಿಗೆ ಸಂದೇಶ ಕಳುಹಿಸಿದ್ದಾನೆ. ಬ್ಯಾಂಕ್ನ ಸಿಬ್ಬಂದಿ ಇರಬಹುದು ಎಂದು ಖಾದರವಲಿ ಅವರು ಸಂದೇಶದಲ್ಲಿರುವ ಲಿಂಕ್ ಓಪನ್ ಮಾಡಿದ್ದಾರೆ. ನಂತರ ವೆಬ್ಸೈಟ್ನಲ್ಲಿ ಹೆಸರು, ಪಾಸವರ್ಡ್, ಮೊಬೈಲ್ ನಂಬರ್ ನಮೂದಿಸಿ …
Read More »ಶಿವಮೊಗ್ಗದಲ್ಲಿ ಹಲ್ಲೆ ಪ್ರಕರಣ : ಇಬ್ಬರು ಬಂಧನ
ಶಿವಮೊಗ್ಗ: ನಗರದಲ್ಲಿ ನಡೆದಂತ ಹರ್ಷ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ವರದಿಯಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕಃ-3-3-2022 ರಂದು ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿಯೊಬ್ಬರು ತಮ್ಮ ನಾಯಿಯನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





