Breaking News

admin

ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಒಡೆಯುವುದು ಸರ್ಕಾರದ ಹೊಟ್ಟೆ: ದಯಾನಂದ ಸ್ವಾಮೀಜಿ

ಹುಬ್ಬಳ್ಳಿ: ಶಾಲೆ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳ ಪೌಷ್ಟಿಕಾಂಶ ನೀಡುವ ಹಿನ್ನಲೆಯಲ್ಲಿ ಮೊಟ್ಟೆ ವಿತರಣೆ ಮಾಡುತ್ತಿರುವುದು ಖಂಡನೀಯವಾಗಿದೆ. ಅಲ್ಲದೆ ಸಸ್ಯಹಾರಿ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿ ತೆರೆಯಬೇಕು ಎಂದು ಆಗ್ರಹಿಸಿ ಇದೇ 20ರಂದು ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಮಕ್ಕಳಿಗೆ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸಸ್ಯಹಾರಿ ಸಮುದಾಯವನ್ನು ಶಾಖಾಹಾರಿ ಹಾಗೂ ಮಾಂಸಹಾರಿಗಳನ್ನಾಗಿ …

Read More »

ಸೇನಾ ಹೆಲಿಕಾಪ್ಟರ್​​ ಪತನ: ಘಟನಾ ಸ್ಥಳದಲ್ಲಿ 5 ಮೃತದೇಹ ಪತ್ತೆ: ರಾವತ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಚೆನ್ನೈ(ತಮಿಳುನಾಡು): ಸೇನಾಪಡೆಗಳ ಮುಖ್ಯಸ್ಥ ಬಿಪಿನ್​​ ರಾವತ್​​ ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಇದರಲ್ಲಿ ಒಟ್ಟು 14 ಜನರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಘಟನಾ ಸ್ಥಳದಲ್ಲಿ ಐವರ ಮೃತದೇಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್​ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಸೇನಾ ಮುಖ್ಯಸ್ಥ ಬಿಪಿನ್​ …

Read More »

ನಡುರಸ್ತೆಯಲ್ಲೇ ಖಾಕಿ ಖಾಕಿ ನಡುವೇ ಕಪಾಳ ಮೋಕ್ಷ-ಬೆಳಗಾವಿಯಲ್ಲಿ ನೆಡೆದದ್ದು !

ಬೆಳಗಾವಿ: ಸಂಚಾರ ಪೊಲೀಸ್ ಕಾನ್ಸ್‌ಟೇಬಲ್‌ ಹಾಗೂ ಸರ್ಕಾರಿ ಬಸ್ ನಿರ್ವಾಹಕ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಬಸ್ ನಿಲ್ಲಿಸುವ ವಿಚಾರಕ್ಕೆ ಇಬ್ಬರು ಸಾರ್ವಜನಿಕವಾಗಿ ಬಡಿದಾಡಿಕೊಂಡಿದ್ದಾರೆ. ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿಗೆ ಬಸ್ ತೆರಳುತ್ತಿತ್ತು. ಚನ್ನಮ್ಮ ವೃತ್ತದ ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸಲಾಗುತ್ತಿತ್ತು. ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದ‌ನ್ನು‌ ಟ್ರಾಫಿಕ್ ಹೆಡ್‌ ಕಾನ್ಸ್‌ಟೇಬಲ್‌ ಪ್ರಶ್ನಿಸಿದ್ದಾರೆ. ಆಗ ಚಾಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ …

Read More »

ವೈಯಕ್ತಿಕ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ತುಮಕೂರು : ವೈಯಕ್ತಿಕ ದ್ವೇಷದ ಹಿನ್ನೆಲೆ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ ಕೆ ಹಳ್ಳಿ ಕ್ರಾಸ್ ಬಳಿ ನಡೆದಿದೆ. ಪ್ರಸನ್ನ ಕುಮಾರ್(46) ಹತ್ಯೆಗೀಡಾದ ಕಾರ್ಯಕರ್ತ. ಇವರು ಪಾವಗಡ ತಾಲೂಕು ಬಿಜೆಪಿ ರೈತ ಮೋರ್ಚಾದ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಬೈಕ್​​ನಲ್ಲಿ ಪಾವಗಡದಿಂದ ತಮ್ಮ ಸ್ವಗ್ರಾಮ ಅಪ್ಪಾಜಿಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ …

Read More »

ಮಾಸ್ಕ್‌ ಹಾಕೊಳ್ಳಿ ಎಂದಿದ್ದಕ್ಕೆ ಕರ್ತವ್ಯ ನಿರತ ಪೋಲಿಸ್‌ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರು : ಮಾಸ್ಕ್ ಧರಿಸಿ ಎಂದು ಬುದ್ದಿವಾದ ಹೇಳಿದಕ್ಕೆ ಅಸಮಾಧಾನಗೊಂಡು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಅಲ್ಲದೇ, ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಕಾಂಗ್ರೇಸ್‌ ಅಭ್ಯರ್ಥಿ ಸಲೀಂ ಅಹ್ಮದ ಪರ ಶಾಸಕಿ ಕುಸುಮಾ ಶಿವಳ್ಳಿ ಪ್ರಚಾರ

ಹುಬ್ಬಳ್ಳಿ: ಕುಂದಗೊಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ, ಗದಗ,ಹಾವೇರಿ ಜಿಲ್ಲೆ ಒಳಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಲೀಂ ಅಹ್ಮದ್ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಸಿ ಶಿವಳ್ಳಿಯವರು ಗುಡೇನಕಟ್ಟಿಗ್ರಾಮದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಶ್ರೀ ಅರವಿಂದ ಕಟಗಿ,ಮಾಜಿ ಜಿಪಂ ಸದಸ್ಯರಾದ ಶ್ರೀ ಉಮೇಶ ಹೇಬಸೂರ, ಕೆಪಿಸಿಸಿ ಕೋ …

Read More »

ಸಾಂಕ್ರಾಮಿಕ ರೋಗದ ಬಗ್ಗೆ ಪ್ರಬಂಧ ಸ್ಪರ್ಧೆ ವೈದ್ಯರಿಂದ ಜಾಗೃತಿ ಕಾರ್ಯಕ್ರಮ

ಕುಂದಗೋಳ : ನಿತ್ಯ ಜಾಗೃತವಾದ ಜೀವನ ಶೈಲಿ ಆರೋಗ್ಯದ ಪ್ರಯೋಜನ ಹಾಗೂ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸೂಕ್ತ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಕುಂದಗೋಳ ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿಗಳು ಹೊಸ ಪ್ರಯೋಗ ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಹೌದು ! ತಾಲೂಕು ಆಸ್ಪತ್ರೆ ವೈದ್ಯರು ಶಿವಾನಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಬಳಿಕ ಸಾಂಕ್ರಾಮಿಕ …

Read More »

ಮಹಾಂತೇಶ್ ಗೆಲುವು ನಿಶ್ಚಿತ, ಅಲ್ಲಿ ಇನ್ನಷ್ಟು ಉತ್ತಮ ಕೆಲಸ ಆಗಬೇಕು= ಸಿ ಎಂ ಬೊಮ್ಮಾಯಿ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಪ್ರವಾಸ ಇದೆ, ಅಲ್ಲಿ ಪ್ರಮುಖರನ್ನ ಭೇಟಿಯಾಗುತ್ತಿದ್ದೇನೆ. ವಿಧಾನ ಪರಿಷತ್‌ ಚುನಾವಣೆ ಗೆಲ್ಲುವುದಕ್ಕಾಗಿ ಏನು ಮಾಡಬೇಕು ಅದರ ಬಗ್ಗೆ ಸೂಚನೆ ನೀಡುತ್ತೇನೆ. ಮಹಾಂತೇಶ್ ಗೆಲುವು ನಿಶ್ಚಿತ, ಅಲ್ಲಿಯೂ ಇನ್ನಷ್ಟು ಉತ್ತಮ ಕೆಲಸ ಆಗಬೇಕು. ಮತ್ತು ರಾಜ್ಯದಲ್ಲಿ ಓಮಿಕ್ರಾನ್ ಜಿನೊನ್ ಸಿಕ್ವೆನ್ಸ್ ಗೆ ಪರಿಣಿತ ವ್ಯವಸ್ಥೆ ಬೇಕು ಎಲ್ಲೆಲ್ಲಿ ಸಂಶಯ ಇದೆ ಅಲ್ಲಿ ಟೆಸ್ಟ್ ಆರಂಭಿಸಿದ್ದೇವೆ. ಅತಿ ಶೀಘ್ರದಲ್ಲಿ ಟೆಸ್ಟ್ ಬರುವ ಹಾಗೆ ಮಾಡ್ತೀವಿ. ಜಿನೇನ್ ಸಿಕ್ವೆನ್ಸ್ ಲ್ಯಾಬ್ …

Read More »

ಚಿಗರಿ ಬಸ್‌ ಗುದ್ದಿದ್ದ ಪಾದಚಾರಿ ಕಿಮ್ಸ್ನಲ್ಲಿ ಸಾವು

ಹುಬ್ಬಳ್ಳಿ: ನಗರದ ರೇಲ್ವೆ ನಿಲ್ದಾಣದ ಸಮೀಪದಲ್ಲಿ ಬಿಆರ್ ಟಿಎಸ್ ಚಿಗರಿ ಬಸ್ ಹಾಯ್ದು ಅಣ್ಣಿಗೇರಿ ಮೂಲದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಈಗಷ್ಟೇ ಸಂಭವಿಸಿದೆ. ಧಾರವಾಡದಿಂದ ಬಂದು ಮತ್ತೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್, ರಸ್ತೆಯಲ್ಲಿ ಅಳಿಯನ ಮನೆಗೆ ಹೊರಟಿದ್ದ ವೃದ್ಧನಿಗೆ ಹಾಯ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ. ಘಟನೆ ನಡೆಯುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ನಾಗೇಶ ಕಾಡದೇವರಮಠ, ಶವವನ್ನ ಮರಣೋತ್ತರ …

Read More »

ದಾಖಲೆ ಬಳಸಿ ಹಣ ವಂಚನೆ : ಆನ್​ಲೈನ್​ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ!

ಹುಬ್ಬಳ್ಳಿ : ಆನ್‌ಲೈನ್‌ನಲ್ಲಿ 22 ಸಾವಿರ ರೂ. ಪಡೆದಿದ್ದ ಮಹಿಳೆಯ ದಾಖಲೆಗಳನ್ನು ಬಳಸಿಕೊಂಡು ವಿವಿಧ ಆ್ಯಪ್‌ಗಳ ಮೂಲಕ ಅವರ ಹೆಸರಲ್ಲಿ 1,78,425 ರೂ. ಸಾಲ ಪಡೆದು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್​ಲೈನ್​ ಲೋನ್​ ಆ್ಯಪ್​​ ವಂಚನೆ : ಹಳೇ ಹುಬ್ಬಳ್ಳಿಯ ಪ್ರೀತಿ ಎಂಬುವರು ನ.21 ರಿಂದ ಡಿ. 5ರ ನಡುವೆ ಆ್ಯಪ್ ಒಂದರ ಮೂಲಕ 22,000 ರೂ . ಸಾಲ ಪಡೆದಿದ್ದರು.ಈ ವೇಳೆ …

Read More »