Breaking News

admin

ಭೀಕರ ರಸ್ತೆ ಅಪಘಾತ- ಸುಶಾಂತ್ ಸಿಂಗ್ ರಾಜಪೂತ್ ಕುಟುಂಬದ 6 ಜನರ ದುರ್ಮರಣ

ಬಿಹಾರ್ : ಬಿಹಾರದ ಲಖಿಸರಾಯ್ ಎಂಬಲ್ಲಿ ಟ್ರಕ್ ಮತ್ತು ಖಾಸಗಿ ವಾಹನವೊಂದರ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಇವರೆಲ್ಲರವೂ ದಿವಂಗತ, ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜಪೂತ್ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರೆಲ್ಲವೂ ಪಟ್ನಾದಲ್ಲಿ ನಡೆದಿದ್ದ ಅಂತೀಮ ಸಂಸ್ಕಾರದ ಕಾರ್ಯಕ್ರಮವನ್ನ ಪೂರೈಸಿಕೊಂಡು ಹುಟ್ಟೂರಿಗೆ ವಾಪಸಾಗುತ್ತಿದ್ದರು. ಬಿಹಾರದ ಲಖಿಸರಾಯ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಈ ಬೀಕರ ಅಪಘಾತ …

Read More »

ಮಳೆ ಅವಾಂತರ: ಮನೆಯ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರು ಬಾಲಕನಿಗೆ ಗಾಯ

ಮಳೆಯ ಅವಾಂತರದಿಂದ ಮನೆಯ ಗೋಡೆ ಕುಸಿದಿರುವುದು, ಮೈಸೂರು: ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಮಣ್ಣಿನ ಗೋಡೆ ಕುಸಿದು (wall collapse Due To Heavy Rain) ಬಿದ್ದು, ಬಾಲಕನ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲೂಕಿನ ಗಣಿಗರ ಹುಂಡಿಯಲ್ಲಿ ನಡೆದಿದೆ. ಮೊಳೆ ಗ್ರಾಮದಲ್ಲಿಯೂ ಮನೆ ಬಿದ್ದ ಘಟನೆ ಜರುಗಿದೆ. ಗ್ರಾಮದ ಸಿದ್ದರಾಜು, ಜ್ಯೋತಿ ಎಂಬುವರ ಪುತ್ರ ವಿಕಾಸ್ (16)ಗಾಯಗೊಂಡ ಬಾಲಕ. ವಿಕಾಸ್​ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು …

Read More »

ಪ್ರವಚನ ಹೇಳುತ್ತಿರುವಾಗಲೇ ಹೃದಯಾಘಾತ-ವೇದಿಕೆಯ ಮೇಲೆ ಪ್ರಾಣ ಬಿಟ್ಟ ಸ್ವಾಮೀಜಿ

ಬೆಳಗಾವಿ : ಪ್ರವಚನ ಮಾಡುತ್ತಿರುವಾಗಲೇ ವೇದಿಕೆ ಮೇಲೆ ಸ್ವಾಮೀಜಿ ಪ್ರಾಣ ಬಿಟ್ಟ ಘಟನೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳಗ ಗ್ರಾಮದಲ್ಲಿ ನಡೆದಿದೆ.ಬಳೋಬಾಳಗ ಮಠದ ಸಂಗನಬಸವ ಮಹಾಸ್ವಾಮೀಜಿ (53) ನವಂಬರ್ 6 ರಂದು ತಮ್ಮದೇ ಹುಟ್ಟು ಹಬ್ಬ ಆಚರಿಸಿಕೊಂಡು ಭಕ್ತರಿಗೆ ಆಶಿರ್ವಚನ ನೀಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಸ್ಥಳದಲ್ಲೇ ಲಿಂಗೈಕ್ಯರಾಗಿದ್ದಾರೆ ವೇದಿಕೆಯ ಮೇಲೆ ಪ್ರಾಣ ಬಿಟ್ಟ ಸ್ವಾಮೀಜಿ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ್ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರವಚನ ನೀಡುತ್ತಿದ್ದರು. …

Read More »

ಸಾಮೂಹಿಕ ವಿವಾಹದಲ್ಲಿ ಎಲ್ಲರ ಗಮನ ಸೆಳೆದ ಕುಬ್ಜ ಜೋಡಿ

ಬಾಗಲಕೋಟೆ: ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದ ಘಟನೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹೇಶ್ ಹೊಸಗೌಡ್ರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕುಬ್ಜ ಯುವಕ-ಯುವತಿ ಹಸೆಮಣೆ ಏರಿದ್ದು, ವಿಶೇಷವಾಗಿತ್ತು. ಮೂಲತಃ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ನಿವಾಸಿ ರವಿ ನಾಯ್ಕರ್ (35) ಬೀಳಗಿ ಪಟ್ಟಣದ ಸುಜಾತ ತಳವಾರ (21) ಎಂಬ ಯುವತಿಯನ್ನು ವರಿಸಿದನು.ರವಿ ನಾಯ್ಕರ್​​ ಹುಬ್ಬಳ್ಳಿಯಲ್ಲಿ ಪಾನ್​ ಶಾಪ್​ ಹಾಕಿಕೊಂಡಿದ್ದಾನೆ. ಮದುವೆ ವಯಸ್ಸಾದರೂ, …

Read More »

ದತ್ತಮಾಲಾ ಅಭಿಯಾನ ಕೊನೆ ದಿನ..ಜಿಲ್ಲೆಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​​..

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಹಾಗೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಸಾಂದರ್ಭಿಕ ಚಿತ್ರ ಇಂದು ಅಭಿಯಾನದ ಕೊನೆಯ ದಿನವಾಗಿದೆ. ದತ್ತ ಮಾಲಾ ಅಭಿಯಾನ ಅಂಗವಾಗಿ ಸೂಕ್ಷ್ಮ ಗಡಿ ಪ್ರದೇಶವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಬಿಗಿ ಕಟ್ಟೆಚ್ಚರ ವಹಿಸಿದ್ದಾರೆ.ಶ್ರೀರಾಮಸೇನೆ ವತಿಯಿಂದ ದತ್ತಪೀಠದದಲ್ಲಿ ನಡೆಯುತ್ತಿರುವ ದತ್ತ ಮಾಲಾ ಅಭಿಯಾನಕ್ಕೆ ರಾಜ್ಯದ ಮೂಲೆ …

Read More »

ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಉದ್ಘಾಟನೆ

ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಉದ್ಘಾಟನೆ ಬೆಂಗಳೂರು : ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ (Sparsh Group of Hospitals) ಇಂದು ತನ್ನ ವಿಶೇಷ ಮಹಿಳಾ ಮತ್ತು ಮಕ್ಕಳ ಆರೈಕೆ ಕ್ಷೇತ್ರ (Women and Child Care) ಆರಂಭಿಸಿರುವುದಾಗಿ ಘೋಷಿಸಿದೆ. ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆಯಲ್ಲಿರುವ (Infantry Road,Bangalore)ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shri Shivaratri Desi Kendra Swamiji ) ಉದ್ಘಾಟಿಸಿದರು‌‌. ಈ ವೇಳೆ …

Read More »

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿ ಕೇರ್ ಫುಲ್ ಅಂದ ಬಿಎಸ್​ವೈ ; ಶಿಷ್ಯನ ನೆರವಿಗೆ ನಿಂತ ರಾಜಾಹುಲಿ!

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ (Karnataka Bitcoin Scam) ಬೆನ್ನಲ್ಲೇ ರಾಜ್ಯ ನಾಯಕತ್ವದಲ್ಲಿ ಬದಲಾವಣೆಯ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಅಲರ್ಟ್ ಆದ ಸಿಎಂ ಬೊಮ್ಮಾಯಿ (Cm Basavaraj Bommai) ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಸಿಎಂ ಬೆನ್ನಿಗೆ ನಿಲ್ಲಲು ಬಿಎಸ್​​ವೈ ಸಮ್ಮತಿ ನೀಡಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ ಎನ್ನುವ ಅಭಯ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. …

Read More »

ಕೌಟುಂಬಿಕ ಕಲಹ: ಮೈಸೂರಲ್ಲಿ ನೇಣಿಗೆ ಶರಣಾದ ASI.

ಆತ್ಮಹತ್ಯೆಗೆ ಶರಣಾದ ಎಎಸ್‌ ಐ ಶಿವಕುಮಾರಸ್ವಾಮಿ ಮೈಸೂರು: ನಗರದ ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್​ಐವೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ(ASI Suicide) ಶರಣಾಗಿರುವ ಘಟನೆ ನಡೆದಿದೆ.ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್ಐ. ಇವರು ಗೌರಿಶಂಕರ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಶಿವಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ನಮ್ದು ಕುಟುಂಬ ರಾಜಕಾರಣವಾದರೇ ನಿಮ್ದು ಒಡಕು ರಾಜಕೀಯನಿತ್ಯ ಕಾಯಕ -ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು. ಮನೆಯಲ್ಲಿ ಒಂದು ಮುಖ, ಬೀದಿಯಲ್ಲಿ ಇನ್ನೊಂದು ಮುಖ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಕಿಡಿ ಕಾರಿದ್ದಾರೆ. ಇದೇ ವೇಳೆ, ಒಡಕು ರಾಜಕಾರಣ ಬಿಜೆಪಿಯ ನಿತ್ಯ ಕಾಯಕವಾದರೆ, ಆಪರೇಷನ್ ಕಮಲ ಅದರ ಅಧಿಕೃತ ರಾಜಧರ್ಮ ಎಂದು ಕಟುವಾಗಿ ಟೀಕಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್​​​ನಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್​​​ಗೆ ಪ್ರತಿಟ್ವೀಟ್ ಮಾಡಿರುವ ಅವರು, ಒಡಕು ರಾಜಕಾರಣದ ಪಕ್ಷಕ್ಕೆ ಹೊಲಸು …

Read More »

ಬಿಟ್ ಕಾಯಿನ್ ಪ್ರಕರಣ ಬಯಲಿಗೆಳದಿದ್ದೇ ನಾವು- ಶಾಮೀಲಾದವ್ರು ಯಾರೇ ಆದರೂ ಬಿಡಲ್ಲಾ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಟ್ ಕಾಯಿನ್ (Bitcoin) ಪ್ರಕರಣ ಬಯಲಿಗೆ ತಂದು ಇದರ ತನಿಖೆ ಮಾಡಿದ್ದೇ ನಾವು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಖಡಕ್​ ಆಗಿ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂದೆ ನೆಹರು ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದಿದ್ದೇ ನಾವು. ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿದ್ದೇವೆ. …

Read More »