ಮೈತ್ರಿ ಸರ್ಕಾರಕ್ಕೆ ಬಿಎಸ್ಪಿಯಿಂದಲೂ ಬೆಂಬಲ ವಾಪಸ್ ಸಾಧ್ಯತೆ..!ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದಲ್ಲಿ ಎಷ್ಟೋ ಘಟಾನುಘಟಿ ಹಾಗೂ ಅನುಭವಿ ನಾಯಕರುಗಳಿದ್ದರೂ ಶಾಸಕರನ್ನು ಪಕ್ಷದಲ್ಲಿಯೇ ಮುಂದುವರೆಸಿಕೊಂಡು ಹೋಗುವಲ್ಲಿ ಮುಖಂಡರು ಎಡವಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಶಾಸಕರಾದ ಆನಂದ ಸಿಂಗ್ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ …
Read More »ಜಾನುವಾರುಗಳನ್ನು ರಕ್ಷಿಸಿದ ವಿಶ್ವ ಹಿಂದುಪರಿಷತ್ ಕಾರ್ಯಕರ್ತರು.
ಚಿತ್ರದುರ್ಗ: ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ವಿಶ್ವ ಹಿಂದುಪರಿಷತ್ ಸಂಚಾಲಕ ರುದ್ರೇಶ್ ಮತ್ತು ಕಾರ್ಯಕರ್ತರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದರು.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯಿಂದ ಆಂದ್ರದ ಹಿಂದುಪುರಕ್ಕೆ ಅಕ್ರಮವಾಗಿ ಸಾಗಿಸಲಾಗುತಿದ್ದ 100 ಜಾನುವಾರುಗಳು ಎಮ್ಮೆ ಮತ್ತು ಹಸುಗಳನ್ನು ರಕ್ಷಿಸಲಾಯಿತು.ಸರಿಯಾದ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ಜಾನುವಾರುಗಳನ್ನು ಚಳ್ಳಕೆರೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.ಜಾನುವಾರುಗಳನ್ನು ಗೋಶಾಲೆಗೆ ಒಪ್ಪಿಸಲಾಗಿದ್ದು, ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.
Read More »ಎರಡು ದಿನದಲ್ಲಿ ಮೈತ್ರಿ ಪತನ.. ಭವಿಷ್ಯ ನುಡಿದ ರೇಣುಕಾಚಾರ್ಯ
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.ಇನ್ನೇರಡು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದರು.ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ಇಲ್ಲದಿದ್ದರೆ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಕಾಂಗ್ರೇಸ್,ಜೆಡಿಎಸ್ ಅಧಿಕಾರಕ್ಕೆ ಬಂದ್ರೂ ಜನಪರ ಕೆಲಸ ಮಾಡಿಲ್ಲ. ಹೀಗಾಗಿ ಸಿಎಂಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಬಿಜೆಪಿ ಪಕ್ಷ ಯಾವುದೇ ರೀತಿಯ ಆಪರೇಷನ್ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ನಾಯಕರು ಯಾರೂ …
Read More »ಕಬ್ಬಿನ ಬೆಳೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ.
ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಮತ್ತು ಗೊರೂರು ಅಣೆಕಟ್ಟೆಗಳಿಂದ ಒಣಗುತ್ತಿರುವ ಕಬ್ಬಿನ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧಕ್ಕೆ ತಮ್ಮ ಸಾಕು ಪ್ರಾಣಿಗಳೊಂದಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತನಾಯಕರಾದ ನಂದಿನಿಜಯರಾಮ್, ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗಧೀಶ್, ಮುದ್ದುಕುಮಾರ್, ನಾರಾಯಣಸ್ವಾಮಿ, ಬೂಕನಕೆರೆ ನಾಗರಾಜು, ಕರೋಟಿತಮ್ಮಯ್ಯ, ಕಾರಿಗನಹಳ್ಳಿ ಕುಮಾರ್, ಜಿ.ಪಂ ಮಾಜಿಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಎ.ಎಲ್.ಕೆಂಪೂಗೌಡ ಸೇರಿದಂತೆ …
Read More »*ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನ ನಷ್ಟ ಮೊಕದಮ್ಮೆ ಪ್ರಕರಣ .ಪ್ರಮೋದ್ -ಟಿಜೆ ಅಬ್ರಾಹಂ ನ್ಯಾಯಲಕ್ಕೆ ಹಾಜರು
ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ .ಉಡುಪಿ: ಕಳೆದ ವಿಧಾನಸಭಾ ಚುನಾವಣಾ ಸಂಧರ್ಭ ಬೆಂಗಳೂರಿನ ಸಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ, ಪ್ರಮೋದ್ ಮಧ್ವರಾಜ್ ವಿರುದ್ದ 193 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಭಂಧಿಸಿ ಪ್ರಮೋದ್ ಮಧ್ವರಾಜ್ ಉಡುಪಿ ನ್ಯಾಯಲಯದಲ್ಲಿ ಟಿಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.ಪ್ರಕರಣಕ್ಕೆ ಸಂಭಂಧಿಸಿದಂತೆ ಇಂದು ವಿಚಾರಣೆ ಪ್ರರಾಂಭವಾಗಿದೆ.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನ್ಯಾಯಲಕ್ಕ ಹಾಜರಾಗಿ …
Read More »ಮೈತ್ರಿ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ: ಶಿವಶಂಕರ ರೆಡ್ಡಿ
ಚಿಕ್ಕಬಳ್ಳಾಪುರ: ಮೈತ್ರಿ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಅಂಗೀಕಾರ ಮಾಡಬೇಕಾಗುತ್ತದೆ.ಮುಂದೆ ಗವರ್ನರ್ ಯಾವ ರೀತಿ ಕ್ರಮ ವಹಿಸ್ತಾರೆ ಕಾದು ನೋಡೋಣ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ಮಟ್ಟದಲ್ಲಿ ರಾಜೀನಾಮೆ ನನಗೆ ಆಶ್ಚರ್ಯ ಆಗುತ್ತಿದೆ.ರಾಜಕಾರಣದಲ್ಲಿ ಯಾವ ರೀತಿಯ ಪರಿಸ್ಥಿತಿ ಬಂದರೂ ನಾವು ಎದುರಿಸಬೇಕಾಗುತ್ತದೆ ಎಂದರು.ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ …
Read More »ರಾಜೀನಾಮೆ ಕುರಿತು ಸ್ಪೀಕರ್ ನಿರ್ಧಾರ ಅಂತಿಮ.
ಚಿಕ್ಕೋಡಿ : ಶಾಸಕರು ರಾಜಿನಾಮೆ ಕೊಟ್ಟ ತಕ್ಷಣ ಸರಕಾರ ಬೀಳುವದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕುರಿತು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೂ ಮೊದಲು ಅಧಿವೇಶನ ಪ್ರಾರಂಭವಾಗಲಿದೆ, ಅಧಿವೇಶನದಲ್ಲಿ ಅಂತಿಮ ತೀರ್ಮಾನವಾಗುತ್ತದೆ ಎಂದರು.೨೫ ಜನ ಶಾಸಕರು ರಾಜೀನಾಮೆ ವಿಚಾರ ಸುಳ್ಳು .ರಾಜೀನಾಮೆ ಕೊಟ್ಟವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ, ಪರಿಹಾರ ಮಾಡುವುದಕ್ಕೆ ವರಿಷ್ಠರಿದ್ದಾರೆ, ರಾಜೀನಾಮೆ ಕೊಟ್ಟವರೇ ಪಕ್ಷಕ್ಕೆ ವಾಪಸ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು …
Read More »ಸರ್ಕಾರದ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿದ ಶಾಸಕರು
ಚಿತ್ರದುರ್ಗ: ಒಂದು ವರ್ಷದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭ್ರಷ್ಟಾಚಾರ ಜಾಸ್ತಿ ಆಗಿತ್ತು. ಸರ್ಕಾರದ ನಡೆಯಿಂದ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕೇವಲ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣನೆ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿದ್ದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಸಕರು ರಾಜೀನಾಮೆ ನೀಡಿದ್ದಾರೆ …
Read More »ಗ್ರಾಮ ಪಂಚಾಯತಿ ಸದಸ್ಯರ ವಜಾ.
ಆನೇಕಲ್: ಗ್ರಾಮ ಪಂಚಾಯತಿ ಸದಸ್ಯರ ಪತಿರಾಯರ ದರ್ಬಾರ್ ನಿಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರನ್ನು ವಜಾಗೊಳಿಸುವ ಮೂಲಕ ಇಂದು ಗ್ರಾಮ ಪಂಚಾಯತಿಯಲ್ಲಿ ನಡೆಯಬೇಕಿದ್ದ ಉಪಾಧ್ಯಕ್ಷರ ಚುನಾವಣಾಗೆ ಮೂವರ ಸದಸ್ಯರನ್ನು ವಜಾಗಿಳಿಸಿ ಆದೇಶ ಹೊರಡಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.ಹೌದು ಕೆಲ ದಿನಗಳ ಹಿಂದೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಜೀವ ಬೆದರಿಕೆ …
Read More »ಮತ್ತೆ ಏರಿಕೆಯಾದ ಕೃಷ್ಣ ನದಿ ಒಳ ಹರಿವು
ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ ಸುಮಾರು ೨೨೦೦೦ ಸಾವಿರ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಬೋಜ- ಕಾರದಗಾ, ಭೋಜವಾಡಿ- ಕಣ್ಣೂರ- ಮಲಿಕವಾಡ ದತವಾಡ ಸೇತುವೆಗಳು ಜಲಾವೃತಗೊಂಡಿವೆ. ೩ ಸೇತುವೆಗಳು ಸಹ ದೂಧಗಂಗಾ ನದಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





