ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಆಹಾರ ಅರಸಿ ನದಿ ತೋಟದ ವಸತಿಗೆ ನುಗ್ಗಿದ ಬೃಹತ್ ಮೊಸಳೆಯನ್ನುಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.ಬೃಹತ್ ಗಾತ್ರದ ೭ ಅಡಿ ಉದ್ದದ ಮೊಸಳೆಯು ಇತ್ತೀಚೆಗೆ ಕಂಡು ಬಂದಿದ್ದು, ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ವ್ಯಕ್ತವಾಗಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅರಣ್ಯ ಇಲಾಖೆಯ ಸಹಾಯವಿಲ್ಲದೆ ತಾವೇ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ …
Read More »ಬೀದಿ ನಾಯಿ ದಾಳಿಯಿಂದ ಅಸುನೀಗಿದ ಕುರಿಗಳು.
ಕೋಲಾರ: ಬೀದಿ ನಾಯಿಗಳು ಕುರಿ ದೊಡ್ಡಿಯ ಮೇಲೆ ದಾಳಿ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಹಿಳೆ ರುಕ್ಮಿಣಮ್ಮ ಎಂಬುವವರಿಗೆ ಸೇರಿದ ಐದು ಕುರಿಗಳು ನಾಯಿಗಳ ದಾಳಿಯಿಂದಾಗಿ ಅಸುನೀಗಿವೆ. ಕಳೆದ ಒಂದು ತಿಂಗಳಿಂದ ೪ ಪ್ರತ್ಯೇಕ ಪ್ರಕರಣಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ೨೫ ಕುರಿಗಳು ಸಾವನ್ನಪ್ಪಿವೆ. ಸೂಕ್ತ ಪರಿಹಾರ ನೀಡಿ ಹಾಗೂ ನಾಯಿಗಳನ್ನು ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
Read More »ತಬ್ರೇಜ್ ಹತ್ಯಾಕಾಂಡ ಖಂಡಿಸಿ ಬೃಹತ್ ಪ್ರತಿಭಟನೆ.
ಬೆಳಗಾವಿ: ಜಾರ್ಖಂಡ್ ನಲ್ಲಿ ನಡೆದ ತಬ್ರೇಜ್ ಹತ್ಯಾಕಾಂಡ ಖಂಡಿಸಿ ಮಾಜಿ ಶಾಸಕ ಶಹಜಹಾನ್ ಡೊಂಗರ್ ಗಾಂವ್ ನೇತೃತ್ವದಲ್ಲಿ ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ ಪ್ರತಿಭಟನೆ ನಡೆಸಲಾಯಿತು.ಮುಸ್ಲಿಂ ಸಮುದಾಯದವರು ನಗರದಾದ್ಯಂತ ಬೃಹತ್ ಮೆರವಣಿಗೆ ಮಾಡುವ ಹತ್ಯಾಕಾಂಡವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಹತ್ಯಾಕಾಂಡಕ್ಕೆ ಕಾರಣರಾದ ಅಪರಾಧಿಗಳಿಗೆ ನೇಣು ಕುಣಿಕೆಗೆ ಹಾಕಿ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
Read More »ಹು-ಧಾ ಮಹಾನಗರ ಪಾಲಿಕೆ ತಾರತಮ್ಯ ನೀತಿ ಮನನೊಂದು ಆತ್ಮಹತ್ಯೆಗೆ ಶರಣಾದ ಪೌರ ಕಾರ್ಮಿಕ.
ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೂಸಪೇಟೆಯಲ್ಲಿ ನಡೆದಿದೆ.ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ.ಮೃತ ಕಲ್ಲಪ್ಪ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನೇರ ವೇತನಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ನೇರ ವೇತನ ಜಾರಿಯಾಗಿರಲಿಲ್ಲ. ಕಳೆದ ವಾರ …
Read More »ಬೃಹತ್ ಶಾರ್ಕ್ ಮೀನಿನ ಕಳೆಬರ ಪತ್ತೆ.
ಮಂಗಳೂರು: ಮಂಗಳೂರಿನ ಕಡಲ ದಡದಲ್ಲಿ ಇಂದ ಸತ್ತ ಶಾರ್ಕ್ ಮೀನು ಪತ್ತೆಯಾಗಿದೆ. ಸುರತ್ಕಲ್ ಬಳಿಯ ಎನ್ ಐಟಿಕೆ ಬಳಿ ಬೃಹತ್ ಗಾತ್ರದ ಶಾರ್ಕ್ ಮೀನು ಪತ್ತೆ ಆಗಿದೆ. ಬೀಚ್ ಸಿಬ್ಬಂದಿಗಳು ಶಾರ್ಕ್ ಮೀನನ್ನು ಕ್ರೇನ್ ಮೂಲಕ ಎತ್ತಿ ದಡಕ್ಕೆ ಸೇರಿಸಿದ್ದಾರೆ. ಹೀಗೆ ಕಳೆದ ನಾಲ್ಕು ದಿನಗಳ ಹಿಂದೆ ಸಸಿಹಿತ್ಲು ಬೀಚ್ ನಲ್ಲೊಂದು ಸತ್ತ ಶಾರ್ಕ್ ಮೀನು ಪತ್ತೆಯಾಗಿತ್ತು. ವಾರದೊಳಗೆ ಎರಡು ಸತ್ತ ಶಾರ್ಕ್ ಮೀನು ಮಂಗಳೂರು ಬೀಚ್ ನಲ್ಲಿ ಪತ್ತೆಯಾಗಿದೆ.
Read More »ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥಾ.
ಮಂಡ್ಯ: ಆಡಳಿತ, ಪ್ರಗತಿ ಪ್ರೌಢಶಾಲೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿಂದುಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಅರ್.ಪೇಟೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.ತಹಶಿಲ್ದಾರ ಎಂ. ಶಿವಮೂರ್ತಿ ಹಸಿರು ನಿಶಾನೆಯ ಬಾವುಟವನ್ನು ಪ್ರದರ್ಶಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಅವರು, 2020ಕ್ಕೆ ನಮ್ಮ ಕರ್ನಾಟಕ ರಾಜ್ಯವನ್ನು ಮಲೇರಿಯಾ ರೋಗದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. 2018ನೇ ಸಾಲಿನಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣವು ಕೂಡಾ …
Read More »ಪೌರ ಕಾರ್ಮಿಕನಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ
ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕನ ಆತ್ಮಹತ್ಯೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಹು-ಧಾ ಮಹಾನಗರ ಪೌರಕಾರ್ಮಿಕರು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿಭಟನೆ ನಡೆಸಿದರು.ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡಿರುವ ಪೌರ ಕಾರ್ಮಿಕನ ಸಾವಿಗೆ ಹು-ಧಾ ಮಹಾನಗರ ಪಾಲಿಕೆಯ ತಾರತಮ್ಯ ಹಾಗೂ ಅವ್ಯವಸ್ಥೆಯೇ ಕಾರಣವಾಗಿದ್ದು, ಪೌರಕಾರ್ಮಿಕನ ಆತ್ಮಹತ್ಯೆಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ …
Read More »ಪ್ರಭಾವಿ ನಾಯಕರ ಪಾಲಾಗುತ್ತಿರುವ ಬಡವರ ಆಶ್ರಯ ಮನೆಗಳು.
ಬೆಳಗಾವಿ: ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳಿಗೆ ಸೇರಬೇಕಾದ ಆಶ್ರಯ ಮನೆಗಳು ಪ್ರಭಾವಿ ನಾಯಕರ ಪಾಲಾಗುತ್ತಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಆರೋಪಿಸಿದ್ದಾರೆ.ರಾಜ್ಯದಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆ ಮಾಡಿದ ರಾಜೀವ ಗಾಂಧಿ ವಸತಿ ನಿಗಮದಿಂದ 2000 ದಿಂದ 2001 ಹಾಗೂ 2017-18ರವಗೆ 39,34,517ಮನೆಗಳು ಹಂಚಿಕೆಯಾಗಿವೆ. ಸರಕಾರದ ಬೊಕ್ಕಸದಿಂದ 21682 ಕೋಟಿ 89 ಲಕ್ಷ 90ಸಾವಿರ ರೂಗಳು ವೆಚ್ಚವಾಗಿರುವುದು ಮಾಹಿತಿ …
Read More »ಅಮಾಯಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ
ಚಿಕ್ಕಬಳ್ಳಾಪುರ: ಬಸ್ ಮತ್ತು ಟಾಟಾ ಮ್ಯಾಜಿಕ್ ನಡುವೆ ಭೀಕರ ಅಪಘಾತ ನಡೆದು ಟಾಟಾ ಮ್ಯಾಜಿಕ್ ನಲ್ಲಿದ್ದ ಹನ್ನೆರಡು ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಬಾರ್ಲಹಳ್ಳಿ ಗೇಟ್ ಬಳಿ ನಡೆದಿದೆ. ಎಸ್ ಕೆ ಎಸ್ ಬಸ್ ಮುರಗಮಲ್ಲ ದಿಂದ ಚಿಂತಾಮಣಿಗೆ ಹೊಗುತ್ತಿದ್ದ ವೇಳೆ ಘಟನೆ ನಡೆದಿದ್ದು,ಅಪಘಾತದಲ್ಲಿ ಹನ್ನೆರಡು ಜನರ ದಾರುಣ ಸಾವನ್ನಪ್ಪಿದ್ದಾರೆ. ಎಂಟು ಜನ ಗಂಡಸರು ಹಾಗೂ ನಾಲ್ಕು ಜನ ಹೆಂಗಸರು ಸೇರಿದಂತೆ ಹನ್ನೆರಡು ಜನ ಮಾರಣಹೋಮ …
Read More »ಮೈತ್ರಿಗೆ ಮುಳ್ಳಾಗಲಿದೆಯೇ ಅತೃಪ್ತ ಶಾಸಕರ ರಾಜೀನಾಮೆ ಪರ್ವ
ವಿಜಯಲಕ್ಷ್ಮಿ ಎಲಿಗಾರ. ಹುಬ್ಬಳ್ಳಿ: ಮೈತ್ರಿ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಗೊಂದಲಗಳು ಸೃಷ್ಟಿಯಾಗುತ್ತಿದೆ.ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ರಾಜೀನಾಮೆಯ ಅಲೆಯು ಮೈತ್ರಿಗೆ ಮುಳ್ಳಾಗಲಿದೆಯೇ ಎಂಬುದು ಪ್ರತಿಯೊಬ್ಬರಲ್ಲಿಯೂ ಕುತೂಹಲಕಾರಿ ಸಂಗತಿಯಾಗಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರ ರಚನೆ ಮಾಡಿದ್ದವು ಆದರೇ ದುರದೃಷ್ಟವಶಾತ್ ಪೂರ್ಣ ಅವಧಿ ಪೂರೈಸುವ ಮುನ್ನವೇ ಇಂತಹ ರಾಜೀನಾಮೆ ಹಾಗೂ ಪರಸ್ಪರ ಕಿತ್ತಾಟ, ಕೆಸರೆರಚಾಟಗಳು ನಡೆಯುತ್ತಾ ಬಂದಿವೆ. ಪ್ರಸ್ತುತ ದಿನಮಾನಗಳ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





