Breaking News

admin

ಮಹಿಳಾ ಪೊಲೀಸ್​ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದಿದ್ದ ಪೊಲೀಸ್​ ಅಧಿಕಾರಿ ಸಾವು

ತಿರುವನಂತಪುರ: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪೊಲೀಸ್​ ಅಧಿಕಾರಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.ಜೂ. 15 ರಂದು ವಲ್ಲಿಕುನ್ನಂ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್​​ (34) ಎಂಬುವರ ಮೇಲೆ ಅಳುವಾ ಸಂಚಾರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಜಾಸ್​ ಎಂಬ ಪೊಲೀಸ್​ ಅಧಿಕಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಸೌಮ್ಯ ಅವರಿಗೆ ಬೆಂಕಿ ಹಚ್ಚುವ ವೇಳೆ ಏಜಾಸ್​ಗೂ ಬೆಂಕಿ …

Read More »

ಪೋಷಕರ ಮೇಲೆ ಹರಿದ ಲಾರಿ

ರಸ್ತೆಬದಿ ಬೈಕ್ ನಿಲ್ಲಿಸಿ ಮಗುವನ್ನು ಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಪೋಷಕರ ಮೇಲೆ ಲಾರಿ ಹರಿದ ಘಟನೆ ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ನಡೆದಿದೆ. ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗು ಪಾರಾಗಿದೆ. ಮಾದೇಶ್(೫೦), ಮಣಿ(೩೫) ಮೃತ ದಂಪತಿಗಳು. ಚಾಮರಾಜನಗರದ ಕಾಗಲವಾಡಿಯಿಂದ ಮೈಸೂರಿಗೆ ತೆರಳುವಾಗ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

Read More »

ಸಹಾಯ ಹಸ್ತ ನೀಡಿದ ಶಾಸಕಿ ಅಂಜಲಿ ನಿಂಬಾಳಕರ್

ಬರಿ ಗುಡಿ, ಮಠಗಳಿಗೆ ನೆರವು ಹಸ್ತ ನೀಡುವ ರಾಜಕಾರಣಿಗಳು ಜನರ ಸಮಸ್ಯೆಗೆ ಸ್ಪಂದಿಸುವುದು ಅತೀ ವಿರಳ. ಆದ್ರೇ ಕುಂದಾನಗರೀಯಲ್ಲಿ ಬಡ ರೋಗಿಯ ನೆರವಿಗೆ ಶಾಸಕಿ ಮುಂದಾಗಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ರವರು ತಾಲೂಕಿನ ಮೆಂಡೆಗಾಳಿ ಗ್ರಾಮದ ರೋಗಿ ಮುರಳಿಧರ್ ಕಾಕತಕರಗೆ ಸಹಾಯ ಹಸ್ತ ನೀಡಿದ್ದಾರೆ. ಮೂತ್ರಪಿಂಡ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ ನೀಡಿದರು. ತುರ್ತು ಚಿಕಿತ್ಸೆಗಾಗಿ ಖುದ್ದು ಸಿಎಂ ಭೇಟಿ ಮಾಡಿ ಪರಿಹಾರ ಒದಗಿಸುವಲ್ಲಿ …

Read More »

ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ನಾನೇನು ಯುವಕನೇ?

ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ನಾನೇನು ಯುವಕನೇ? ಎಂದು ಚಾಮರಾಜನಗರದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದರು. ಪ್ರತಿಯೊಬ್ಬರಿಗೂ ಒಂದು ಕಾಲವಿರ್ತದೆ. ಅದರ ಆಧಾರದ ಮೇಲೆ ಕೆಲಸ ಮಾಡ್ತಾರೆ. ಯಾವಾಗಲೂ ಕಂಪ್ಲೇಂಟ್ ಮಾಡೋ ದೃಷ್ಟಿಯಲ್ಲಿ ಇರಬಾರದು. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡೋರು ಯಾರು? ಅವರು ಸೇಫ್ ಲೀಡರ್. ಅವ್ರು ನಮ್ಮ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಮೇಜರ್ ಸರ್ಜರಿ ನಡೆಯುವ ಪ್ರಶ್ನೆಯೇ …

Read More »

ರೇಣುಕಾ ದೇವಿಯ ಹುಂಡಿ‌ ಎಣಿಕೆ ಕಾರ್ಯ ಆರಂಭ

ಉತ್ತರ ‌ಕರ್ನಾಟಕ‌ ಭಾಗದ ಪ್ರಸಿದ್ಧ ‌ದೇವಸ್ಥಾನಗಳಲ್ಲಿ ಒಂದಾದ ದೇವಸ್ಥಾನ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ದೇವಿಯ ಹುಂಡಿ‌ ಎಣಿಕೆ ಕಾರ್ಯ ನಡೆಯಿತು. ದೇವಸ್ಥಾನದ ಟ್ರಸ್ಟ್‌ ಸಮಿತಿ ಸಿಇಒ ರವಿ‌ ಕೊಟಾರಗಸ್ತಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಎಂ.ಬಿ. ವಾಲಿ ನೇತೃತ್ವದಲ್ಲಿ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲನೇ ದಿನ 38,32,029 ರೂ ಹಣ 197 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ, ಸಂಗ್ರಹವಾದ ದೇಣಿಗೆಯಾಗಿದೆ. ಮೇ ತಿಂಗಳಲ್ಲಿ ಭಕ್ತರು ಹುಂಡಿಗೆ ಹಾಕಿದ …

Read More »

ಅಹಿಂಸೆ ಪ್ರತಿಪಾದನೆಗಾಗಿ 19 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿರುವ ಜೈನ ಮುನಿ.

ಪ್ರಪಂಚದಲ್ಲಿ ಅಹಿಂಸೆ ಸಮರತೆ ನೈತಿಕತೆ ವ್ಯಸನಮುಕ್ತಿಗಾಗಿ ಜೈನ ಮುನಿಯೊಬ್ಬರು ಮೂರು ದೇಶ 19 ರಾಜ್ಯಗಳಲ್ಲಿ ಉಪದೇಶ ಮಾಡುತ್ತ ಸುಮಾರು19 ಸಾವಿರ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಆ ಜೈನ ಮುನಿ ಕರ್ನಾಟಕ ಗಡಿಭಾಗ ಅತ್ತಿಬೆಲೆಗೆ ಪ್ರವೇಶಿಸಿದ್ದಾರೆ.ಇನ್ನು ಜೈನ ಮುನಿ ಆಚಾರ್ಯ ಮಾಹಾಶ್ರಮಣ್ ಸ್ವಾಮಿಜಿಯವರನ್ನು ಇಲ್ಲಿನ ಜೈನ ಧರ್ಮದ ಸುಮಾರು 10,000 ಜನರು ಬರಮಾಡಿಕೊಂಡಿದ್ದು ಮಹಾಶ್ರಮಣ್ ಜೈನ ಮುನಿ 2014 ರ ನವಂಬರ್ 14 ರಂದು ದೆಹಲಿಯ ಕೆಂಪುಕೋಟೆಯಿಂದ ಪ್ರಪಂಚದಲ್ಲಿ ಸಮರಸತೇ …

Read More »

ಬರದಿಂದ ತತ್ತರಿಸಿದ ಜನತೆಗೆ ತಂಪೆರೆದ ಮಳೆರಾಯ.

ಬೆಳಗಾವಿಮಳೆರಾಯ..ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವರುಣ ಬರದಿಂದ ತತ್ತರಿಸಿದ ಜನತೆಗೆ ತಂಪೆರೆದಿದ್ದಾನೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರ ನಡುವೆಯೇ ಮಳೆಯಲ್ಲಿ ನೆನೆದು ನೂರಾರು ಭಕ್ತರು ಯಲ್ಲಮ್ಮ ದೇವಿ ದರ್ಶನ ಪಡೆದು ಪುನೀತರಾದರು. ಹಾಗೂ ರೈತರ ಮೊಗದಲಿ ಮಂದಹಾಸ ಮೂಡಿದಂತಾಗಿದೆ.

Read More »

ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ

1.25 ಲಕ್ಷ ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಹಶಿಲ್ದಾರ್ ಡಾ.ಪ್ರದೀಪ್ ಎಸಿಬಿ ಬಲೆಗೆ ಬಿದಿದ್ದು, ಊಟದ ಬಿಲ್ ಬಿಡುಗಡೆ ಮಾಡಲು ಲಂಚ ಕೇಳಿದ್ದರು. ಲೋಕಸಭಾ ಚುನಾವಣೆ ವೇಳೆ ಊಟೋಪಚಾರದ 9.37 ಲಕ್ಷ ಹಣ ಬಿಡುಗಡೆ ಮಾಡಬೇಕಿತ್ತು. ಆದ್ರೇ ಈ ಹಣ ಬಿಡುಗಡೆ ಮಾಡುವುದಕ್ಕೆ 1.25 ಲಕ್ಷ ಹಣ ಕೇಳಿ, ಇಂದು ಆ ಹಣವನ್ನು ಪಡೆಯುವಾಗ ಸಿಕ್ಕಿ ಬಿದಿದ್ದಾರೆ. ಎಸಿಬಿ …

Read More »

ವಿಶ್ವ ಯೊಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಐದನೇಯ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಅಥಣಿ ಯಲ್ಲಿ ಯೋಗಾಬ್ಯಾಸ ನಡೆಸಲಾಯಿತು. ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ನೂರಾರು ಸಾರ್ವಜನಿಕರು ಏಕಕಾಲಕ್ಕೆ ಯೋಗ ತಾಲೀಮು ನಡೆಸುವ ಮೂಲಕ ವಿಶ್ವ ಯೋಗ ದಿನಾಚರಣೆಯ ಕಳೆಯನ್ನು ಹೆಚ್ಚಿಸಿದ್ದು ಕಂಡು ಬಂತು… ಅಷ್ಟೇ ಅಲ್ಲದೆ ಅಥಣಿ ಪಟ್ಟಣದ ವಿವಿಧ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳು ಯೋಗಾಬ್ಯಾಸದಲ್ಲಿ ತೊಡಗುವಂತೆ ಮಾಡಿದ್ದು ಯೋಗದಿಂದ ರೋಗಗಳು ವಾಸಿಯಾಗಿ ಸ್ವಸ್ಥ,ಸುಂದರ ಸಮಾಜಕ್ಕಾಗಿ ನಿತ್ಯವೂ …

Read More »

ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ.

ಇಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ ಮನೆಮಾಡಿತ್ತು. ಜಿಲ್ಲಾಡಳಿತ, ಆಯುಷ್ ಇಲಾಖೆ ಮತ್ತು ಯೋಗ ಒಕ್ಕೂಟದಿಂದ ಯೋಗ ಪ್ರದರ್ಶನ ಮಾಡಲಾಯಿತು. ದಾವಣಗೆರೆ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಯೋಗ ಕಾರ್ಯಕ್ರಮದಲ್ಲಿ ಯೋಗಪಟುಗಳು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಪೇಜಾವರದ ವಿಶ್ವೇಶತೀರ್ಥ ಶ್ರೀಗಳು , ವೈದ್ಯ ಚನ್ನಬಸವಣ್ಣ, ಸೇರಿಂದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Read More »