Breaking News

admin

ಟೋಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಚಾಲಕ

ವಾಹನ ಸವಾರರೊಬ್ಬರು ಟೋಲ್ ಸಿಬ್ಬಂದಿಗಳಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ನಡೆದಿದೆ. ಧಾರವಾಡದಿಂದ ಬೆಳಗಾವಿಗೆ ಆಗಮಿಸುವಾಗ ವಾಹನ ಸವಾರನ ಆಲ್ಟೋ ಕಾರಿಗೆ ಪಾಸ್ಟ ಟ್ಯಾಗ್ ಇದ್ರೂ ಕೂಡಾ ವಾಹನ ಬಿಡದಿದಕ್ಕೆ ಆಕ್ರೋಶ್ ವ್ಯಕ್ತಪಡಿಸಿ ವಾಹನ‌ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಪ್ರತಿದಿನ ಟೋಲ್ ಬಳಿ ಪಾಸ್ಟ ಟ್ಯಾಗ್ ಬ್ಲಾಕ್ ಬಂದ ಇರುತ್ತಿದೆ, ನಾವೂ ನಿಮಗೆ ದುಡ್ಡು ಕೊಟ್ಟು ಹೋಗುತ್ತೆವೆ, ನೀವು ಪ್ರತಿದಿನ …

Read More »

ಕೋಲಾರದಲ್ಲಿಯೂ ಐಎಂಎ ಕಂಪನಿಯ ಚಟುವಟಿಕೆ

ಕೋಲಾರದಲ್ಲಿಯೂ ಐಎಂಎ ಕಂಪನಿಯ ಚಟುವಟಿಕೆ ಬೆಳಕಿಗೆ ಬಂದಿದ್ದು, ಮಾಲೂರು ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಐಎಂಎ ನೆರವು ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಮನ್ಸೂರ್ ಖಾನ್ ಒದಗಿಸಿದ್ದಾರೆ. ಆದ್ರೇ ಶಾದಿ ಮಹಲ್ ನಿರ್ಮಾಣ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ. ಸ್ಥಳೀಯ ಮಾಜಿ ಶಾಸಕರ ಮನವಿ ಮೇರೆಗೆ ಶಾದಿ ಮಹಲ್ ಗೆ ನೆರವು ಒದಗಿಸಿದ್ದ ಮನ್ಸೂರ್ ಖಾನ್ ಎಂದು ಹೇಳಲಾಗುತ್ತಿದೆ.

Read More »

ಕೋರ್ಟ್ ಗೆ ಹಾಜರಾಗುವಂತೆ ರೈತನಿಗೆ ನೋಟಿಸ್ ಜಾರಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ರೈತ ಸಾಲ ಮನ್ನಾ ಜತೆಗೆ ಯಾವುದೇ ರೈತರಿಗೆ ನೋಟಿಸ್, ವಾರೆಂಟ್ ಕೊಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಆದರೇ ಆದೇಶವನ್ನು ಎಲ್ ಅಂಡ್ ಟಿ ಫೈನಾನ್ಸ್ ಕಂಪನೆ ಗಾಳಿಗೆ ತೂರಿದೆ. ಇದೀಗ ಬೆಳಗಾವಿ ಜಿಲ್ಲೆಯ ಅನ್ನದಾತರನಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು ಇದೇ 19ರಂದು ಕೋಲ್ಕತ್ತಾ ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದು ರೈತರ ತೀವ್ರ ಆಘಾತವನ್ನು ಉಂಟು ಮಾಡಿದ್ದು, ಸಹಾಯಕ್ಕಾಗಿ …

Read More »

ನಾಯಿಗಳ ದಾಳಿಗೆ ಮೃತಪಟ್ಟ ಚಿರತೆ

ಗ್ರಾಮಕ್ಕೆ ನುಗ್ಗಿ ದನಕರು ಹಾಗೂ ಕುರಿಗಳನ್ನು ಬೇಟಿಯಾಡುತ್ತಿದ್ದ ಒಂಟಿ ಚಿರತೆಯನ್ನು ಇಂದು ನಾಯಿಗಳು ಬೇಟೆಯಾಡಿ ಚಿರತೆ ಬಲಿ ತೆಗೆದುಕೊಂಡಿವೆ. ಚಾಮರಾಜನಗರ ಜಿಲ್ಲೆಯ ಸಮೀಪದ ಕೇರಳ ರಾಜ್ಯದ ಕಲ್ಪೇಟೆ ಬಳಿ ಘಟನೆ ನಡೆದಿದೆ. ಹತ್ತಕ್ಕೂ ಹೆಚ್ಚು ನಾಯಿಗಳ ತಂಡದಿಂದ ಚಿರತೆ ಮೇಲೆ ದಾಳಿಗೆ ತತ್ತರಿಸಿದ ಚಿರತೆ ಸ್ಥಳದಲ್ಲೆ ಸಾವನ್ನಪ್ಪಿದೆ.

Read More »

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕ ಶವವಾಗಿ ಪತ್ತೆ

ದಕ್ಷಿಣ ಕನ್ನಡದ ಸವಣೂರು ಶಾಂತಿಮೊಗರು ಸೇತುವೆಯ ಹತ್ತಿರ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಜೂ.12ರಂದು ಸಂಜೆ ನಡೆದಿದೆ. ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾದ ಕೂಡಲೇ ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ ಮುಳುಗಿದ ಸ್ಥಳದಲ್ಲಿಯೇ ಬಾಲಕನ ಶವ ಪತ್ತೆಯಾಗಿದೆ. ಪರಣೆ ಹಮೀದ್ ಎಂಬವರ ಪುತ್ರ ಅಶ್ಫಾಕ್ ಮೃತಪಟ್ಟ ಬಾಲಕ. ಕಡಬ ಮತ್ತು ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು..

Read More »

ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ

ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ ಹೊಂದಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಕ್ಕಿಲಾಡಿ ನಡೆದಿದೆ. ದಾವಣಗೆರೆ ಮೂಲದ ಮಿಟ್ಯಾ ನಾಯಕ್(35), ಮೃತ ಪಟ್ಟ ವ್ಯಕ್ತಿಯಾಗಿದ್ದು, ವಿದ್ಯುತ್ ದುರಸ್ಥಿ ಮಾಡಿದ ಬಳಿಕ ವಿದ್ಯುತ್ ಪೂರೈಕೆ ಮಾಡುವ ವೇಳೆ ಘಟನೆ ಸಂಬವಿಸಿದೆ. ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಕೆಲಸ ನಿರ್ವಹಿಸುತ್ತಿದ್ದರು. ಪೊಲೀಸ್ ವಸತಿ …

Read More »

ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲು

ಆರಭಿ ಸಮುದ್ರದಲ್ಲಿ ಬಲವಾದ ಬಿರುಗಾಳಿ ಬಿಸುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ . ಉಳ್ಳಾಲದಲ್ಲಿ ಕಡಲ್ಕೊರೆತ ಕೂಡ ತೀವ್ರಗೊಂಡಿದೆ .ಈ ಭಾಗದಲ್ಲಿ ಹಲವು ಮನೆಗಳು ಅಪಾಯದಲ್ಲಿವೆ .ಇಂದು ಸಂಜೆ 7 ಗಂಟೆಗೆ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ನ ಹಿಂಭಾಗದಲ್ಲಿ ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲಾಗಿದೆ.ಈ ದ್ರಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ .

Read More »

ದಲಿತ ಯುವಕನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ

ದಲಿತ ಯುವಕನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಇಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಾಪ್ ಎಂಬ ದಲಿತ ಯುವನನ್ನು ಬೆತ್ತಲೆಗೊಳಿಸಿ ಗುಂಡ್ಲುಪೇಟೆಯಲ್ಲಿ ಪೈಶಾಚಿಕ ಕೃತ್ಯ ವೆಸಗಿದ್ದರು. ಇದರ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮೂಲಕ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿದರು. ಚಾಮರಾಜನಗರ ಲೋಕಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಹಾಗೂ …

Read More »

ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಸೂಚನೆ

ಕರಾವಳಿಯಲ್ಲಿ ನಿನ್ನೆ ಮಧ್ಯಾಹ್ನ ದಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಕೆಲವೆಡೆ ವಿದ್ಯೂತ್ ಕಂಬಗಳು ನೆಲಕ್ಕುರುಳಿದೆ. ೧೦೦ ಮಿಲಿಮೀಟರ್ ಸುರಿದ ಮಳೆಯಿಂದ ನಗರದಲ್ಲಿ ವಾಯು ಚಂಡಮಾರುತ ಹಿನ್ನಲೆಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಇನ್ನೂ ಸಮುದ್ರದಲ್ಲಿ ಹೆಚ್ಚಿದ ಅಲೆಗಳ ಅಬ್ಬರದಿಂದ ಸಮುದ್ರ ತೀರದಲ್ಲಿನ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ. ಹಾಗೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದ್ದಾರೆ.

Read More »

ಗ್ರಾಮಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಸಮಸ್ಯೆಗಳ ಅವಲೋಕನ

ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಸಮಸ್ಯೆಗಳ ಅವಲೋಕನ ಮಾಡಿದರು. ಗ್ರಾಮದಲ್ಲಿ ತಹಶೀಲ್ದಾರ್ ಶಿವಮೂರ್ತಿ ಮತ್ತು ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಅವರೊಂದಿಗೆ ಪಾದಯಾತ್ರೆ ನಡೆಸಿ ಗ್ರಾಮಸ್ಥರ ಕಷ್ಟಸುಖ ಆಲಿಸಿದರು. ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದ ನವಿಲುಮಾರನಹಳ್ಳಿ ಗ್ರಾಮವಿದಾಗಿದ್ದು, ಮುಖ್ಯ ಮಂತ್ರಿಗಳು ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮದ ಮಾಯಿಗೌಡ ಸಚಿವರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು …

Read More »