ದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೆಲ ದಿನಗಳ ಹಿಂದಷ್ಟೇ ಸೆಸ್ ರೇಟ್ ಕಡಿಮೆ ಮಾಡಿ ಕೇಂದ್ರ ಸರ್ಕಾರ ಸ್ವಲ್ಪ ಸಮಾಧಾನ ಕೊಟ್ಟಿತ್ತು. ಇದರ ಬೆನ್ನಲ್ಲೆ ಕಳೆದ 8 ಎಂಟು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಬೆಲೆ 2 ರೂಪಾಯಿ ಕಡಿಮೆ ಆಗಿದ್ರೆ, ಡೀಸೆಲ್ 1ರೂಪಾಯಿ ಕಡಿಮೆ ಆಗಿದೆಯಂತೆ.ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.85 ರೂಪಾಯಿಯಾಗಿದ್ರೆ, ಡೀಸೆಲ್ ಬೆಲೆ 74.73ರೂಪಾಯಿ ಆಗಿದೆ. ನಿಖರವಾಗಿ ಹೇಳೋದಾದ್ರೆ 8 ದಿನಗಳಲ್ಲಿ ಪೆಟ್ರೋಲ್ …
Read More »ಡಿಎಂಕೆ ಕೇಳಿದ ಪ್ರಶ್ನೆಗೆ ಸೂಪರ್ ಸ್ಟಾರ್ ಕೊಟ್ಟ ಉತ್ತರ ಏನ್ ಗೊತ್ತಾ?
ಚೆನ್ನೈ: ನನ್ನ ಮತ್ತು ನನ್ನ ಅಭಿಮಾನಿಗಳನ್ನ ಯಾವುದೇ ಶಕ್ತಿ ದೂರ ಮಾಡಲು ಆಗುವುದಿಲ್ಲ ಅಂತಾ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವಿರುದ್ಧ ಡಿಎಂಕೆ ಮಾಡಿದ್ದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಈ ಹಿಂದೆ ಪಕ್ಷದಲ್ಲಿನ ಹುದ್ದೆಗಳಿಗಾಗಿ ಹಣದ ಆಮಿಷ ಒಡ್ಡುವವರಿಗೆ ತಮ್ಮ ಪಾರ್ಟಿಯಲ್ಲಿ ಅವಕಾಶವಿಲ್ಲ ಅಂತಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಡಿಎಂಕೆ ಪಕ್ಷದ ಮುಖವಾಣಿ ಪತ್ರಿಕೆ ಮುರಸೋಳಿಯಲ್ಲಿ ರಜನಿ ಹೇಳಿಕೆಯನ್ನು ಟೀಕಿಸಲಾಗಿತ್ತು. ಮುಗ್ಧ ಅಭಿಮಾನಿ ಎಂಬ ಟೈಟಲ್ನಡಿ ಬರೆಯಲಾಗಿದ್ದ ಲೇಖನದಲ್ಲಿ, …
Read More »ನೋಡೋಕೆ ಮೊಬೈಲ್ ಫ್ಲಿಪ್ ಕವರ್, ಒಳಗೆ ಇದ್ದಿದ್ದು ಚಿನ್ನದ ಬಿಸ್ಕೆಟ್..!
ಮುಂಬೈ: ಅಕ್ರಮವಾಗಿ ಗೋಲ್ಡ್ ಹಾಗೂ ಇನ್ನಿತರ ವಸ್ತುಗಳನ್ನ ಸಾಗಿಸಲು ಖದೀಮರು ನಾನಾ ಐಡಿಯಾಗಳನ್ನ ಉಪಯೋಗಿಸ್ತಾರೆ ಈಗಾಗಲೇ ಹಲವು ಸಲ ಬಹಿರಂಗೊಂಡಿದೆ. ಇದಕ್ಕೀಗ ಹೊಸದೊಂದು ಸಾಕ್ಷಿ ದೊರಕ್ಕಿದ್ದು, ಗೋಲ್ಡ್ ಬಿಸ್ಕೆಟ್ಗಳನ್ನು ಮೊಬೈಲ್ ಫ್ಲಿಪ್ ಕವರ್ನಲ್ಲಿ ಇಟ್ಟುಕೊಂಡು ವಿದೇಶಕ್ಕೆ ಹಾರಲು ಹೊರಟಿದ್ದ, ವ್ಯಕ್ತಿಯೊಬ್ಬನನ್ನ ಮುಂಬೈ ಛತ್ರಪತಿ ಶಿವಾಜಿ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಪೊಲೀಸರು ಬಂಧಿಸಿದ್ದಾರೆ.ಜಿತೇಂದ್ರ ಸೋಲಾಕಿ ಎಂಬ ವ್ಯಕ್ತಿ ಮೊಬೈಲ್ ಫ್ಲಿಪ್ ಕವರ್ನಲ್ಲಿ ಥೇಟ್ ಮೊಬೈಲ್ ರೀತಿಯಲ್ಲೇ ಕಾಣುವಂತೆ ಮೂರು ಚಿನ್ನದ ಬಿಸ್ಕೆಟ್ಗಳನ್ನ ಅಡಗಿಸಿ …
Read More »ಸಿಬಿಐ ಬೇಗುದಿ: 2 ವಾರದಲ್ಲಿ ವರ್ಮಾ ವಿಚಾರಣೆ ಮುಗಿಸುವಂತೆ ಸಿವಿಸಿಗೆ ಸುಪ್ರೀಂ ಆದೇಶ
ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿಚಾರಣೆಯನ್ನು ಎರಡು ವಾರಗಳಲ್ಲಿ ಮುಗಿಸುವಂತೆ ಸುಪ್ರೀಂಕೋರ್ಟ್ ಸಿವಿಸಿ(ಕೇಂದ್ರ ಜಾಗೃತಿ ಆಯೋಗ)ಗೆ ಆದೇಶಿಸಿದೆ. ಅಲ್ಲದೇ ಸಿವಿಸಿ ನಡೆಸುವ ವಿಚಾರಣೆಯ ಮೇಲ್ವಿಚಾರಕರನ್ನಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಎ.ಕೆ ಪಟ್ನಾಯಕ್ ಅವರನ್ನು ನೇಮಿಸಿದೆ. ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್ ರಾವ್ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲವೆಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ದೀಪಾವಳಿ ಮುಗಿದ ನಂತರ ನವೆಂಬರ್ 12 ಕ್ಕೆ ನಡೆಸುವುದಾಗಿ ಹೇಳಿದೆ.ವಿಚಾರಣೆ ನಡೆಸಿದ …
Read More »ಸರ್ಜಾ ಅಕೌಂಟ್ ಹ್ಯಾಕ್: ಇಂದು ಶ್ರುತಿ ಹರಿಹರನ್ ವಿಚಾರಣೆಗೆ ಹಾಜರಾಗೋ ಸಾಧ್ಯತೆ
ಬೆಂಗಳೂರು: ಇಂದು ನಟಿ ಶ್ರುತಿ ಹರಿಹರನ್ ಸೈಬರ್ ಕ್ರೈಂ ಠಾಣೆಗೆ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ. ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ#MeToo ಆರೋಪ ಮಾಡಿದ ಹೊತ್ತಲ್ಲೇ ಸರ್ಜಾ ಅವರ ಇ-ಮೇಲ್, ಫೇಸ್ಬುಕ್ ಹಾಗೂ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿರೋ ಬಗ್ಗೆ, ಅವರ ಮಾನೇಜರ್ ಶಿವಾರ್ಜುನ್ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶ್ರುತಿಹರಿಹರನ್ ವಿರುದ್ಧ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಲು ಶೃತಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ …
Read More »ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ…
ಬೆಂಗಳೂರು: ರಾಜ್ಯದಲ್ಲಿ 3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಪ್ರಚಾರ ಜೋರಾಗಿದೆ. ಆದ್ರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೋಸ್ತಿ ಪಕ್ಷವಾದ ಕಾಂಗ್ರೆಸ್ನ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವುದು ಸಂಶಯ ಎನ್ನಲಾಗ್ತಿದೆ. ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮಾತ್ರ ಅಖಾಡಕ್ಕೆ ಇಳಿದಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಇವತ್ತು ಮತಯಾಚಿಸಲಿರುವ ಕುಮಾರಸ್ವಾಮಿ, ನಾಳೆಯಿಂದ ಅಕ್ಟೋಬರ್ 31ರ ವರೆಗೂ ಶಿವಮೊಗ್ಗ ಉಪಸಮರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಕ್ಯಾಂಪೇನ್ ಮಾಡಲಿದ್ದಾರೆ.31 …
Read More »ಕಾರ್ಗೆ ಪ್ರವಾಸಿ ವಾಹನ ಡಿಕ್ಕಿ, ಕೇಸ್ ದಾಖಲಿಸದಂತೆ ಡಿಸಿ ಆದೇಶ..!
ಚಿಕ್ಕಮಗಳೂರು: ಅಧೀನ ಅಧಿಕಾರಿಗಳೊಂದಿಗೆ ದತ್ತ ಪೀಠಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿಗಳ ಕಾರ್ಗೆ ಪ್ರವಾಸಿ ವಾಹನವೊಂದು ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯ ಹಾಗಲ್ಖಾನ್ ಬಳಿ ಘಟನೆ ನಡೆದಿದೆ.ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಂಚರಿಸುತ್ತಿದ್ದ ಕಾರ್ನ ಹಿಂಬದಿಯ ಬಂಪರ್ಗೆ, ಹಾಸನ ಮೂಲದ ಪೊರ್ಡ್ ಐಕಾನ್ ಕಾರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ನ ಬಂಪರ್ ಹಾಗೂ ಇಂಡಿಕೇಟರ್ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಜಿಲ್ಲಾಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ. ಹಾಸನ ಮೂಲದ ಯುವಕರು ಸಂಚರಿಸುತ್ತಿದ್ದ KA 04 Z …
Read More »ಸಿವಿಸಿ ತನಿಖೆಗೆ ಸಹಕರಿಸದ ಅಲೋಕ್ ವರ್ಮಾ: ಕೇಂದ್ರ ಸರ್ಕಾರ.
ನವದೆಹಲಿ: ಬುಧವಾರ, ರಜೆಯಲ್ಲಿ ಕಳುಹಿಸಲಾದ ಅಲೋಕ್ ವರ್ಮಾ ಅವರು ಕೇಂದ್ರೀಯ ಜಾಗೃತ ಆಯೋಗದೊಂದಿಗೆ (ಸಿವಿಸಿ) ಸಹಕರಿಸುತ್ತಿರಲಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವುದನ್ನು ಸಹ ಸಮರ್ಥಿಸಿಕೊಂಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ‘ಭ್ರಷ್ಟಾಚಾರದ ಗಂಭೀರ ಆರೋಪಗಳ’ ಕಾರಣದಿಂದಾಗಿ, ‘ಅಸಾಮಾನ್ಯ ಮತ್ತು ಅಭೂತಪೂರ್ವ’ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ …
Read More »18 ಶಾಸಕರ ಅನರ್ಹ ಪ್ರಕರಣದ ತೀರ್ಪು ಇಂದು ಪ್ರಕಟ..
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.1986ರ ಪಕ್ಷಾಂತರ ವಿರೋಧಿ ಕಾಯಿದೆಯ …
Read More »ಪ್ರತೀಕ್ ಸಾವು ಪ್ರಕರಣ: ನಟಿ ರಶ್ಮಿ ಪೋನ್ FSLಗೆ ಕಳಿಸಿದ ಪೊಲೀಸ್
ಬೆಂಗಳೂರು: ನಟಿ ದುನಿಯಾ ರಶ್ಮಿ ಅವರ ಮನೆಯಲ್ಲಿ ಸಂಭವಿಸಿದ ಪ್ರತೀಕ್ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ರಶ್ಮಿ ಅವರ ಮೊಬೈಲ್ ವಶಕ್ಕೆ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಪ್ರತೀಕ್ ಸಾವಿಗೀಡಾಗಿದ್ದಾನೆ ಎಂದು ರಶ್ಮಿ ಹೇಳಿದ್ದಾರೆ. ಆದರೆ ಮೃತ ಪ್ರತೀಕ್ ಹಾಗೂ ನಟಿ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ಪ್ರೀತಿ, ಪ್ರೇಮ ಏನಾದ್ರು ಇತ್ತಾ? ಈ ಕಾರಣಕ್ಕೆ ಗಲಾಟೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





