ಬೆಳಗಾವಿ: ಪಂಚಮಸಾಲಿಗೆ 2 ಎ ಮೀಸಲಾತಿ ಕುರಿತಂತೆ ಹಲವಾರು ದಿನಗಳಿಂದ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಲೇ ಇದೆ. ಆದರೆ ಸರ್ಕಾರ ಇನ್ನೂ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ. ಈ ಸಂಬಂಧ ಗೋಕಾಕ್ ಕ್ಷೇತ್ರದ 65 ಗ್ರಾಮಗಳಲ್ಲಿ ಪಂಚಮಸಾಲಿ ಸಮಾಜಕ್ಕೆ ಜಾಗೃತಿ ಮೂಡಿಸಲು ಶ್ರೀಗಳು ಹೊರಟಿದ್ದಾರೆ. ಈ ಕುರಿತು ಗೋಕಾಕ್ ತಾಲೂಕಿನ ಖನಗಾಂವ-ನಬಾಪುರ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ. ನೀವೆಲ್ಲರೂ ಹೋರಾಟಕ್ಕೆ …
Read More »ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟ : 5 ಜನ ಸಾವು
ಖಝಾಕಿಸ್ತಾನ್ : ದೇಶದ ಮಧ್ಯಭಾಗದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಸೆಲರ್ ಮಿತ್ತಲ್‌ಗೆ ಸೇರಿದ ಲೆನಿನ್ ಗಣಿ ಪ್ರದೇಶದಲ್ಲಿ “ಡ್ರೈನೇಜ್ ಬಾವಿ ಕೊರೆಯುವ ಸಂದರ್ಭದಲ್ಲಿ ಮಿಥೇನ್ ಅನಿಲ ದಿಢೀರ್ ಬಿಡುಗಡೆಯಾಗಿದ್ದು ಐವರು ಕಾರ್ಮಿಕರ ಸಾವಿಗೆ ಕಾರಣವಾಗಿದೆ” ಎಂದು ದೇಶದ ತುರ್ತು ಸಚಿವಾಲಯದ ವಕ್ತಾರ ಹೇಳಿದ್ದಾರೆ.”ನಾಲ್ಕು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು 106 ಜನರನ್ನು ಸ್ಥಳಾಂತರಿಸಲಾಗಿದೆ” …
Read More »ರಾಜ್ಯಗಳ ಗಡಿ ಭಾಗಗಳ ಸಮಸ್ಯೆ ಕುರಿತು ಮಹತ್ವದ ಸಭೆ
ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗಗಳ ಸಮಸ್ಯೆ ಬಗ್ಗೆ ನ.4ರಂದು ಕರ್ನಾಟಕ – ಮಹಾರಾಷ್ಟ್ರ ರಾಜ್ಯಪಾಲರ ಜಂಟಿ ಸಭೆ ನಡೆಯಲಿದೆ, ಸಭೆಯಲ್ಲಿ ಉಭಯ ರಾಜ್ಯಗಳ ರಾಜ್ಯಪಾಲರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಳೆ ಬೆಳಗ್ಗೆ 11ಕ್ಕೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯಪಾಲರ ಜಂಟಿ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕ ಗವರ್ನರ್ ಥಾವರಚೆಂದ್ ಗೆಹ್ಲೋಥ್, ಮಹಾರಾಷ್ಟ್ರ ಗವರ್ನರ್ ಭಗತ್‌ಸಿಂಗ್ ಕೋಶಾಯರಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಉಭಯ ರಾಜ್ಯಗಳ …
Read More »ಮಾಜಿ ಸಿಎಂಗಾಗಿ ಶಾಸಕನಿಂದ ಕ್ಷೇತ್ರ ತ್ಯಾಗ
ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುವುದಾಗಿ ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹೀಂ ಖಾನ್ ಅವರು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ಬೀದರ್ ಉತ್ತರ ಕ್ಷೇತ್ರ ತ್ಯಾಗ ಮಾಡಲು ಸಿದ್ಧವಾಗಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ಬೀದರ್ …
Read More »ಒಂದೇ ಕುಟುಂಬದ 3 ಮಹಿಳೆಯರು ಆತ್ಮಹತ್ಯೆಗೆ ಶರಣು
ಚಿತ್ರದುರ್ಗ : ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ನೀರಿನಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ದಲಿತ ಕಾಲೋನಿಯ ಮಂಗೇರ ತಿಪ್ಪಮ್ಮ (70), ಮಕ್ಕಳಾದ ಮಾರಕ್ಕ (55) ಹಾಗೂ ದ್ಯಾಮಕ್ಕ (35) ಎಂದು ಗುರುತಿಸಲಾಗಿದೆ. ತಿಪ್ಪಮ್ಮನ ಗಂಡ ಕೆಂಚಪ್ಪ ಒಂದು ವರ್ಷದ ಹಿಂದೆ …
Read More »
ರೌಡಿಶೀಟರ್ ಯಾರು?
ಅಂಗವಿಕಲನಿಗೆ ಚಾಕು ಇರಿದು ಕೊಂದಿದ್ದ ಪಾಪಿ
ಮರ್ಡರ್ ಮಾಡಿದವನ ರಕ್ಷಣೆ ಮಾಡಿತಾ ಖಾಕಿ…?
BIG TV NEWS Subscribe like share
Read More »ರೌಡಿಶೀಟರ್ ಯಾರು ? ಅಂಗವಿಕಲನಿಗೆ ಚಾಕು ಇರಿದು ಕೊಂದಿದ್ದ ಪಾಪಿ ಮರ್ಡರ್ ಮಾಡಿದವನ ರಕ್ಷಣೆ ಮಾಡಿತಾ ಖಾಕಿ ?
ಹುಬ್ಬಳ್ಳಿ : ತಾನಾಯ್ತು ತನ್ನ ಕೆಲಸ ಆಯ್ತು ಎಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಯುವಕನ ನೆತ್ತರು ಅಂದು ಹರಿದು ಹೋಗಿತ್ತು.. ಪುಡಿ ರೌಡಿಯೊಬ್ಬನ ಇರಿತ ಆ ಕನಸುಗಾರನ ಜೀವ ಕಳೆದಿತ್ತು.. ಸಿಸಿ ಕ್ಯಾಮರಾ ಸಾಕ್ಷಿಯಿದ್ದರೂ ಪ್ರಕರಣ ಉಲ್ಟಾ ಆಗಿತ್ತು..ಕೊಲೆಗಾರ ಆರೋಪಿ ನಂಬರ್ 3 ಆಗಿದ್ದ.. ಅಷ್ಟಕ್ಕೂ ಏನಿದು ಪ್ರಕರಣ? ಈ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್.. ಹಿನ್ನೆಲೆ: ಅಂದು ತನ್ನ ಮನೆಗೆ ಆ ಯುವಕ …
Read More »ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಪ್ರಯಾಣಿಕ ಬಸ್ಸಿನಿಂದ ಹೊರಬಿದ್ದು ಕಾಲು ಮುರಿದಿದೆ
ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಪ್ರಯಾಣಿಕರೊಬ್ಬರು ಬಸ್ಸಿನಿಂದ ಹೊರಬಿದ್ದು ಕಾಲು ಮುರಿದ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಹೌದು, ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬೇದರೆ ಸಾರಿಗೆ ಬಸ್ಸಿನಲ್ಲಿಯೇ ಘಟನೆ ನಡೆದಿದೆ. ಬಸ್ಸು ವಿದ್ಯಾನಗರದ ಬಿ.ವ್ಹಿ.ಬಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದ ವೇಳೆಯಲ್ಲಿಯೇ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಪ್ರಯಾಣಿಕ ನಿಯಂತ್ರಣ ತಪ್ಪಿ ಬಸ್ಸಿನ ಹೊರಗಡೆ ಬಿದ್ದಿದ್ದಾನೆ. ಪರಿಣಾಮ ಪ್ರಯಾಣಿಕನ …
Read More »ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಭಾಷಣ ಸ್ಪರ್ಧೆ: ಶಾಹೀನ ಕಿತ್ತೂರ ಪ್ರಥಮ, ಅಲೀಶಾ ನದಾಫ ದ್ವೀತಿಯ ಸ್ಥಾನ ವಿಜೇತರು
ಧಾರವಾಡ, : ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಸಂಸ್ಥೆಯು ನಾರಾಯಣಪುರದಲ್ಲಿನ ರೋಟರೀ ಶಾಖೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ನಗರದ ಕೆಲಗೇರಿ ಜೆಎಸ್.ಎಸ್. ಪಬ್ಲಿಕ್ ಸ್ಜೂಲ್, ಕೆ.ಇ ಬೋರ್ಡ್ ಲೆಕ್ ಸಿಟಿ, ಬಾಶಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ, ಬಿಜಿಎಸ್ ಹೈಸ್ಕೂಲ್, ಜೆ.ಎಸ್.ಎಸ್.ಮಂಜುನಾಥೇಶ್ವರ ಪಬ್ಲಿಕ್ ಶಾಲೆ, ಹುಬ್ಬಳ್ಳಿಯ ಸೇಂಟ್ ಮೇರಿ ಸ್ಕೂಲ್, ಎಸ್.ಆರ್.ಬೊಮ್ಮಾಯಿ ರೀಟರೀ ಸ್ಕೂಲ್,ಪರಿವರ್ತನ ಹೇರಿಟೇಜ್ ಗುರುಕುಲ ಮತ್ತು ನವಲಗುಂದ …
Read More »ಸಿಲಿಂಡರ್ ಸ್ಟೋಟ: ಸುಟ್ಟು ಕರಕಲಾದ ಮನೆ..
ಹುಬ್ಬಳ್ಳಿ : ಸಿಲಿಂಡರ್ ಸ್ಟೋಟಗೊಂಡು ಮನೆಯೊಂದು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಬೂಸಾಬ್ ಅಲ್ಲಿಸಾಬ ಸಂಶಿ ಎಂಬವರರ ಮನೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್ ಸ್ಪೋಟವಾಗುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.ಆದ್ರೆ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು,ಬೆಂಕಿಗಾಹುತಿಯಾಗಿವೆ.ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





