Breaking News

BigTv News

ಗೋಮಾಂಸವನ್ನು ನಾವು ಇಂದು ತಿನ್ನಲ್ಲ, ನಾಳೆಯಿಂದ ತಿನ್ನುತ್ತೇವೆ : ಜಮೀರ್​ ಅಹ್ಮದ್​ ಖಾನ್

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಗೋಹತ್ಯೆಯನ್ನು ನಿಷೇಧ ಮಾಡಿದೆ. ಮೀರ್ ಸಾದಿಕ್​ಗಳು ಹೆಚ್ಚಾಗುತ್ತಿದ್ದಾರೆ. ಗೋಮಾಂಸವನ್ನು ನಾವು ಇಂದು ತಿನ್ನಲ್ಲ. ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್ ಅವರು​ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ನಗರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಅಲ್ಪಸಂಖ್ಯಾತ ವಿಭಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟಿಪ್ಪು ಜಯಂತಿ ಬ್ಯಾನ್ ಮಾಡಿ‌ ಎಂದಾಗ ಬಿಜೆಪಿಯವರ ವಿರುದ್ಧ …

Read More »

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬಿಜೆಪಿ ಮುಖಂಡ ಬರ್ಬರವಾಗಿ ಕೊಲೆ

ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ (BJP) ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ …

Read More »

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಹೆಚ್ಚಾಗಲಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ತುಸು ದುರ್ಬಲಗೊಂಡಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಚುರುಕುಗೊಂಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು …

Read More »

ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು : ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌

ಮಂಗಳೂರು: ನಗರದ ಪಬ್‌ವೊಂದಕ್ಕೆ ರಾತ್ರಿ ಸಂಘಟನೆಯೊಂದರ ಸದಸ್ಯರು ತೆರಳಿದ್ದ ಸಂದರ್ಭದಲ್ಲಿ ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ. ರಾತ್ರಿ 9 ಗಂಟೆಯ ಸುಮಾರಿಗೆ ಸಂಘ ಟನೆಯೊಂದರ ಸದಸ್ಯರೆಂದು ಹೇಳಿಕೊಂಡ 5-6 ಮಂದಿ ರೆಸ್ಟೋರೆಂಟ್‌ ಕಂ ಪಬ್‌ವೊಂದಕ್ಕೆ ತೆರಳಿ ಬೌನ್ಸರ್‌ನ ಜತೆಗೆ ಮಾತನಾಡಿ, “ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರಿಗೆ ಮದ್ಯ ಪೂರೈಕೆ ಮಾಡುತ್ತಿದ್ದೀರಿ. ಇದರ ಬಗ್ಗೆ ಹಲವು ಬಾರಿ ಹೇಳಿದರೂ ನಿಲ್ಲಿಸಿಲ್ಲ. ಅಪ್ರಾಪ್ತ ವಯಸ್ಕರನ್ನು …

Read More »

ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಕೊಡುಗೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ. ವಿವಿಧ ಸಹಾಯಧನ ಯೋಜನೆ ಸೇರಿದಂತೆ ಮಹತ್ವದ ಕೊಡುಗೆಗಳನ್ನು ನೀಡುತ್ತಿರೋದಾಗಿ ತಿಳಿಸಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರು, ಕಾರ್ಮಿಕರಿಗೆ ಹೆರಿಗೆ ಸಹಾಯಧನವನ್ನು ಗಂಡು-ಹೆಣ್ಣು ಎನ್ನುವ ಭೇದ-ಭಾವ ಇಲ್ಲದೇ 50 ಸಾವಿರ ರೂಗಳಿಗೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ. ಅಂತಿಮ ಸಂಸ್ಕಾರ ವೆಚ್ಚ ಸಹಾಯಧನ ಮೊತ್ತವನ್ನು ರೂ.50 …

Read More »

ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹುಬ್ಬಳ್ಳಿಯ  ಶ್ರೀ ಜಗದ್ಗುರು  ಮೂರುಸಾವಿರಮಠ  ಮಹಿಳಾ ಕಾಲೇಜ ಹಾಗೂ ಲಾಮಿಂಗ್ಟನ್ ಶಾಲೆಯ  ವಿದ್ಯಾರ್ಥಿಗಳ ವತಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ನಗರದ ಜೆ.ಸಿ ನಗರದಿಂದ ಚೆನ್ನಮ್ಮ ವೃತ್ತದವರೆಗೆ  ಹಮ್ಮಿಕೊಳ್ಳಲಾಯಿತು. ಬಿ.ಗೋವಿಂದ್ ರಾವ್, ವಿ.ಎಸ್.ವಿ ಪ್ರಸಾದ್, ಲಿಂಗರಾಜ್ ಅಂಗಡಿ, ಶಿವಲೀಲಾ ವೈದ್ಯನಾಥ, ತಾಯಣ್ಣ , ಜ್ಯೋತಿ ಲಕ್ಷ್ಮೀ ಪಾಟೀಲ್ ಉಪಸ್ಥಿತರಿದ್ದರು. 

Read More »

ಜಯಕರ್ನಾಟಕ ಜನಪರ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಧಾರವಾಡ : ಇಂದು ಜಯಕರ್ನಾಟಕ ಜನಪರ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವದ, ಅಂಗವಾಗಿ, ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭಾವಪೂರ್ವಕವಾಗಿ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾಧವ್, ಹರ್ಷದ್ ಪಠಾಣ್, ಕಮಲೂ ಫೂಲ್ವಾಲೆ ,ಕೃಷ್ಣ ಹುಬ್ಬಳ್ಳಿ ನಾಗರಾಜ್ ರಾಯಣ್ಣವರ್ ,ಬಾಬು ಗಾರವಾಲೆ , ಸೋಮು ಬೈಲವಾಡ, ರವಿ ಚಬನೂರ,ರವಿ ಪಾಟೀಲ, ಅಶೇೂಕ ಹಾದಿಮನಿ, ಅಶೇೂಕ ಬಿರದಾರ್, ಶ್ರೀಕಾಂತ್ ದಾಸನಕೊಪ್ಪ …

Read More »

ಧಾರವಾಡದಲ್ಲಿ ಕಾರ್ಗಿಲ್ ವಿಜಯೋತ್ಸವದ ಆಚರಣೆ : ಜಿಲ್ಲಾಧಿಕಾರಿ, ಸೈನಿಕ‌ ಅಧಿಕಾರಿಗಳಿಂದ ಪುಷ್ಪ ನಮನ, ಗೌರವ ಸಮರ್ಪಣೆ

ಧಾರವಾಡ : ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದಲ್ಲಿ ಕಾರ್ಗಿಲ್ ಯುದ್ದದ 23ನೇ ವಿಜಯೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಸೈನಿಕ ಅಧಿಕಾರಿಗಳು ಪುಷ್ಪ ನಮನ, ಗೌರವ ಸಮರ್ಪಣೆ ಮಾಡಿದರು. ಕರ್ಕಾಟಕ 24 ಎನ್ .ಸಿ.ಸಿ ಬಟಾಲಿಯನ್ ಘಟಕದ ಕೆಡೆಟ್ ಗಳು ಕಾರ್ಗಿಲ್ ಸ್ತೂಪ ಹಾಗೂ ಅತಿಥಿಗಳಿಗೆ ಗೌರವ ರಕ್ಷೆ ನೀಡಿದರು. ಕಾರ್ಯಕ್ರಮದಲ್ಲಿ …

Read More »

ಟ್ರಕ್‌- ಪೊಲೀಸ್‌ ವಾಹನ ಡಿಕ್ಕಿ : 2 ಪೊಲೀಸ್‌ ಕಾನ್ಸ್‌ಟೇಬಲ್‌ ಸಾವು

ಉತ್ತರಪ್ರದೇಶ: ಟ್ರಕ್‌- ಪೊಲೀಸ್‌ ವಾಹನ ಡಿಕ್ಕಿ ಹೊಡೆದು, ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಬಳಿ ನಡೆದಿದೆ. ಮೃತರನ್ನು ಪೊಲೀಸ್‌ ಕಾನ್ಸಟೇಬಲ್‌ಗಳಾದ ಮೊಯಿನ್‌ ಖಾನ್‌, ಅರುಣ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಇನ್ನು ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

Read More »

ಮಾತ್ರೆಗಳನ್ನು ಸೇವಿಸಿ 55 ಮಕ್ಕಳು ಅಸ್ತವ್ಯಸ್ತ : ಆಸ್ಪತ್ರೆಗೆ ದಾಖಲು

ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಕಬ್ಬಿಣಾಂಶ (ಪಾಲಿಕ್‌ ಆಸಿಡ್‌)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 239 ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ ನೀಡುವುದು ರೂಢಿ. ಅದೇ ರೀತಿ ಈ ಸೋಮವಾರ ಕೂಡ ಎಲ್ಲ ಮಕ್ಕಳಿಗೂ ಊಟದ ಬಳಿಕ ಮಾತ್ರೆ ನೀಡಲಾಗಿತ್ತು. ಸಂಜೆ 7.30ರ ಸುಮಾರಿಗೆ …

Read More »