ಬೆಂಗಳೂರು: ಪೋಷಕರಲ್ಲಿ ಕನ್ನಡದಲ್ಲಿ ಉತ್ತರಿಸಿ ಎಂದಿದಿದ್ದಕ್ಕೆ ಶಿಕ್ಷಕಿಯೊಬ್ಬರು ನನಗೆ ಕನ್ನಡ ಬೇಡವೆಂದು ಅಹಂನಿಂದ ಉತ್ತರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಯಾವಾ ಜಿಲ್ಲೆಯಲ್ಲಿ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೋಷಕರು ತನ್ನ ಮಗನನ್ನು ಯಾಕೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶಿಕ್ಷಕಿ ಆತ ಪಾಠ ಕಲಿತಿಲ್ಲ ಎಂದು ಹೇಳಿದ್ದಾರೆ. ಬಿಸಿಲಿನಲ್ಲಿ ಆತನಿಗೆ ಸರಿಹೋಗಲ್ಲ. ಯಾಕೆ ಹಾಗೇ ನಡೆಸಿಕೊಂಡಿದ್ದಾರೆ …
Read More »ಮಾದಕ ದ್ರವ್ಯದ ಸಿರಪ್ ಜಪ್ತಿ; ಇಬ್ಬರ ಬಂಧನ
ಬೀದರ್: ಮಾದಕ ದ್ರವ್ಯದ ಅಂಶ ಹೊಂದಿರುವ ₹24 ಸಾವಿರ ಮೌಲ್ಯದ 142 ಸಿರಪ್ ಬಾಟಲಿಗಳನ್ನು ಜಪ್ತಿ ಮಾಡಿರುವ ನಗರದ ಗಾಂಧಿ ಗಂಜ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಗರದ ಶಾಹೀನ್ ಕಾಲೇಜು ಕ್ರಾಸ್ ಹತ್ತಿರ ಇಬ್ಬರು ಬ್ಯಾಗಿನಲ್ಲಿ 100 ಎಮ್.ಎಲ್.ನ 142 ಸಿರಪ್ ಬಾಟಲಿಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಸಾರ್ವಜನಿಕರು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಸಿರಪ್ ಜೊತೆಗೆ ಅಲ್ಲಮಪ್ರಭು ನಗರದ ಸಂಗಮೇಶ್ ಸುಭಾಷ್ ಹಾಗೂ ಶಶಿಶೇಖರ್ …
Read More »ಶಾಖಾ ಕಾಲುವೆಯಲ್ಲಿ ವಿದ್ಯಾರ್ಥಿ ನೀರುಪಾಲು; ಇನ್ನೂ ಪತ್ತೆಯಾಗದ ವಿದ್ಯಾರ್ಥಿ ಶವ
ಶಹಾಪುರ: ತಾಲ್ಲೂಕಿನ ಭೀಮರಾಯನಗುಡಿ ಬೊರುಕ್ ಪ್ಲಾಂಟ್ ಬಳಿ ಶಹಾಪುರ ಶಾಖಾ ಕಾಲುವೆಯಲ್ಲಿ (ಎಸ್ಬಿಸಿ) ಗುರುವಾರ ಈಜಲು ಹೋಗಿ ನೀರು ಪಾಲಾಗಿದ್ದ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಹರೀಶರಡ್ಡಿ ಶವ ಶುಕ್ರವಾರ ಇನ್ನೂ ಪತ್ತೆ ಆಗಿಲ್ಲ. ಅಗ್ನಿ ಶಾಮಕ ದಳದ 17 ಸಿಬ್ಬಂದಿ ಹಾಗೂ ತಜ್ಞ ಈಜು ಮುಳುಗರನ್ನು ಕರೆಯಿಸಿ ಕಾಲುವೆಯಲ್ಲಿ ಇಳಿಸಿ ಶೋಧ ಕಾರ್ಯ ಚುರುಕು ನೀಡಿದೆ. ಕಾಲುವೆಯ ಸುಮಾರು 2 ಕಿ.ಮೀ ದೂರದವರೆಗೆ ಶವ ಶೋಧ ಕಾರ್ಯ ನಡೆದಿದೆ …
Read More »ಕಲ್ಲು ಕ್ವಾರಿಯಲ್ಲಿ ಸ್ಫೋಟ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ
ಕೋಲಾರ: ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ.ಇಲ್ಲಿನ ಮಾರಿಕುಪ್ಪಂ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ವೆಂಕಟನೂರು ಗ್ರಾಮದ ಮಾರಿ (60) ಲಾಲ್ಕುಟ್ಟೈ ಗ್ರಾಮದ ಮುನಿಯಪ್ಪ (58) ಹಾಗೂ ಗೋವಿಂದ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯವರಾಗಿದ್ದು, ಮೂವರಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರಿಯಲ್ಲಿ ತೋಡಿರುವ …
Read More »ಅಪ್ರಾಪ್ತನಿಗೆ ದ್ವಿಚಕ್ರ ವಾಹನ: ಮಾಲಕನಿಗೆ 20 ಸಾವಿರ ರೂ. ದಂಡ
ಪುತ್ತೂರು: ಅಪ್ರಾಪ್ತ ವಯಸ್ಕ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪ್ರಕರಣದಲ್ಲಿ ವಾಹನದ ನೋಂದಣಿ ಮಾಲಕರಿಗೆ ನ್ಯಾಯಾಲಯ 20 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 2025ರ ಆ. 31ರಂದು ಪುತ್ತೂರು ಕಸಬಾ ಗ್ರಾಮದ ಕ್ಯಾಂಪ್ಕೋ ಕಚೇರಿ ಎದುರು ಅಪ್ರಾಪ್ತ ವಯಸ್ಕ ಬಾಲಕನೊಬ್ಬ ದ್ವಿಚಕ್ರ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಇನ್ನೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದನು. ಈ ಸಂಬಂಧ …
Read More »ತಲ್ವಾರ್ ಹಿಡಿದು ಬೆದರಿಕೆ: ಪ್ರಕರಣ ದಾಖಲು
ಹುಬ್ಬಳ್ಳಿ: ತಲ್ವಾರ್ ಹಿಡಿದು ಜೀವ ಬೆದರಿಕೆ ಹಾಕಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿಕೊಂಡ ಸ್ಥಳೀಯ ನಿವಾಸಿ ಸಂಪತ್ ಚವ್ಹಾಣ್ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ತಲ್ವಾರ್ ಹಿಡಿದು ‘ಜಗತ್ತಿನಲ್ಲಿ ರಕ್ತ ಹೀರುವವರು ಯಾರೇ ಆಗಲಿ, ಬದುಕಿರಬಾರದು’ ಎಂದು ವಿಡಿಯೊ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೆ ಮಾಡಿಕೊಂಡಿದ್ದು, ಜನರಲ್ಲಿ ಭಯ ಹಾಗೂ ಸಮಾಜದ ಶಾಂತಿ ಕದಡುವಂತೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »ಗ್ರಾಹಕನ ಮೇಲೆ ಹಲ್ಲೆ: ಡೆಲಿವರಿ ಬಾಯ್ ಬಂಧನ
ಬೆಂಗಳೂರು: ಗ್ರಾಹಕನ ಮೇಲೆ ಹಲ್ಲೆ ಮಾಡಿದಆರೋಪದಡಿ ಡೆಲಿವರಿ ಬಾಯ್ ಒಬ್ಬನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ಪಾಲ್ ನೀಡಿದ ದೂರಿನನ್ವ ಧನುಷ್ (23) ಎಂಬಾತನನ್ನು ಬಂಧಿಸಲಾಗಿದೆ. ದೂರುದಾರರಾದ ಪಾಲ್ ಆನ್ಲೈನ್ ಮೂಲಕ ತಿಂಡಿ ಆರ್ಡರ್ ಮಾಡಿದ್ದರು. ಆರೋಪಿ ಕೋರಮಂಗಲದ 8 ಬ್ಲಾಕ್ನಲ್ಲಿರುವ ಅಪಾರ್ಟ್ ಮೆಂಟ್ಗೆ ಆರ್ಡರ್ ತೆಗೆದುಕೊಂಡು ಬಂದಿದ್ದ. ಪಾಲ್ ಅವರು 2ನೇ ಮಹಡಿಯಲ್ಲಿ ವಾಸಿಸುತ್ತಿದ್ದು, ಆದರೆ, ಧನುಷ್ ಅಪಾರ್ಟ್ಮೆಂಟ್ನ 4ನೇ ಮಹಡಿಗೆ ಹೋಗಿ …
Read More »ಬಾಲಕ ಚಲಾಯಿಸಿದ ಕಾರು ಅಪಘಾತ: ತಾಯಿ ವಿರುದ್ಧ ಪ್ರಕರಣ
ಪುತ್ತೂರು: ಅಪ್ರಾಪ್ತ ವಯಸ್ಕನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಾಹನದ ಮಾಲಕಿ, ಬಾಲಕನ ತಾಯಿ ಪುತ್ತೂರು ನಿವಾಸಿ ಕೆ.ಎ. ಮಮತಾಜ್ (42) ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.12 ರಂದು ಸಂಜೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಸಂಟ್ಯಾರ್ ಜಂಕ್ಷನ್ ಬಳಿ ಬಾಲಕ ಚಲಾಯಿಸುತ್ತಿದ್ದ ಕಾರು ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಕಾರು ಢಿಕ್ಕಿ ಹೊಡೆದು ಬೈಕ್ನ ಸಹಸವಾರ ಬಂಟ್ವಾಳ ನಿವಾಸಿ ರವಿ …
Read More »ಸರಕಾರಿ ಯೋಜನೆ ದುರುಪಯೋಗ: ಶಿಕ್ಷೆ
ಪುತ್ತೂರು: ಆರ್ಯಾಪು ಗ್ರಾಮದಲ್ಲಿಸರಕಾರದ ಯೋಜನೆ ಅಡಿಯಲ್ಲಿ ಮನೆ ಮಂಜೂರಾತಿಗಾಗಿ ನೀಡಲಾಗುವ 1.5 ಲಕ್ಷ ರೂ. ಅನ್ನು ನಕಲಿ ದಾಖಲೆ ಸಲ್ಲಿಸಿ ಪಡೆದುಕೊಂಡ ಪ್ರಕರಣದ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗಳಾದ ಬಾಬು ಮೇರ, ಜ್ಯೋತಿ ಹಾಗೂ ತನಿಯ ಮೇರ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮಾಂತರ ಠಾಣೆಯ ಅಂದಿನ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಉದಯರವಿ ಮತ್ತು ಶಕ್ತಿವೇಲು ಅವರು ತನಿಖೆ ನಡೆಸಿ …
Read More »ಗ್ಯಾರೇಜಿಗೆ ಹಾನಿ; 13 ಮಂದಿಯ ವಿರುದ್ಧ ಪ್ರಕರಣ ದಾಖಲು
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಹಳೆ ಪೊಲೀಸ್ ಠಾಣೆಯ ಬಳಿ ಇರುವ ಗ್ಯಾರೇಜಿಗೆ ಹಾನಿ ಮಾಡಿ, ಕೆಲಸದವರಿಗೆ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿ, ನಗದು ಹಾಗೂ ಸೊತ್ತುಗಳನ್ನು ಒಯ್ದಿರುವ ದೂರಿನ ಮೇರೆಗೆ, ತೇಜಸ್ ಶೆಟ್ಟಿ, ಪೃಥ್ವಿರಾಜ್, ರಾಜೇಶ್ ಸಹಿತ 13 ಮಂದಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾರೇಜಿನಲ್ಲಿದ್ದ 22 ಸಾ. ರೂ. ಕಳವಾಗಿದ್ದು , ಒಟ್ಟು 50 ಸಾ. ರೂ. ನಷ್ಟ ಸಂಭವಿಸಿದೆ ಎಂದೂ ದೂರಿನಲ್ಲಿತಿಳಿಸಲಾಗಿದೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





