Breaking News

BigTv News

ಜನಿವಾರ ಧಾರಣೆ, ಕೈದಾರ ಕಟ್ಟಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಸ್ಕಿ: ಮೊರಾರ್ಜಿ ದೇಸಾಯಿ ಶಾಲೆ ದೈಹಿಕ ಶಿಕ್ಷಕ ಸಸ್ಪೆಂಡ್.

ಕಲಬುರಗಿ ಮೂಲದ ಶಿಕ್ಷಕ ಮದನ್ ಮಕಂದಾರ್ ವಿರುದ್ಧ ಪೋಷಕರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಪ್ರಾಂಶುಪಾಲರಿಗೂ ದೂರು ನೀಡಿದ್ದರು. ಹಲವು ಬಾರಿ ಪ್ರಾಂಶುಪಾಲರು ಕೂಡ ಶಿಕ್ಷಕನಿಗೆ ಎಚ್ಚರಿಕೆ ನೀಡಿ ಬುದ್ಧಿಹೇಳಿದ್ದರು. ಆದಾಗ್ಯೂ ಹಳೇ ಚಾಳಿ ಮುಂದುವರೆಸಿದ್ದ ದೈಹಿಕ ಶಿಕ್ಷಕನನ್ನು ಪ್ರಾಂಶುಪಾಲರು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ..ವಿದ್ಯಾರ್ಥಿಗಳು ಜನಿವಾರ ಹಾಕಿದ್ದಕ್ಕೆ, ಕೈಯಲ್ಲಿ ದಾರ ಕಟ್ಟಿಕೊಂಡಿದ್ದಕ್ಕೆ ಅದನ್ನು ಪ್ರಶ್ನಿಸಿ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಸಿ ಶಿಕ್ಷಿಸುತ್ತಿದ್ದ ದೈಹಿಕ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ …

Read More »

ಲಿವ್ ಇನ್ ರಿಲೇಶನ್ಸ್ ನಲ್ಲಿದ್ದ ಯುವಕನ ಕಾಟ ಸಹಿಸಲಾರದೇ ಕೊಲೆ, ಪೊಲೀಸರಿಗೆ ಶರಣಾದ ಯುವತಿ.

ತಯ್ಯಬಾ ಭಾಗವಾನ ಎಂಬ ವಿವಾಹಿತ ಮಹಿಳೆ ಜೊತೆಯಲ್ಲಿ ಸಮೀರ್ ಎಂಬ ಕೂಲಿ ಕೆಲಸ ಮಾಡ್ತಿದ್ದ ಯುವಕನು ಕಳೆದ ಐದು ವರ್ಷಗಳಿಂದ ಲಿವಿಂಗ್ ರಿಲೇಶನ್ಸ್ ಇದ್ದ. ನಗರದ ಜುಮ್ಮಾ ಮಸೀದಿಯ ಏರಿಯಾದ ಅಮನ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ಇತ್ತಿಚೆಗೆ ಸಮೀರ ಮದ್ಯವ್ಯಸನಿಯಾಗಿದ್ದು ಈತನ ಕಿರಿಕಿರಿ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತಿದ್ದ ತಯ್ಯಬಾ ಈ ಹಿಂದೆಯೂ ಒಂದು ಬಾರಿ ಆತನ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಳು. ಬಳಿಕ ಆಕೆಯೇ ಆಸ್ಪತ್ರೆಗೆ …

Read More »

ಕಾಂಗೋ | ತಾಮ್ರದ ಗಣಿಯಲ್ಲಿ ಸೇತುವೆ ಕುಸಿದು ಕನಿಷ್ಠ 32 ಮಂದಿ ಮೃತ್ಯು.

ಲುಲಾಬಾ ಪ್ರಾಂತದ ಕಲಾಂಡೊ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಗಣಿ ಕಾರ್ಮಿಕರು ಮತ್ತು ಗಣಿಗೆ ಭದ್ರತೆ ಒದಗಿಸಿದ್ದ ಸೇನಾ ಸಿಬ್ಬಂದಿ ನಡುವೆ ಘರ್ಷಣೆಯ ಬಳಿಕ ಸೇನಾ ಸಿಬ್ಬಂದಿ ಗುಂಡಿನ ದಾಳಿಯಿಂದ ಆತಂಕಗೊಂಡ ಗಣಿ ಕಾರ್ಮಿಕರು ಕಿರಿದಾದ ಸೇತುವೆಯ ಮೂಲಕ ಧಾವಿಸಿದಾಗ ಸೇತುವೆ ಕುಸಿದು ದುರಂತ ಸಂಭವಿಸಿದೆ ಎಂದು ವರದಿ ತಿಳಿಸಿದೆ.ಕನಿಷ್ಠ 32 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

Read More »

ಬೆಂಗಳೂರಿನಲ್ಲಿ ಮುಂದುವರಿದ ರೋಡ್ ರೇಜ್ ಕೇಸ್: ಬೈಕ್ ಗೆ ಸೈಡ್ ಬಿಡದಿದ್ದಕ್ಕೆ ಕಿರಿಕ್!

ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರಿಯುತ್ತಿರುವ ನಡುವೆ, ಬೈಕ್‌ಗೆ ಸೈಡ್ ಬಿಡಲಿಲ್ಲ ಎಂಬ ಕಾರಣಕ್ಕೆ ಪುಡಿ ರೌಡಿ ಒಬ್ಬ ನಡು ರಸ್ತೆಯಲ್ಲೇ ಗಲಾಟೆ ಸೃಷ್ಟಿಸಿದ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.16ನೇ ತಾರೀಖು ರಾತ್ರಿ ಸುಮಾರು 8:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ, ಬೈಕ್ ನಿಲ್ಲಿಸಿ ರೋಡ್ ಬ್ಲಾಕ್ ಮಾಡಿದ ಆರೋಪಿಯು, ಕಾರಿನಲ್ಲಿದ್ದವರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ನಡೆಸಿ ಹಲ್ಲೆಗೆ ಯತ್ನಿಸಿದ್ದಾನೆ.

Read More »

ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆತನನ್ನು ಕೊಂದು ಆರೋಪಿಗಳು ಮೃತದೇಹವನ್ನು ಮನೆಯಲ್ಲಿ ನೆಲದ ಅಡಿ ಹೂತು ಹಾಕಿದ್ದರು. ಅನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ.ಕೊಲೆಯಾದ ಟೆಕ್ಕಿಯನ್ನು ಆಂಧ್ರಪ್ರದೇಶ ಕುಪ್ಪಂ ಮೂಲದ ಶ್ರೀನಾಥ್ (30) ಎಂದು ಗುರುತಿಸಲಾಗಿದೆ. ಶ್ರೀನಾಥ್ ಅತ್ತಿಬೆಲೆಯ ನೆರಳೂರಿನಲ್ಲಿ ತನ್ನ ಪತ್ನಿ ಹಾಗೂ ಮಗು ಜೊತೆ ವಾಸವಿದ್ದರು. ಹಣ …

Read More »

ಕೊಣನೂರು: ಮಹಿಳೆ ಶವ ಪತ್ತೆ; ಮಗು ನಾಪತ್ತೆ.

ಸಾಲಿಗ್ರಾಮ ತಾಲ್ಲೂಕಿನ ಮಹಾದೇವಿ (29) ಎಂಬುವವರ ಶವ ಸೋಮವಾರ ಕಾವೇರಿ ನದಿಯಲ್ಲಿ ಸಿಕ್ಕಿದೆ. ಈಕೆಯನ್ನು ದೊಡ್ಡಮಗ್ಗೆ ಹೋಬಳಿಯ ಸೀಬಳ್ಳಿಯ ಕುಮಾರ್ ಎಸ್.ಬಿ. ಎಂಬುವವರಿಗೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮಹಾದೇವಿಗೆ ತನ್ನ ಗಂಡ ಕೆಟ್ಟದ್ದಾಗಿ ಮೇಸೇಜ್ ಮಾಡಿದ್ದು, ಕೊಣನೂರು ಠಾಣೆಗೆ ದೂರು ನೀಡುವುದಾಗಿ ಹೇಳಿ ನ.14 ರಂದು ಮಗುವಿನೊಂದಿಗೆ ಬಂದಿದ್ದಳು. ಆದರೆ, ನಾಪತ್ತೆಯಾಗಿದ್ದಾಳೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.ರಾಮನಾಥಪುರ ಹೋಬಳಿಯ ಬೆಟ್ಟಸೋಗೆ ಬಳಿ ಕಾವೇದಿ ನದಿಯಲ್ಲಿ ಸಾಲಿಗ್ರಾಮದ …

Read More »

ಸೌದಿ ಅರೇಬಿಯಾ ಬಸ್ ದುರಂತ 45 ಜನರ ಸಾವು: ಓರ್ವ ಕನ್ನಡಿಗನೂ ಬಲಿ, ಜೀವನಾಧಾರವನ್ನೇ ಕಳೆದುಕೊಂಡ ಕುಟುಂಬ.

ಸೌದಿ ಅರೇಬಿಯಾದಲ್ಲಿ ಬಸ್ ದುರಂತ ಪ್ರಕರಣದಲ್ಲಿ ಒಟ್ಟು 45 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕರು ಹೈದರಾಬಾದ್ ನವರಾಗಿದ್ದಾರೆ ಮತ್ತು ಓರ್ವ ಕರ್ನಾಟಕದ ಹುಬ್ಬಳ್ಳಿಯವರು ಎಂದು ತಿಳಿದುಬಂದಿದೆ. ಅಬ್ದುಲ್ ಘನಿ ಶಿರಹಟ್ಟಿ (55) ಎಂದು ಗುರುತಿಸಲಾಗಿದೆ.ಸೌದಿ ಅರೇಬಿಯಾದ ಮೆಕ್ಕಾ ಮದೀನಾ ರಸ್ತೆಯಲ್ಲಿ ನಡೆದ ಬಸ್ ಮತ್ತು ಟ್ಯಾಂಕರ್ ನಡುವಿನ ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಈ ದುರ್ಘಟನೆಯಲ್ಲಿ ಬಸ್ ನಲ್ಲಿದ್ದ 45 ಜನ ಭಾರತೀಯರು ಸಜೀವವಾಗಿ ದಹನವಾಗಿದ್ದರು.

Read More »

ಅಪರಿಚಿತ ವ್ಯಕ್ತಿಯಿಂದ ಬೆಂಗಳೂರಿನ ಮೆಟ್ರೋ ನಿಲ್ದಾಣ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ `ಇ-ಮೇಲ್’ : `FIR’ ದಾಖಲು.

ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ವಿಲ್ಸನ್ ಗಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಬೆಂಗಳೂರಿನ `BMRCL’ ಗೆ ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಸಂದೇಶ ರವಾನಿಸಿದ್ದು, ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಗೆ ಬಿಎಂಆರ್ ಸಿಎಲ್ ದೂರು ನೀಡಿದೆ.ಬಿಎಂಆರರ್ ಸಿಎಲ್ ಅಧಿಕಾರಿ ದೂರು ನೀಡಿದ್ದಾರೆ. ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

Read More »

ಭ್ರಷ್ಟಾಚಾರದ ವಿರುದ್ದ ಬೀದಿಗಿಳಿದ ಹುಡುಗರು – ಮೆಕ್ಸಿಕೋದಲ್ಲೂ ಜೆನ್ ಝೀ ಪ್ರೊಟೆಸ್ಟ್!

ನೇಪಾಳದಲ್ಲಿ ಹಿಂಸಾತ್ಮಕ ಜೆನ್‌ ಝೀ ಪ್ರತಿಭಟನೆಯ ಬಳಿಕ ಇದೀಗ ಮೆಕ್ಸಿಕೋದಲ್ಲೂ ಯುವ ಜನರ ಗುಂಪು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಪರಾಧ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿದಿ ಸಾವಿರಾರು ಜೆನ್‌ ಝೀ ಪ್ರತಿಭಟನಾಕಾರರು ಮೆಕ್ಸಿಕೋ ನಗರದ ಬೀದಿಗಿಳಿದಿದ್ದಾರೆ.ಇನ್ನು ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ನೂರಾರು ಯುವಕರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದಾಗ ಪೊಲೀಸರು ತಮ್ಮ ಗುರಾಣಿಗಳನ್ನು ಬಳಸಿ ಪ್ರತಿಭಟನಾಕಾರರ ಮೇಲೆ ಪ್ರತಿಕ್ರಿಯೆ ನೀಡಿದ್ದಾರೆ.

Read More »

ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ರೋಡಿಗೆ ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಳಿಯಾರು ರಸ್ತೆಯ ಹುಯಿಲ್ ದೊರೆ ಸೇತುವೆ ಬಳಿ ಗೋಧಿ ತುಂಬಿದ ಲಾರಿ ಪಲ್ಟಿಯಾಗಿದೆ. ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೋಧಿ ರಸ್ತೆ ತುಂಬ ಚೆಲ್ಲಿದೆ.ಅಪಘಾತದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಚೀಲಗಳೊಂದಿಗೆ ಬಂದು ಲಾರಿಯಿಂದ ಬಿದ್ದ ಗೋಧಿಯನ್ನು ಬಾಚಿಕೊಂಡಿದ್ದಾರೆ. ಕೆಲವರಂತೂ ಗೋಧಿಯನ್ನು ಬಾಚಿ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಘಟನೆ ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

Read More »