Breaking News

Shaikh BigTv

ಮಹದಾಯಿ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ ಜೋಶಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂದಾಗೆಲ್ಲ ಮಹದಾಯಿ ವಿಚಾರವನ್ನು ಮಾತನಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮಹದಾಯಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವನ್ಯಜೀವಿ ಮಂಡಳಿಯವರು ಈ ವಿಷಯದಲ್ಲಿ ಪ್ರತಿಕ್ರಿಯೆ ಕೊಡಬೇಕಿತ್ತು. ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂಡೂರಾ ಬಗ್ಗೆ ಒಂದು ಪ್ರಪೋಸಲ್ ಇದೆ. ಉಳಿದೆಲ್ಲ ಸಂಗತಿಯನ್ನು ನಾವು ಬಿಜೆಪಿ ಅವರು ಮಾಡಿದ್ದೇವೆ …

Read More »

ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದೆ : ಸಚಿವ ಎಚ್ ಕೆ ಪಾಟೀಲ್

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಯಲ್ಲಿ ವನ್ಯ ಮಂಡಳಿ ತಿರಸ್ಕಾರ ವಿಚಾರ, ಸಚಿವ ಸಂಪುಟದಲ್ಲಿ ಈ ಕುರಿತು ಸುದೀರ್ಘವಾದ ಚರ್ಚೆ ಆಗಿದೆ. ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ಮುಂದೆ ಸಹ ಹಾಕಲಾಗಿದೆ. ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ ಇದು. ಅರಣ್ಯ ಇಲಾಖೆಯವರು ಈಗಾಗಲೇ ಅನುಮತಿ ಕೊಡಲು ಸಿದ್ಧರಿದ್ದರು. ಆದರೆ, ಕೇಂದ್ರ ಸರ್ಕಾರದವರು 10 ವರ್ಷಗಳಿಂದ ಕಾಟ ಕೊಡ್ತಾ ಬಂದಿದ್ದಾರೆಂದು ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್ …

Read More »

ರೌಡಿ ಶಿಟರ ಯಾವ ಸಮಯದಲ್ಲಿ ತಗೆಯಬೇಕು ಅನ್ನುವದು ಗೊತ್ತಿದೆ..

Featured Video Play Icon

ಮಹಿಳೆಯರು,ಮತ್ತು ಮಕ್ಕಳಿಗೆ ಶಾಂತಿ ಭಂಗ ತಂದರೆ ರೌಡಿ ಶಿಟರ್ ಪಟ್ಟ ಗ್ಯಾರಂಟಿ. A B C , ಕ್ಯಾಟಗಿರಿ ಅಂದ್ರೆ ಏನ ಗೊತ್ತಾ..???? ಭವಿಷ್ಯದ ನೆಮ್ಮದಿಯ ಅವಳಿನಗರ ಕಟ್ಟಲು ಕಮೀಷನರ್ ಪಣ!! ನಾಳಿನ ನೆಮ್ಮದಿ ಕದಡಯವ ಮನಸ್ಥಿತಿ ಕಂಡು ಬಂದರೆ ಇಂದೆ ರೌಡಿ ಶಿಟರ್ ಓಪನ್.. ನಾಳೆ ಮಾಡೊದನ್ನ ಇಂದೆ ಮಾಡು… ಇಂದು ಮಾಡೋದನ್ನ ಇವಾಗ್ಲೆ ಮಾಡುತ್ತೆವೆ ..ಖಡಕ್ ಸಂದೇಶ

Read More »

ನವಲಗುಂದದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚನಾವಣೆ ಬರಲಿದ್ದು, ಕಾರ್ಯಕರ್ತರು ನವಲಗುಂದ ಕ್ಷೇತ್ರದ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಛಲ ಹೊಂದಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಾರ್ಯಕರ್ತರಿಗೆ ಇಂದು ಕರೆ ನೀಡಿದರು. ಪಟ್ಟಣದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶೀಘ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲಿನಂತೆ ಗೆಲವು ಸಾಧಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Read More »

ತರಕಾರಿ ಮಾರುಕಟ್ಟೆಯಲ್ಲಿ ಪಾಲಿಕೆ ಮೇಯ‌ರ್: ವೀಡಿಯೋ ವೈರಲ್

ಧಾರವಾಡ: ತರಕಾರಿ ಮಾರುಕಟ್ಟೆಯಲ್ಲಿ ಕಾಳು-ಕಡಿ, ಮಸಾಲೆ ಹಣ್ಣು ತರಕಾರಿ ವ್ಯಾಪಾರಸ್ಥರ ಕುಂದು ಕೊರತೆಗಳನ್ನು ಪಾಲಿಕೆ ಆಯುಕ್ತರೊಂದಿಗೆ ಮೇಯರ್ ರಾಮಣ್ಣ ಬಡಿಗೇರ ಅವರು ಆಲಿಸಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾಪೌರರು ದುರ್ಗಮ್ಮ ಬಿಜವಾಡ, ವಿರೋಧ ಪಕ್ಷದ ನಾಯಕರು ರಾಜಶೇಖರ್. ಕಮತಿ ಪಾಲಿಕೆ ಸದಸ್ಯರುಗಳು, ಪಾಲಿಕೆ ಅಧಿಕಾರಿ ಸಿಬ್ಬಂದಿಗಳು, ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ಇದ್ದರು.

Read More »

ಮುಡಾ ಹಗರಣ ಡೈವರ್ಟ್ ಮಾಡೋಕೆ ದರ್ಶನ ಜೈಲು ಪೋಟೋ ವೈರಲ್: ಸಚಿವ ಜೋಶಿ ಕಿಡಿ

ಹುಬ್ಬಳ್ಳಿ: ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣವನ್ನು ಡೈವರ್ಟ್ ಮಾಡುವ ಹಾಗೂ ಮಾಧ್ಯಮ ಮುಂದೆ ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ದರ್ಶನ ಪೋಟೋ ವೈರಲ್ ಮಾಡುವ ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದ ದರ್ಶನ ಪೋಟೋ ಹೊರಗಡೆ ಬಿಟ್ಟಿರುವುದು ಕೂಡ ರಾಜ್ಯ ಸರ್ಕಾರವೇ. ದರ್ಶನ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ …

Read More »

ಗಣೇಶನ ಹಬ್ಬಕ್ಕೆ ಧಾರವಾಡದಲ್ಲಿ ಪಟಾಕಿ ವ್ಯಾಪಾರ ಜೋರು

ಧಾರವಾಡ: ಈ ಗಣೇಶನ ಹಬ್ಬಕ್ಕೆ ಧಾರವಾಡದಲ್ಲಿ ಪಟಾಕಿ ವ್ಯಾಪಾರ ಜೋರಾಗಿಯೇ ನಡೆದಿದೆ. ಪ್ರತಿವರ್ಷ ಧಾರವಾಡದ ಕಡಪಾ ಮೈದಾನದಲ್ಲಿ ಪಟಾಕಿ ವ್ಯಾಪಾರಸ್ಥರು ಪಟಾಕಿ ತಂದು ಮಾರಾಟ ಮಾಡುತ್ತಾರೆ. ಪ್ರಸಕ್ತ ವರ್ಷ ಕೂಡ ಸುಮಾರು ಆರೇಳು ಅಂಗಡಿಗಳನ್ನು ತೆರೆಯಲಾಗಿದ್ದು, ಜನ ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಗೋವಾ ಪಟಾಕಿ, ಚಟಪಟ ಪಟಾಕಿ, ಕುಡಿಕೆ, ಚಕ್ರ, ಆಟಂಬಾಂಬ್ ಸೇರಿದಂತೆ ಇತ್ಯಾದಿ ಪಟಾಕಿಗಳ ವ್ಯಾಪಾರ ಜೋರಾಗಿ ನಡೆದಿದೆ. ಗಣೇಶನ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಕಳೆಗಟ್ಟಿದೆ.

Read More »

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಾಲುಗಂಬ ಪೂಜೆ

ಹುಬ್ಬಳ್ಳಿ: ಐತಿಹಾಸಿಕ ರಾಣಿ ಚನ್ನಮ್ಮ ಮೈದಾನದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿರುವ ಶ್ರೀ ಗಣೇಶ ಹಬ್ಬದ ಅಂಗವಾಗಿ, ಇಂದು ರಾಣಿ ಚನ್ನಮ್ಮ ಮೈದಾನ ಗಜಾನನ ಮಹಾಮಂಡಳದಿಂದ ಹಾಲಗಂಬ ಪೂಜೆಯನ್ನು ನೆರವೇರಿಸಲಾಯಿತು. ರಾಣಿ ಚನ್ನಮ್ಮ ಮೈದಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಠಾಪಿಸಲ್ಪಡುವ ಗಣೇಶನಿಗೆ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಶಾಸಕ‌ ಮಹೇಶ್ ಟೆಂಗಿನಕಾಯಿ, ರಾಣಿ ಚನ್ನಮ್ಮ ಮೈದಾನ ಗಜಾನನ ಮಹಾಮಂಡಳದ ಅಧ್ಯಕ್ಷ ಸಂಜೀವ್ ಬಡಸ್ಕರ್, ಸ್ವಾಗತ …

Read More »

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬ್ಯಾಂಕ್ ನಲ್ಲಿ ದರೋಡೆ ಮಾಡಲು ಯತ್ನಿಸಿದ ವ್ಯಕ್ತಿ ಬಂಧನ

ಹುಬ್ಬಳ್ಳಿ:ಅಮರಗೋಳದ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕಿನ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಬ್ಯಾಂಕ್ ದರೋಡೆ ಯತ್ನಿಸಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಎಪಿಎಂಸಿ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಲ ತೀರಿಸುವ ಸಲುವಾಗಿ ಬ್ಯಾಂಕ್ ದರೋಡೆಗೆ ಮಾಡಲು ಯತ್ನಿಸಿದರು.ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು, ಪ್ರಾಣ ಬೆದರಿಕೆ ಒಡ್ಡಿ ’10 ಲಕ್ಷ ರೂ ಹಣ ಕೊಡಿ’ ಎಂದು ಹೇಳುತ್ತಾ …

Read More »

ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ: ಪೋಲಿಸ್ ರಿಂದ ಮುಟ್ಟಿದ ಬಿಸಿ

ಹುಬ್ಬಳ್ಳಿ: ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅಲ್ಲಿಂದ ಕಳುಹಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬ ವಿಪರೀತ ಕುಡಿದು ನಿಲ್ದಾಣದಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಬಸ್ ಚಾಲಕರು ಹಾಗೂ ನಿರ್ವಾಹಕರು ಆತನನ್ನು ಅಲ್ಲಿಂದ ಹೋಗು ಎಂದರೂ ಹೋಗದ ಕಾರಣ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು …

Read More »