Breaking News

Shaikh BigTv

ಹುಬ್ಬಳ್ಳಿ-ಧಾರವಾಡ: 1700 ಪುಡಿರೌಡಿಗಳಿಗೆ ಕಮಿಷನರ್‌ ಶಶಿಕುಮಾರ್ ಫುಲ್‌ ಕ್ಲಾಸ್‌!

ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಕಮಿಷನರ್‌ ಶಶಿಕುಮಾರ್‌ ರೌಡಿಶೀಟರ್‌ ಗಳಿಗೆ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ.ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪರೆಡ್‌ ಮಾಡಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ 50-60 ರಿಂದ 200ರವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಬೀದರ್‌ , ಕಲಬುರಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಅವರು ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾರಾ …

Read More »

ಹುಬ್ಬಳ್ಳಿ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ!!

ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಕ್ರಾಸ್ ಬಳಿ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ರಸ್ತೆ ಅಪಘಾತ ಪ್ರಕರಣ, ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರದವರು. ಶ್ವೇತ (29), ಅಂಜಲಿ(26), ಸಂದೀಪ್ (26) ವಿಠಲ್ (55) ಶಶಿಕಲಾ (40) ಮೃತರು.ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ತೆರಳುತ್ತಿದ್ದರು …

Read More »

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

Featured Video Play Icon

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಹಶೀಲ್ದಾರ ಕಲಗೌಡ ಪಾಟೀಲ ಹೇಳಿದರು. ಅಂತ್ಯಕ್ರಿಯೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಮೇಲೆ ಮಣ್ಣು ಮಾಡಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿಗೆ ಏನನ್ನೂ ಹೇಳಲು ಆಗುವುದಿಲ್ಲ ಎಂದರು. ಸಿಐಡಿ ಎಸ್.ಪಿ, ಎಸಿಪಿ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಸಮ್ಮುಖದಲ್ಲಿ …

Read More »

ಹುಬ್ಬಳ್ಳಿ : ಬಾಲಕಿ ಅತ್ಯಾಚಾರ,ಹತ್ಯೆ ಆರೋಪಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ಹಂತಕ ರಿತೇಶಕುಮಾರ್..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಣ್ಣೀರು ಹಾಕಿದ್ದ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಯ ಶವವನ್ನು ಮಣ್ಣು ಮಾಡಲಾಗಿದೆ. ಐದು ವರ್ಷದ ಬಾಲಕಿ ರೇಪ್ ಆಂಡ್ ಮರ್ಡರ್ ಕೇಸ್ ನಲ್ಲಿ ಎನ್‌ಕೌಂಟರ್ ಗೆ ಬಲಿಯಾದ ಅನಾಥ ಶವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಪೊಲೀಸರ ಗುಂಡಿಗೆ ಬಲಿಯಾದ ಹಂತಕ ರಿತೇಶಕುಮಾರನ ಅಂತ್ಯಸಂಸ್ಕಾರ. ತಹಶಿಲ್ದಾರರ ಹಾಗೂ ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ. ಹೌದು.. ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಹಂತಕ …

Read More »

ಹುಬ್ಬಳ್ಳಿ : ಕಾಶ್ಮೀರದ ಉಗ್ರರ ದಾಳಿಯಿಂದ ಜಸ್ಟ್ ಮಿಸ್ ಆದ ಹುಬ್ಬಳ್ಳಿ ಮೂಲದ ತುಂಬು ಕುಟುಂಬ!!

ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಒಟ್ಟು 45 ಜನ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿಯಿಂದ ಏಪ್ರೀಲ್ 11 ರಂದು ಬಸ್ ನಿಂದ ಕಾಶ್ಮೀರದತ್ತ ಪ್ರಯಾಣ ಬೆಳಿಸಿದ್ದ ಕಲ್ಯಾಣಶೆಟ್ಟರ್ ಕುಟುಂಬ,ಏ18 ರಂದು ಪೆಹಲ್ಗಾಮ್ ದಲ್ಲಿ ಇಡೀ ದಿನ ಎಂಜಾಯ್ ಮಾಡಿದ್ದಾರೆ.ಏಳು ಕಿಲೋಮೀಟರ್ ಬೆಟ್ಟ, ಗುಡ್ಡದಲ್ಲಿ ಕುದುರೆ ಸವಾರಿ ಮಾಡಿ ಪೆಹಲ್ಗಾಮ್ ಸೇರಿಕೊಂಡಿದ್ದರು.ಪೆಹಲ್ಗಾಮ್ ಶಾಂತವಾಗಿರುವ ಪ್ರದೇಶ‌ ಅಲ್ಲಿ ಯಾವುದೇ ಹೆಚ್ಚಿನ ಭದ್ರತೆ ಅವಶ್ಯಕತೆ ಇಲ್ಲ,ಆದರೆ ಉಗ್ರರು ಕಾಡಿನ …

Read More »

ಎನಕೌಂಟರ್ ಪ್ರಕರಣ ಶೀಘ್ರವಾಗಿ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ: ಆಯೋಗದ ಅಧ್ಯಕ್ಷ ಡಾ‌.ಶಾಮ್ ಭಟ್. ಹೇಳಿಕೆ..!

Featured Video Play Icon

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಎನಕೌಂಟರ್ ಪ್ರಕರಣದ ಬಗ್ಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದೆ. ಪೊಲೀಸ್ ಕಮೀಷನರ್ ರಿಪೋರ್ಟ್ ಆದರಿಸಿ ಇಲ್ಲಿ ಬಂದಿದ್ದೇವೆ. ಎನಕೌಂಟರ್ ಆದ ಸಂದರ್ಭದಲ್ಲಿ ನಾವು ಬರುವುದು ಸಹಜ. ಇಲ್ಲಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಶೀಘ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ “ಡಾ.ಟಿ.ಶ್ಯಾಮ್ ಭಟ್” ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,ಎನಕೌಂಟರ್ ಬಗ್ಗೆ ನಾವು …

Read More »

ಬಾಲಕನಿಗೆ ಹಲ್ಲೆ ಮಾಡಿ ಕ್ರೌರ್ಯ ಮೆರೆದ ಖಾಕಿ ಸಸ್ಪಂಡ್…

Featured Video Play Icon

ತಪ್ಪು ಯಾರ ಮಾಡಿದರೂ ತಪ್ಪು ತಪ್ಪೇ..! ಒಳ್ಳೆಯದೋ ಕೆಟ್ಟದ್ದೋ..! ಕಾಲದ ಬಗ್ಗೆ ಮಾತನಾಡುವವರಿಗೆ ತಕ್ಕಪಾಠ ಕಲಿಸಿದೆ..! ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸಿಬ್ಬಂದಿಗಳ ಅಮಾನವೀಯ ಕೃತ್ಯ ಬೆಳಕಿಗೆ ಬಂದಿತ್ತು. BIGTV NEWS ಮಾಡಿದ ವರದಿಗೆ ಎಚ್ಚೇತ್ತುಕೊಂಡ ಪೊಲೀಸ್ ಕಮೀಷನರ್ ಪೊಲೀಸ್ ಕಾನ್ಸಟೇಬಲ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದು, ಬಿಗ್ ಟಿವಿಯ ಬಿಗ್ ಇಂಪ್ಯಾಕ್ಟ್ ಆಗಿದೆ.ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೇರದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ …

Read More »

ಹುಬ್ಬಳ್ಳಿ :ಆಟೋ ಟಿಪ್ಪರ್ ಹರಿದು ಬಾಲಕಿ ಸಾವು!!

ಹುಬ್ಬಳ್ಳಿ: ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್ ವಾಹನವೊಂದು ಆರು ವರ್ಷದ ಮಗುವಿಗೆ ಗುದ್ದಿರುವ ಪರಿಣಾಮ, ಆರು ವರ್ಷದ ಮಗು ಮೃತಪಟ್ಟಿರುವ ಘಟನೆ ಸೋನಿಯಾಗಾಂಧಿ ನಗರದಲ್ಲಿ ನಡೆದಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಟೋ ಟಿಪ್ಪರ್ ವಾಹನದಿಂದ ಇಂತಹದೊಂದು ಅವಘಡ ಸಂಭವಿಸಿದೆ. ಆಟೋ ಟಿಪ್ಪರ್ ಚಾಲಕ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ರಸ್ತೆಯಲ್ಲಿ ಹೊರಟಿದ್ದ ಬಾಲಕಿಗೆ ಗುದ್ದಿರುವ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಿಮ್ಸ್ ಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ಹಮೀದಾಬಾನು …

Read More »

ಬ್ರಿಡ್ಜ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ: ಪ್ರೇಮ ವೈಫಲ್ಯದ ಶಂಕೆ…?

ಹುಬ್ಬಳ್ಳಿ: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವಕನೋರ್ವ ದೇವರಗುಡಿ ಹಾಳ ರಸ್ತೆಯ ಹತ್ತಿರದ ನ್ಯಾಶನಲ್ ಹೈವೇ ಬ್ರಿಡ್ಜ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕಿಕೊಂಡ ಘಟನೆ ಈಗಷ್ಟೇ ನಡೆದಿದೆ.ನಗರದ ಹೆಗ್ಗೆರಿ ಜಗದೀಶ್ ನಗರ ನಿವಾಸಿ 21 ವರ್ಷದ ಅವಿನಾಶ್ ಮೂದಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವತಿಯು ಪ್ರೇಮದ ವಿಷಯದಲ್ಲಿ ನಿರಾಕರಣೆ ಮಾಡಿದ ವಿಚಾರಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಸದ್ಯ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು …

Read More »

ಬಾಲಕನಿಗೆ ಹಲ್ಲೆ ಮಾಡಿ ಕ್ರೌರ್ಯ ಮೆರೆದ ಖಾಕಿ ??:ಪೊಲೀಸರು ರಕ್ಷಕರೋ..? ಭಕ್ಷಕರೋ..?

Featured Video Play Icon

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸಿಬ್ಬಂದಿಗಳ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ರೌಡಿಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಪುಟ್ಟ ಮಕ್ಕಳ ಮೇಲೆಯೇ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಜನಸ್ನೇಹಿ ಹೆಸರಲ್ಲಿ ಜನರಿಗೆ ಸಂಕಷ್ಟ ತಂದೊಡ್ಡುವ ಖಾಕಿ ಕಾರ್ಯಕ್ಕೆ ಈಗ ಎಲ್ಲೆಡೆಯೂ ಬೇಸರ ಮೂಡಿದೆ.ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೇರದ ಪೊಲೀಸ್ ಕಾನ್ಸ್ ಟೇಬಲ್ ನ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.‌ …

Read More »