Breaking News

Shaikh BigTv

ಮಾದಕ ವ್ಯಸನಿಗಳಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗಿಳಿದ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್

Featured Video Play Icon

ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲಾ ಒಂದು ಘಟನೆಗಳು ನಡೆಯುತ್ತಾ ಇರುತ್ತವೆ. ಇನ್ನು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಾಕು ಇರಿತದ ಪ್ರಕರಣ, ಕೊಲೆ ಪ್ರಕರಣ, ರೌಡಿಗಳ ಹಾವಳಿ, ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕಲು ಖಾಕಿ ಪಡೆ ಮುಂದಾಗಿದೆ.ನಗರದಲ್ಲಿ ರೌಡಿಗಳಿಗೆ, ಡ್ರಗ್ ಪೆಡ್ಲರ್ಸ್ ಗಳಿಗೆ ಪರೇಡ್ ನಡೆಸುವ ಮೂಲಕ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪುಂಡ ಪೋಕರಿಗಳಿಗೆ ಹಾಗೂ ಮಾದಕ ವ್ಯಸನಿಗಳಿಗೆ …

Read More »

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನಿಗೆ ಚಾಕು ಇರಿತ..

Featured Video Play Icon

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.ಮಾರುತಿ ನಾರಾಯಣಪುರ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ರೋಹಿತ್ ಅಂಚಿನಮನಿ, ವಿಶಾಲ್ ಬಿಲಾನಾ, ಕುಶಾಲ್ ವಜ್ಜನ್ನವರ್, ಶ್ರೀನಾಥ್ ದುಂಡಿ, ವಿಶಾಲ ದೋಣಿ, ಅಜಯ್ ಹೊಸಮನಿ ಮತ್ತು ಪೃಥ್ವಿರಾಜ್ ಕವದಿ ಬಂಧಿತ ಆರೋಪಿಗಳು ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಮಾರುತಿ ನಾರಾಯಣಪುರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.ಒಂದು ವರ್ಷದ ಹಿಂದೆ ಶಾಲೆಯ ವಾರ್ಷಿಕೋತ್ಸವ …

Read More »

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ..

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಹಳೇ ಹುಬ್ಬಳ್ಳಿಯ ಅಯೋಧ್ಯ ನಗರದಲ್ಲಿ ನಡೆದಿದೆ.ಮೊನ್ನೆಯಷ್ಟೇ ಕೊಲೆ ಪ್ರಕರಣದ ಬೆನ್ನಲ್ಲೆ ಈಗ ಮತ್ತೊಂದು ಚಾಕು ಇರಿತದ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ದೌಡಾಯಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.ಎಕ್ಸ್ ಕ್ಲ್ಯೂಸಿವ್ ಸಿ.ಸಿ ಟಿವಿ ದೃಶ್ಯಾವಳಿಗಳು, ಚಾಕು ಇರಿತದ ಇಂಚಿಂಚು ಮಾಹಿತಿ ಬಿಗ್ ಟಿವಿಯಲ್ಲಿ ಮಾತ್ರ….

Read More »

ಹುಬ್ಬಳ್ಳಿಯ ಸಿಲಿಂಡರ್ ಸ್ಫೋಟ ಪ್ರಕರಣ: ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಮಾಲಾಧಾರಿ ವಿನಾಯಕ್ ಬಾರಕೇರ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟ ದುರ್ಘಟನೆಯಲ್ಲಿ ಈವರೆಗೆ 8 ಜನ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಒಬ್ಬ ಮಾಲಾಧಾರಿ ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಮಾಲಾಧಾರಿ ವಿನಾಯಕ್ ಬಾರಕೇರ ಬಹುತೇಕ ಚೇತರಿಸಿಕೊಂಡಿದ್ದು, ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ. 12 ವರ್ಷದ ವಿನಾಯಕ್ ಆರೋಗ್ಯದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಡಿಸ್ಚಾರ್ಜ್​ ಮಾಡಲಾಗುವುದು ಎಂದು ಕಿಮ್ಸ್ ನಿರ್ದೇಶಕ ಡಾ. ಎಸ್​ಎಫ್ ಕಮ್ಮಾರ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 22 …

Read More »

ಹುಬ್ಬಳ್ಳಿ: ಚಾಕು ಇರಿತಕ್ಕೆ ಒಳಗಾಗಿದ್ದ ಯುವಕ ಸಾವು…

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಆನಂದ ನಗರದ ಗೋಡಕೆ ಪ್ಲಾಟ್ ಬಳಿ ನಡೆದಿತ್ತು. ಸಮೀರ್ ಶೇಖ್(18) ಹಾಗೂ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮುಜಾಮಿಲ್ ಎಂಬ ಆರೋಪಿ ತನ್ನ ಸಹಚರರೊಂದಿಗೆ ಸಮೀರ್ ಹಾಗೂ ಜಾವೀದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದನು. ಗಾಯಗೊಂಡ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಸಮೀರ್ ಶೇಖ್ (18) ಮೃತಪಟ್ಟಿದ್ದಾನೆ…

Read More »

ಹೊಸ ವರ್ಷಾಚರಣೆ: ಆರೋಪಿಗಳು ಒಳ್ಳೆಯ ಜವಾಬ್ದಾರಿಯುತ ನಾಗರಿಕರಾಗಿ; ಕಮಿಷನರ್ ಎನ್. ಶಶಿಕುಮಾರ್.

Featured Video Play Icon

ಕ್ರೈಂ ನಿಂದ ಜೀವನ ಖುಷ್ ಇರಲ್ಲ.. ಸಜ್ಜನಿಕೆಯಿಂದ ಬಾಳಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಾಧ್ಯಮ ಮಿತ್ರರಿಗೆ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಹೊಸ ವರ್ಷದ ಶುಭಾಶಯ ತಿಳಿಸಿದ ಕಮಿಷನರ್ ಎನ್.ಶಶಿಕುಮಾರ್….ಹುಬ್ಬಳ್ಳಿ: ಹೊಸ ವರ್ಷದ ಹಿನ್ನಲೆಯಲ್ಲಿ ಡ್ರಗ್ ಪೆಡ್ಲರ್ಸ್, ರೌಡಿ ಶಿಟರ್ ಗಳ ಬಗ್ಗೆ ಪರೇಡ್ ನಡೆಸಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ಸುಮಾರು 2000 ಸಿಬ್ಬಂದಿಗಳ ಸುಸಜ್ಜಿತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಇನ್ನು …

Read More »

ಹಾವು ಕಚ್ಚಿ ಮೂರು ವರ್ಷದ ಬಾಲಕಿ ಸಾವು

ಹುಬ್ಬಳ್ಳಿ: ಅಂಗನವಾಡಿಗೆ ತೆರಳಿದ್ದ ವೇಳೆ ಮೂರು ವರ್ಷದ ಮಗು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲೆಯ ಮುಂಡಗೋಡು ಅಳೂರು ಓಣಿಯಲ್ಲಿ ನಡೆದಿದೆ. ಮಯೂರಿ(3) ಮೃತ ಬಾಲಕಿ, ಸ್ಥಳಿಯ ಮಾರಿಕಾಂಬ ಅಂಗನವಾಡಿ ತೆರಳಿದ್ದ ಮಯೂರಿ ಹೊರಬದಿಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಮಯೂರಿ ಕಾಲಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಯೂರಿ ಸಾವನ್ನಪ್ಪಿದ್ದಾಳೆ. ಅಂಗನವಾಡಿ ಶಿಕ್ಷಕಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Read More »

ಹುಬಳ್ಳಿಯಲ್ಲಿ ಹಳೇ ದ್ವೇಷಕ್ಕಾಗಿ ಇಬ್ಬರಿಗೆ ಚಾಕು ಇರಿದ ಆರೋಪಿ ವಶಕ್ಕೆ…!

Featured Video Play Icon

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಆನಂದ ನಗರದ ಗೋಡಕೆ ಪ್ಲಾಟ್ ಬಳಿ ನಡೆದಿದೆ.ಸಮೀರ್ ಶೇಖ್ (18) ಹಾಗೂ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮುಜಾಮಿಲ್ ಎಂಬ ಆರೋಪಿ ತನ್ನ ಸಹಚರರೊಂದಿಗೆ ಸಮೀರ್ ಹಾಗೂ ಜಾವೀದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದನು. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ …

Read More »

ಅಯ್ಯಪ್ಪ ಮಾಲಾಧಾರಿಗಳ ಸಾವು: ಸಚಿವ ಸಂತೋಷ್ ಲಾಡ್ ಸಂತಾಪ

ಹುಬ್ಬಳ್ಳಿ: ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸೋರಿಕೆಯಾಗಿ ಉಂಟಾದ ಸ್ಫೋಟದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರ ಪೈಕಿ ನಿನ್ನೆ ಒಬ್ಬರು ಹಾಗೂ ಇಂದು ಒಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದು, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 7ಕ್ಕೇರಿದೆ. 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ಮತ್ತಿಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ …

Read More »

ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು: ಮೃತರ ಸಂಖ್ಯೆ 7ಕ್ಕೆ ಏರಿಕೆ

ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಮತ್ತೋರ್ವ ಮಾಲಾಧಾರಿ ಸಾವಿಗೀಡಾಗಿದ್ದು, ಸತ್ತವರ ಸಂಖ್ಯೆ ಏಳಕ್ಕೇರಿದೆ. ತೇಜಸ್ ಸತಾರೆ ಎಂಬ ಮಾಲಾಧಾರಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ತೇಜಸ್ ಹೊಟೇಲ್‌ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ. ಘಟನೆಯಲ್ಲಿ ಇನ್ನೋರ್ವನ ಸ್ಥಿತಿಯೂ ಗಂಭೀರವಾಗಿದೆ. ಘಟನೆಯ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಕ್ಕೆ ಸರಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

Read More »