Breaking News

Shaikh BigTv

ಬೆಳಗಾವಿ ಚಳಿಗಾಲ ಅಧಿವೇಶನ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಗೆ ಒತ್ತಾಯ

ಧಾರವಾಡ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಕುರಿತು ಘೋಷಣೆ ಮಾಡಬೇಕು ಎಂದು ಧಾರವಾಡ ಪತ್ಯೇಕ ಪಾಲಿಕೆ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರು ಆಗ್ರಹಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಮಾಡಬೇಕು ಎಂದು ನಾಲ್ಕು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ …

Read More »

ಪೊಲೀಸ್ ಠಾಣೆಯಲ್ಲಿ ಹೋಮ್ ಹವನ: ಖಾಕಿಯ ಕೆಲಸಕ್ಕೆ ಕಂಗಾಲಾದ ಜನರು..!

Featured Video Play Icon

ಹೆಸರು ಮಾಡಲು ಧರ್ಮ ದಂಗಲ್ ಗೆ ನಾಂದಿ ಹಾಡಿದ್ರಾ ಆರಕ್ಷಕರು!!! ಮನುಜಮತ ಒಂದೇ ಪಥ ತತ್ವ ಸಿದ್ದಾಂತ ಮರೆತ… ಜನಸ್ನೇಹಿ ಠಾಣೆ ಮಾಡಿ ಅಂದ್ರೆ ಹೋಮ ಹವನ ಮಾಡಿದ ಖಾಕಿಪಡೆ!! ಸರ್ಕಾರಿ ಕಚೇರಿಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸರ್ವಜನಾಂಗದ, ಸರ್ವಜನರಿಗೆ ಪೂರಕವಾಗಿರಬೇಕು. ಆದರೆ ಪೊಲೀಸ್ ಅಧಿಕಾರಿಗಳ ನಡೆಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿರುವುದಕ್ಕೆ ದೈವದ ಮೊರೆ ಹೋಗಿ, ನವಗ್ರಹ ಶಾಂತಿ ಹಾಗೂ …

Read More »

ಕೆಲಗೇರಿ ಕೆರೆಯ ಸ್ವಚ್ಛತೆ

ಧಾರವಾಡ : ಧಾರವಾಡ ಕೃಷಿ ವಿಶ್ವವಿದ್ಯಾಲಯವು ನವೆಂಬರ 27 ರಿಂದ ಕೆಲಗೇರಿ ಕೆರೆಯ ಬದುಗಳ ಮೇಲಿರುವ ಕಸ ಕಡ್ಡಿ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರತಿದಿನ ಸುಮಾರು 32 ಕೃಷಿ ಕಾರ್ಮಿಕರನ್ನು ಅಲ್ಲದೇ ಇದರ ಉಸ್ತುವಾರಿ ನೋಡಿಕೊಳ್ಳಲು ಎರಡು ಕ್ಷೇತ್ರ ಸಹಾಯಕರು ಹಾಗೂ ಇಬ್ಬರು ವಿಜ್ಞಾನಿಗಳನ್ನು ನಿಯೋಜಿಸಲಾಗಿದೆ. ಪ್ರತಿದಿನ 6 ರಿಂದ 8 ಟ್ರ್ಯಾಕ್ಟರ್‍ಗಳಿಗೆ ಕಸಕಡ್ಡಿಗಳನ್ನು ತುಂಬಿ ಸ್ವಚ್ಛಗೊಳಿಸಲಾಗುತ್ತಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕೆರೆಯ ಸುತ್ತಲಿನ ಎಲ್ಲ ಕಸಕಡ್ಡಿಗಳನ್ನು …

Read More »

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ: ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಉದ್ಘಾಟನೆ..!

ಹುಬ್ಬಳ್ಳಿ: ಪ್ರತಿ ದಿನ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಒತ್ತಡ ನಿವಾರಣೆ ಹಾಗೂ ಸದೃಢ ಆರೋಗ್ಯ ಹೊಂದಲು ದಿನನಿತ್ಯದ ಜೀವನದಲ್ಲಿ ವ್ಯಾಯಾಮ ಅತೀ ಮುಖ್ಯ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು. ಇಂದು ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ತ್ರಿವರ್ಣ ಬಲೂನ್ ಹಾಗೂ ಪಾರಿವಾಳಗಳನ್ನು …

Read More »

ಉಣಕಲ್ ಕೆರೆ ಚನ್ನಬಸವೇಶ್ವರ ಸಾಗರ ನಾಮಕರಣ

ಹುಬ್ಬಳ್ಳಿ: ವಾಣಿಜ್ಯ ನಗರದ ಪ್ರಸಿದ್ಧ ಉಣಕಲ್ ಕೆರೆ ಒಂದು ಇತಿಹಾಸ ಹೊಂದಿದೆ. ಈ ಕೆರೆಗೆ ಚನ್ನಬಸವೇಶ್ವರ ಸಾಗರ ಹೆಸರು ಇಡಲು ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಎಸ್ ಎಸ್ ಶಂಕರಣ್ಣ ನಿರಂತರ ಹೋರಾಟ ಮಾಡಿದ್ದರು, ಆ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಹೌದು, ಉಣಕಲ್ ಕೆರೆ ಗೆ ಚನ್ನಬಸವೇಶ್ವರ ಸಾಗರ ಹೆಸರು ನಿರಂತರವಾಗಿ ಹೋರಾಟ ನಡೆದಿದ್ದು, ಇದೀಗ ಹುಬ್ಬಳ್ಳಿ ಧಾರವಾಡ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉಣಕಲ್ ಚನ್ನಬಸವೇಶ್ವರ ಜಲ …

Read More »

ಜಮೀನು ನೀಡಿದ ಮಾಲೀಕರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಯಿಂದ ಸನ್ಮಾನ

ನವಲಗುಂದ : ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿ ಈಗಾಗಲೇ ಇರುವ ಆಶ್ರಯ ಜಮೀನಿನ ಪಕ್ಕದಲ್ಲಿರುವ ಬಸವರಾಜ ಬಿರೋಳ್ಳಿಯವರ 1 ಎಕರೆ 19 ಗುಂಟೆ ಜಮೀನನ್ನು ಮನೆ ಇಲ್ಲದ ಬಡಜನತೆಗೆ ಸೂರು ಒದಗಿಸುವುದಕ್ಕಾಗಿ ಖರೀದಿಸಲಾಯಿತು. ಜಮೀನು ನೀಡಿದ ಮಾಲೀಕರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಸನ್ಮಾನಿಸಿ ಚೆಕ್ ನೀಡಿದರು. ಈ ವೇಳೆ ತಹಸೀಲ್ದಾರ ಸುಧೀರ ಸಾಹುಕಾರ, ಪುರಸಭೆ ಮುಖ್ಯಧಿಕಾರಿ ಶರಣು ಪೂಜಾರ, ಪುರಸಭೆ ಸದಸ್ಯರು, ಹಿರಿಯರು ಉಪಸ್ಥಿತರಿದ್ದರು.

Read More »

ರೈತರಿಗೆ ಮೇವು ಕತ್ತರಿಸುವ ಎರಡು ಯಂತ್ರಗಳನ್ನು ವಿತರಣೆ

ನವಲಗುಂದ : ರೈತರನ್ನು ವೃಥಾ ಅಲೆದಾಡಿಸದೇ ಅಧಿಕಾರಿಗಳು ರೈತ ಸಮುದಾಯಕ್ಕೆ ಸ್ಪಂದಿಸಬೇಕು. ರೈತರಿಗೆ ಕಾಲ-ಕಾಲಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳ ಕುರಿತು ಪ್ರಾಮಾಣಿಕವಾಗಿ ಮಾಹಿತಿ ಮುಟ್ಟಿಸಬೇಕು ಎಂದು ಶಾಸಕ ಎನ್.ಎಚ್‌.ಕೋನರಡ್ಡಿ ಹೇಳಿದರು. ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ರೈತರಿಗೆ ಮೇವು ಕತ್ತರಿಸುವ ಎರಡು ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು ಹೈನುಗಾರಿಕೆ ರೈತರಿಗೆ ಒಂದು ವರದಾನವಾಗಿದ್ದು, ಕೃಷಿ ಜೊತೆಗೆ ಹೈನುಗಾರಿಕೆಯನ್ನು ಕೂಡ ರೈತರು ಅಳವಡಿಸಿಕೊಳ್ಳಬೇಕು ಎಂದರು. ಪಶು ವೈದ್ಯಾಧಿಕಾರಿ ಮನೋಹರ …

Read More »

ನಾಳೆ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಕಲ್ಯಾಣಪುರ ಮಠದಲ್ಲಿ ಪೂರ್ವಭಾವಿ ಸಭೆ

ಕುಂದಗೋಳ : ಬೆಳಗಾವಿಯಲ್ಲಿ ಡಿಸೆಂಬರ್ 10 ರಂದು ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಉಪ ಸಮಾಜಗಳಿಗೆ ಓಬಿಸಿ ಮೀಸಲಾತಿ ಹಕ್ಕೊತ್ತಾಯ ಮಾಡಲು ಕೈಗೊಳ್ಳಲಿರುವ ಪ್ರತಿಭಟನೆ ಪೂರ್ವಭಾವಿ ಸಭೆ ನಾಳೆ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಕಲ್ಯಾಣಪುರ ಮಠದಲ್ಲಿ ನಡೆಯಲಿದೆ. ನಾಳೆ ನವೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಕೂಡಲಸಂಗಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕುಂದಗೋಳ ಕಲ್ಯಾಣಪುರ ಮಠದಲ್ಲಿ ನಡೆಯಲಿದೆ. ಕುಂದಗೋಳ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ …

Read More »

ಅನ್ನದಾತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದೇ ಮೊದಲ ಆದ್ಯತೆ

ಹುಬ್ಬಳ್ಳಿ: ರೈತರು ಉತ್ತಿ, ಬಿತ್ತಿ ಬೆಳೆ ತೆಗೆದಾಗ ಮಾತ್ರ ಎಲ್ಲರೂ ಸುಖವಾಗಿರಲು ಸಾಧ್ಯ. ಅಂತಹ ಅನ್ನದಾತರಿಗಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು. ಇಲ್ಲಿನ ನವನಗರದ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಬಡವರ ಪಾಲಿನ ಕಲ್ಪವೃಕ್ಷವಾಗಿದೆ. ಗೃಹಜ್ಯೋತಿ ಯೋಜನೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು …

Read More »

ನವಲಗುಂದದಲ್ಲಿ ಪ್ರಗತಿ ಪರಿಶೀಲನಾ ಸಭೆ

ನವಲಗುಂದ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಪಂಚ ಗ್ಯಾರಂಟಿಗಳ ಯೋಜನೆಗಳ ಸುಗಮ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಸಂಬಂಧಿಸಿದ ಇಲಾಖಾ ಅಧಿಕಾರಗಳು ಪ್ರಯತ್ನಿಸುವಂತೆ ಸೂಚಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಪ್ರಮುಖವಾಗಿ …

Read More »