Breaking News

Shaikh BigTv

ಶರಣಬಸವೇಶ್ವರ ದೇವರ ದರ್ಶನ ಪಡೆದ ಶಾಸಕ ಕೋನರೆಡ್ಡಿ

ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ತಾಲೂಕಿನ ಅರಹಟ್ಟಿ ನವಗ್ರಾಮದಲ್ಲಿ ಶ್ರೀ ಕಾಶಿಪಂಡಿತರು ವಾಕ್ ಸಿದ್ಧಿ ಪುರುಷರು, ಪವಾಡ ಪುರುಷರಾದ ಲಿಂ|| ಶ್ರೀ ಸಿದ್ಧಲಿಂಗಯ್ಯ ರಾಚಯ್ಯ ಹಿರೇಮಠ ಗವಾಯಿಗಳರವರ ಗದ್ದುಗೆಗೆ ಶಿವಲಿಂಗ ಪ್ರತಿಷ್ಠಾಪನೆ ನಿಮಿತ್ಯ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿಂದು ಭಾಗವಹಿಸಿ ಪೂಜ್ಯರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮುಖಂಡರು ಉಪಸ್ಥಿತರಿದ್ದರು.

Read More »

ಆಸ್ಪತ್ರೆ ಕುಂದುಕೊರತೆ ಆಲಿಸಿದ ಶಾಸಕ ಕೋನರೆಡ್ಡಿ

ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದಲ್ಲಿರುವ ಸರ್ಕಾರಿ ತಾಲ್ಲೂಕಾ ಅಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿಂದು ಶಾಸಕ ಎನ್. ಎಚ್. ಕೋನರೆಡ್ಡಿ ಭಾಗವಹಿಸಿ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಹಾಗೂ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಇನ್ನೂ ಸೂಕ್ತ ಚಿಕಿತ್ಸೆ ನೀಡುವುದರ ಕುರಿಸಿ ವೈದ್ಯಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀ ಸುಧೀರ ಸವಕಾರ, ತಾಲೂಕ ವೈದ್ಯಾಧಿಕಾರಿಗಳು ಶ್ರೀಮತಿ ರೂಪಾ ಕಿಣಗಿ, ಉಪಸ್ಥಿತರಿದ್ದರು.

Read More »

ದೇಸಾಯಿ ವಸತಿ ಶಾಲೆಗೆ ಶಾಸಕ ಎನ್.ಎಚ್.ಕೋನರಡ್ಡಿ ದಿಢೀ‌ರ್ ಭೇಟಿ

ಧಾರವಾಡ: ನವಲಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಎನ್.ಎಚ್.ಕೋನರಡ್ಡಿ ಇಂದು ದಿಢೀ‌ರ್ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಶಾಲೆಯ ಸಭಾಭವನ, ಅಡುಗೆ ಮನೆ, ವಿವಿಧ ಧಾನ್ಯ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿದ ಶಾಸಕರು, ಮಕ್ಕಳೊಂದಿಗೆ ತಾವೂ ಊಟ ಮಾಡಿದರು. ಸ್ಟೋ‌ರ್ ರೂಮ್‌ನಲ್ಲಿದ್ದ ಕಡಲೆ ಧಾನ್ಯವನ್ನು ನೋಡಿದ ಶಾಸಕರು ಇವೇನು ಮನುಷ್ಯರು ತಿನ್ನೋ ಧಾನ್ಯಾನಾ? ಇಂತಹ ಧಾನ್ಯ ಮಕ್ಕಳಿಗೆ ಆಹಾರವಾಗಿ ನೀಡುವುದು ಎಷ್ಟು ಸರಿ ಎಂದು …

Read More »

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಕೆಕೆಎಂಎಸ್ ಸಂಘಟನೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನರೇಗಾ ಕೂಲಿ ಕಾರ್ಮಿಕರಿಗೆ ಕನಿಷ್ಠ 200 ದಿನ ಕೆಲಸ 600 ರೂಪಾಯಿ ವೇತನ ನಿಗದಿಪಡಿಸಬೇಕು. ವಿದ್ಯುತ್ ಕಾಯ್ದೆ 2023ನ್ನು ವಾಪಸ್ ಪಡೆದು ರೈತರ ಪಂಪಸೆಟ್‌ಗಳಿಗೆ ಮೀಟ‌ರ್ ಹಾಕುವ ಪ್ರಕ್ರಿಯೆಯನ್ನು ಕೈಬಿಡಬೇಕು. ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಅವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಜಿಲ್ಲೆಯಾದ್ಯಂತ ಹಾನಿಗೀಡಾದ ರೈತರ …

Read More »

ರಾಮಲಿಂಗರೆಡ್ಡಿ ಅವರಿಗೆ ರೈತರು ಮನವಿ ಸಲ್ಲಿಸಿದ ಅನ್ನದಾತರು

ಕುಂದಗೋಳ : ಪಟ್ಟಣಕ್ಕೆ ಸಾರಿಗೆ ಬಸ್ ಘಟಕ ನಿರ್ಮಾಣ ಮಾಡಬೇಕು ಹಾಗೂ ಲಕ್ಷೇಶ್ವರ ದಿಂದ ಕುಂದಗೋಳ,ಗುಡೇನಕಟ್ಟಿ, ನಾಗರಹಳ್ಳಿ, ಮಂಟೂರ, ಬಂಡಿವಾಡ ಮಾರ್ಗವಾಗಿ ಹುಬ್ಬಳ್ಳಿಗೆ ಬಸ್ ಸಂಚಾರ ಆರಂಭಿಸಬೇಕೆಂದು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ರೈತರು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಯೋಗಪ್ಪನವರ, ಚನ್ನಬಸಪ್ಪ ಸಿದ್ದೂನವರ, ರಾಜು ಮಲ್ಲಿಗವಾಡ, ಭೀಮಪ್ಪ ಪೂಜಾರ, ಬಾಹುಬಲಿ ಮಲ್ಲಿಗವಾಡ, …

Read More »

ಮಣಿಪುರದಲ್ಲಿ ಎಲ್ಲವನ್ನೂ ಸರಿ ಮಾಡಲು ಸರ್ವ ರೀತಿಯಿಂದ ಪ್ರಯತ್ನ ನಡೆದಿದೆ : ಜೋಶಿ

ಧಾರವಾಡ: ಮಣಿಪುರದ ಗಲಭೆ ವಿಷಯವನ್ನು ಕೇಂದ್ರ ಗೃಹ ಇಲಾಖೆ ಕಂಟ್ರೋಲ್ ಮಾಡುವ ಕೆಲಸವನ್ನು ಮಾಡುತ್ತಿದೆ. ಇದೊಂದು ಸೂಕ್ಷ್ಮ ವಿಚಾರ. ಮಣಿಪುರದಲ್ಲಿ ಎಲ್ಲವನ್ನೂ ಸರಿ ಮಾಡಲು ಸರ್ವ ರೀತಿಯಿಂದ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಮಣಿಪುರ ಗಲಭೆ ಸೂಕ್ಷ್ಮ ಹಾಗೂ ಕಾಂಪ್ಲಿಕೆಟೆಡ್ ಇದೆ. ಹಿಂದಿನ ಗಲಭೆಗಳಿಗೆ ಇದನ್ನು ನಾನು ಹೋಲಿಕೆ ಮಾಡುವುದಿಲ್ಲ. ಹಿಂದೆಯೂ ಇದೇ ರೀತಿ ಗಲಭೆ ನಡೆದಿದೆ. ಆಗ ಇಷ್ಟೊಂದು …

Read More »

ನ. 21ರಂದು ಸಾರ್ವಜನಿಕ ಕುಂದು ಕೊರತೆಗಳ ಸಭೆ

ಕುಂದಗೋಳ: ಕರ್ನಾಟಕ ಲೋಕಾಯುಕ್ತ ಬೆಂಗಳೂರು ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ.ಎಸ್‌.ಫಣಿಂದ್ರ ಗೌರವಾನ್ವಿತ ಉಪ ಲೋಕಾಯುಕ್ತರು ಕರ್ನಾಟಕ ರಾಜ್ಯ ಇವರಿಂದ ಸಾರ್ವಜನಿಕರಿಂದ ಕುಂದು ಕೊರತೆಗಳ ಬಗ್ಗೆ ದೂರುಗಳ ಸ್ವೀಕಾರ, ವಿಚಾರಣೆ ವಿಲೇವಾರಿ ಸಭೆ ನವೆಂಬ‌ರ್ 21 ಗುರುವಾರ ಸಮಯ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಕುಂದಗೋಳ ತಾಲೂಕಿನ ಹಳ್ಳಿಗರು ತಮ್ಮ ಸಾರ್ವಜನಿಕ ಸಮಸ್ಯೆ ಇದ್ದಲ್ಲಿ ಭಾಗವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ …

Read More »

ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದೊಂದು ಸಮಾಜಕ್ಕೆ ಮಾತ್ರ ಸೀಮಿತವಾಗಿವೆ : ಜೋಶಿ

ಧಾರವಾಡ: ನಾಡಿನ ಎಲ್ಲ ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದೊಂದು ಸಮಾಜಕ್ಕೆ ಮಾತ್ರ ಸೀಮಿತವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದರು. ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕನಕದಾಸರ ಜಯಂತಿ ಬಂದಾಗ ಕುರುಬರು, ಬಸವ ಜಯಂತಿ ಬಂದಾಗ ಲಿಂಗಾಯತರು, ಅಂಬೇಡ್ಕ‌ರ್ ಜಯಂತಿ ಬಂದಾಗ ಹರಿಜನರು, ರಾಮಾನುಜಾಚಾರ್ಯರ ಜಯಂತಿ ಬಂದಾಗ ವೈಷ್ಣವರು, ಶಂಕರಾಚಾರ್ಯರ ಜಯಂತಿ ಬಂದಾಗ ಬ್ರಾಹ್ಮಣರು, ವಾಲ್ಮೀಕಿ …

Read More »

ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳ್ಳತನ

ಹುಬ್ಬಳ್ಳಿ: ಹುಬ್ಬಳ್ಳಿಯ ಗುಡಿಹಾಳ ರೋಡ್ ವಿಶಾಲ ನಗರದ ಸದತ್ ಕಾಲೋನಿ 3ನೇ ಕ್ರಾಸ್ ಬಳಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಕಳ್ಳನವು ದಿನ ನಿತ್ಯವೂ ನೆಡೆಯುತ್ತಿರುವುದು ಜನರಿಗೆ ಶಾಕ್ ಕೊಟ್ಟಿದೆ. ಸದತ್ ಕಾಲೋನಿಯ ನಿವಾಸಿಗಳು ಬೈಕ್‌ನ ಪೆಟ್ರೋಲ್‌ ಕಳ್ಳರಿಂದ ಕಂಗೆಟ್ಟು ಹೋಗಿದ್ದರು. ರಾತ್ರಿ ಬೈಕ್‌ನಲ್ಲಿರುತ್ತಿದ್ದ ಪೆಟ್ರೋಲ್ ಬೆಳಗ್ಗೆ ನೋಡಿದಾಗ ಖಾಲಿ ಖಾಲಿ ಆಗಿರುತ್ತಿತ್ತು. ತಮ್ಮ ಕೆಲಸಕ್ಕೆ ಹೋಗಬೇಕಾದರೆ ಪೆಟ್ರೋಲ್ …

Read More »

ಏಕಾಏಕಿ ವಾಹನ ಡಿಕ್ಕಿ: ಯುವಕ ಸಾವು

ಹುಬ್ಬಳ್ಳಿ: ಯುವಕನೊಬ್ಬ ರೋಡ್ ಕ್ರಾಸ್ ಮಾಡುತ್ತಿರುವಾಗ ಏಕಾಏಕಿ ಟಿಟಿ ವಾಹನ ಬಂದು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ಹುಬ್ಬಳ್ಳಿಯ ಅದರಗುಂಚಿ ಬಳಿ ನಡೆದಿದೆ. ಅಪರಿಚಿತ ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವಾಗ ವೇಗವಾಗಿ ಬಂದಿದ್ದ ಟಿಟಿ ವಾಹನ ಆತನಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆ ಯುವಕ ಯಾರು ಎಂಬುದು ತಿಳಿದು ಬಂದಿಲ್ಲ, ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು,. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು …

Read More »