ಹುಬ್ಬಳ್ಳಿ : ಸಿಂಧನೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾರ್ಯಕರ್ತರು ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಡಿಕೆಶಿ ಆಗಮಿಸಿದ್ದರು.ಆವೇಳೆ ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೇಳಿಬಂದಿದೆ.ಕಾರು ಹತ್ತಲು ಹೊರಡುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಸುತ್ತ ಪಡಿಸಿದರ.ಕಾರು ಹತ್ತಿ ಎಲ್ಲರತ್ತ ಕೈ ಬೀಸಿ ಹೊರಟ್ಟಿದ್ದಾರೆ.
Read More »ಸೇವಾ ವಿಮುಕ್ತಿ ನೌಕರರಿಗೆ ಬಾಕಿ ಹಣ ನೀಡುವಂತೆ ಪ್ರತಿಭಟನೆ
ಹುಬ್ಬಳ್ಳಿ: ತಮ್ಮ ಇಡೀ ಜೀವನವನ್ನು ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಿವೃತ್ತಿ ಹೊಂದಿದವರು. ಆದ್ರೆ ಸಾರಿಗೆ ಸಂಸ್ಥೆ ಮಾತ್ರ ಇವರ ಸೇವಾ ವಿಮುಕ್ತಿ ನೌಕರರಿಗೆ ಬಾಕಿ ಹಣ ನೀಡದೆ ಗೋಳಾಡಿಸುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದವರು. ಸೇವಾ ವಿಮುಕ್ತಿ ನೌಕರರಿಗೆ ಜನವರಿ 2020 ರಿಂದ 2023 ರವರೆಗಿನ ಅವಧಿಗೆ 15% ರಷ್ಟು ಹೆಚ್ಚಿನ ವ್ಯತ್ಯಾಸದ ಉಪದಾನ ಮತ್ತು ನಿವೃತ್ತಿಗಳಿಗೆ ರಜೆ ನಗದೀಕರಣ ಮೊತ್ತವನ್ನು …
Read More »ದಸರಾಕ್ಕೆ ರಜೆ ಘೋಷಣೆ ಮಾಡದ ಶಾಲೆಗೆ ಮುತಾಲಿಕ್ ಭೇಟಿ
ಧಾರವಾಡ: ನಾಡ ಹಬ್ಬ ದಸರಾಕ್ಕೆ ಸರ್ಕಾರವೇ 15 ದಿನಗಳ ಕಾಲ ಶಾಲೆಗೆ ಅಧಿಕೃತ ರಜೆ ಘೋಷಣೆ ಮಾಡಿದೆ. ಆದರೆ, ಕೆಲ ಕ್ರಿಶ್ಚಿಯನ್ ಶಾಲೆಗಳು ಸರ್ಕಾರದ ಆದೇಶವನ್ನು ಮೀರಿ ಶಾಲೆಗಳನ್ನು ನಡೆಸುತ್ತಿವೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಧಾರವಾಡದ ಬಾಸೆಲ್ ಮಿಶನ್ ಶಾಲೆಗೆ ತೆರಳಿ ಶಾಲೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ನಾಡಹಬ್ಬ ದಸರಾಕ್ಕೆ ರಜೆ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ …
Read More »ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ
ಕುಂದಗೋಳ : ಹೆಣ್ಣು ಮಗು ಹುಟ್ಟಿದ್ದೇ ಶಾಪ ಎಂಬ ಭಾವನೆ ತೊಡೆದು ಹೋಗಿದೆ ಹೆಣ್ಣು ಅನಾದಿಕಾಲದಿಂದಲೂ ಇಲ್ಲಿಯವರೆಗೆ ಪ್ರತಿ ರಂಗದಲ್ಲೂ ತನ್ನ ಔದಾರ್ಯ ತೋರಿದ್ದಾಳೆ ಎಂದು ಸಿವಿಲ್ ನ್ಯಾಯಾಧೀಶ ಗೌರವಾನ್ವಿತ ಶ್ರೀಮತಿ ಗಾಯತ್ರಿ ಅವರು ಹೇಳಿದರು. ಅವರು ಕುಂದಗೋಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಾರ್ಯಾಲಯದ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದ ಅಂಗವಾಗಿ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿಗೆ ಅಭಿನಂದನೆ …
Read More »ದಸರಾ ಹಬ್ಬ : ರೈಲುಗಳ ತಾತ್ಕಾಲಿಕ ನಿಲುಗಡೆ ವಿವರ
ಹುಬ್ಬಳ್ಳಿ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಮೈಸೂರು-ಬೆಳಗಾವಿ-ಮೈಸೂರು (ರೈಲು ಸಂಖ್ಯೆ 17301/17302) ಡೈಲಿ ಎಕ್ಸ್ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 9ರಿಂದ 13ರ ವರೆಗೆ ಮೈಸೂರಿನಿಂದ ಪ್ರಾರಂಭವಾಗುವ ಮೈಸೂರು-ಬೆಳಗಾವಿ (17301) ಡೈಲಿ ಎಕ್ಸ್ಪ್ರೆಸ್ ರೈಲು ಬೆಳಗುಳ, ಸಾಗರಕಟ್ಟೆ, ಹೊಸ ಅಗ್ರಹಾರ, ಅಕ್ಕಿಹೆಬ್ಬಾಳು, ಬೀರಹಳ್ಳಿ ಹಾಲ್ಟ್ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯಾಗಲಿದೆ. ಅಕ್ಟೋಬರ್ 11ರಂದು ಬೆಳಗಾವಿ ನಿಲ್ದಾಣದಿಂದ …
Read More »ಸಮೀಕ್ಷೆಗಳೆಲ್ಲವೂ ಹುಸಿಯಾಗಿ ಮೂರನೆಯ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಗೆದ್ದಿದೆ : ಶಾಸಕ ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ : ಸಮೀಕ್ಷೆಗಳೆಲ್ಲವೂ ಹುಸಿಯಾಗಿ ಮೂರನೆಯ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿಗೆ ವಿರೋಧಿ ಅಲೆ ಎಂದು ಬಿಂಬಿಸಲಾಗಿತ್ತು. ಫ್ರೀ ಸ್ಟೀಮ್ಗಳನ್ನ ಕೊಡುತ್ತೆವೆಂದು ಕಾಂಗ್ರೆಸ್ ಹೇಳಿತ್ತು. ಇದನ್ನೆಲ್ಲವನ್ನೂ ಮೀರಿ ಹರಿಯಾಣದ ಜನತೆ ಬಿಜೆಪಿಗೆ ಜೈ ಎಂದಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹರಿಯಾಣ ಚುನಾವಣೆ ಸಂಬಂಧಿಸಿದ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಕಂಡಿದೆ. ಜಮ್ಮುವಿನಲ್ಲಿ 20 ರಿಂದ 30 ಕ್ಷೇತ್ರಗಳಲ್ಲಿ ಬಿಜೆಪಿ …
Read More »ಕುಂದಗೋಳದಲ್ಲಿ ಹೆಚ್ಚಾದ ಹುಚ್ಚ ನಾಯಿ ಕಡಿತ
ಕುಂದಗೋಳ : ತಾಲೂಕಿನ ಸಂಶಿ ಗ್ರಾಮದಲ್ಲಿ ಹುಚ್ಚು ನಾಯಿ ಹಾವಳಿ ಅತಿಯಾಗಿದೆ, ಈಗಾಗಲೇ 18ಕ್ಕೂ ಅಧಿಕ ಜನರಿಗೆ ನಾಯಿ ಕಚ್ಚಿದ ಪರಿಣಾಮ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಭಾನುವಾರದಿಂದ ನಾಯಿ ಹಾವಳಿ ಅತಿಯಾಗಿದ್ದು, ಸ್ವತಃ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಾಯಿ ಬಂಧಿಸಿಲು ಹರಸಾಹಸ ಪಟ್ಟು ವಿಫಲರಾಗಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಡಂಗೂರ ಸಾರಿ ಸಂಶಿ ಜನರಿಗೆ …
Read More »ಪೈಗಂಬರ್ ರ ವಿರುದ್ಧ ಅವಹೇಳನಕಾರಿ ಪೋಸ್ಟ್: ಅಂಜುಮನ್ ಸಂಸ್ಥೆಯಿಂದ ರಾಷ್ಟ್ರಪತಿಗೆ ಮನವಿ
ಹುಬ್ಬಳ್ಳಿ: ಪವಿತ್ರ ಪ್ರವಾದಿ ಹಜರತ ಮುಹಮ್ಮದ್ ಪೈಗಂಬರ್ ಅವರ ಕುರಿತು ತನ್ನ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಮ್ಮದ್ ಪೈಗಂಬರಿಗೆ ಅವಹೇಳನಕಾರಿ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತೆಗೆ ಭಂಗ ತರುವ ದುರುದ್ದೇಶದಿಂದ ಹಾಗೂ ಮುಸ್ಲಿಮರ ಅಸ್ಮಿತೆಯನ್ನು ಪ್ರಶ್ನಿಸುವ …
Read More »ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಯಶಸ್ವಿ
ಕುಂದಗೋಳ: ಈ ಹಿಂದೆ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ಜಯಂತಿ ದಿನವೇ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ಸಮಾಜ ಬಾಂಧವರು ಇಂದಿನ ಸಭೆ ಯಶಸ್ವಿ ಮಾಡಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣ ವಿಷಯವಾಗಿ ತಾರ್ಕಿಕ ಅಂತ್ಯ ಸಿಗದೆ ಮತ್ತು ತಾಲೂಕು ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಗೈರಾದ ವಿಷಯವಾಗಿ ವಾಲ್ಮೀಕಿ ಜಯಂತಿ ಸಭೆ ರದ್ದು ಮಾಡಿ ಅಕ್ಟೋಬರ್ 17ರ ಜಯಂತಿ ದಿನವೇ ಪ್ರತಿಭಟನೆ ಎಚ್ಚರಿಕೆ ಎಸ್.ಸಿ/ಎಸ್.ಟಿ ಸಮಾಜ ಬಾಂಧವರಿಂದ …
Read More »ಕಂದಾಯ ಇಲಾಖೆಯು ಎಲ್ಲ ಇಲಾಖೆಗಳ ಮಾತೃ ಇಲಾಖೆ: ಸುಧೀರ ಸಾಹುಕಾರ
ನವಲಗುಂದ: ಕಂದಾಯ ಇಲಾಖೆಯು ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕಂದಾಯ ಇಲಾಖೆ ನೌಕರರೂ ಸಹ ಮಾತೃ ಹೃದಯದಿಂದ ಜನಸೇವೆಗೆ ಮುಂದಾಗಬೇಕು ಎಂದು ತಹಸೀಲ್ದಾರ ಸುಧೀರ ಸಾಹುಕಾರ ಕಿವಿಮಾತು ಹೇಳಿದರು. ಅವರು ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ನೂತನವಾಗಿ ರಚನೆಯಾದ ಕಂದಾಯ ಇಲಾಖೆಯ ನೌಕರರ ಸಂಘ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಕಂದಾಯ ಇಲಾಖೆ ಪ್ರತಿದಿನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





