Breaking News

Uncategorized

ಜಮೀರ್ ಅಹ್ಮದ್ ಹೇಳಿಕೆ ಕೆಂಡಾಮಂಡಲವಾದ ಪ್ರಮೋದ್ ಮುತಾಲಿಕ್

ಧಾರವಾಡ : ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ , ಇದು ಖಂಡನೀಯ, ಇದನ್ನ ವಿರೋಧಿಸುತ್ತೇನೆ ಇದು ನಿಮ್ಮ ಅಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ವಕ್ಫ್ ಬೋರ್ಡ್ ದು ಅಲ್ಲ, ಮುಸ್ಲಿಂ ದು ಅಲ್ಲ, ಇದು ಹಿಂದೂಗಳದ್ದು ಅಲ್ಲ ಸರ್ಕಾರದ ಜಾಗ ಅದು ಎಂದರು. ಮುಂದುವರೆದು …

Read More »

ಬೋವಿ ಗಲ್ಲಿಯಲ್ಲಿ ಮೊಹರಂ ಹಬ್ಬ ಆಚರಣೆ

ಧಾರವಾಡ : ಉತ್ತರ ಕರ್ನಾಟಕದಲ್ಲಿ ಹಬ್ಬ ಅಂದರೆ ಸಾಕು ಅಲ್ಲಿ ಒಂದು ವಿಷೇಶ ಇದ್ದೆ ಇರುತ್ತೆ.ಅದರಲ್ಲಿ ಮೊಹರಂ ಹಬ್ಬ ಅಂದರೆ ಸಾಕು ಹಿಂದು ಮುಸ್ಲಿಂ ಸೇರಿಯೆ ಹಬ್ಬ ಆಚರಣೆ ಮಾಡುತ್ತಾರೆ.ಅದರಲ್ಲು ಧಾರವಾಡದಲ್ಲಿ ಕೂಡಾ ಇಂದು ಹಜರತ್ ಗೈಬುಷಾ ವಲಿ ಬೋವಿ ಗಲ್ಲಿಯಲ್ಲಿ ಮೊಹರಂ ಹಬ್ಬವನ್ನ ಹಿಂದು ಮುಸ್ಲಿಂ ಭಾಂದವರು ಸೇರಿ ಬಾವಕ್ಯತೆಯಿಂದ ಆಚರಣೆ ಮಾಡಿದ್ದು ವಿಷೇಶವಾಗಿತ್ತು.

Read More »

ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ

ಹುಬ್ಬಳ್ಳಿ; 12ನೇ ಶತಮಾನದ ಬಸವಾದಿ ಶರಣರು ವಿಶ್ವ ಕುಟುಂಬ ವಾಗಿದ್ದು ವಿಶ್ವ ಭಾತೃತ್ವ ಸರ್ವರಿಗೂ ಸಮಬಾಳು ಸರ್ವರಿಗೆ ಸಮಪಾಲು ಸಿದ್ಧಾಂತದೊಂದಿಗೆ ಮನುಕುಲದ ಉದ್ದಾರಕ್ಕೆ ಕಾರಣಿಭೂತರಾದರು ಜಗತ್ತಿನ ಎಲ್ಲ ಧರ್ಮಗಳಲ್ಲಿ ವೀರಶೈವ ಲಿಂಗಾಯತ ಧರ್ಮವು ಎಲ್ಲ ಧರ್ಮಗಳನ್ನು ಪ್ರೀತಿಸುವ ಅಪ್ಪಿಕೊಳ್ಳುವ ಉದಾರತೆಯನ್ನು ಪಡೆದಿದೆ ಎಂದೂ ಸುಳ್ಳದ ಪಂಚಗ್ರಹ ಹಿರೇಮಠ ದ ಷ ಬ್ರ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಹೇಳಿದರು. ನಗರದ ಉಣಕಲ್ ಗ್ರಾಮದಲ್ಲಿ ಇಂದು ಚನ್ನಬಸವ ಸಾಗರದ ದಡದಲ್ಲಿರುವ ಶ್ರೀ ಉಳವಿ ಚನ್ನಬಸವೇಶ್ವರ …

Read More »

ತುಂಬಿ ಹರಿಯುತ್ತಿರುವ ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ

ಗದಗ: ಹಳ್ಳ ದಾಟಲು ವಿದ್ಯಾರ್ಥಿಗಳ ಹರಸಾಹಸ ಪಡುತ್ತಿದ್ದು, ಅಪಾಯಕಾರಿ ಹಳ್ಳದ ಮೂಲಕವೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಜಲಾವೃತವಾದ ಹಳ್ಳದ ಸೇತುವೆ ಮೇಲಿಂದಲೇ ವಿದ್ಯಾರ್ಥಿಗಳು ಶಾಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಎದುರಾಗಿದೆ. ಸತತ ಮಳೆಯಿಂದ ಹಳ್ಳ ತುಂಬಿದ್ದು, ವಿದ್ಯಾರ್ಥಿಗಳ ಪರದಾಡುವಂತಾಗಿದೆ.ಶಿಕ್ಷಣಕ್ಕಾಗಿ ಜೀವದ ಹಂಗು ತೊರೆದು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಕರೆ ಹಳ್ಳ ದಾಟಿಸುತ್ತಿರುವ ದೃಷ್ಯಗಳು ಇಂದು …

Read More »

ಸಿದ್ಧರಾಮೋತ್ಸವ ಸ್ಟೀರಾಯ್ಡ್ ಇದ್ದಂತೆ: ಸಚಿವ ಸಿ.ಸಿ. ಪಾಟೀಲ್

ಗದಗ: ಸಿದ್ಧರಾಮೋತ್ಸವದಲ್ಲಿ ಸಿದ್ದು ಡಿಕೆಶಿ ಆಲಿಂಗನ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದರು.ಇಬ್ಬರು ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ. ಕೈ ಸನ್ನೆ ಮಾಡಿ ಹೀಗೆ ಕೂಡಿಸಿದ್ರಲ್ಲ, ಹೀಗಿದ್ದಾಗ ಎಷ್ಟರ ಮಟ್ಟಿಗೆ ಒಗ್ಗಟ್ಟಿದೆ ಅಂತ ವ್ಯಂಗ್ಯವಾಡಿದ್ರು. ಅವರು ಇಂತದ್ದೊಂದು ಸಮಾವೇಶ ಮಾಡಿ ಖುಷಿಪಟ್ಟಿರಬಹುದು. ಇಂತಹ ಸಮಾವೇಶ ಬಿಜೆಪಿಯಲ್ಲಿ ದಿನಕ್ಕೊಂದು ಮಾಡ್ತೇವೆ. ಅವರ ಅಸ್ತಿತ್ವ ಉಳಿಯಲು ವಿರೋಧ ಪಕ್ಷದವರು ಮಾಡ್ತಾರೆ. ನಾನಾ ನೀನ ಅಂತ ತೋರಿಸಲು ಸಮಾವೇಶ ಮಾಡ್ತಾರೆ. ಇವರು …

Read More »

ಸಾವಿನಲ್ಲಿ ಒಂದಾದ ಜನಮದ ಜೋಡಿ

ಚನ್ನಗಿರಿ: ಜೀವನದಲ್ಲಿ ಅನ್ಯೋನ್ಯತೆಯಿಂದ ಇದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ . ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಹನುಮಂತಪ್ಪ-ಜಯಮ್ಮ ದಂಪತಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಜಯಮ್ಮ ಶನಿವಾರ ರಾತ್ರಿ ಮೃತಪಟ್ಟರೆ, ಪತಿ 98 ವರ್ಷದ ಹನುಮಂತಪ್ಪ ಭಾನುವಾರ ಬೆಳ್ಳಂಬೆಳಗ್ಗೆ ನಿಧನ ಹೊಂದಿದ್ದಾರೆ.ಶನಿವಾರ ರಾತ್ರಿ ಪತ್ನಿ ಜಯಮ್ಮಳ ಅಗಲಿಕೆ ವಿಷಯ ತಿಳಿದ ಪತಿ ಹನುಮಂತಪ್ಪ ತೀವ್ರ ಮನನೊಂದಿದ್ದರು. ಭಾನುವಾರ ಬೆಳಗ್ಗೆ ಚಿರಡೋಣಿ ಗ್ರಾಮದ ಸ್ವಂತ ತೋಟದಲ್ಲಿ ಪತ್ನಿ …

Read More »

ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ

ಬೆಂಗಳೂರು: ಕಳೆದ ವಾರ ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಸಿನಿಮಾ ಈಗ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ ಮಾಡುವತ್ತ ಚಿತ್ತ ನೆಟ್ಟಿದೆ. ನಿರೀಕ್ಷಿಸಿದಷ್ಟು ಪರಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾಗೆ ರೆಸ್ಪಾನ್ಸ್ ಸಿಗಲಿಲ್ಲ. ಆದರೂ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿತ್ತು. ಒಟ್ಟು ಎಂಟು ದಿನಗಳ ಕಲೆಕ್ಷನ್ 150 ಕೋಟಿ ತಲುಪಿದ್ದು, ಇನ್ನು ಒಂದು ವಾರದಲ್ಲಿ 200 ಕೋಟಿ ತಲುಪುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಿಂದಿಯಲ್ಲಿ ಒಟ್ಟು …

Read More »

ಮೀನುಗಾರಿಕೆ ಬೋಟ್ ಮುಳುಗಡೆ

ಮಂಗಳೂರು : ನಗರ ಹೊರವಲಯ ಪಣಂಬೂರು ಪರಿಸರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದೆ. ಈ ಬೋಟ್‌ನಲ್ಲಿ 11 ಮಂದಿ ಮೀನುಗಾರರಿದ್ದರು. ಅವರನ್ನು ಇನ್ನೊಂದು ಬೋಟ್‌ನಲ್ಲಿದ್ದವರು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಈ ಘಟನೆ ಕಡಲತೀರದಿಂದ 90 ಮೀಟರ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದು ಹಾಗೂ ಗಾಳಿಯ ತೀವ್ರತೆಗೆ ಸಿಲುಕಿ ಈ ಬೋಟ್ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Read More »

ಅಮಿತಾಭ್ ಬಚ್ಚನ್ ಉಂಚೈ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಅಮಿತಾಭ್ ಬಚ್ಚನ್ ತಮ್ಮ ಉಂಚೈ ಸಿನಿಮಾದ ಫಸ್ಟ್ ಲುಕ್ ಅನ್ನು ಹಂಚಿಕೊಳ್ಳುವ ಮೂಲಕ ಸ್ನೇಹಿತರ ದಿನವನ್ನು ಆಚರಿಸಿದ್ದಾರೆ.ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಅಂತಾರಾಷ್ಟ್ರೀಯ ಸ್ನೇಹಿತರ ದಿನದಂದು ತಮ್ಮ ಉಂಚೈ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಸೂರಜ್ ಬರ್ಜಾತ್ಯಾ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ಅನುಪಮ್ ಖೇರ್ ಮತ್ತು ಬೊಮನ್ ಇರಾನಿ ನಟಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ, ಅಮಿತಾಭ್ ಬಚ್ಚನ್, ಅನುಪಮ್ …

Read More »

ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ 59.50 ಲಕ್ಷ ರೂ. ವಂಚನೆ

ಬೆಂಗಳೂರು: ಕೆಎಎಸ್‌ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಪರಿಚಿತ ಐಎಎಸ್‌ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ ಬರೊಬ್ಬರಿ 59.50 ಲಕ್ಷ ರೂ. ವಂಚಿಸಿದ್ದಾನೆ. ಉತ್ತರ ಕರ್ನಾಟಕ ಮೂಲದ ಸಹಕಾರ ನಗರದ ನಿವಾಸಿ ಸವಿತಾ ಶಾಂತಪ್ಪ ಯಳಸಂಗೀಕರ್‌ ಕೊಟ್ಟ ದೂರಿನ ಆದಾರದ ಮೇಲೆ ವಿಜಯ ನಗರ ಠಾಣೆ ಪೊಲೀಸರು ಸಿದ್ದರಾಜ್‌ ಸುಭಾಷ್‌ ಚಂದ್ರ ಕಟ್ಟಿಮನಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸವಿತಾ …

Read More »