Breaking News

ಹುಬ್ಬಳ್ಳಿ ಸುದ್ದಿ

ಗಣೇಶ ಮೂರ್ತಿ ಪ್ರತಿಷ್ಠಾಪನೆ: ಹೆಸ್ಕಾಂನಿಂದ ಮಾರ್ಗಸೂಚಿ ಪ್ರಕಟ

ಹುಬ್ಬಳ್ಳಿ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ ಕೆಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ. ಈ ಕುರಿತು ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯ‌ರ್ ಕಿರಣ್ ಕುಮಾರ್ ಬಿ ಅವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ, ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಂಬಂಧ ಪಟ್ಟ ಹೆಸ್ಕಾಂ ವಿಭಾಗೀಯ ಅಥವಾ …

Read More »

ಮಹತ್ವಾಕಾಂಕ್ಷಿ ಕೃಷಿ ಭಾಗ್ಯ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ

ಹುಬ್ಬಳ್ಳಿ: ಕೃಷಿ ಇಲಾಖೆಯಿಂದ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ಮತ್ತು ಇತರೆ ಘಟಕಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 20 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ, ನರೇಗಾ, ತೋಟಗಾರಿಕೆ ಇಲಾಖೆ, ಇತರೆ ಸರ್ಕಾರದ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ …

Read More »

ಸಿಎಂ ಆಗುವ ಕನಸನ್ನು ಬಿಚ್ಚಿಟ್ಟ ಸಚಿವ ಜಮೀರ ಅಹ್ಮದ

ಹುಬ್ಬಳ್ಳಿ : ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ನನಗೂ ಸಿಎಂ ಆಗಬೇಕೆಂಬ ಆಸೆ ಇರಲ್ವಾ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಬೇಕು ಅನ್ನುವ ಆಸೆ ಯಾರಿಗೆ ಇರಲ್ಲ ಹೇಳಿ ನನಗೂ …

Read More »

ಹಾಡು ಹಗಲೇ ಜಳಪಿಸಿದ ಚಾಕು ಘಟನೆ ಸಂಬಂಧಿಸಿದಂತೆ ಮೂವರ ಬಂಧನ

ಹುಬ್ಬಳ್ಳ ; ಇಲ್ಲಿನ ಸಂತೋಷನಗರದ ಪಕ್ಕದಲ್ಲಿನ ಜಿ.ಕೆ ಸ್ಕೂಲ್‌ ಬಳಿಯಲ್ಲಿ ಸೋಮವಾರ ದಿವಸದಂದು ಚಾಕು ಇರಿತಕ್ಕೆ ಸಂಬಂಧಿಸಿದಂತೆ ಅಶೋಕ ನಗರದ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ. ಗೋಪನಕೊಪ್ಪದ ಡಂಬರ ಓಣಿಯ ನಿವಾಸಿಗಳಾದ ಭೀಮಪ್ಪ ಗೊಲ್ಲರ , ಕಿರಣ ಕಬ್ಬೇರ ಆರೋಪಿಗಳಾಗಿದ್ದು ಇವರು ಸೋಮವಾರ ಸಂಜೆ ಜಿ.ಕೆ . ಸ್ಕೂಲ್‌ ಹತ್ತಿರ ಗೆಳೆಯರ ಜೊತೆಗೆ ನಿಂತುಕೊಂಡ ಮೂವರು ಸ್ನೇಹಿತರು ಬೈಕ್‌ ವಿಚಾರವಾಗಿ …

Read More »
Featured Video Play Icon

ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ: ಸಭಾಪತಿ ಹೊರಟ್ಟಿ ನಿವಾಸದಲ್ಲಿ ಸಲ್ಲಿಕೆ..

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ ನೀಡಿದ್ದು, ಲೋಕಸಭಾ ಚುನಾವಣೆಗೂ ಮುನ್ನ ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತಮ್ಮ ಸದಸ್ಯತ್ವಕ್ಕೆ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಹೌದು..ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯ ಗೃಹ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿರುವ ಮರಿತಿಬ್ಬೇಗೌಡ, ಲಿಖಿತ ಮೂಲಕ ತಮ್ಮ ರಾಜೀನಾಮೆ ನೀಡಿದರು.ಇನ್ನೂ ರಾಜೀನಾಮೆ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರು, ಮರಿತಿಬ್ಬೇಗೌಡ ಸ್ವ …

Read More »

ಹುಬ್ಬಳ್ಳಿಯಲ್ಲಿ ಮತ್ತೆ ಶುರುವಾದ ರಜತ್ ಉಳ್ಳಾಗಡ್ಡಿಮಠ ಅಬ್ಬರ: ಸಂಭ್ರಮಕ್ಕೆ ತಯಾರಿ

ಹುಬ್ಬಳ್ಳಿ : ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ರಜತ ಸಂಭ್ರಮಕ್ಕೇ ಇದೀಗ ಮತ್ತೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಹುಟ್ಟು ಹಬ್ಬದ ದಿನದಂದು ರಜತ ಪೌಂಡೇಶನ್ ಮೂಲಕ ನಡೆಯುತ್ತಾ ಬಂದಿರುವ ಕಾರ್ಯಕ್ರಮ ಇದಾಗಿದ್ದು.ಪ್ರತಿವರ್ಷ ಬಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಫೆಬ್ರುವರಿ 14ರಂದು ಕೂಡ ರಜತ್ ಸಂಭ್ರಮ ಅದ್ದೂರಿಯಾಗಿ ನಡೆದಿತ್ತು.ಬೆಂಗೆರಿಯ ರಾಷ್ಟ್ರ ದ್ವಜ ತಯಾರಕರಿಗೆ ಗೌರವದೊಂದಿಗೆ ಸನ್ಮಾನಿಸಿ,ನಗೆ ಹಬ್ಬ ಕೂಡ …

Read More »

ರಾಕಿಂಗ್ ಸ್ಟಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ….

ಹುಬ್ಬಳ್ಳಿ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಅಭಿಮಾನಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳು ಆಗಮಿಸಿರುವ ರಾಕಿಂಗ್ ಸ್ಟಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬ್ಯಾನರ್ ಕಟ್ಟಲು ಹೋಗಿ ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದು, ಹುಬ್ಬಳ್ಳಿಗೆ ಎಂಟ್ರಿ ಕೊಟ್ಟು ಅಲ್ಲಿಂದ ಲಕ್ಷ್ಮೇಶ್ವರದ ಸೂರಣಗಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು. ಇನ್ನೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್ ಗೆ ಅಭಿಮಾನಿಗಳು ಸ್ವಾಗತಿಸಿದ್ದು, …

Read More »

ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಕ್ರೋಶ ವ್ಯಕ್ತ….

ಹುಬ್ಬಳ್ಳಿ:ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ‌ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ.ಬಿಜೆಪಿಯವರು ವೋಟ್‌ಗೋಷ್ಟರ್ ಶ್ರೀರಾಮನನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ.ಕಾಂಗ್ರೆಸ್‌ನವರು ಯಾವತ್ತಿಗೂ ದೇವರನ್ನ ಹಿಂದುತ್ವವನ್ನ ರಾಜಕಾರಣದಲ್ಲಿ ತರೋಲ್ಲ ಎಂದ ಅವರು ಇವರಿಗೆ ಏನೂ ಬಂಡವಾಳ ಇಲ್ಲ, …

Read More »

ಅಭಿಮಾನಿಗಳು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಯಶ್ ಅವರ ಮನೆಗಳಿಗೆ ಭೇಟಿ ನೀಡಲಿದ್ದಾರೆ…

ರಾಕಿಂಗ್ ಸ್ಟಾರ್ ಯಶ್ 38ನೇ ಹುಟ್ಟುಹಬ್ಬ. ಹೀಗಾಗಿ ದೇಶ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಯುವಕರು ಮಧ್ಯರಾತ್ರಿ ಯಶ್ ಬ್ಯಾನರ್ ಕಟ್ಟಲು ಮುಂದಾಗಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ. ಸೂರಣಗಿ ಗ್ರಾಮದ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಈ ಮೂವರು ಮೃತ ಅಭಿಮಾನಿಗಳು. ಇನ್ನು ಮೂವರು ಯುವಕರು ಗಂಭೀರವಾಗಿ …

Read More »

ವಿದ್ಯಾಕಾಶಿ ಧಾರವಾಡದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ…..

ಹುಬ್ಬಳ್ಳಿ: ಕರ್ನಾಟಕದ ವಿದ್ಯಾಕಾಶಿ ಧಾರವಾಡವು ಬೆಳೆಯುತ್ತಿರುವ ನಗರ-ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ಸಹ ಜನದಟ್ಟಣೆ ಹೆಚ್ಚಾಗಿದ್ದು, ಅಸ್ತಿತ್ವದಲ್ಲಿದ್ದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ ಇಂದು ಸೋಮವಾರದಿಂದ ಆರಂಭವಾಗಿದೆ. ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣವು ನೂತನ ಸಾರಿಗೆ ಬಸ್ ನಿಲ್ದಾಣವಾಗಿ ಕಂಗೊಳಿಸಲಿದೆ. ಈ ಸಂಬಂಧ ಯೋಜನೆ ಆರಂಭಕ್ಕೆ ಇಂದು ಸೋಮವಾರ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅವರಿಗೆ ಜಿಲ್ಲಾ ಉಸ್ತುವಾರಿ …

Read More »