BigTv News
April 1, 2025
Breaking News, Crime, ಕೋಲಾರ
ಕೊರಿಯರ್‌ನಲ್ಲಿ ಬಂದ ಪಾರ್ಸೆಲ್‌ನ್ನ ಕೊಡುವ ವಿಚಾರಕ್ಕೆ ಗಲಾಟೆ ಶುರುವಾಗಿ, ಅದು ವಿಕೋಪಕ್ಕೆ ತಿರುಗಿದೆ. ಈ ಘಟನೆ ನಡೆದಿದ್ದು ಕೋಲಾರದ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ. ಇಲ್ಲಿನ ಚೇತನ್ ಮತ್ತು ಯುವರಾಜ್ ಎಂಬುವರ ಮೇಲೆ, ನಗರದ ಕೀಲುಕೋಟೆ ನಿವಾಸಿಗಳಾದ ಪವನ್ ಮತ್ತು ಮೋಹನ್ ಹಲ್ಲೆ ನಡೆಸಿದ್ದಾರೆ. ಇವರಿಬ್ಬರೂ ಚೇತನ್-ಯುವರಾಜ್ ಮೇಲೆ ಚಾಕುವಿನಿಂದ ಇರಿದಿದ್ದನ್ನ ನೋಡಿ ಕ್ರೋಧಗೊಂಡ ಗ್ರಾಮಸ್ಥರು, ಪವನ್ ಮತ್ತು ಮೋಹನ್‌ಗೆ ಬಟ್ಟೆ ಬಿಚ್ಚಿ, ಕಟ್ಟಿಹಾಕಿದ್ದಾರೆ. ಬಳಿಕ ಮನಸಿಗೆ ಬಂದಂತೆ ಥಳಿಸಿದ್ದಾರೆ ಕೂಡಲೇ …
Read More »
BigTv News
March 31, 2025
Breaking News, Crime, ಕರ್ನಾಟಕ, ಕೋಲಾರ
ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಹೊರವಲಯದಲ್ಲಿರುವ ಬಾರ್ ಎದುರು ಘಟನೆ ನಡೆದಿದೆ.ಸ್ನೇಹಿತ ಮೊಯಿನ್‌ನಿಂದಲೇ ಮತೀನ್ ಹತ್ಯೆಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Read More »
BigTv News
March 31, 2025
Breaking News, Crime, ಬೀದರ್
ಬೀದರ್ ಜಿಲ್ಲೆ ಬಸವಕಲ್ಯಾಣದ ಶಾ-ಹುಸೇನ್ ಬಡಾವಣೆಯಲ್ಲಿ ಮಹಿಳೆಯ ಭೀಕರವಾಗಿ ಹತ್ಯೆ ಮಾಡಿರುವ ಗಟನೆ ನಡೆದಿದೆ. ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಡ್ ರೂಮ್‌ನಲ್ಲಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಕೂಡಾ ಪೌರ ಕಾರ್ಮಿಕನೇ ಆಗಿದ್ದನು. ಕೊಲೆಗೆ ಕಾರಣ ಏನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆಯಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
Read More »
BigTv News
March 31, 2025
Breaking News, Crime, ಉತ್ತರ ಪ್ರದೇಶ, ದೆಹಲಿ
ಮೊನಾಲಿಸಾಗೆ ಅವಕಾಶ ನೀಡುವುದಾಗಿ ಹೇಳಿ ಸುದ್ದಿಯಾಗಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ದೆಹಲಿ ಪೊಲೀಸರು ಬಂಧಿಸಿದ್ದಾರೆ.ಸನೋಜ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು, ಹೀರೋಯಿನ್ ಆಗಬೇಕೆಂದು ಆಸೆಪಟ್ಟಿದ್ದ ಸಣ್ಣ ಪಟ್ಟಣದ ಹುಡುಗಿಯ ಮೇಲೆ ಸನೋಜ್ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದೆ.
Read More »
BigTv News
March 31, 2025
Breaking News, Crime, ಯಾದಗಿರಿ
ಶಹಾಪುರ ತಾಲೂಕಿನ ಸಾದ್ಯಾಪುರ ಕ್ರಾಸ್ ಬಳಿ ಡಬಲ್ ಮರ್ಡರ್ ನಡೆದಿತ್ತು. ಕಟಿಂಗ್ ಮಾಡಿಸಿಕೊಂಡು ಹೋಗ್ತಿದ್ದಾಗ ಮಾಪಣ್ಣನನ್ನು ಸುಪಾರಿ ಪಡೆದಿದ್ದ ಗ್ಯಾಂಗ್ನಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಇದೀಗ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸದ್ಯ ಮೂವರು ಕೊಲೆ ಆರೋಪಿಗಳಾದ ಶಿವಪ್ಪಗೌಡ, ಹುಸೇನಿ, ಮೊಹಮ್ಮದ್ ರಿಯಾಜ್ರನ್ನು ಪೊಲೀಸರು ಬಂಧಿಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
Read More »
BigTv News
March 31, 2025
Breaking News, Crime, ರಾಯಚೂರು
ತಿಮ್ಮಪ್ಪ ಎನ್ನುವ ವ್ಯಕ್ತಿಯೇ ಈ ರೀತಿ ವಿಕೃತವಾಗಿ ದಾಳಿ ನಡೆಸಿದ್ದಾನೆ. ಆರೋಪಿ ತಿಮ್ಮಪ್ಪ ತನ್ನ ಪತ್ನಿ ಪದ್ಮಾವತಿ, ಪದ್ಮಾವತಿ ತಂಗಿ ಭೂದೇವಿಯನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.ತಿಮ್ಮಪ್ಪ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸೋಕೆ ಕಾರಣವೇ ಆಸ್ತಿ. ಘಟನೆಯಲ್ಲಿ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಮತ್ತೊಂದೆಡೆ ಅಕ್ಕನ ಜೊತೆಗಿದ್ದ ತಂಗಿಯ ಮುಂಗೈ …
Read More »
BigTv News
March 31, 2025
Breaking News, Crime, ಬೆಂಗಳೂರು
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಕುಖ್ಯಾತ ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜನ ಕೊಲೆ ನಡೆದಿರುವಂತಹ ಘಟನೆ ನಡೆದಿದೆ.ನಿನ್ನೆ ಯುಗಾದಿ ಹಬ್ಬ ಇದ್ದಿದ್ರಿಂದ ಸ್ನೇಹಿತರು ಕರೆದರೂ ಅಂತಾ ಕುಣಿಗಲ್ನಿಂದ ಬೆಂಗಳೂರಿಗೆ ರೌಡಿಶೀಟರ್ ಮಂಜ ಬಂದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ರಂತೆ. ಈ ವೇಳೆ 2 ಬೈಕ್ನಲ್ಲಿ ಎಂಟ್ರಿಕೊಟ್ಟಿದ್ದ ಐವರ ಗ್ಯಾಂಗ್ ಲಾಂಗು, …
Read More »
BigTv News
March 30, 2025
Breaking News, Crime, ಉಡುಪಿ
ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅಪಹರಣ ನಡೆದಿದ್ದು, ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಒಂದೆಡೆ ಮುಸ್ಲಿಂ ಸಮುದಾಯದ ಯುವಕನೋರ್ವನ ಯುವತಿಯ ಕರೆದೊಯ್ದಿದ್ದು ಮದುವೆಯಾಗಲು ನೋದಂಣಿ ಮಾಡಿಸಿದ್ದಾನೆ. ಇನ್ನೊಂದೆಡೆ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ತಂದೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಅಕ್ರಮ್ ಮೊಹಮ್ಮದ್ ಎಂಬ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ಆಕೆಯನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ಎಂಬುವವರು, ದೂರು ನೀಡಿದ್ದಾರೆ. …
Read More »
BigTv News
March 30, 2025
Breaking News, Crime, ದೆಹಲಿ
ಶುಕ್ರವಾರ ವಿವೇಕ್ ವಿಹಾರ್‌ನ ಸತ್ಯಂ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಧಿಕಾರಿಗಳಿಗೆ ಆಘಾತಕಾರಿ ಕರೆ ಬಂದಿತು. ಅಧಿಕಾರಿಗಳು ಸ್ಥಳಕ್ಕೆ ಬಂದಾಗ, ಮನೆ ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡರು ಆದರೆ ಹಿಂಬಾಗಿಲಿನ ಬಳಿ ರಕ್ತದ ಕಲೆಗಳು ಕಂಡುಬಂದವು.ಶವ ಪತ್ತೆಯಾಗಿ ಒಂದು ದಿನದ ಒಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಲಾಗಿದೆ.ವಿಚಾರಣೆಯ ಸಮಯದಲ್ಲಿ, ಮಿಶ್ರಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ …
Read More »
BigTv News
March 30, 2025
Breaking News, Crime, ಬೆಂಗಳೂರು
ಮದುವೆಯ ಕಾರ್ಯಕ್ರಮಕ್ಕೆ ಬರುವ ಸಂಬಂಧಿಕರಿಗೆ ಛತ್ರದ ಬಳಿಯಿರುವ ಲಾಡ್ಜ್ವೊಂದರಲ್ಲಿ 15 ರೂಂಗಳನ್ನು ಕಾಯ್ದಿರಿಸಲಾಗಿತ್ತು. ಆ 15 ರೂಂಗಳ ಪೈಕಿ ಒಂದು ರೂಂನ್ನು ಮದುವೆಯ ನಡೆಸುತ್ತಿದ್ದ ಕುಟುಂಬ ಸದಸ್ಯರು ಬಳಸಿಕೊಂಡಿದ್ದರು. ಮಾ.16ರಂದು ಬೆಳಗಿನ ಜಾವ ರೂಮಿನಲ್ಲಿ ಸಂಬಂಧಿಕರು ಮಲಗಿದ್ದಾಗ ಆರೋಪಿಯು ರೂಂ ಬಾಗಿಲಿನ ಡೋರ್ ರೌಂಡ್ ಲಾಕರ್ ಅನ್ನು ಬೆಂಡ್ ಮಾಡಿ ಲಾಕ್ ತೆರೆದು ಒಳಗೆ ಪ್ರವೇಶಿಸಿದ್ದ. ನಂತರ ಸಂಬಂಧಿಕರಿಗೆ ಸೇರಿದ ಕರಿಮಣಿಯಿರುವ ಚಿನ್ನದ ಚೈನ್, 3 ಮೊಬೈಲ್ ಫೋನ್‌ಗಳನ್ನು ಲಪಟಾಯಿಸಿದ್ದ.ಆರೋಪಿ …
Read More »