Breaking News

News

ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ, ಅವರ ನೇಚರ್ ಬೇರೆ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈವಾಗಿನ ಸಿದ್ದರಾಮಯ್ಯ ಬೇರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರುವುದು ಬಹಳ ವಿರಳ. ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳುತ್ತಿಲ್ಲ. ಇವಾಗ ವರಿಷ್ಠರು ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಸರ್ಕಾರದಲ್ಲಿ ಹೈಕಮಾಂಡ್​ನಿಂದಲೂ ಹಸ್ತಕ್ಷೇಪ ನಡೆಯುತ್ತಿದೆ. ಸರ್ಕಾರದ ರಿಮೋಟ್ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದೆ. ನಿನ್ನೆಯ ಸಭೆಯಲ್ಲಿ ಕಪ್ಪ …

Read More »

ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ!

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವಿದ್ರಾವಕ ಘಟನೆ ಕಾಡುಗೋಡಿಯ ಠಾಣಾ ವ್ಯಾಪ್ತಿ ಶೀಗೇಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್’ ಮೆಂಟ್’ನಲ್ಲಿ ನಡೆದಿದೆ. ಆಂಧ್ರ ಮೂಲದ ದಂಪತಿಗಳಾದ ಪತಿ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(29) ಹಾಗೂ ಇಬ್ಬರು ಹೆಣ್ಣುಮಕ್ಕಳಾದ 1 ವರ್ಷದ ಮಗು, ಮೂರು ವರ್ಷದ ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ನಿನ್ನೆ ರಾತ್ರಿ ನಡೆದಿದ್ದರು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ …

Read More »

ಚಿಗರಿ ಬಸ ನಲ್ಲಿ ಸುತ್ತಾಡಿ ಪ್ರಯಾಣಿಕರ ಸಮಸ್ಸೆ ಆಲಿಸಿದ ,ಪ್ರದೀಪ್ ಶೆಟ್ಟರ

ಹುಬ್ಬಳ್ಳಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್ ಅವರು ಅನಿರೀಕ್ಷಿತವಾಗಿ ಇಂದು ಹುಬ್ಬಳ್ಳಿ ಬಿ ಆರ್ ಟಿ ಎಸ್ ಬಸ್ನ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಇಂದು ಮಹಾನಗರ ಪಾಲಿಕೆ ಬಿ ಆರ್ ಟಿ ಸಿ ಬಸ್ ನಿಲ್ದಾಣದಿಂದ ರಾಯಪೂರದವರೆಗೆ ಟಿಕೆಟ್ ತೆಗೆದುಕೊಳ್ಳುವ ಮುಖಾಂತರ ಸಾಮಾನ್ಯ ನಾಗರಿಕ ರು ಹೋಗುವ ಹಾಗೆ ಬಸ್ನಲ್ಲಿ ಪ್ರಯಾಣಿಸಿ ಅವರೊಂದಿಗೆ ಬಿಆರ್ಟಿಎಸ್ ಬಸ್ ಹೇಗಿದೆ ಸ್ವಚ್ಛತೆಯಾಗಲಿ ,ವೇಳೆ ಯ ಬಗ್ಗೆ ಆಗಲಿ ಹೀಗೆಲ್ಲ …

Read More »

ಅಭಿಮಾನಿಗಳಿಗೆ ಗುಡ್ ನ್ಯೂಸ್ : ಇದೀಗ ವರುಣ್-ಆಲಿಯಾ ಭಟ್ಮೇ ಮೇನಿಯಾ ಶುರುವಾಗಲಿದೆ.

ಬಾಲಿವುಡ್‌ನ ತೆರೆ ಮೇಲಿನ ಬೆಸ್ಟ್ ಜೋಡಿ ಅಂದರೆ ವರುಣ್ ಧವನ್-ಆಲಿಯಾ ಭಟ್. ಮತ್ತೆ ವರುಣ್-ಆಲಿಯಾ ಭಟ್ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.2012ರಲ್ಲಿ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ವರುಣ್ ಧವನ್ ಆಲಿಯಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇಬ್ಬರ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ಮೋಡಿ ಮಾಡಿತ್ತು. ಬಳಿಕ ಕಳಂಕ್, ಬದ್ರಿನಾಥ್ ಕಿ ದುಲ್ಹನಿಯಾ, ಹಮ್ಟಿ ಶರ್ಮಾ ಕಿ ದುಲ್ಹನಿಯಾ …

Read More »

’ಸ್ಕಂದ’ ಸಿನಿಮಾದ ಮೊದಲ ಹಾಡು ಬಂತು.. ಉಸ್ತಾದ್ ರಾಮ್ ಪೋತಿನೇನಿ-ಶ್ರೀಲೀಲಾ ಡ್ಯಾನ್ಸ್ ಫ್ಲೋರ್

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆಕ್ಷನ್ ಎಂಟರ್ ಟೈನರ್ ಸ್ಕಂದ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿನ್ ಸುತ್ತ ಸುತ್ತ ತಿರುಗಿದೆ ಎಂಬ ಗಾನಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠ ಕುಣಿಸಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಐದು ಭಾಷೆಯಲ್ಲಿಯೂ ಸ್ಕಂದ …

Read More »

ಭಾರತ-ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಮ್ಯಾಚ್!

ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್, ಏಕದಿನ ಸರಣಿ ಬಳಿಕ ಇಂದಿನಿಂದ ಐದು ಪಂದ್ಯಗಳ ಟಿ20 ಸಮರ ಆರಂಭವಾಗಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಿರಿಯರ ಪಡೆ ಟಿ20 ಸರಣಿ ಆಡಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರಿಗೆ ವಿಶ್ರಾಂತಿ ನೀಡಲಾಗಿದೆ. ಭಾರತದ ಯುವ ಪಡೆಯೂ ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಏಕದಿನ ಸರಣಿಯಲ್ಲೇ ಸಾಬೀತಾಗಿದೆ. ಹೀಗಾಗಿ ಟಿ20 ಸರಣಿಯಲ್ಲೂ ಗೆಲ್ಲುವ ಫೇವರಿಟ್ ತಂಡ ಭಾರತವೇ ಆಗಿದೆ. ಭಾರತ ತಂಡದ …

Read More »

ಆಂಕರ್‌ ಅನುಶ್ರೀಗೆ ಹೊಸ ಬೇಡಿಕೆ ಇಟ್ಟ ಫ್ಯಾನ್ಸ್:‌ ಏನಂತೀರಾ?

ಸ್ಯಾಂಡಲ್‌ವುಡ್‌ನ (Sandalwood) ಪಟಪಟ ಮಾತನಾಡೋ ಸುಂದರಿ ನಿರೂಪಕಿ ಅನುಶ್ರೀ (Anchor Anushree) ಅವರು ಸದಾ ಅವರಿಗೆ ಮದುವೆ (Wedding) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದೀಗ ಫ್ಯಾನ್ಸ್, ಹೊಸ ವಿಚಾರಕ್ಕೆ ಅನುಶ್ರೀ ಹಿಂದೆ ಬಿದ್ದಿದ್ದಾರೆ. ಮದುವೆಯಲ್ಲ, ಬದಲಾಗಿ ಹೊಸ ವಿಚಾರವಾಗಿ ಅನುಶ್ರೀಗೆ ಬೇಡಿಕೆ ಇಟ್ಟಿದ್ದಾರೆ. ರಿಯಾಲಿಟಿ ಶೋಗಳ ನಿರೂಪಣೆ ಮತ್ತು ಕನ್ನಡ ಸಿನಿಮಾಗಳ ಪ್ರಿ ರಿಲೀಸ್ ಈವೆಂಟ್‌ನ ನಿರೂಪಣೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಮಾತಿನ ಮಲ್ಲಿ ಅನುಶ್ರೀ …

Read More »

ಉಪ್ಪಿ ಅಭಿಮಾನಿಗಳಿಗೆ ಸದ್ಯದಲ್ಲೇ ಕೊಡಲಿದ್ದಾರೆ ಗುಡ್‌ ನ್ಯೂಸ್:‌

ಬರೋಬ್ಬರಿ ಎಂಟು ವರ್ಷಗಳ ನಂತರ ಉಪೇಂದ್ರ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಈಗಾಗಲೇ ‘ಯುಐ’ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವ ರಿಯಲ್ ಸ್ಟಾರ್, ಸದ್ಯ ಎಡಿಟಿಂಗ್ (Editing)ಟೇಬಲ್ ಮುಂದೆ ಕೂತು, ಕನಸನ್ನು ಹೊಲೆಯುತ್ತಿದ್ದಾರೆ. ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತ್ಯಾವ ಅಪ್ ಡೇಟ್ ಕೊಡ್ತಾರೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಕನ್ನಡದ ಮತ್ತೊಂದು ಸಿನಿಮಾ ವಿಶ್ವ ಪರ್ಯಟನೆಗೆ ಸಜ್ಜಾಗಿದೆ. ಕನ್ನಡದ ಮತ್ತೊಂದು ಸಿನಿಮಾ ಸಿನಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದೆ. ಅದು ಬೇರಾವುದೂ ಅಲ್ಲ. …

Read More »

ಕ್ರಿಮಿನಾಶಕ ಸಿಂಪರಡನೆಯಿಂದ ಟೊಮೇಟೊ ಬೆಳೆ ನಾಶ…

ಕ್ರಿಮಿನಾಶಕ ಸಿಂಪಡಣೆಯಿಂದ ಬೆಳೆ ನಾಶದೊಡ್ಡಬಳ್ಳಾಪುರ :ಟೊಮೆಟೊಗೆ ಇವತ್ತು ಚಿನ್ನದ ಬೆಲೆ. ಉತ್ತಮ ಬೆಲೆ ಸಿಗುವ ಸಮಯಕ್ಕೆ ಟೊಮೆಟೊ ಬೆಳೆಯ ಭರ್ಜರಿ ಫಸಲು ಬಂದಿತ್ತು. ಆದರೆ, ಕಂಪನಿಯೊಂದರ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದರಿಂದ ತಾಲೂಕಿನಲ್ಲಿ ಇಡೀ ಟೊಮೆಟೊ ಬೆಳೆ ಒಣಗಿನಿಂತಿದೆ ಎಂದು ರೈತರು ಆರೋಪಿಸಿದ್ದಾರೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಡುಗೆ ಮನೆಯ ರಾಣಿ, ಕೆಂಪು ಸುಂದರಿ ಎಂದೇ ಟೊಮೆಟೊ ಪ್ರಸಿದ್ಧಿ ಪಡೆದಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಗೆ ಬಂಗಾರದ …

Read More »

ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ..

ಬೆಳ್ತಂಗಡಿ(ದಕ್ಷಿಣ ಕನ್ನಡ): ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ. ಬೆಂಗಳೂರಿನ ನಿವಾಸಿಯ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಆ.02ರಂದು ರಾತ್ರಿ ತನ್ನ ಊರಾದ ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು. ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ …

Read More »