Breaking News

News

ನಿರಂತರ ಮಳೆಗೆ ಕುಸಿದ ಮನೆಯ ಮೇಲ್ಬಾವಣಿ

ನವಲಗುಂದ: ನವಲಗುಂದ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಸುರಿಯುತ್ತಿರುವ ಮಳೆ ಜನ ಜೀವನವನ್ನೇ ಹೈರಾನ್ ಮಾಡಿದೆ. ಮಳೆ ಆಗಾಗ ಜೋರು ಮಳೆ ಹಾಗೂ ನಿರಂತರ ಜಿಟಿಜಿಟಿಯಾಗಿ ಮಳೆ ಸುರಿಸುತ್ತಿರುವುದು ಹಳೆಯ ಮಣ್ಣಿನ ಗೋಡೆಯ ಮನೆಗಳು ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬೆಳವಟಗಿ ಗ್ರಾಮದ ಮಂಜುಳಾ ಜಾವೂರ ಎಂಬುವರ ಮನೆ ಮೇಲ್ಟಾವಣಿ ಕುಸಿದು ಬಿದ್ದಿದೆ ಇದರಿಂದ ಆ ಬಡ ಕುಟುಂಬ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನು ತಾಲೂಕಿನಲ್ಲಿ …

Read More »

ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

ಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ)ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು. ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ …

Read More »

ಹೆಂಡತಿ ಮತ್ತು ಅಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ತಾವೂ ಶೂಟ್ ಮಾಡಿಕೊಂಡ ಎಸಿಪಿ ಭರತ್‌ ಗಾಯಕ್ವಾಡ್…

ಪುಣೆ: ಹೆಂಡತಿ ಮತ್ತು ಅಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ತಾವೂ ಶೂಟ್ ಮಾಡಿಕೊಂಡು ಸಹಾಯಕ ಪೊಲೀಸ್ ಕಮಿಷನ‌ (ಎಸಿಪಿ) ಮೃತಪಟ್ಟ ಘಟನೆ ಸೋಮವಾರ ಪುಣೆಯಲ್ಲಿ ನಡೆದಿದೆ.ಎಸಿಪಿ ಭರತ್‌ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಮೃತರು. ಘಟನೆಗೆ ಕಾರಣವೇನು ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು.ಬೆಳಗ್ಗಿನ ಜಾವ 3.30 ರ ಸುಮಾರಿಗೆ ಮೊದಲು …

Read More »

ಹುಬ್ಬಳ್ಳಿ ಸಂಜೀವಿನಿ ಪಾರ್ಕ್ ಬಳಿ ಗೂಡ್ಸ್ ವಾಹನ ಪಲ್ಟಿ..

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ವಾಹನ ಅಪಘಾತಗಳ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಕೋಳಿ ಸಾಗಿಸುತ್ತಿದ್ದ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಹುಬ್ಬಳ್ಳಿ ಸಂಜೀವಿನಿ ಪಾರ್ಕ್ ಬಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೂ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Read More »

ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು: ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ, ಆಶಯ ಮತ್ತು ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಬಹಳಷ್ಟು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವುದು ನನ್ನ ಭಾವನೆ. ಪತ್ರಿಕಾ …

Read More »

ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ ನಿಧನ..

ಬೆಂಗಳೂರು: ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ (81 ವರ್ಷ ವಯಸ್ಸು) ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮದನ್ ದಾಸ್ ದೇವಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 1.30ರಿಂದ 4ರ ತನಕ ಬೆಂಗಳೂರಿನ ಆರ್​ಎಸ್​ಎಸ್​ ಕಾರ್ಯಾಲಯ ಕೇಶವ ಕೃಪಾದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಹಾರಾಷ್ಟ್ರದ ಪುಣೆಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.‌ ಜ್ಯೇಷ್ಠ ಪ್ರಚಾರಕರಾಗಿದ್ದ …

Read More »

ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ ಲಿಂಗಕ್ಯ….

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಭಾಗದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ (62) ಇಂದು ಬೆಳಗ್ಗೆ ಲಿಂಗಕ್ಯರಾಗಿದ್ದಾರೆ.ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ‌ನಿಧನರಾಗಿದ್ದು, ಮೃತರ ಪಾರ್ಥಿವ ಶರೀರವನ್ನು ಹೊಟ್ಯಾಪುರಕ್ಕೆ ತರಲಾಗುತ್ತದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೊಟ್ಯಾಪುರ ಹಿರೇಕಲ್ಮಠ ಮಾಹಿತಿ ನೀಡಿದೆ. ಶ್ರೀಗಳ ನಿಧನದಿಂದ ಹೊಟ್ಯಾಪುರ ‌ಮಠದಲ್ಲಿ ನೀರವ ಮೌನ ಆವರಿಸಿದ್ದು, ಮಠಕ್ಕೆ …

Read More »

ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್​ನ ಸ್ಥಿತಿ.

ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಗಳಿಸಿರುವ ಧಾರವಾಡದ ಸರ್ಕಾರಿ ಕಾಲೇಜೊಂದು ಮಳೆ ಬಂದರೆ ಸಾಕು ಎಲ್ಲೆಡೆ ಸೋರುತ್ತಿದ್ದು, ವಿದ್ಯಾರ್ಥಿನಿಯರಿಗೆ ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಲೇಜಿನ ಕಟ್ಟಡಗಳು ಸಂಪೂರ್ಣವಾಗಿ ಹಳೆಯದಾಗಿದ್ದು, ಮೇಲ್ಛಾವಣಿ ಸಹ ಬಿರುಕು ಬಿಟ್ಟಿದ್ದು, ಮಳೆ ಬಂದರೇ ಸೋರಲಾರಂಭಿಸುತ್ತದೆ. ಧಾರವಾಡದಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಕಾಲೇಜಿನ ಕೊಠಡಿಗಳಿಗೆ ನೀರು ನುಗ್ಗಿದೆ. ಜತೆಗೆ ಮೇಲ್ಛಾವಣಿ ಸೋರುತ್ತಿರುವುದರಿಂದ ವಿದ್ಯಾರ್ಥಿನಿಯರು ಕೊಡೆ ಹಿಡಿದೇ ಪಾಠ ಕೇಳುವುದು ಅನಿವಾರ್ಯವಾಗಿದೆ ಇದು …

Read More »

ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಶಿರಸ್ತೇದಾರ್….

ಶಿವಮೊಗ್ಗ: ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಿರಸ್ತೇದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದೂವರೆ ಲಕ್ಷ ರೂ. ಹಣ ಸ್ವೀಕರಿಸುವಾಗ ಶಿರಸ್ತೇದಾರ್ ಅವರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಹಕ್ಕು ದಾಖಲೆ ಶಾಖೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ. ಸಂದರ್ಭದಲ್ಲಿ ದಾಳಿ ನಡೆಸಿದರ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ವಾಸುದೇವ್ ಅವರು, ಹನುಮಂತ ಬನ್ನಿಕೋಡ್ ಎಂಬುವರಿಗೆ …

Read More »

ಹುಮನಾಬಾದ್ : ಮಳೆಗೆ ಐದು ಮನೆ ಗೋಡೆ ಕುಸಿತ

ಬೀದರ್,ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಮಳೆಗೆ ‌ 5 ಮನೆಗಳ ಗೋಡೆ ಕುಸಿದಿವೆ ಎಂದು ತಹಶೀಲ್ದಾರ್ ಅಂಜುಂ ಲಸ್ಕರ್ ತಿಳಿಸಿದರು. ತಾಲ್ಲೂಕಿನ ಸೀತಾಳಗೇರಾ ಗ್ರಾಮ ಸೇರಿದಂತೆ ಒಟ್ಟು ಐದು ಮನೆಗಳ ಗೋಡೆ ಕುಸಿದಿವೆ. ಶನಿವಾರ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಹುಮನಾಬಾದ್ ಪಟ್ಟಣದಲ್ಲಿ 14 ಮಿ.ಮೀ, ದುಬಲಗುಂಡಿಯಲ್ಲಿ 6 ಮಿ.ಮೀ. ಹಳ್ಳಿಖೇಡ್ ಬಿ. ಪಟ್ಟಣದಲ್ಲಿ 14.2 ಮಿ.ಮೀ ಮಳೆ ದಾಖಲಾಗಿದೆ.

Read More »