BigTv News
July 24, 2023
News, ಕರ್ನಾಟಕ, ಜಿಲ್ಲೆ, ಬೀದರ್
ಬೀದರ್ : ಔರಾದ್ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಓದಿಗಾಗಿ ಶನಿವಾರ ತಮ್ಮ ಕಛೇರಿಯಲ್ಲಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮ ಕಥನ ಅಗ್ನಿಯ ರೆಕ್ಕೆಗಳು ಪುಸ್ತಕದ ೪ ಪ್ರತಿಗಳು ನೀಡಿದರು. ಎಕಲಾರ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಮಾಡಿರುವ ಕಲಿಕಾ ಪೂರಕ ಕೆಲಸಗಳು ಕಂಡು ಜೂನ್ ೧ ರಂದು ಶಾಲೆಗೆ ಭೇಟಿ …
Read More »
BigTv News
July 24, 2023
News, ಕರ್ನಾಟಕ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ .ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯೆ ಹಾಗೂ ವಿರೋಧ ಪಕ್ಷದ ನಾಯಕಿ ಸುವರ್ಣ ಕಲಕುಂಟ್ಲ ಇವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬುಧವಾರ 26 ರಂದು ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕಿಯ ಕಾರ್ಯಾಲಯದ ಉದ್ಘಾಟನೆಯನ್ನು ಹಮ್ಮಿಕೊಂಡಿದ್ದೇವೆ. ನೂತನ ಕಾರ್ಯಾಲಯವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರು, ಮಾಜಿ ಮುಖ್ಯಮಂತ್ರಿಗಳಾದ …
Read More »
BigTv News
July 24, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಕಲಘಟಗಿ: ಬೇಡ್ತಿ ನಾಲಾ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದ್ದು ಸ್ಥಳದಲ್ಲಿ ರಸ್ತೆ ಕುಸಿದು ಲಾರಿ ಸಿಲುಕಿಕೊಂಡ ಘಟನೆ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿ ನಡು ರಸ್ತೆಯಲ್ಲಿ ನಡೆದಿದೆ. ಲಾರಿಯೊಂದು ಕಟ್ಟಿಗೆ ತುಂಬಿಕೊಂಡು ತಡಸ ಕಡೆಯಿಂದ ಹಳಿಯಾಳಕ್ಕೆ ಹೋಗುವಾಗ ಕಲಘಟಗಿ ತಡಸ ರಸ್ತೆ ಮಾರ್ಗ ಮಧ್ಯೆ ಕುಸಿದು ಅಲ್ಲೇ ಸಿಲುಕಿಕೊಂಡಿದೆ. ಲಾರಿ ಟೈಯರ್‌ಗಳು ಕುಸಿದು ಪಲ್ಟಿಯಾಗುವ ಸಂಭವ ಕೂಡ ಇದ್ದು, ಈ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಬಿಟ್ಟರೆ ಬಸ್ …
Read More »
bigtvnews22
July 24, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿ ಸೇತುವೆ ಜಲಾವೃತ ಗೊಂಡಿದ್ದರಿಂದ ರಸ್ತೆ ಬಂದಾಗಿ ಜನರು ಹಾಗೂ ವಾಹನ ಸವಾರರರು ಭಯದಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆ ಧಾರವಾಡ- ಕಲಘಟಗಿ, ಹುಬ್ಬಳ್ಳಿಗೆ ಕೂಡಾ ಸಂಚರಿಸುವ ಒಳ ರಸ್ತೆ ಇದಾಗಿದ್ದು ಪ್ರತಿ ವರ್ಷ ಮಳೆಗೆ ಜಲಾವೃತಗೊಂಡು ಜನರಿಗೆ ಸಮಸ್ಯೆಯಾಗುತ್ತಿದೆ.ಈ ಸೇತುವೆ ಕೆಳಮಟ್ಟದಲ್ಲಿ ಇರುವದರಿಂದ ಪ್ರತಿ ವರ್ಷ ಇದೆ ಪರಿಸ್ಥಿತಿಯಾಗುತ್ತದೆ. ಅದರಿಂದ ಮೆಲಮಟ್ಟದ ಸೇತುವೆ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಹಲವು …
Read More »
BigTv News
July 23, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ನಾಳೆ ಜುಲೈ 24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ …
Read More »
BigTv News
July 23, 2023
News, ಕರ್ನಾಟಕ, ಜಿಲ್ಲೆ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಖಾಸಗಿ ಬಸ್ಸವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಗರದ ಗದಗ ರಸ್ತೆಯ ರೈಲ್ವೆ ಕಲ್ಯಾಣ ಕೇಂದ್ರದ ಬಳಿ ನಡೆದಿದೆ. ಭೀಕರವಾಗಿ ಸಾವನ್ನಪ್ಪಿದ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯ ಹೆಸರು ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆಯುತ್ತಿದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆ ಕುರಿತಂತೆ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ …
Read More »
BigTv News
July 23, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ : ಕಂಬಾರ ಗಣವಿ ಗ್ರಾಮದ ಸೇತುವೆ ಮಳೆಯಿಂದ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಂಬಾರಗಣವಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ಕಂಬಾರ ಗಣವಿ ಗ್ರಾಮದ ಸೇತುವೆ ಸಮಸ್ಯೆಯಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಈಗಲಾದರೂ ನಮ್ಮ ಗ್ರಾಮಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣ …
Read More »
BigTv News
July 22, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜುಲೈ 20 ರ ರಾತ್ರಿಯಿಂದ ಜುಲೈ 22 ರ ಬೆಳಿಗ್ಗೆ 8 ಗಂಟೆಯವರೆಗೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ ಸುಮಾರು 30 ಮನೆಗಳಿಗೆ ಹಾನಿ ಆಗಿದ್ದು, ಗೊಡೆ ಕುಸಿದು 5 ಕುರಿಮರಿಗಳ ಜೀವ ಹಾನಿ ಆಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ ೨೫ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 3, ಅಳ್ನಾವರ ತಾಲೂಕಿನಲ್ಲಿ 3, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ …
Read More »
BigTv News
July 22, 2023
News, ದೆಹಲಿ, ಸುದ್ದಿ
ನವದೆಹಲಿ: ರೋಜ್ಗಾರ್ ಮೇಳದ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೊಸದಾಗಿ ನೇಮಕಗೊಂಡ 70 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ದೇಶಾದ್ಯಂತ 44 ಸ್ಥಳಗಳಲ್ಲಿ ಈ ವರ್ಚುಯಲ್ ನೇಮಕಾತಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾರ್ವಜನಿಕ ಬ್ಯಾಂಕ್ಗಳು ಸಾವಿರಾರು ಕೋಟಿ ನಷ್ಟವನ್ನು ಹೊಂದಿದ್ದವು ತಿಳಿದಿದ್ದವು. ಆದರೆ ಈಗ ಅವು ಅನುತ್ಪಾದಕ ಆಸ್ತಿಗಳು …
Read More »
BigTv News
July 22, 2023
News, ಮುಂಬೈ, ಸುದ್ದಿ
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಅಮರನಾಥ್ ಯಾತ್ರೆ ಕೈಗೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಪಟೌಡಿ ವಂಶದ ಕುಡಿ ಆಗಿರುವ ಈ ಬಹುಬೇಡಿಕೆಯ ನಟಿ ದೇವಸ್ಥಾನಗಳಿಗೆ ಭೇಟಿ ಕೊಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದರಂತೆ ಇದೀಗ ಅಮರನಾಥ್ ಯಾತ್ರೆ ಪೂರ್ಣಗೊಳಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಸಾರಾ ಅಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಮರನಾಥ್ ಯಾತ್ರೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ದೇವಸ್ಥಾನಗಳಿಗೆ ಭೇಟಿ ಕೊಡೋದು ಹೊಸ …
Read More »